ಕತ್ತಲ ರಾತ್ರಿಯ ಕಾಣದ ಮುಖಗಳು

Team Udayavani, Jun 8, 2018, 6:00 AM IST

cc-33.jpg

ನಾನು ಸಿನಿಮಾ ಕಲಿತಿದ್ದು ಮೂರು ಜನರಿಂದ!
ಹಾಗಂತ ದೊಡ್ಡ ಪರದೆಯ ಮೇಲೆಯೇ ತೋರಿಸಿ ಬಿಟ್ಟರು ದಯಾಳ್‌. ಆ ಮೂವರ ಪೈಕಿ ಅಂದು ಉಪೇಂದ್ರ ಅವರನ್ನು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಕರೆದಿದ್ದರು ಅವರು. ತಮ್ಮ ಗುರುವಿನಿಂದ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿಸಬೇಕು ಎಂಬುದು ಅವರ ಹಲವು ದಿನಗಳ ಆಸೆಯಂತೆ. ಅದು “ಆ ಕರಾಳ ರಾತ್ರಿ’ ಚಿತ್ರದ ಮೂಲಕ ಈಡೇರಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಈ ಚಿತ್ರ ಶುರುವಾಗಿತ್ತು. ಈಗ ಸಂಪೂರ್ಣಗೊಂಡು, ಹಾಡುಗಳ ಬಿಡುಗಡೆಯೂ ಆಗಿದೆ. ಮೂರ್‍ನಾಲ್ಕು ಅಮಾವಸ್ಯೆಗಳ ಒಳಗೆ ಚಿತ್ರ ಬಿಡುಗಡೆಯಾದರೆ ಅಚ್ಚರಿಯೇನಿಲ್ಲ.

“ಆ ಕರಾಳ ರಾತ್ರಿ’ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು ಕಲಾವಿದರ ಸಂಘದ ಹೊಸ ಕಟ್ಟಡದಲ್ಲಿ. ಅಂದು ಉಪೇಂದ್ರ ಜೊತೆಗೆ ಆರ್‌. ಚಂದ್ರು, ಪ್ರಥಮ್‌, ಕೆ. ಮಂಜು ಮುಂತಾದವರು ಇದ್ದರು. ಇವರೆಲ್ಲರ ಸಮ್ಮುಖದಲ್ಲಿ ಚಿತ್ರದ ಹಾಡುಗಳು ಬಿಡುಗಡೆಯಾದವು. ಹಾಡುಗಳನ್ನು ಬಿಡುಗಡೆ ಮಾಡಿದ ಉಪೇಂದ್ರ, “ದಯಾಳ್‌ ಅವರು ಹಲವು ವರ್ಷಗಳ ಆತ್ಮೀಯ. “ಎಚ್‌ಟುಓ’ ಚಿತ್ರಕ್ಕೆ ಅವರು ಸಂಭಾಷಣೆಯಲ್ಲಿ ಸಹಾಯ ಮಾಡಿದ್ದರು. ಅಲ್ಲಿಂದ ಶುರುವಾಗಿದ್ದು, ಏನೇನೋ ಮಾಡುತ್ತಲೇ ಇರುತ್ತಾರೆ. ಯಾರದೋ ಮೇಲೆ ಕೇಸ್‌ ಹಾಕ್ತಾರೆ, ಪ್ರಶಸ್ತಿ ಪಡೀತಾರೆ, ಚಿತ್ರ ಮಾಡ್ತಾರೆ … ಹೀಗೆ ನಿರಂತರವಾಗಿ ಬಿಝಿ ಇರುತ್ತಾರೆ. ಇದೊಂದು ಒಳ್ಳೆಯ ಕಥೆ ಇರುವ ಸಿನಿಮಾ. ಬರೀ ಸಸ್ಪೆನ್ಸ್‌, ಹಾರರ್‌ ಅಷ್ಟೇ ಅಲ್ಲ, ಬೇರೆ ಏನೋ ಇದೆ’ ಎಂದು ಹೇಳುತ್ತಲೇ, ಎಲ್ಲರಿಗೂ ಹಾರೈಸಿ ತಮ್ಮ ಮಾತು ಮುಗಿಸಿದರು.

ದಯಾಳ್‌ ಭಾವುಕರಾಗಿದ್ದರು. ಚಿತ್ರ ಚೆನ್ನಾಗಿ ಮೂಡಿಬಂದಿರುವುದು ಒಂದು ಕಾರಣವಾದರೆ, ಇನ್ನೊಂದು ಉಪೇಂದ್ರ ಅವರ ಹಾಜರಿ. “ಇವತ್ತು ನಾನೇನಾದರೂ ಸ್ವಲ್ಪ ಹೆಸರು ಮಾಡಿದ್ದೀನಿ ಅಂದರೆ ಅದಕ್ಕೆ ಅವರೇ ಕಾರಣ. ನನ್ನ ಯೋಚನೆಗೆ ಇಂಬು ಕೊಟ್ಟಿದ್ದು ಅವರೇ. ನಾನು ಕೇಳಿಸಿಕೊಳ್ಳುವುದನ್ನು ಕಲಿತಿದ್ದೇ ಅವರಿಂದ. ಬರೀ ನಾವು ಮಾತನಾಡುವುದಲ್ಲ, ಬೇರೆಯವರು ಮಾತಾಡಿದ್ದನ್ನು ಕೇಳಿಸಿಕೊಳ್ಳಬೇಕು ಅಂತ ತಿಳಿದಿದ್ದೇ ಅವರಿಂದ’ ಎಂದರು ದಯಾಳ್‌. ಇನ್ನು ಚಿತ್ರದ ಬಗ್ಗೆ ಮಾತನಾಡಿದ ಅವರು, “ಸುಮಾರು ಒಂದೂವರೆ ವರ್ಷಗಳ ಹಿಂದೆ ಈ ಕಥೆ ನನಗೆ ಸಿಕ್ಕಿತು. ಮೋಹನ್‌ ಹಬ್ಬು ಅವರು ಬರೆದ ನಾಟಕ ಇದು. ಆ ಸಂದರ್ಭದಲ್ಲಿ ನನ್ನ ಹತ್ತಿರ ಹಕ್ಕುಗಳನ್ನು ಕೊಳ್ಳುವುದಕ್ಕೆ ದುಡ್ಡಿರಲಿಲ್ಲ. ಅದನ್ನು ಅವರಿಗೆ ಹೇಳಿದ್ದೆ. ಒಪ್ಪಿ ನನಗೇ ಆ ಹಕ್ಕುಗಳನ್ನು ಕೊಟ್ಟರು. ನನ್ನ ಅಷ್ಟೂ ದುಡಿಮೆಯನ್ನು ಸುರಿದು ಈ ಚಿತ್ರ ಮಾಡಿದ್ದೇನೆ. ಈ ಚಿತ್ರದಿಂದ ದುಡ್ಡು ಕಳೆದುಕೊಂಡರೂ, ಬೇಸರ ಪಡಬೇಡಿ ಅಂತ ಮನೆಯವರಿಗೆ ಹೇಳಿದ್ದೇನೆ. ಏಕೆಂದರೆ, ಒಂದು ಒಳ್ಳೆಯ ಚಿತ್ರ ಮಾಡಿದ ಖುಷಿ ಇದೆ. ಇದು ನನ್ನ ಕೆರಿಯರ್‌ನ ಬೆಸ್ಟ್‌ ಚಿತ್ರವಾಗಲಿದೆ’ ಎಂದರು.

ಅಂದು ವೇದಿಕೆಯ ಮೇಲೆ ಜೆಕೆ, ಅನುಪಮ ಗೌಡ, ಸಂಗೀತ ನಿರ್ದೇಶಕ ಗಣೇಶ್‌ ನಾರಾಯಣ್‌, ಛಾಯಾಗ್ರಾಹಕ ಪಿ.ಕೆ.ಎಚ್‌. ದಾಸ್‌, ಸಂಕಲನಕಾರ ಶ್ರೀ, ಸಂಭಾಷಣೆ ಬರೆದಿರುವ ನವೀನ್‌ ಕೃಷ್ಣ, ಹಾಡುಗಳನ್ನು ಬರೆದಿರುವ “ತಂಗಾಳಿ’ ನಾಗರಾಜ್‌, ನಾಟಕಕಾರ ಮೋಹನ್‌ ಹಬ್ಬು ಸೇರಿದಂತೆ ಹಲವರು ಇದ್ದರು. ಎಲ್ಲರೂ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಜೆಕೆ ಮತ್ತು ಅನುಪಮ ಇಬ್ಬರೂ, ಈ ಚಿತ್ರದಲ್ಲಿ ನಾಯಕ ಅಥವಾ ನಾಯಕಿ ಇಲ್ಲ, ಕಥೆಯೇ ಎಲ್ಲ ಎಂದು ಹೇಳಿದರು.

 ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.