Udayavni Special

ಬಹುಮುಖಿ ದೆವ್ವ !

ಹಾರರ್‌ ಚಿತ್ರದಲ್ಲಿ ನೀತು

Team Udayavani, Jul 12, 2019, 5:00 AM IST

u-20

‘ಇಲ್ಲೊಂದು ದೆವ್ವ ಇದೆ. ಅದಕ್ಕೂ ನೋವಿದೆ, ದ್ವೇಷವೂ ಇದೆ. ಅದು ಅಳುತ್ತೆ, ಅಳಿಸುತ್ತೆ, ಬೆಚ್ಚಿ ಬೀಳಿಸುತ್ತೆ. ಅಷ್ಟೇ ಅಲ್ಲ, ಮನುಷ್ಯನಿಗೆ ಇರಬೇಕಾದ ಎಲ್ಲಾ ಸಂಕಷ್ಟಗಳೂ ಅದಕ್ಕಿವೆ…’

– ದೆವ್ವದ ಕುರಿತು ಹೀಗೆ ಹೇಳುತ್ತಾ ಹೋದರು ನಟಿ ನೀತು. ಅವರು ಹೇಳಿದ್ದು, ‘ವಜ್ರಮುಖೀ’ ಸಿನಿಮಾದಲ್ಲಿ ಬರುವ ದೆವ್ವದ ಬಗ್ಗೆ. ಹೌದು, ‘ವಜ್ರಮುಖೀ’ ಹಾರರ್‌ ಕಥಾಹಂದರ ಹೊಂದಿರುವ ಸಿನಿಮಾ. ಜುಲೈ 19 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಆ ಬಗ್ಗೆ ಹೇಳಿಕೊಳ್ಳಲೆಂದೇ ಚಿತ್ರತಂಡ ಪತ್ರಕರ್ತರ ಮುಂದೆ ಬಂದಿತ್ತು.

ನಟಿ ನೀತು, ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಂದರೆ, ಅದು ದೆವ್ವದ ಪಾತ್ರವಂತೆ. ಆ ಬಗ್ಗೆ ಹೇಳಿಕೊಂಡ ನೀತು, ‘ನಾನಿಲ್ಲಿ ದೆವ್ವದ ಪಾತ್ರ ಮಾಡಿದ್ದೇನೆ. ಆ ಬಗ್ಗೆ ಹೆಚ್ಚು ಹೇಳು­ವಂತಿಲ್ಲ. ಹಾರರ್‌ ಚಿತ್ರಗಳಲ್ಲಿ, ಈಗಾಗಲೇ ನಾಗವಲ್ಲಿ, ಕಾಂಚನಾ ಹೆಸರಿನ ದೆವ್ವಗಳು ಫೇಮಸ್‌ ಆಗಿವೆ. ಆ ಸಾಲಿಗೆ ‘ವಜ್ರಮುಖೀ’ ದೆವ್ವ ಕೂಡ ಸೇರುವ ನಂಬಿಕೆ ಇದೆ ಎಂದು ಹೇಳಿಕೊಂಡ ನೀತು, ನಾನು ಇದುವರೆಗೆ 39 ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ನನ್ನ 35 ನೇ ಸಿನಿಮಾ. ನನಗಿದು ವಿಶೇಷ ಚಿತ್ರ. ಕಾರಣ, ಇದೇ ಮೊದಲ ಸಲ ನಾನು ದೆವ್ವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರು ನನಗೆ ಸಾಕಷ್ಟು ಫ್ರೀಡಮ್‌ ಕೊಟ್ಟಿದ್ದರು. ಹಾಗಾಗಿ, ಆ ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯವಾಯಿತು. ಒಟ್ಟಾರೆ ‘ವಜ್ರಮುಖೀ’ ಸಿನಿಮಾದ ಉದ್ದೇಶವಿಷ್ಟೇ, ನೋಡುಗರಿಗೆ ಒಂದು ಹೊಸ ಥ್ರಿಲ್ ಮತ್ತು ಫೀಲ್ ಸಿಗಬೇಕು. ಎಷ್ಟೋ ಹಾರರ್‌ ಚಿತ್ರಗಳು ಬಂದಿವೆಯಾದರೂ, ಇದೊಂದು ಕಲ್ಪನೆಯ ದೆವ್ವದ ಕಥೆ ಇದೆ. ಹಾರರ್‌ ಇಷ್ಟಪಡುವ ಜನರಿಗೆ ಖಂಡಿತ ‘ವಜ್ರಮುಖೀ’ ಬೇಸರ ತರಿಸಲ್ಲ ‘ ಎಂಬುದು ನೀತು ಮಾತು.

ನಿರ್ಮಾಪಕ ಶಶಿಕುಮಾರ್‌ ಅವರಿಗೆ ಇದು ಎರಡನೇ ಸಿನಿಮಾ. ಈ ಹಿಂದೆ ಅವರು ‘ಸಿಗಂಧೂರು ಚೌಡೇಶ್ವರಿ ‘ ಚಿತ್ರ ನಿರ್ಮಿಸಿದ್ದರು. ಈಗ ‘ವಜ್ರಮುಖೀ’ ನಿರ್ಮಿಸಿದ್ದಾರೆ. ‘ಇಲ್ಲಿ ತ್ರಿಕೋನ ಪ್ರೇಮಕಥೆ ಇದೆ. ಅದರೊಂದಿಗೆ ಹಾರರ್‌ ಅಂಶಗಳೂ ಇವೆ. ಎನ್‌.ಕುಮಾರ್‌ ಅವರ ಸಹಕಾರದೊಂದಿಗೆ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ. ದಿಲೀಪ್‌ ಪೈ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಸಂಜನಾ ಎಂಬ ಹೊಸ ಪ್ರತಿಭೆಯೂ ಇಲ್ಲಿದೆ. ನೀತು ಸಿನಿಮಾದ ಹೈಲೈಟ್. ಪಿಕೆಎಚ್ ದಾಸ್‌ ಅವರ ಛಾಯಾಗ್ರಹಣವಿದೆ. ರೆಗ್ಯುಲರ್‌ ಫಾರ್ಮೆಟ್‌ನಲ್ಲಿ ಈ ಚಿತ್ರವಿಲ್ಲ. ಒಂದು ಮರ್ಡರ್‌ ಮಿಸ್ಟರಿಯಿಂದ ಏನೆಲ್ಲಾ ಆಗುತ್ತೆ ಎಂಬುದು ಸಸ್ಪೆನ್ಸ್‌’ ಎಂದರು ಶಶಿಕುಮಾರ್‌.

ವಿತರಕ ಎನ್‌.ಕುಮಾರ್‌ ಅವರಿಗೆ ನಿರ್ಮಾಪಕ ಶಶಿಕುಮಾರ್‌ ಬಂದು, ‘ವಜ್ರಮುಖೀ’ ಚಿತ್ರ ವಿತರಣೆ ಮಾಡಿಕೊಡಿ ಅಂದಾಗ, ಸದ್ಯಕ್ಕೆ ನಾನು ವಿತರಣೆ ಬಗ್ಗೆ ಹೆಚ್ಚು ಗಮನಕೊಡುತ್ತಿಲ್ಲ. ನಿಮಗೆ ನಾನು ಸಹಕಾರ ಕೊಡುತ್ತೇನೆ ನೀವೇ ರಿಲೀಸ್‌ ಮಾಡಿ ಅಂತ, ಸಾಥ್‌ ನೀಡಿದ್ದಾರಂತೆ. ಇಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತೆ ಎಂಬುದು ಮುಖ್ಯ ಅಲ್ಲ, ಎಷ್ಟು ದಿನ ಚಿತ್ರಮಂದಿರದಲ್ಲಿರುತ್ತೆ ಎಂಬುದು ಮುಖ್ಯ. ಸಿನಿಮಾ ನೋಡಿದ್ದೇನೆ. ಚೆನ್ನಾಗಿ ಮೂಡಿಬಂದಿದೆ. ಹೊಸಬರ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ’ ಎಂದರು ಕುಮಾರ್‌.

ನಿರ್ದೇಶಕ ಆದಿತ್ಯ ಕುಣಿಗಲ್ ಹೆಚ್ಚು ಮಾತನಾಡಲಿಲ್ಲ. ಎಲ್ಲರೂ ನಮಗೆ ಬೆಂಬಲ ಕೊಡಬೇಕು ಎಂದಷ್ಟೇ ಹೇಳಿ ಸುಮ್ಮನಾದರು. ಚಿತ್ರದ ಸಹನಿರ್ಮಾಪಕಿ ಗೀತಾ ಅವರಿಗೆ ಇದು ಹೊಸ ಅನುಭವವಂತೆ. ಸಿನಿಮಾ ನೋಡಿದ್ದೇನೆ. ಅಂದುಕೊಂಡಂತೆ ಮೂಡಿಬಂದಿದೆ.ಹಾರರ್‌ ಇಷ್ಟಪಡುವ ವರ್ಗಕ್ಕೆ ಇದು ಇಷ್ಟವಾಗುತ್ತೆ ಎಂಬ ನಂಬಿಕೆ ನಮಗಿದೆ ಎಂದಷ್ಟೇ ಹೇಳಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಸಾಂಕ್ರಾಮಿಕದ‌ ಸಮಯದಲ್ಲಿ ಗ್ರಾಮೀಣ‌ ಪ್ರದೇಶದಲ್ಲಿ ಚುನಾವಣೆ ಸೂಕ್ತವಲ್ಲ: ಸುಧಾಕರ್

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಚುನಾವಣೆ ಮುಂದೂಡುವುದು ಒಳಿತು :ಸಚಿವ ಸುಧಾಕರ್

mangalore

ಮಂಗಳೂರು: ದುಬೈನಿಂದ ಅಕ್ರಮವಾಗಿ ಚಿನ್ನ ತಂದು, ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದ ಪ್ರಯಾಣಿಕ

ಜಮ್ಮು-ಕಾಶ್ಮೀರ: ಭದ್ರತಾ ಪಡೆ ಎನ್ ಕೌಂಟರ್ – ಇಬ್ಬರು ಜೈಶ್ ಉಗ್ರರ ಹತ್ಯೆ

ಜಮ್ಮು-ಕಾಶ್ಮೀರ: ಭದ್ರತಾ ಪಡೆ ಎನ್ ಕೌಂಟರ್ – ಇಬ್ಬರು ಜೈಶ್ ಉಗ್ರರ ಹತ್ಯೆ

ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಗೆ ಮಂಗಳವಾರ ಬೆಳಿಗ್ಗೆ ೮ ರಿಂದ ಸಂಜೆ ೫ ರ ವರೆಗೆ ಮತದಾನ ಪ್ರಕ್ರೀಯೆ ನಡೆಯಲಿದೆ.

ಧಾರವಾಡ : ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಮತದಾನ ಪ್ರಕ್ರೀಯೆ ಆರಂಭ! ಶೇ.9ರಷ್ಟು ಮತದಾನ

india-austraklia

ಭಾರತ-ಆಸೀಸ್ ಸರಣಿ: ದಿನಾಂಕ ನಿಗದಿಪಡಿಸಿದ ಕ್ರಿಕೆಟ್ ಆಸ್ಟ್ರೇಲಿಯಾ: ಇಲ್ಲಿದೆ ವೇಳಾಪಟ್ಟಿ !

ಮೈದುಂಬಿ ಹರಿಯುತ್ತಿದೆ ದೂಧ್ ಸಾಗರ ಜಲಪಾತ ! ಪ್ರವಾಸಿಗರ ಸಂಖ್ಯೆ ವಿರಳ 

ಮೈದುಂಬಿ ಹರಿಯುತ್ತಿದೆ ದೂಧ್ ಸಾಗರ ಜಲಪಾತ ! ಪ್ರವಾಸಿಗರ ಸಂಖ್ಯೆ ವಿರಳ 

srh

ಹಲವು ದಾಖಲೆಗಳಿಗೆ ಸಾಕ್ಷಿಯಾದ ಡೆಲ್ಲಿ-ಹೈದರಾಬಾದ್ ಪಂದ್ಯ: ರಬಾಡ ಅನನ್ಯ ಸಾಧನೆಯೇನು ಗೊತ್ತಾ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suchitra-tdy-7

ಕ್ರಾಂತಿ ವೀರ ಲುಕ್‌ ರಿಲೀಸ್‌ : ತೆರೆಮೇಲೆ ಭಗತ್‌ ಸಿಂಗ್‌ ಜೀವನಗಾಥೆ

suchitra-tdy-6

ಕ್ಯಾಡ್ಬರಿಸ್ ‌ಹಿಡಿದ ಧರ್ಮ ಕೀರ್ತಿರಾಜ್‌

SUCHITRA-TDY-8

ಪಾವನಾ ಕೈ ತುಂಬಾ ಸಿನ್ಮಾ

suchitra-tdy-11

ಡಬ್ಬಿಂಗ್‌ ಮುಗಿಸಿದ ಚಡ್ಡಿದೋಸ್ತ್ ಗಳು

suchitra-tdy-10

ಹೊಸ ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!ಹೊಸ ಸೇರ್ಪಡೆ

ಬಂಡೆ, ಚಪ್ಪಡಿಕಲ್ಲು ಬೇಕಿಲ್ಲ: ಅಶೋಕ್‌

ಬಂಡೆ, ಚಪ್ಪಡಿಕಲ್ಲು ಬೇಕಿಲ್ಲ: ಅಶೋಕ್‌

ಕೋವಿಡ್ ಸಾಂಕ್ರಾಮಿಕದ‌ ಸಮಯದಲ್ಲಿ ಗ್ರಾಮೀಣ‌ ಪ್ರದೇಶದಲ್ಲಿ ಚುನಾವಣೆ ಸೂಕ್ತವಲ್ಲ: ಸುಧಾಕರ್

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಚುನಾವಣೆ ಮುಂದೂಡುವುದು ಒಳಿತು :ಸಚಿವ ಸುಧಾಕರ್

mangalore

ಮಂಗಳೂರು: ದುಬೈನಿಂದ ಅಕ್ರಮವಾಗಿ ಚಿನ್ನ ತಂದು, ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದ ಪ್ರಯಾಣಿಕ

ಜಮ್ಮು-ಕಾಶ್ಮೀರ: ಭದ್ರತಾ ಪಡೆ ಎನ್ ಕೌಂಟರ್ – ಇಬ್ಬರು ಜೈಶ್ ಉಗ್ರರ ಹತ್ಯೆ

ಜಮ್ಮು-ಕಾಶ್ಮೀರ: ಭದ್ರತಾ ಪಡೆ ಎನ್ ಕೌಂಟರ್ – ಇಬ್ಬರು ಜೈಶ್ ಉಗ್ರರ ಹತ್ಯೆ

ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಗೆ ಮಂಗಳವಾರ ಬೆಳಿಗ್ಗೆ ೮ ರಿಂದ ಸಂಜೆ ೫ ರ ವರೆಗೆ ಮತದಾನ ಪ್ರಕ್ರೀಯೆ ನಡೆಯಲಿದೆ.

ಧಾರವಾಡ : ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಮತದಾನ ಪ್ರಕ್ರೀಯೆ ಆರಂಭ! ಶೇ.9ರಷ್ಟು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.