ಹೊಸಬರ ರೆಟ್ರೋ ಶೈಲಿಯ ಚಿತ್ರ

ಪ್ರತಿಭೆ ಇದ್ರೆ, ಯಾರ್‌ ಬೇಕಾದ್ರೂ ಹೀರೋ ಆಗಬಹುದು

Team Udayavani, Jul 26, 2019, 5:00 AM IST

ಕೆಲ ತಿಂಗಳ ಹಿಂದೆ ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಏ ಸೋನಾ…’ ಎನ್ನುವ ಹೆಸರಿನ ಮ್ಯೂಸಿಕ್‌ ಆಲ್ಬಂ ಬಿಡುಗಡೆಯಾಗಿತ್ತು. ನವ ಪ್ರತಿಭೆಗಳಾದ ರಘು ಪಡುಕೋಟೆ, ಶಾಲಿನಿ ಗೌಡ ಅಭಿನಯಿಸಿದ್ದ ಈ ಮ್ಯೂಸಿಕ್‌ ಆಲ್ಬಂಗೆ ಸರಿಗಮಪ ಖ್ಯಾತಿಯ ಸುನೀಲ್‌ ಸಂಗೀತ ಸಂಯೋಜಿಸಿ, ಹಾಡಿಗೆ ಧ್ವನಿಯಾಗಿ ಜೊತೆಯಾಗಿ ತೆರೆಮೇಲೆ ಕೂಡ ಕಾಣಿಸಿಕೊಂಡಿದ್ದರು. ಹೊಸ ಪ್ರತಿಭೆಗಳ ಈ ಪ್ರಯತ್ನಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.

ಈಗ “ಏ ಸೋನಾ…’ ಆಲ್ಬಂನಲ್ಲಿ ಅಭಿನಯಿಸಿದ್ದ ರಘು ಪಡುಕೋಟೆ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ರಘು ಅಭಿನಯಿಸುತ್ತಿರುವ ಚೊಚ್ಚಲ ಚಿತ್ರಕ್ಕೆ “ಯಾರ್‌ಮಗ’ ಎಂದು ಹೆಸರಿಡಲಾಗಿದ್ದು, ಸದ್ಯ “ಯಾರ್‌ಮಗ’ ಚಿತ್ರದ ಬಹುತೇಕ ಪ್ರೀ-ಪ್ರೊಡಕ್ಷನ್‌ ಕೆಲಸಗಳನ್ನು ಪೂರೈಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ನಾಯಕ ನಟ ರಘು ಪಡುಕೋಟೆ ಜನ್ಮದಿನದ ಪ್ರಯುಕ್ತ ಚಿತ್ರದ ಮೊದಲ ಟೀಸರ್‌ ಅನ್ನು ಬಿಡುಗಡೆ ಮಾಡಿದೆ.

ಇದೇ ವೇಳೆ ಮಾತನಾಡಿದ ನವನಟ ರಘು ಪಡಕೋಟೆ, “ಬಾಲ್ಯದಿಂದಲೂ ಚಿತ್ರರಂಗದತ್ತ ಆಸಕ್ತಿ ಬೆಳೆಸಿಕೊಂಡಿರುವ ನಾನು ಇಲ್ಲೇ ಏನಾದರೂ ಸಾಧನೆ ಮಾಡಬೇಕು ಎಂಬ ಉದ್ದೇಶದಿಂದ ಇದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ.ಚಿತ್ರರಂಗಕ್ಕೆ ಬರುವುದಕ್ಕೆ ಮುಂಚೆ ಬಹಳ ವರ್ಷಗಳಿಂದ ನೃತ್ಯ ಕಲಿಕೆ, ಅಭಿನಯದ ತರಬೇತಿ ಪಡೆದುಕೊಳ್ಳುತ್ತಿದ್ದೇನೆ. ಏ ಸೋನಾ… ಮ್ಯೂಸಿಕ್‌ ಅಲ್ಬಂ ಮೂಲಕ ನನ್ನ ಪ್ರತಿಭೆಯನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿ ನಂತರ ಚಿತ್ರದಲ್ಲಿ ಅಭಿನಯಿಸುವ ನಿರ್ಧಾರಕ್ಕೆ ಬಂದೆ’ ಎಂದರು.

“ಯಾರ್‌ಮಗ’ ಚಿತ್ರದಲ್ಲಿ ನಾಯಕಿಯಾಗಿ ವಿದ್ಯಾ ಪ್ರಭು ಅಭಿನಯಿಸುತ್ತಿದ್ದಾರೆ. ಉಳಿದಂತೆ ಗಣೇಶ್‌ ರಾವ್‌ ಕೇಸರ್‌ಕರ್‌, ಅಶ್ವಿ‌ನಿ ಗೌಡ, ಗುರುರಾಜ್‌ ಹೊಸಕೋಟೆ, ಮೈಕಲ್‌ ಮಧು ಮೊದಲಾದವರು ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ತಾಯಿಯನ್ನು ಕಳೆದುಕೊಂಡ ಮಗನ ನೋವು ಮತ್ತು ಭೂಗತ ಲೋಕದ ಸಹವಾಸ ಹುಡುಗನ ಜೀವನದಲ್ಲಿ ಏನೆಲ್ಲ ಮಾಡಿಸುತ್ತದೆ ಎನ್ನುವುದರ ಸುತ್ತ “ಯಾರ್‌ಮಗ’ ಚಿತ್ರದ ಕಥೆ ನಡೆಯಲಿದ್ದು, ಚಿತ್ರದ ನಾಯಕ ನಟ ರಘು ಪಡುಕೋಟೆ ಸ್ವತಃ ಬರೆದಿರುವ ಕಥೆಗೆ ಸುರೇಶ್‌ ರಾಜ್‌ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಲೋಕಿ ಸಂಗೀತ ಸಂಯೋಜಿಸುತ್ತಿದ್ದು, ಸಿ.ಎಸ್‌ ಸತೀಶ್‌ ಚಿತ್ರದ ದೃಶ್ಯಗಳಿಗೆ ಕ್ಯಾಮರಾ ಹಿಡಿಯುತ್ತಿದ್ದಾರೆ. ಸದ್ಯ ಚಿತ್ರದ ಕೆಲವು ಪಾತ್ರಗಳಿಗೆ ಆಡೀಷನ್‌ ನಡೆಸುತ್ತಿರುವ ಚಿತ್ರತಂಡ, ಚಿತ್ರದ ದೃಶ್ಯಗಳು ನೈಜವಾಗಿ ಮೂಡಿ ಬರಬೇಕೆಂಬ ಕಾರಣಕ್ಕೆ ಕೆಲವು ಮಾಜಿ ರೌಡಿಗಳನ್ನ, ರೌಡಿ ಶೀಟರ್‌ಗಳಲ್ಲಿ ಗುರುತಿಸಿಕೊಂಡವರನ್ನೂ ಕರೆತಂದು ಚಿತ್ರದಲ್ಲಿ ಅಭಿನಯಿಸುತ್ತಿದೆಯಂತೆ.

ಪಕ್ಕಾ ಆ್ಯಕ್ಷನ್‌ ಕಂ ಸೆಂಟಿಮೆಂಟ್‌ ಶೈಲಿಯ ಈ ಚಿತ್ರದಲ್ಲಿ ಇಂದಿನ ಪ್ರೇಕ್ಷಕರು ಬಯಸುವ ಎಲ್ಲಾ ಮನರಂಜನೆಯ ಅಂಶಗಳೂ ಇರಲಿವೆ. 90ರ ದಶಕದ ರೆಟ್ರೋ ಸ್ಟೈಲ್‌ ಕಥೆ ಈ ಚಿತ್ರದಲ್ಲಿದೆ. ಚಿತ್ರ ಕೂಡ ಅದೇ ಥರ ಮೂಡಿಬರಲಿದೆ ಎನ್ನುತ್ತದೆ ಚಿತ್ರತಂಡ.

ಸಾಮಾನ್ಯವಾಗಿ ಹೀರೋಗಳನ್ನ ಸಿನಿಮಾಗಳಲ್ಲಿ ಭರ್ಜರಿ ಬಿಲ್ಡಪ್‌ ಸೀನ್‌ಗಳ ಮೂಲಕ, ಅದ್ಧೂರಿ ಸಾಂಗ್ಸ್‌ ಮೂಲಕ ಇಂಟ್ರಡ್ನೂಸ್‌ ಮಾಡುವುದು ಮಾಮೂಲಿ. ಆದರೆ ನಿರ್ಮಾಪಕ ಬಸವರಾಜ್‌ ಪಡುಕೋಟೆ “ಏ ಸೋನಾ…’ ಮ್ಯೂಸಿಕ್‌ ಅಲ್ಬಂ ಮೂಲಕ ತಮ್ಮ ಪುತ್ರನ ಪ್ರತಿಭೆಯನ್ನ ಪರಿಚಯಿಸಿದ್ದು, ಈಗ “ಯಾರ್‌ಮಗ’ ಚಿತ್ರದ ಮೂಲಕ ಹೀರೋ ಆಗಿ ಪ್ರೇಕ್ಷಕರಿಗೆ ಪರಿಚಯಿಸಿಸುತ್ತಿದ್ದಾರೆ.

ಬೆಂಗಳೂರು, ಮಂಗಳೂರು ಮತ್ತು ಮುಂಬೈ ಸುತ್ತಮುತ್ತ “ಯಾರ್‌ಮಗ’ ಚಿತ್ರದ ಚಿತ್ರೀಕರಣಕ್ಕೆ ಪ್ಲಾನ್‌ ಹಾಕಿಕೊಳ್ಳಲಾಗಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ, ಇದೇ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • "ಮೊದಲು ಕನ್ನಡ ಸಿನಿಮಾಗಳನ್ನು ನೋಡಿ, ಆ ನಂತರ ಬೇರೆ ಭಾಷೆಯಲ್ಲಿ ಆ ತರಹ ಮಾಡ್ತಾರೆ, ಈ ತರಹ ಮಾಡ್ತಾರೆ ಅಂತ ಮಾತನಾಡಿ ....' -ಕೆಲವು ದಿನಗಳ ಹಿಂದೆಯಷ್ಟೇ ನಟ ದರ್ಶನ್‌...

  • ಕಳೆದ ಎರಡು ವಾರಗಳಿಂದ ಸೂಕ್ಷ್ಮವಾಗಿ ಗಮನಿಸಿದರೆ, ಐದಾರು ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಂತಹ ಚಿತ್ರಗಳು ನಿಧಾನಗತಿಯಲ್ಲೇ ನೋಡುಗರನ್ನು ಆಕರ್ಷಿಸುತ್ತವೆ....

  • ರಮೇಶ್‌ ಅರವಿಂದ್‌ ನಾಯಕಾಗಿರುವ "ಶಿವಾಜಿ ಸುರತ್ಕಲ್‌' ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. ಟ್ರೇಲರ್‌ ಬಿಡುಗಡೆಯ ಜೊತೆಗೆ ಚಿತ್ರತಂಡ ವಿಶಿಷ್ಟವಾಗಿ...

  • ಈ ಬಾರಿಯ ಮಹಾಶಿವರಾತ್ರಿ ಹಬ್ಬಕ್ಕೆ ಸಾಲು ಸಾಲು ಚಿತ್ರಗಳು ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿವೆ. ಈ ಚಿತ್ರಗಳ ಸಾಲಿನಲ್ಲಿ ಬಹುತೇಕ ಹೊಸಬರ "ಶಿವ' ಎನ್ನುವ ಚಿತ್ರವೂ...

  • ಯಾವುದಾದರೂ ವ್ಯಕ್ತಿಯ ದೈಹಿಕ ಎತ್ತರವನ್ನು ಅಳೆಯುವಾಗ ಅಡಿ-ಅಂಗುಲ ಪದಗಳನ್ನು ಬಳಕೆ ಮಾಡುವುದನ್ನು ನೋಡಿದ್ದೇವೆ. ಈಗ ಅಡಿ-ಅಂಗುಲ ಪದಗಳನ್ನೇ ಇಟ್ಟುಕೊಂಡು ಇಲ್ಲೊಂದು...

ಹೊಸ ಸೇರ್ಪಡೆ