ದೇವರು ಒಬ್ಬನೇ ಅಲ್ಲವೇನಮ್ಮಾ…?


Team Udayavani, Jul 5, 2018, 6:00 AM IST

6.jpg

ಅಂದು ಭಾನುವಾರ. ಬೆಳಿಗ್ಗೆ ಏಳು ಗಂಟೆ. ಮನೆಯಂಗಳದಲ್ಲಿದ್ದ ಹೂಗಿಡಗಳಿಂದ ಅಮ್ಮ ಹೂ ಕೊಯ್ಯುತ್ತಿದ್ದರು. ಸದ್ದಿಲ್ಲದೆ ಮಗಳು ಅನಿತ ಅಮ್ಮನ ಹಿಂದೆ ಬಂದು ನಿಂತಿದ್ದಳು. ಅಮ್ಮ ಗಮನಿಸಿರಲಿಲ್ಲ. ಹೂ ಕೊಯ್ಯುತ್ತ ಅವರು, “ಇವತ್ತೂ ಎದುರುಮನೆ ಅಜ್ಜಿ ನಮ್ಮ ಕಾಂಪೌಂಡಿನ ಹೂಗಳನ್ನು ಕಿತ್ತಿದ್ದಾರೆ. ಮುಂದಿನ ಗಿಡದಲ್ಲಿ ಒಂದು ಕೆಂಪು ದಾಸವಾಳ ಅರಳಿತ್ತು. ಛೇ..’ ಎಂದು ತಮ್ಮಷ್ಟಕ್ಕೆ ಗೊಣಗಿಕೊಳ್ಳುತ್ತಿದ್ದರು.  ಅದನ್ನು ಕೇಳಿ ಪುಟ್ಟಿ “ಅಮ್ಮ, ಎದುರುಮನೆ ಅಜ್ಜಿ ತುಂಬ ಕೆಟ್ಟವರು ಅಲ್ಲವೇನಮ್ಮ?’ ಎಂದು ಕೇಳಿದಳು. ಅಮ್ಮ ಹೇಳಿದರು, “ಹಾಗೆಲ್ಲ ಹೇಳಬಾರದು ಪುಟ್ಟಿ. ಅಜ್ಜಿ ದೊಡ್ಡವರು.’ “ದೊಡ್ಡವರಾದರೆ ಏನಮ್ಮ, ಅವರು ಕಳ್ಳತನ ಮಾಡಬಹುದಾ? ಅದು ತಪ್ಪಲ್ಲವ? ಹಿಡಿದು ಪೊಲೀಸಿಗೆ ಕೊಡಬೇಕು. ನಾನೀಗಲೇ ಹೋಗಿ ಜಗಳ ಆಡಿ ಬರಿ¤àನಮ್ಮ. ನಮ್ಮ ಹೂ ನಮಗೆ ಬೇಕು.’. ಪುಟ್ಟಿ ಮುದ್ದುಮುದ್ದಾಗಿ ಜಗಳಕ್ಕೆ ತಯಾರಾಗಿದ್ದೀನಿ ಎಂದು ಹೇಳಿದಳು. ನಗೆ ಬಂದರೂ ಅದನ್ನು ತೋರಗೊಡದೆ ಅಮ್ಮ “ನಾ ಹೇಳಲಿಲ್ಲವ ಪುಟ್ಟಿà. ಹಾಗೆಲ್ಲ ದೊಡ್ಡವರ ಬಗ್ಗೆ ಕೆಟ್ಟದು ಆಡಬಾರದು ಅಂತ. ಅವರು ಹೂ ತೆಗೆದುಕೊಂಡು ಹೋಗಿರೋದು ದೇವರ ಪೂಜೆಗೆ. ನಾವು ಹೂ ಕೀಳ್ಳೋದು ಕೂಡಾ ದೇವರ ಪೂಜೆಗೆ. ಹೂ ನಮ್ಮ ಮನೆಯದಾದರೇನಂತೆ ನಮ್ಮ ದೇವರು ಒಬ್ಬನೇ ತಾನೆ? ಬಾ ಒಳಕ್ಕೆ’ ಎನ್ನುತ್ತ ಅನಿತಾಳನ್ನು ಮನೆಯೊಳಗೆ ಕರೆದುಕೊಂಡು ಬಂದರು.

ಬೆಳಗ್ಗೆ ಗಂಟೆ ಎಂಟಾಗಿತ್ತು. “ಅನಿತ ಪುಟ್ಟಿà, ಎಲ್ಲಿದ್ದೀಯ, ಸ್ನಾನಕ್ಕೆ ಬಾ’ ಎಂದು ಅಮ್ಮ ಕರೆದರು. ಅನಿತ ಎಲ್ಲೂ ಕಾಣಿಸಲಿಲ್ಲ. ಎರಡು- ಮೂರು ಬಾರಿ ಕರೆದರೂ ಅನಿತಳ ಸುಳಿವಿಲ್ಲ. ಮನೆಯ ಗೇಟು ತೆರೆದಿತ್ತು. ಆಶ್ಚರ್ಯವೆಂಬಂತೆ ಎದುರು ಮನೆ ಗೇಟು ಕೂಡ ತೆರೆದಿತ್ತು! ದೇವರಕೋಣೆಗೆ ಬಂದು ನೋಡಿದರು. ಹೂಬುಟ್ಟಿ ಕಾಣಲಿಲ್ಲ. ಅನಿತ ಏನಾದರೂ ಎದುರು ಮನೆ ಅಜ್ಜಿಯನ್ನು ನೋಡಲು ಹೋಗಿರಬಹುದೆ ಎಂದು ಅನುಮಾನಿಸಿದರು. 

ಅಜ್ಜಿಯ ಜೊತೆ ಜಗಳವಾಡಿ ಏನಾದರೂ ರಾದ್ದಾಂತ ಮಾಡಿಕೊಂಡು ಬಂದರೆ ಏನಪ್ಪ ಗತಿ ಎಂದು ಕಸಿವಿಸಿಗೊಂಡರು. ಮನೆಯವರಿಗೆಲ್ಲ ಇರಿಸು-ಮುರಿಸು ಆಗುವುದಲ್ಲಿ ಸಂಶಯವಿಲ್ಲ ಎಂದುಕೊಂಡರು. ಅನಿತಾಳನ್ನು ಕರೆದುಕೊಂಡು ಬರೋಣವೆಂದು ರಸ್ತೆ ದಾಟಿ ಅಮ್ಮ ಎದುರು ಮನೆಯ ಗೇಟಿನ ಮೂಲಕ ಒಳಹೊಕ್ಕರು. ಮುಂದಿನ ಬಾಗಿಲೂ ತೆರೆದಿತ್ತು. ಮುಂದುವರಿದು ಅಮ್ಮ ಆ ಮನೆಯ ದೇವರ ಕೋಣೆಯ ಬಳಿ ಬಂದರು. ಅಲ್ಲೊಂದು ಆಶ್ಚರ್ಯ ಕಾದಿತ್ತು. 

ಅನಿತಾ ಎದುರುಮನೆ ಅಜ್ಜಿಯ ಮಡಿಲಲ್ಲಿ ಹಾಯಾಗಿ ಕುಳಿತಿದ್ದಳು! ಅಜ್ಜಿ ಜೊತೆ ಏನೋ ಹರಟುತ್ತಿದ್ದಾಳೆ? ಮುಗಳ್ನಗುತ್ತ ಅಜ್ಜಿ ಅನಿತಳಿಗೆ ಮುತ್ತು ಕೊಡುತ್ತಿದ್ದಾರೆ! ಅನಿತ ಮುಂದುವರೆಸಿದಳು, “ಅಜ್ಜೀ, ಈ ಎಲ್ಲ ಹೂವನ್ನೂ ಅಮ್ಮ ನಿಮಗಾಗಿ ಕಳಿಸಿದ್ದಾರೆ. ನಿಮ್ಮನೆ ದೇವರು ನಮ್ಮನೆ ದೇವರು ಒಂದೇ ಅಲ್ಲವ, ಅದಕ್ಕೆ. ಇದನ್ನೂ ತೆಗೊಳ್ಳಿ, ನಿಮ್ಮನೆ ದೇವರ ಮೇಲೇ ಇರಿಸಿ. ಆ ಕೆಂಪು ದಾಸವಾಳ ತುಂಬಾ ಚೆನ್ನಾಗಿ ಕಾಣುತ್ತಿದೆ.’

ಇವೆಲ್ಲವನ್ನೂ ಮರೆಯಿಂದಲೇ ನೋಡುತ್ತಿದ್ದ ಅಮ್ಮನ ಕಣ್ಣುಗಳಲ್ಲಿ ಹನಿ ಮೂಡಿತು. ಪುಟ್ಟಿ ಬಗ್ಗೆ ಹೆಮ್ಮೆಯಾಯಿತು.

ಮತ್ತೂರು ಸುಬ್ಬಣ್ಣ 

ಟಾಪ್ ನ್ಯೂಸ್

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.