ಮನರಂಜನೆಯ ಜೊತೆಗೆ ಚಿಂತನೆ; ವಿನಯಾ ಪ್ರಸಾದ್‌ರ ಪ್ರಪಂಚವೇ ಬೇರೆ

Team Udayavani, Aug 25, 2017, 6:35 AM IST

LNPB-(7).jpg

ಮೇಡಂ, ನಿರ್ದೇಶನ ಯಾಕೆ ಮಾಡಬಾರ್ಧು? ಹಾಗಂತ ರಾಧಿಕಾ ಪಂಡಿತ್‌ಗೆ ಎಷ್ಟೋ ಬಾರಿ ಅನಿಸಿತ್ತಂತೆ. ಅದಕ್ಕೆ ಕಾರಣ ಅವರ ಜ್ಞಾನ. “ಅವರ ಜೊತೆಗೆ “ನಂದಗೋಕುಲ’ ಧಾರಾವಾಹಿಯಲ್ಲಿ ನಟಿಸಿದ್ದೆ. ಅವರನ್ನು ನೋಡಿದಾಗಲೆಲ್ಲಾ “ವಾಟ್‌ ಎ ಲೇಡಿ’ ಅಂತನಿಸುತಿತ್ತು. ಅವರಿಂದ ಕಲಿಯೋದು ತುಂಬಾ ಇದೆ. ಅವರಿಗೆ ಹಲವು ವಿಷಯಗಳು ಗೊತ್ತು, ಭಾಷೆಗಳು ಗೊತ್ತು. ಅವರು ಯಾಕೆ ನಿರ್ದೇಶನ ಮಾಡಬಾರದು ಅಂತ ಯಾವಗಲೂ ಅನಿಸುತಿತ್ತು. ಅದೀಗ ನಿಜವಾಗಿದೆ’ ಎಂದು ಖುಷಿಪಟ್ಟರು ರಾಧಿಕಾ ಪಂಡಿತ್‌.

ನಿರ್ದೇಶನ ಮಾಡಿದರೆ ಚೆನ್ನ ಎಂದು ರಾಧಿಕಾ ಪಂಡಿತ್‌ಗೆ ಅನಿಸಿದ್ದು ವಿನಯಾ ಪ್ರಸಾದ್‌ ಬಗ್ಗೆ. ಅವರೇ ಹೇಳಿಕೊಂಡಂತೆ, ಅವರಿಬ್ಬರ ಒಡನಾಟ ಹಲವು ವರ್ಷಗಳದ್ದು. ಹಾಗಾಗಿ ತಮ್ಮ “ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ’ ಚಿತ್ರದ ಹಾಡುಗಳ ಬಿಡುಗಡೆಗೆ ರಾಧಿಕಾ ಪಂಡಿತ್‌ ಅವರನ್ನು ಕರೆದಿದ್ದರು. ರಾಧಿಕಾ ಪಂಡಿತ್‌ ಚಾಮುಂಡೇಶ್ವರಿ ಸ್ಟುಡಿಯೋಗೆ ಬಂದು ಹಾಡು ಮತ್ತು ಟ್ರೇಲರ್‌ ಬಿಡುಗಡೆ ಮಾಡಿದ್ದಷ್ಟೇ ಅಲ್ಲ, ವಿನಯಾ ಪ್ರಸಾದ್‌ ಮತ್ತು ಚಿತ್ರತಂಡಕ್ಕೆ ಶುಭ ಕೋರಿ ಹೋದರು. “ನನ್ನ ಇಷ್ಟವಾದ ನಟಿ ವಿನಯಾ ಪ್ರಸಾದ್‌ ಅವರು. ಅವರ ಚಿತ್ರಗಳನ್ನು ನೋಡಿ ಬೆಳೆದವಳು ನಾನು. ಅವರು ನಿರ್ದೇಶನ ಮಾಡುತ್ತಿರುವ ವಿಷಯ ಕೇಳಿ, ನಿಜಕ್ಕೂ ಖುಷಿಯಾಯಿತು. ಹಾಡು ಮತ್ತು ಟ್ರೇಲರ್‌ನಲ್ಲಿ ಎನರ್ಜಿ ಇದೆ. ಚಿತ್ರ ಬಿಡುಗಡೆ ಆಗುವುದಕ್ಕೆ ಕಾಯುತ್ತಿದ್ದೀನಿ’ ಎಂದರು.

“ಲಕ್ಷ್ಮೀನಾರಾಯಣರ ಪ್ರಪಂಚವೇ ಬೇರೆ’ ಚಿತ್ರದಲ್ಲಿ ಇರುವುದು ಒಂದೇ ಹಾಡು ಮತ್ತು ಆ ಹಾಡಿಗೆ ಸಂಗೀತ ಸಂಯೋಜಿಸಿರುವುದು ವಿನಯಾ ಪ್ರಸಾದ್‌ ಅವರ ಪತಿ ಜ್ಯೋತಿಪ್ರಕಾಶ್‌ ಆತ್ರೇಯ. ಅವರು ಹಾಡು ಮೂಡಿ ಬಂದ ರೀತಿಯನ್ನು ಹೇಳುವುದರ ಜೊತೆಗೆ, ಚಿತ್ರಕ್ಕೆ ಹಾಡಿದ ರಾಜೇಶ್‌ ಕೃಷ್ಣನ್‌ ಅವರಿಗೆ ಧನ್ಯವಾದ ಸಮರ್ಪಿಸಿದರು. ಅವರು ಚಿತ್ರದಲ್ಲೊಂದು ಪಾತ್ರವನ್ನೂ ನಿರ್ವಹಿಸಿದ್ದಾರೆ. ಅವರ ಅಭಿನಯ ನೋಡಿ, ಅವರು ಖಾದರ್‌ ಖಾನ್‌ ಲೆವೆಲ್‌ನ ನಟ ಎಂದು ಮಂಜುನಾಥ ಹೆಗಡೆ ಹೇಳಿದರೆ, ಅವರು ಮೆಹಮೂದ್‌ ಲೆವೆಲ್‌ನ ನಟ ಎಂದು ಛಾಯಾಗ್ರಾಹಕ ಜೆ.ಜಿ. ಕೃಷ್ಣ ಹೇಳಿದರು.

ಚಿತ್ರದಲ್ಲಿ ವಿನಯಾ ಪ್ರಸಾದ್‌ ಅವರ ಮಗಳು ಪ್ರಥಮಾ ಪ್ರಸಾದ್‌ ಸಹ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ತಾಯಿ ಯಾವತ್ತೂ ವಿನ್ನರ್‌ ಎಂದು ಹೇಳಿಕೊಂಡರು. “ಪ್ಲಾನಿಂಗ್‌ ಮಾಡೋದು ಹೇಗೆ ಅಂತ ಅವರಿಂದ ಕಲಿಯಬೇಕು. ಬಿಪಿ, ಹಾರ್ಟ್‌ ಸಮಸ್ಯೆ ಇದ್ದವರು ಈ ಚಿತ್ರವನ್ನು ನೋಡಬೇಕು. ಖಂಡಿತಾ ಅಂಥವರಿಗೆ ಖುಷಿಯಾಗುತ್ತದೆ. ನನ್ನದು ತುಂಬಾ ಹೈಪರ್‌ಆ್ಯಕ್ಟೀವ್‌ ಪಾತ್ರ. ನನ್ನಿಂದ ಸುಮ್ಮನೆ ಕೂರೋಕೆ ಆಗಲ್ಲ. ಜೊತೆಗೆ ಸೆಲ್ಫಿ ಹುಚ್ಚು ಬೇರೆ. ಇದೊಂದು ವಿಭಿನ್ನವಾದ ಪಾತ್ರ’ ಎಂದು ಹೇಳಿಕೊಂಡರು.

ವಿನಯಾ ಪ್ರಸಾದ್‌ ಹೆಚ್ಚು ಮಾತನಾಡಲಿಲ್ಲ. “ಮನರಂಜನೆ ಜೊತೆಗೆ ಚಿಂತನೆ ಸಹ ಇರಬೇಕು ಎಂದು ಈ ಚಿತ್ರ ಮಾಡಿದ್ದೇವೆ. ಈ ಚಿತ್ರಕ್ಕೆ ಎಲ್ಲರ ಸಹಕಾರ ಮತ್ತು ಪ್ರೋತ್ಸಾಹವಿರಲಿ’ ಎಂದು ಮಾತು ಮುಗಿಸಿದರು.

ಟಾಪ್ ನ್ಯೂಸ್

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.