ಕೃಷ್ಣನ ಲವ್ ಗೆ ಕಿಚ್ಚನ ಸಾಥ್

ಮಾಕ್ಟೇಲ್‌ ಲವ್‌ಸ್ಟೋರಿ

Team Udayavani, Jan 24, 2020, 5:47 AM IST

“ಒಂದು ಒಳ್ಳೆಯ ಸಿನಿಮಾ ಮಾಡೋದು ನಮ್ಮ ಕೆಲಸ. ಅದರ ಗೆಲುವು-ಸೋಲು ಯಾವುದು ನಮ್ಮ ಕೈಯಲ್ಲಿ ಇಲ್ಲ. ಜನ ಇಷ್ಟಪಟ್ಟರೆ ಸಿನಿಮಾ ಖಂಡಿತಾ ಗೆಲ್ಲುತ್ತದೆ. ಇಡೀ ಸಿನಿಮಾ ಟೀಮ್‌ಗೆ ಒಳ್ಳೆಯದಾಗಲಿ’ ಎಂದು “ಲವ್‌ ಮಾಕ್ಟೇಲ್‌’ ಚಿತ್ರತಂಡಕ್ಕೆ ಸುದೀಪ್‌ ಶುಭ ಕೋರಿದರು.

ನಟ ಮದರಂಗಿ ಕೃಷ್ಣ, ವಿಲನಾ ನಾಗರಾಜ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಲವ್‌ ಕಂ ರೊಮ್ಯಾಂಟಿಕ್‌ ಕಥಾಹಂದರ ಹೊಂದಿರುವ “ಲವ್‌ ಮಾಕ್ಟೇಲ್‌’ ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ “ಲವ್‌ ಮಾಕ್ಟೇಲ್‌’ ಚಿತ್ರದ ಆಡಿಯೋ ಮತ್ತು ಟ್ರೇಲರ್‌ ಅನ್ನು ಇತ್ತೀಚೆಗೆ ಹೊರತಂದಿದೆ.

ನಟ ಕಿಚ್ಚ ಸುದೀಪ್‌ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ “ಲವ್‌ ಮಾಕ್ಟೇಲ್‌’ ಚಿತ್ರದ ಆಡಿಯೋವನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಇದೇ ವೇಳೆ ಮಾತನಾಡಿದ ಸುದೀಪ್‌, “ಕೃಷ್ಣ ನನ್ನ ಸೋದರನಿದ್ದಂತೆ. ಎಲ್ಲದಕ್ಕಿಂತ ಹೆಚ್ಚಾಗಿ ಒಳ್ಳೆಯ ಮನಸ್ಸಿನ ಹುಡುಗ. ಸಿನಿಮಾದಲ್ಲಿ ಏನಾದ್ರೂ ಸಾಧಿಸಬೇಕೆಂಬ ಛಲ ಅವರಲ್ಲಿದೆ. ಸಿನಿಮಾದ ಕಡೆಗೆ ಅವರಿಗಿರುವ ಪ್ಯಾಷನ್‌ ನನಗೆ ಇಷ್ಟವಾಯ್ತು. ಒಂದೊಳ್ಳೆಯ ಸಿನಿಮಾ ಮಾಡಿದ್ದಾರೆ ಅನ್ನೋ ನಂಬಿಕೆ ನನಗಿದೆ. ಟ್ರೇಲರ್‌, ಹಾಡುಗಳು ಎಲ್ಲವೂ ಪ್ರಾಮಿಸಿಂಗ್‌ ಆಗಿದೆ’ ಎಂದಿರುವ ಸುದೀಪ್‌, “ಒಂದು ಒಳ್ಳೆಯ ಸಿನಿಮಾ ಮಾಡೋದು ನಮ್ಮ ಕೆಲಸ. ಅದರ ಗೆಲುವು-ಸೋಲು ಯಾವುದು ನಮ್ಮ ಕೈಯಲ್ಲಿ ಇಲ್ಲ. ಜನ ಇಷ್ಟಪಟ್ಟರೆ ಸಿನಿಮಾ ಖಂಡಿತಾ ಗೆಲ್ಲುತ್ತದೆ. ಇಡೀ ಸಿನಿಮಾ ಟೀಮ್‌ಗೆ ಒಳ್ಳೆಯದಾಗಲಿ’ ಎಂದು “ಲವ್‌ ಮಾಕ್ಟೇಲ್‌’ ಚಿತ್ರತಂಡಕ್ಕೆ ಶುಭ ಕೋರಿದರು.

ಇನ್ನು ಆರಂಭದಿಂದಲೂ “ಲವ್‌ ಮಾಕ್ಟೇಲ್‌’ ಚಿತ್ರಕ್ಕೆ ಸಾಥ್‌ ನೀಡುತ್ತ ಬಂದಿರುವ ನಟ ಕಿಚ್ಚ ಸುದೀಪ್‌, ಈ ಬಾರಿ ಬಿಡುಗಡೆಯಾಗಿರುವ “ಲವ್‌ ಮಾಕ್ಟೇಲ್‌’ ಚಿತ್ರದ ಟ್ರೇಲರ್‌ಗೆ ಹಿನ್ನೆಲೆ ಧ್ವನಿಯನ್ನು ನೀಡುವ ಮೂಲಕ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಇದೇ ವೇಳೆ “ಲವ್‌ ಮಾಕ್ಟೇಲ್‌’ ಚಿತ್ರ ಬಿಡುಗಡೆಯಾಗುವ ವೇಳೆ ಚಿತ್ರದ ಮೊದಲ ಟಿಕೆಟ್‌ ಅನ್ನು ಕೂಡ ತಾನೇ ಖರೀದಿಸುವುದಾಗಿ ಸುದೀಪ್‌ ಘೋಷಿಸಿದರು.

ಚಿತ್ರದ ಬಗ್ಗೆ ಮಾತನಾಡಿದ ನಟ ಕಂ ನಿರ್ದೇಶಕ ಮದರಂಗಿ ಕೃಷ್ಣ, “ಹತ್ತಾರು ಸವಾಲುಗಳನ್ನು ಎದುರಿಸಿ ಈ ಚಿತ್ರವನ್ನು ಮಾಡಿದ್ದೇವೆ. ಸದ್ಯ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಅದಷ್ಟು ಬೇಗ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ’ ಎಂದು “ಲವ್‌ ಮಾಕ್ಟೇಲ್‌’ ಚಿತ್ರ ಸಾಗಿಬಂದ ರೀತಿಯನ್ನು ತೆರೆದಿಟ್ಟರು.

ಸಮಾರಂಭದಲ್ಲಿ ಹಾಜರಿದ್ದ ನಾಯಕ ನಟಿ ಮಿಲನಾ ನಾಗರಾಜ್‌, ಮತ್ತೂಬ್ಬ ನಟಿ ಅಮೃತಾ ಅಯ್ಯಂಗಾರ್‌ ಚಿತ್ರದ ಅನುಭವ ಮತ್ತು ತಮ್ಮ ಪಾತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು. ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ಚಿತ್ರದ ಹಾಡುಗಳ ಬಗ್ಗೆ ಮಾಹಿತಿ ನೀಡಿದರು. ಚಿತ್ರದ ಛಾಯಾಗ್ರಹಕ ಮತ್ತು ಸಂಕಲನಕಾರ ಕ್ರೇಜಿಮೈಂಡ್ಸ್‌ ಶ್ರೀ ಚಿತ್ರದ ಅನುಭವ ಹಂಚಿಕೊಂಡರು.

ಸದ್ಯ ಹಾಡುಗಳು ಮತ್ತು ಟ್ರೇಲರ್‌ ಮೂಲಕ ಸೋಶಿಯಲ್‌ ಮೀಡಿಯಾಗಳಲ್ಲಿ ನಿಧಾನವಾಗಿ ಒಂದಷ್ಟು ಸದ್ದು ಮಾಡುತ್ತಿರುವ “ಲವ್‌ ಮಾಕ್ಟೇಲ್‌’ ಜನವರಿ 31 ಕ್ಕೆ ತೆರೆ ಕಾಣುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ನಟ ವಿನೋದ್‌ ಪ್ರಭಾಕರ್‌ ಅಭಿನಯದ ಹೊಸಚಿತ್ರ "ಶ್ಯಾಡೊ' ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇತ್ತೀಚೆಗೆ...

  • ಹಿಂದಿಯಲ್ಲಿ "ಪದ್ಮಾವತ್‌', "ತಾನಾಜಿ', ತೆಲುಗಿನಲ್ಲಿ "ಸೈರಾ ನರಸಿಂಹ ರೆಡ್ಡಿ', ಮಲೆಯಾಳಂನ "ಮಾಮಂಗಮ್‌' ನಂತಹ ಐತಿಹಾಸಿಕ ಕಥಾ ಹಂದರದ ಚಿತ್ರಗಳನ್ನು ಕನ್ನಡದಲ್ಲಿ...

  • 29 ದಿನ 34 ಸಿನಿಮಾ...! -ಇದು ಫೆಬ್ರವರಿಯಲ್ಲಿ ಬಿಡುಗಡೆಗೊಂಡ ಚಿತ್ರಗಳ ವಿಷಯ. ಹೌದು. ಜನವರಿಯಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆ ಕಂಡಿದ್ದವು. ಆದರೆ, ಗೆಲುವಿನ ಸಂಖ್ಯೆ...

  • ಗಾಯಕ ಕಮ್‌ ನಾಯಕ ಸುನೀಲ್‌ ರಾವ್‌ ಮತ್ತೆ ಬಂದಿದ್ದಾರೆ. ವರ್ಷಗಳ ಗ್ಯಾಪ್‌ ಬಳಿಕ "ತುರ್ತು ನಿರ್ಗಮನ' ಎಂಬ ಸಿನಿಮಾ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ...

  • ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ "ದ್ರೋಣ' ಚಿತ್ರದ ಮೂಲಕ ಈ ವರ್ಷದ ಸಿನಿ ಇನ್ನಿಂಗ್ಸ್‌ ಶುರು ಮಾಡಲು ರೆಡಿಯಾಗಿದ್ದಾರೆ. ಹೌದು, ಈ ವರ್ಷ ಶಿವಣ್ಣ ಅಭಿನಯದ ಮೊದಲ...

ಹೊಸ ಸೇರ್ಪಡೆ

  • ಮನೋ ಚಿಕಿತ್ಸಾ ಕೇಂದ್ರಗಳ ಕುರಿತಾಗಿ ನಮ್ಮ ನಡುವೆ ಅನೇಕ ತಪ್ಪು ಕಲ್ಪನೆಗಳಿವೆ. "ಹುಚ್ಚಾಸ್ಪತ್ರೆ' ಎಂಬ ಪದಪ್ರಯೋಗವೇ ನಮ್ಮ ನಡುವೆ ಕೆಟ್ಟ ಭಾವವನ್ನು ಹೊಮ್ಮಿಸುತ್ತದೆ....

  • ಕುಲುಮೆಯ ಬೆಂಕಿ ಮುಂದೆ, ದುಡಿದು ದಣಿವ ಜೀವ. ಪ್ರಾಯ 65 ದಾಟಿದೆ. ಕಮ್ಮಾರಿಕೆಯಿಂದ ಬಂದ ನಾಲ್ಕಾರು ಕಾಸನ್ನು ವೀರಾಚಾರಿ ಅವರು ಬ್ಯಾಂಕಿನಲ್ಲಿ ಕೂಡಿಡದೆ, ನಮ್ಮೆಲ್ಲರ...

  • ರಷ್ಯಾ ಮೂಲದ ಸೀಬರ್ಡ್‌ಗಳಿಗೆ, ಕಾರವಾರದ ಕಡಲತಡಿ ಪಕ್ಷಿಕಾಶಿ ಇದ್ದಂತೆ. ಆದರೆ, ದುರಾದೃಷ್ಟ. ಈ ಬಾರಿ ಇಲ್ಲಿ ಸೀಬರ್ಡ್‌ನ ಚಿಲಿಪಿಲಿ ಕೇಳಿಸುತ್ತಿಲ್ಲ. ದೂರದ ಊರಿನ...

  • ಚಟುವಟಿಕೆಯ ಚಿಲುಮೆ ರೋನಿಕಾ ಲವಲವಿಕೆಯಿಂದ ರಂಗಪ್ರವೇಶಿಸಿ, ಆತ್ಮವಿಶ್ವಾಸದಿಂದ ನೃತ್ಯ ಪ್ರಸ್ತುತಪಡಿಸಿದ ಬಗೆ ಮುದ ತಂದಿತ್ತು. ಅಂಗಶುದ್ಧಿ, ಕಲಾನೈಪುಣ್ಯದ...

  • ಶ್ರೀಲಂಕೆಯ ದೋಲುಕಂಡ ಪ್ರದೇಶ, ಆಯುರ್ವೇದ ಗಿಡಮೂಲಿಕೆಗಳಿಗೆ ಪ್ರಸಿದ್ಧವಾದ ತಾಣ. ಈ ಕುರಿತು ಸ್ಥಳೀಯರು ಹೇಳುವ ಕಥೆಯೇ ಬೇರೆ. ಸೈನ್ಯದಲ್ಲಿ ಆಘಾತಕ್ಕೊಳಗಾದ ರಾಮನ...