ಪ್ರೇಕ್ಷಕರ ಮಡಿಲಿಗೆ ಚಂಬಲ್‌

Team Udayavani, Feb 22, 2019, 12:30 AM IST

26.jpg

ಸತೀಶ್‌ ನೀನಾಸಂ ಅಭಿನಯದ “ಚಂಬಲ್‌’ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಗೋಕುಲ್‌ ಫಿಲ್ಮ್ಸ್ ಚಿತ್ರವನ್ನು ವಿತರಣೆ ಮಾಡುತ್ತಿದೆ. ವಿತರಕ ಗೋಕುಲ್‌ರಾಜ್‌ ಅವರು ವಿತರಣೆ ಕುರಿತು ಹೇಳುವುದು ಹೀಗೆ. “ರಾಜ್ಯಾದ್ಯಂತ ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಚಿತ್ರ ನೋಡಿದಾಗ, ಒಳ್ಳೆಯ ಚಿತ್ರವಿದು ಎಲ್ಲರಿಗೂ ತಲುಪಬೇಕು ಎಂಬ ಕಾರಣಕ್ಕೆ ನಾವೇ ಆಸಕ್ತಿ ವಹಿಸಿ, ವಿತರಣೆ ಹಕ್ಕು ಪಡೆದು, ಇದೀಗ ಒಳ್ಳೆಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾಗಿದೆ. ಚಿತ್ರದಲ್ಲಿ ಒಳ್ಳೆಯ ಅಂಶಗಳಿವೆ. ಎಲ್ಲಾ ವರ್ಗಕ್ಕೂ ಚಿತ್ರ ಇಷ್ಟವಾಗಲಿದೆ’ ಎಂಬುದು ಗೋಕುಲ್‌ರಾಜ್‌ ಅವರ ಮಾತು.

ಇನ್ನು, ನಿರ್ದೇಶಕ ಜೇಕಬ್‌ ವರ್ಗಿಸ್‌ ಅವರಿಗೆ ಗೋಕುಲ್‌ ಫಿಲ್ಮ್ಸ್ ಚಿತ್ರದ ವಿತರಣೆ ಹಕ್ಕು ಪಡೆದಿರುವುದು ಖುಷಿ ಕೊಟ್ಟಿದೆಯಂತೆ. ಚಿತ್ರ ತೋರಿಸಿದಾಗ, ಅವರೇ ವಿತರಣೆ ಮಾಡಲು ಮುಂದಾಗಿದ್ದಾರೆ. ಪ್ರೇಕ್ಷಕರಿಗೆ ಈ ಚಿತ್ರ ಹತ್ತಿರವಾಗಲಿದೆ. ಸಾಮಾನ್ಯ ಜನರಂತೂ ಇಂತಹ ಚಿತ್ರ ಮಿಸ್‌ ಮಾಡಿಕೊಳ್ಳಬಾರದು. ಇದು ವಾಸ್ತವ ಸಮಾಜದಲ್ಲಿ ನಡೆಯುತ್ತಿರುವ ಅಂಶಗಳನ್ನು ಇಟ್ಟುಕೊಂಡು ಮಾಡಲಾಗಿದೆ. ಹಾಗಂತ, ಇದು ಡಿ.ಕೆ.ರವಿ ಅವರ ಕಥೆ ಇರಬಹುದಾ? ಎಂಬ ಪ್ರಶ್ನೆಗಳು ಬಂದಿವೆ. ಆದರೆ, ಇದು ಯಾರ ಕಥೆಯೂ ಅಲ್ಲ, ಒಂದು ಸಿನಿಮಾ ಮಾಡುವಾಗ, ಹಲವು ಸ್ಫೂರ್ತಿಗಳಿರುತ್ತವೆ. ಅಂಥದ್ದೇ ಸ್ಫೂರ್ತಿಯಿಂದ ಹುಟ್ಟಿರುವ ಕಥೆ ಇದು. ಚಿತ್ರ ನೋಡಿದವರಿಗೆ ಇದು ಯಾವ ರೀತಿಯ ಚಿತ್ರ ಎಂಬುದು ಗೊತ್ತಾಗುತ್ತೆ ಅಂದರು ಅವರು.

ನಾಯಕ ಸತೀಶ್‌ ಅವರಿಗೆ ಗೋಕುಲ್‌ರಾಜ್‌ ಅವರು ವಿತರಣೆ ಮಾಡುತ್ತಿದ್ದಾರೆ ಎಂಬುದನ್ನು ಕೇಳಿ ಖುಷಿಯಾಯಿತಂತೆ. ದೊಡ್ಡ ವಿತರಣೆ ಸಂಸ್ಥೆಯೊಂದು ಚಿತ್ರ ಬಿಡುಗಡೆ ಮಾಡಲು ಮುಂದಾಗಿದೆ. ದೊಡ್ಡ ಮೊತ್ತಕ್ಕೆ ಚಿತ್ರದ ವಿತರಣೆ ಹಕ್ಕು ಪಡೆದಿದ್ದು ಇನ್ನೊಂದು ಹೆಮ್ಮೆಯ ವಿಷಯ. ನಿರ್ಮಾಪಕರು ಈಗಾಗಲೇ ಸೇಫ್ ಆಗಿದ್ದಾರೆ. ನಮಗಂತೂ ವಿಶ್ವಾಸವಿದೆ. ವಿತರಕರಿಗೂ ಚಿತ್ರ ಗೆಲುವು ತಂದುಕೊಡಲಿ. ಚಿತ್ರದಲ್ಲಿ ನಾನು ಐಎಎಸ್‌ ಅಧಿಕಾರಿ ಪಾತ್ರ ಮಾಡಿದ್ದೇನೆ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಅವರು ಹೇಳಿದ ಹಾಗೆ ನಾನು ಕೆಲಸ ಮಾಡಿದ್ದೇನೆ. ರಿಯಲ್‌ ಲೈಫ್ನಲ್ಲಿ ನಾನು ಓದಿದ್ದು ಕಮ್ಮಿ. ಆದರೆ, ರೀಲ್‌ನಲ್ಲಿ ನಿರ್ದೇಶಕರು ನನ್ನನ್ನು ಜಿಲ್ಲಾಧಿಕಾರಿ ಮಾಡಿದ್ದಾರೆ. ಪಾತ್ರ ಎಲ್ಲರಿಗೂ ಇಷ್ಟ ಆಗುತ್ತೆ ಅಂದರು ಸತೀಶ್‌.

ನಟಿ ಸೋನುಗೌಡ ಅವರಿಲ್ಲಿ, ಜಿಲ್ಲಾಧಿಕಾರಿ ಹೆಂಡತಿ ಪಾತ್ರ ಮಾಡಿದ್ದಾರಂತೆ. ನಟ ಸರ್ದಾರ್‌ ಸತ್ಯ ಅವರಿಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದು, ಸಿನಿಮಾ ನೋಡಿದವರು, ನನ್ನ ಮೇಲೆ ಕೋಪಿಸಿಕೊಳ್ಳುವಷ್ಟರ ಮಟ್ಟಿಗೆ ಆ ಪಾತ್ರವಿದೆ ಅಂದರು.

ಟಾಪ್ ನ್ಯೂಸ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Kannada Cinema; ನಮ್ ಜನ, ನಮ್ ಸಿನಿಮಾ… ತಗ್ಗಿದ ಪ್ಯಾನ್ ಇಂಡಿಯಾ ಕ್ರೇಜ್

Aditya’s kangaroo movie released

Kangaroo; ಥ್ರಿಲ್ಲರ್‌ ಹಾದಿಯಲ್ಲಿ ಆದಿತ್ಯ ಹೆಜ್ಜೆ ಗುರುತು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

IPL 2024; ನಮ್ಮ ಜ್ಞಾನಕ್ಕೆ ಮಾಡಿದ ಅಪಮಾನ..: ವಿರಾಟ್ ವಿರುದ್ಧ ಸಿಟ್ಟಾದ ಸುನೀಲ್ ಗಾವಸ್ಕರ್

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.