ಧೈರ್ಯಂ ವಿಜಯಂ: ಸಂತೋಷ ಹಂಚಿಕೊಂಡ ಚಿತ್ರ ತಂಡ


Team Udayavani, Jul 28, 2017, 10:15 AM IST

28-SSCH-3.jpg

ಈ ಚಿತ್ರದಿಂದ ತುಂಬಾ ದುಡ್ಡು ನಿರೀಕ್ಷಿಸಬಾರದು, ಇದೊಂದು ಅನುಭವವಾಗಿರಬೇಕು ಎಂದು ಮೊದಲೇ ನಿರ್ಧರಿಸಿದ್ದರಂತೆ ನಿರ್ಮಾಪಕ ಕೆ. ರಾಜು. ಆದರೂ ಚಿತ್ರ ಬಿಡುಗಡೆಯ ಹಿಂದಿನ ದಿನ ಪುಕಪುಕ ಎನ್ನುತ್ತಿತ್ತಂತೆ. ಆದರೆ, ಶುಕ್ರವಾರ ಚಿತ್ರ ಬಿಡುಗಡೆಯಾಗಿ, ಜನ ಒಳ್ಳೆಯ ಮಾತಾಡುತ್ತಿದ್ದಂತೆಯೇ ಸ್ವಲ್ಪ ಧೈರ್ಯ ಬಂತಂತೆ. ಯಾವಾಗ ಎಲ್ಲ ಕಡೆಯಿಂದ ಒಳ್ಳೆಯ ರಿಪೋರ್ಟು ಬಂತೋ, ಆಗ ಅವರ ಮುಖದಲ್ಲಿ ಖುಷಿ ಮೂಡಿದೆ. ಆದರೆ, ಅವರಿಗಿಂಥ ಅಂದು ಖುಷಿಯಾಗಿದ್ದು ನಿರ್ದೇಶಕ ಶಿವತೇಜಸ್‌. ಶಿವು ಅದೆಷ್ಟು ಖುಷಿಯಾಗಿದ್ದರೆಂದರೆ, ಅವರ ಬಾಯಿಂದ ಮಾತೇ ಹೊರಡುತ್ತಿರಲಿಲ್ಲ. ಮಾತು ಹೊರಟರು ಅದು ಪದೇಪದೇ ರಿಪೀಟ್‌ ಆಗುತ್ತಲೇ ಇತ್ತು.

“ಚಿತ್ರ ಎಲ್ಲಾ ಕಡೆ ಚೆನ್ನಾಗಿ ಓಡ್ತಿದೆ ಸಾರ್‌. ಅದಕ್ಕೆ ಇಡೀ ತಂಡ, ಮಾಧ್ಯಮದವರು, ಜನ ಎಲ್ಲರೂ ಕಾರಣ. ಅಜೇಯ್‌ ಅವರನ್ನ ಹೊಸ ತರಹ ತೋರಿಸಬೇಕು ಅಂತ ಆಸೆ ಇತ್ತು. ಅದಕ್ಕೆ ಸರಿಯಾಗಿ ಅವರೂ ಸಹ ಸಪೋರ್ಟ್‌ ಮಾಡಿದರು. ಅದರಿಂದ ಚಿತ್ರ ಚೆನ್ನಾಗಿ ಬಂದಿದೆ. ಒಟ್ಟಾರೆ ಕರ್ನಾಟಕದಾದ್ಯಂತ ಚಿತ್ರ ಚೆನ್ನಾಗಿ ಓಡ್ತಿದೆ’ ಎಂದು ಎರಡೂರು ಬಾರಿ ಹೇಳಿದರು.

“ಧೈರ್ಯಂ’ ಚಿತ್ರದ ಸಂತೋಷಕೂಟಕ್ಕೆ ಛಾಯಾಗ್ರಾಹಕ ಶೇಖರ್‌ ಚಂದ್ರು ಒಬ್ಬರನ್ನು ಹೊರತುಪಡಿಸಿದರೆ ಮಿಕ್ಕೆಲ್ಲರೂ ಬಂದಿದ್ದರು. ಶೇಖರ್‌ ಚಂದ್ರು ಚಿತ್ರೀಕರಣದಲ್ಲಿದ್ದ ಕಾರಣ ಅವರು ಬಂದಿರಲಿಲ್ಲ. ಮಿಕ್ಕಂತೆ ಅಜೇಯ್‌ ರಾವ್‌, ಅದಿತಿ ಪ್ರಭುದೇವ, ವಾಣಿಶ್ರೀ, ವಿಜಯಲಕ್ಷ್ಮೀ ಉಪಾಧ್ಯಾಯ, ಪದ್ಮಿನಿ ಪ್ರಕಾಶ್‌, ಮನಮೋಹನ್‌, ಸಂಗೀತ ನಿರ್ದೇಶಕ ಎಮಿಲ್‌ ಸೇರಿದಂತೆ ಹಲವರು ಇದ್ದರು ಮತ್ತು ಎಲ್ಲರೂ ಚಿತ್ರ ಗೆದ್ದ ಖುಷಿಯಲ್ಲಿ ಮಾತನಾಡಿದರು.

ಈ ಚಿತ್ರ ಹಿಟ್‌ ಆಗಿದ್ದು ಮಾಧ್ಯಮದವರಿಂದ ಎಂದು ಅಜೇಯ್‌ ಹೇಳಿಕೊಂಡರು. “ಚಿತ್ರ ಬಿಡುಗಡೆಯಾಗುವ ಮುನ್ನ ಇದೊಂದು ಮಾಸ್‌ ಚಿತ್ರ ಎಂದು ಎಲ್ಲರೂ ಹೇಳಿದ್ದರು. ನಿರ್ಮಾಪಕರು ಮಾತ್ರ ಕ್ಲಾಸ್‌ ಸ್ಪರ್ಶವಿರುವ ಮಾಸ್‌ ಚಿತ್ರ ಎಂದು ಹೇಳಿದ್ದರು. ನಿಜ ಹೇಳಬೇಕೆಂದರೆ, ಕ್ಲಾಸ್‌ ಮತ್ತು ಮಾಸ್‌ ಎರಡೂ ಹದವಾಗಿ ಬೆರೆತಿರುವ ಚಿತ್ರ ಇದು. ಚಿತ್ರ ಬಿಡುಗಡೆಗೆ ಮುನ್ನ ನಾನು ಈ ಚಿತ್ರದ ಕಮರ್ಷಿಯಲ್‌ ಆಗಿ ಹೇಗೆ ಹೋಗಬಹುದು ಎಂದು ಯೋಚಿಸಿರಲಿಲ್ಲ. ಚಿತ್ರ ಬಿಡುಗಡೆಯಾದ ಮೇಲೆ, ಪ್ರೇಕ್ಷಕರ ನಿಟ್ಟಿನಿಂದ ಯೋಚಿಸಿದಾಗ ಈ ಚಿತ್ರವನ್ನು ಇನ್ನೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಬೇಕು, ಇನ್ನಷ್ಟು ಜನರಿಗೆ ಮುಟ್ಟಿಸಬೇಕು, ನಿರ್ಮಾಪಕರ ಜೇಬು ಇನ್ನೂ ತುಂಬಬೇಕು ಎಂದು ಆಸೆಯಾಗುತ್ತಿದೆ’ ಎಂದರು.

ಈ ಚಿತ್ರವನ್ನು ನಿರ್ಮಾಪಕ ಉದಯ್‌ ಮೆಹ್ತಾ ವಿತರಿಸುತ್ತಿದ್ದಾರೆ. ಟ್ರೇಲರ್‌ ಮತ್ತು ಪೋಸ್ಟರ್‌ಗಳನ್ನು ನೋಡಿಯೇ ಈ ಚಿತ್ರ ಚೆನ್ನಾಗಿ ಆಗುತ್ತದೆ ಎಂದು 
ಅವರು ಹೇಳಿದ್ದರಂತೆ. ಆ ಭವಿಷ್ಯ ಈಗ ನಿಜವಾಯಿತು ಎಂದು ಖುಷಿಪಟ್ಟರು ಉದಯ್‌. ಮಾತು ಮುಗಿಸುವ ಮುನ್ನ, “ಧೈರ್ಯಂ 2′ ಅಲ್ಲದಿದ್ದರೂ, ಇನ್ನೊಂದು ಸಿನಿಮಾ ಮಾಡುವ ಧೈರ್ಯ ಮಾಡಿ’ ಎಂದು ಸಲಹೆ ನೀಡಿದರು.

ಟಾಪ್ ನ್ಯೂಸ್

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

nirani

ನನ್ನ ವಿರುದ್ಧ ಹೈಕಮಾಂಡ್ ಗೆ ಸಿಎಂ ದೂರು ನೀಡಲು ಸಾಧ್ಯವೇ ಇಲ್ಲ: ಸಚಿವ ನಿರಾಣಿ

CM @ 2

ಸಂಪುಟ ವಿಸ್ತರಣೆ ಚರ್ಚೆ ಮತ್ತೆ ಮುನ್ನೆಲೆಗೆ : ಈ ವಾರ ಸಿಎಂ ದೆಹಲಿಗೆ ?

1-sdsad

ಗೋವಾ ಸಿಎಂ ಅಭ್ಯರ್ಥಿ: ಭಂಡಾರಿ ಸಮುದಾಯಯಕ್ಕೆ ಮಣೆ ಹಾಕಿದ ಆಪ್

18 ಗಂಟೆಗಳ ಬಳಿಕ ಶಿವಗಂಗಾ ಫಾಲ್ಸ್ ನಲ್ಲಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

18 ಗಂಟೆಗಳ ಬಳಿಕ ಶಿವಗಂಗಾ ಫಾಲ್ಸ್ ನಲ್ಲಿ ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

1-adasd

ಅಪರ್ಣಾ ಯಾದವ್ ಬಿಜೆಪಿ ಸೇರ್ಪಡೆ: ಸಚಿವೆ ಶೋಭಾ ಮಹತ್ವದ ಪಾತ್ರ

hdk

ವೀಕೆಂಡ್ ಕರ್ಪ್ಯೂ: ತಜ್ಞರ ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳಿ; ಎಚ್ ಡಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

No sankranthi Excitement in Kannada film industry

ಮಂಕಾದ ಸಿನಿ ಸಂಕ್ರಾಂತಿ: ಮುಹೂರ್ತ, ಸಿನ್ಮಾ ರಿಲೀಸ್‌ ಮಾಡಲು ಉತ್ಸಾಹವಿಲ್ಲ…

shivanna

ಬೈರಾಗಿ ಮಾತು ಮತ್ತು ಶಕ್ತಿಧಾಮದ ಕನಸು…: ಶಿವಣ್ಣ ಜೊತೆ ಚಿಟ್‌ಚಾಟ್‌

shivanna

ಸ್ಟೈಲಿಶ್‌ ಲುಕ್‌ನಲ್ಲಿ ಶಿವಣ್ಣ: “ಬೈರಾಗಿ’ ಗೆಟಪ್‌ಗೆ ಫ್ಯಾನ್ಸ್‌ ಫಿದಾ

vikrant rona

ವಿಕ್ರಾಂತ್‌ ರೋಣನಿಗೆ ಓಟಿಟಿಯಿಂದ ಭರ್ಜರಿ ಆಫ‌ರ್‌:OTTಯಲ್ಲೇ ರಿಲೀಸ್ ಆಗುತ್ತಾ ಕಿಚ್ಚನ ಚಿತ್ರ

ಮತ್ತೆ ಮೌನ,ಮುಂದುವರಿದ ಆತಂಕ! ರಿಲೀಸ್‌ ಡೇಟ್ಸ್‌ ಅನೌನ್ಸ್‌ ಮಾಡಿದ್ದ ಸಿನಿಮಾಗಳು ಮುಂದಕ್ಕೆ..

ಮತ್ತೆ ಮೌನ,ಮುಂದುವರಿದ ಆತಂಕ! ರಿಲೀಸ್‌ ಡೇಟ್ಸ್‌ ಅನೌನ್ಸ್‌ ಮಾಡಿದ್ದ ಸಿನಿಮಾಗಳು ಮುಂದಕ್ಕೆ..

MUST WATCH

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

udayavani youtube

18 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಧನುಷ್ – ಐಶ್ವರ್ಯಾ

udayavani youtube

ಪರ್ಯಾಯ ಮಹೋತ್ಸವ : ದಂಡ ತೀರ್ಥದಲ್ಲಿ ಶ್ರೀ ಕೃಷ್ಣಾಪುರ ಮಠಾಧೀಶರಿಂದ ಪವಿತ್ರ ಸ್ನಾನ

ಹೊಸ ಸೇರ್ಪಡೆ

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

nirani

ನನ್ನ ವಿರುದ್ಧ ಹೈಕಮಾಂಡ್ ಗೆ ಸಿಎಂ ದೂರು ನೀಡಲು ಸಾಧ್ಯವೇ ಇಲ್ಲ: ಸಚಿವ ನಿರಾಣಿ

ಗಲಭೆ ಪ್ರಚೋದನೆಗೆ ಅವಕಾಶ ನೀಡುವುದಿಲ್ಲ: ಎಸ್‌ಪಿ

ಗಲಭೆ ಪ್ರಚೋದನೆಗೆ ಅವಕಾಶ ನೀಡುವುದಿಲ್ಲ: ಎಸ್‌ಪಿ

ಶತಮಾನ ಪೂರೈಸಿದ ಶಾಲೆಗಳಿಗೆ ಅನುದಾನ

ಶತಮಾನ ಪೂರೈಸಿದ ಶಾಲೆಗಳಿಗೆ ಅನುದಾನ

1-asads

ದಕ್ಷಿಣ ಆಫ್ರಿಕಾ ಪರ ಬವುಮಾ,ಡುಸ್ಸೆನ್ ಶತಕ: ಭಾರತಕ್ಕೆ ಗೆಲ್ಲಲು 297 ಗುರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.