ಫೆಬ್ರವರಿ 14ರ ಪ್ರೇಮ ಕತೆಗಳು


Team Udayavani, Feb 12, 2017, 3:45 AM IST

lead.jpg

ಸಿಹಿ ಸೇಬು ಹಣ್ಣು
ಪ್ರೇಯಸಿ ಮತ್ತು ಪ್ರಿಯಕರ ಕಡಲ ದಂಡೆಯಲ್ಲಿ ಕುಳಿತಿದ್ದರು.
ಪ್ರೇಯಸಿಯ ಕೈಯಲ್ಲಿ ಎರಡು ಸೇಬು ಹಣ್ಣುಗಳಿದ್ದವು.
ಪ್ರಿಯಕರ ಕೇಳಿದ, “ಒಂದು ನನಗೆ ಕೊಡುವಿಯಾ?’
ಪ್ರೇಯಸಿ ನಕ್ಕಳು.
ಮತ್ತೆ ಎರಡೂ ಹಣ್ಣುಗಳನ್ನು ಕಚ್ಚಿದಳು. ಅವಳು ಕೊಡುವ ಲಕ್ಷಣವಿಲ್ಲವೆಂದು ಪ್ರಿಯಕರ ಶಾಂತ ಸಮುದ್ರದತ್ತ ಮುಖ ಮಾಡಿದ.
ತತ್‌ಕ್ಷಣ ಪ್ರೇಯಸಿ ಅದನ್ನು ಪ್ರಿಯಕರನತ್ತ ಚಾಚಿ, “ಇದು ಸಿಹಿಯಾಗಿದೆ. ತೆಗೆದುಕೋ’ ಎಂದು ಕೊಟ್ಟಳು; ಕೊಂಚ ಹುಳಿಯಾಗಿರುವುದನ್ನು ತನಗೇ ಉಳಿಸಿಕೊಂಡು!

ನಗು ಚಂದಿರ
“ಇವತ್ತು  ಹುಣ್ಣಿಮೆ’ ಎನ್ನುತ್ತ ಪ್ರೇಯಸಿ ಚಂದ್ರನನ್ನು  ಕಣ್ಣಲ್ಲಿ  ತುಂಬಿಕೊಳ್ಳುತ್ತಿದ್ದಳು. ಚಂದ್ರನೆಂದರೆ ಅವಳಿಗೆ ಜೀವ. ಅಮಾವಾಸ್ಯೆ ಬಂತೆಂದರೆ ಏನೋ ಕಳೆದುಕೊಂಡ ಭಾವ.
“ಇನ್ನೂ ಈ ಚಂದ್ರನನ್ನು  ಕಾಣಬೇಕಾದರೆ ಮೂವತ್ತು ದಿನ ಕಾಯಬೇಕು’ ಅವಳು ಭಾರವಾದ ಮನಸ್ಸಿನಲ್ಲಿ ಉದ್ಗರಿಸಿದಳು.
ಪ್ರಿಯಕರ ಸನಿಹದಲ್ಲಿಯೇ ಇದ್ದ.  ಬಾನ ಚಂದಿರ ಮತ‌ು¤ ಅವಳ ಸ್ನೇಹದ ಸಂಗತಿ ಅವನಿಗೆ ಚೆನ್ನಾಗಿ ಗೊತ್ತು. ಅವನೂ ನಕ್ಕ.
“ನಿನಗಾದರೋ ಮೂವತ್ತು ದಿನ ಕಾಯಬೇಕು. ನನಗೆ ಹಾಗಲ್ಲ’ ಹುಡುಗ ಪಿಸುಗುಟ್ಟಿದ, “ನನಗೆ ನೀನು ನಕ್ಕಾಗಲೆಲ್ಲ  ಹುಣ್ಣಿಮೆ. ಮುನಿಸಿಕೊಂಡಾಗಲೆಲ್ಲ ಅಮಾವಾಸ್ಯೆ’
ಪ್ರೇಯಸಿ “ಹೋ’ ಅಂತ ನಕ್ಕಳು. 
“ಈಗ ನನಗೆ ಹುಣ್ಣಿಮೆ’ ಎನ್ನುತ್ತ ಹುಡುಗನೂ ನಕ್ಕ.
ಮೇಲೆ ಚಂದಮಾಮ ನಗುತ್ತಲೇ ಇದ್ದ.

ಕಾವ್ಯ ನಾಯಕಿ
“ಈ ಕವಿತೆ ನಿನ್ನದೆನ್ನುವಿ ಹುಡುಗ, ಇದರ ಕಾವ್ಯನಾಯಕಿ ಹುಡುಗಿ ನಿನ್ನವಳೇನು?’
“ಅಲ್ಲ, ಆಕೆ ನನ್ನವಳಲ್ಲ’
“ಆಕೆಯ ನಗು ನಿನ್ನದೆ?’
“ಅಲ್ಲ, ನನ್ನದಲ್ಲ’
“ಕವನದಲ್ಲಿರುವ ಹಾಡು ನಿನ್ನದೆ?’
“ಹಾಡು ನನ್ನದಲ್ಲ, ಹಕ್ಕಿಯದು’
“ಹಕ್ಕಿ ನಿನ್ನದೆ?’
“ಅಲ್ಲ’
“ಇದರಲ್ಲಿರುವ ಪರಿಮಳ ನಿನ್ನದೆ?’
“ನನ್ನದಲ್ಲ , ಹೂವಿನದು’
“ಹೂವು ನಿನ್ನದೆ?’
“ನನ್ನದಲ್ಲ’
“……..’
“ಯಾವುದೂ ನಿನ್ನದಲ್ಲ. ಹಾಗಿದ್ದರೆ ಕವನ ನಿನ್ನದಾಗುವುದು ಹೇಗೆ?’
ಅನಿರೀಕ್ಷಿತ ಸವಾಲಿನಿಂದ ಹುಡುಗನಿಗೆ ತಳಮಳವಾಯಿತು. ಹೇಗಾದರೂ ಮಾಡಿ ಕವನ ತ‌ನ್ನದೇ ಎಂದು ಸಾ¬ಧಿಸುವ ಪಣ ತೆೊಟ್ಟ.
ಕ್ಷಣ ಮೌನದ ಬಳಿಕ ಹೇಳಿದ, “ಹುಡುಗಿ ನನ್ನವಳು, ನಗು ನನ್ನದೇ, ಹಕ್ಕಿ ನನ್ನದೇ ಹಾಡು ನನ್ನದೇ, ಈ ಹೂವು ನನ್ನದೇ… ಆದ್ದರಿಂದ ಈ ಕವಿತೆಯೂ ನನ್ನದೇ… ಈ ಹುಡುಗಿ ನನಗಲ್ಲದೆ ಇನ್ನೊಬ್ಬರಿಗಾಗಿ ಹಾಡುವುದಿಲ್ಲ, ಈ ಹಕ್ಕಿ ನನಗಲ್ಲದೆ ಇನ್ನೊಬ್ಬರಿಗಾಗಿ ಹಾಡುವುದಿಲ್ಲ, ಈ ಹೂವು ನನಗಲ್ಲದೆ ಇನ್ನೊಬ್ಬರಿಗಾಗಿ ಅರಳುವುದಿಲ್ಲ, ಹಾಗಾಗಿ, ಈ ಕವನ ನನ್ನದೇ !’
“ಹಾಗಿದ್ದರೆ ಕೇಳು, ಇದು ಕವಿತೆ ಎನಿಸುವುದಿಲ್ಲ,  ನಿನ್ನೊಳಗೆ ಕವಿಯಿಲ್ಲ.’ ಎಂದವಳು ಬಿರಬಿರನೆ ನಡೆದುಹೋದಳು.

ನಂದ ಲವ್ಸ್‌ ನಂದಿತಾ
ಬಡತನದ ಹಿನ್ನೆಲೆಯ ನಂದನಿಗೆ ಶ್ರೀಮಂತರ ಹುಡುಗಿ ನಂದಿತಾಳ ಮೇಲೆ ಪ್ರೇಮ ಉಂಟಾಯಿತು. ಒಮ್ಮೆ ತನ್ನ ಸುಪ್ತ ಪ್ರೀತಿಯ ವಿಷಯವನ್ನು ಅವಳಿಗೆ ಹೇಳುತ್ತಾನೆ. ಆಗ ನಂದಿತಾ ನಗುತ್ತ, “ನಿನ್ನ ತಿಂಗಳ ಸಂಬಳ ನನ್ನ ದಿನದ ಖರ್ಚಿಗೆ ಸಾಕಾಗುವುದಿಲ್ಲ. ನಾನು ಹೇಗೆ ನಿನ್ನ ಜೊತೆ ಇರೋಕೆ ಆಗುತ್ತೆ? ನೀನು ಅದರ ಬಗ್ಗೆ ಯೋಚನೆಯನ್ನೆ ಮಾಡಿಲ್ವ? ನಾನು ಯಾವತ್ತೂ ನಿನ್ನನ್ನು ಲವ್‌ ಮಾಡೋಲ್ಲ, ನೀನು ನಿನ್ನ ಲೆವೆಲ್‌ಗೆ ಸರಿ ಹೋಗೋ ಒಂದು ಹುಡುಗಿಯನ್ನು ನೋಡಿಕೊಂಡು ಮದುವೆ ಮಾಡಿಕೋ’

ಆದರೆ, ನಂದನಿಗೆ ಆ ಹುಡುಗಿಯನ್ನು ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಾಗಲಿಲ್ಲ. ಹತ್ತು ವರ್ಷಗಳು ಉರುಳಿದವು. ಒಂದು ಶಾಪಿಂಗ್‌ ಮಾಲ್‌ನಲ್ಲಿ ನಂದ-ನಂದಿತಾ ಭೇಟಿಯಾದರು.

ನಂದಿತಾ, “ಹಾಯ್‌ ನಂದನ್‌’ ಎಂದಳು. ಅವನು “ಹಾಯ್‌’ ಎಂದ.  “”ನೀನು ಹೇಗಿದ್ದಿಯಾ ನಂದನ್‌ ? ಈವಾಗ ನಾನು ಮದುವೆ ಆಗಿದ್ದೀನಿ, ನಿನಗೆ ಗೊತ್ತಾ- ನನ್ನ ಗಂಡನ ಸಂಬಳ ಎಷ್ಟಿದೆ ಅಂತ? ತಿಂಗಳಿಗೆ ಎರಡು ಲಕ್ಷ ರೂಪಾಯಿ!  ಮನೆಬಾಡಿಗೆ ಎಲ್ಲ ಕಂಪೆನೀನೇ ನೋಡಿಕೊಳ್ಳುತ್ತೆ. ತಿಂಗಳಿನ ತರಕಾರಿ ಖರ್ಚು ಅವರದೇ. ಮೆಡಿಕಲ್‌ ಎಲವೆನ್ಸ್‌ ಕೂಡ ಇದೆ. ನಾನು ತುಂಬ ಲಕ್ಕಿ ಕಣೊ!” ಎಂದು ತನ್ನ ಬಗ್ಗೆ ತಾನೇ ಹೇಳಿಕೊಳ್ಳತೊಡಗಿದಳು. 

ಅವಳ ಮುಗ್ಧತೆಯನ್ನು ನೋಡಿ ನಂದನ ಕಣ್ಣುಗಳು ನೀರಾಡಿದವು. “ಅಂದ ಹಾಗೆ ನೀನು ಏನು ಮಾಡ್ತಿದ್ದೀಯಾ ನಂದನ್‌?’ ನಂದಿತಾ ಕೇಳಿದಳು. ಅಷ್ಟರಲ್ಲಿ ಯಾವುದೋ ಖರೀದಿಗೆ ಹೋಗಿದ್ದ ನಂದಿತಾಳ ಗಂಡ ಸುಮನ್‌ ಮರಳಿ ಬಂದ.  ನಂದನ್‌ನನ್ನು ನೋಡಿದವನೇ ಸುಮನ್‌, “ಹಾಯ್‌ ಸರ್‌’ ಎಂದ. ಸಂತೋಷದಿಂದ ಅವನ ಬಾಯಿಯಿಂದ ಮಾತೇ ಹೊರ ಬರಲಿಲ್ಲ. “”ಸರ್‌, ನೀವು ಇಲ್ಲಿ? ನೀವು ಮಾತನಾಡುತ್ತಿರುವುದು ನನ್ನ ಹೆಂಡತಿ ಜೊತೆ !” ಎಂದ ಪುಳಕದಿಂದ.

 ಬಳಿಕ ಹೆಂಡತಿಗೆ, “”ಇವರು ನಮ್ಮ ಬಾಸ್‌ ಕಣೆ. ಇವರ  ಪ್ರಾಜೆಕ್ಟ್ ನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ” ಎಂದ ಹೆಮ್ಮೆಯಿಂದ. ಸ್ವಲ್ಪ ಹೊತ್ತು ಅದೂ ಇದೂ ಮಾತನಾಡಿ ಬೀಳ್ಕೊಂಡರು.

ಮರಳುತ್ತಿರುವಾಗ ನಂದಿತಾಳ ಗಂಡ ಅವಳಿಗೆ ಹೇಳುತ್ತಿರುವುದು ಕೇಳಿಸುತ್ತಿತ್ತು, “”ನಂದಿ, ನಮ್ಮ ಬಾಸ್‌ ತುಂಬ ಒಳ್ಳೆಯವರು ಕಣೆ ! ಆದರೆ ಇನ್ನೂ ಮದುವೆಯಾಗಿಲ್ಲ. ಮದುವೆನೇ ಆಗೋಲ್ಲವಂತೆ. ಅದಕ್ಕೆ ಕಾರಣವಿದೆ. ನಮ್ಮ ಬಾಸ್‌ ಒಬ್ಟಾಕೆ ಹುಡುಗಿಯನ್ನು ಪ್ರೀತಿ ಮಾಡುತ್ತಿದ್ದರಂತೆ. ಅವರಿಗೆ ಆಕೆಯ ಹೃದಯವನ್ನು ಗೆಲ್ಲಲು ಆಗಲಿಲ್ಲವಂತೆ. ಅವರದು ತುಂಬ ಪೂವರ್‌ ಬ್ಯಾಕ್‌ಗ್ರೌಂಡ್‌ ಅಂತ ಆಕೆ ನಿರಾಕರಿಸಿದಳಂತೆ. ಆದರೆ, ಮುಂದೆ ಸ್ವಯಂ ಸಾಧನೆಯಿಂದ ಮುಂದೆ ಬಂದು, ಈಗ ದೊಡ್ಡ ಸಾಫ್ಟ್ವೇರ್‌ ಕಂಪೆನಿಯ ಅತ್ಯುನ್ನತ ಹುದ್ದೆಗೆ ಏರಿದ್ದಾರೆ. ಆ ಹುಡುಗಿ ಎಂಥ ನತದೃಷ್ಟೆ ನೋಡು”
ನಂದಿತಾ ಏನೂ ಅನ್ನಲಿಲ್ಲ.

ಭಾವನೆಗಳ ಲೋಕ
ಒಮ್ಮೆ  ಭಾವನೆಗಳ ಲೋಕದಲ್ಲಿ  “ಪಕ್ವಪ್ರೀತಿ’ಯೆಂದರೇನು ಎಂಬ ಬಗ್ಗೆ ಚರ್ಚೆ ನಡೆಯಿತು. ಸಿಟ್ಟು , ನೋವು, ನಲಿವು, ಅಚ್ಚರಿ, ಪ್ರಶ್ನೆ ಮುಂತಾದವರೆಲ್ಲರ ಮಾತುಗಳನ್ನು  ಆಲಿಸಿದ ಒಲವು ಮೆಲ್ಲನೆಂದಿತು, “ನಾವು ಈ ರೀತಿ ಚರ್ಚೆ ಮಾಡಿ ಸುಖವಿಲ್ಲ, ಯಾರಾದರೂ ಪ್ರೇಮಿಗಳನ್ನು ಕರೆಸಿ ಪರೀಕ್ಷಿಸೋಣ’
ಎಲ್ಲರೂ ಒಲವಿನ ಮಾತಿಗೆ ಒಪ್ಪಿದರು.

ಪ್ರೀತಿಯ ದೀರ್ಘ‌ವಾದ ಹಾದಿಯಲ್ಲಿ ಸಾಗಿ ಬಂದ ಇಬ್ಬರು ಪ್ರೇಮಿಗಳನ್ನು  ಒಲವು, ಭಾವನೆಗಳ  ಲೋಕಕ್ಕೆ  ಕರೆ ತ‌ಂದಿತ‌ು. ಹೊಸ ಲೋಕಕ್ಕೆ  ಬಂದದ್ದೇ ಆ ಇಬ್ಬರಿಗೂ ದಿಗ್ಭ್ರಮೆ. ಒಲವು ಮೊದಲು ತ‌ನ್ನನ್ನು  ತಾನೇ ಪರಿಚಯಿಸಿಕೊಂಡು ಬಳಿಕ ಉಳಿದವರ ಬಳಿ ಕರೆದೊಯ್ದಿತು.

“ನೋಡಿ, ಇವನು ಸಿಟ್ಟು, ಕೆಲವೊಮ್ಮೆ  ನೆಗೆದು ಬೀಳ್ತಾನೆ.’
“ನೋಡಿ, ಇವಳು ಅಚ್ಚರಿ, ಈಗ ನಿದ್ರೆ ಹೋಗಿದ್ದಾಳೆ. ಎಚ್ಚರವಾದರೆ ಹುಬ್ಬೇರಿಸುತ್ತಾಳೆ.’
“ಇವಳ ಹೆಸರು ಕನಸು. ಖುಷಿಯಾದರೆ ಕುಣಿಯುತ್ತಾಳೆ.’
“ಇವನು ದ್ವೇಷ, ಮಾತನಾಡಿದರೆ ಮೂತಿ ತಿರುಗಿಸುತ್ತಾ¤ನೆ’
…ಹೀಗೆ ಇಡೀ ಲೋಕದ ಪರಿಚಯ ಮಾಡಿಕೊಳ್ಳುತ್ತ ಸಾಗುತ್ತಿದ್ದಾಗ… ಒಲವು ಒಂದು ಕಡೆ ಬೆರಳು ತೋರಿಸಿ “ಇವರಿಬ್ಬರ ಪರಿಚಯವಿದೆಯೇ?’ ಎಂದು ಕೇಳಿತು.

“ಪರಿಚಯವಿಲ್ಲ. ಆದರೆ ಇಲ್ಲಿ ಇಬ್ಬರು ಕಾಣಿಸುತ್ತಿಲ್ಲವಲ್ಲ, ಒಬ್ಬನೇ ಇದ್ದಾನೆ’ ಎಂದರು ಅವರಿಬ್ಬರು.
ಒಲವು ನಕ್ಕಿತು. ಇಬ್ಬರನ್ನೂ ಅವರ ಲೋಕಕ್ಕೆ ವಾಪಾಸು ಕಳುಹಿಸಿತು.
“ನೋಡಿ ಗೆಳೆಯರೇ, ಇವರಿಬ್ಬರ ಪ್ರೀತಿಯಿನ್ನೂ ಪಕ್ವಗೊಂಡಿಲ್ಲ’ ಎಂದಿತು ತನ್ನವರೊಂದಿಗೆ.

ಒಲವು ಅಂತಹ ಹಲವು ಜೋಡಿಗಳನ್ನು ಕರೆತಂದು ಪರೀಕ್ಷಿಸಿತು. “ಇವರಿಬ್ಬºರ ಪರಿಚಯವಿದೆಯೆ?’ ಎಂದು ಕೇಳಿದಾಗ “ಪರಿಚಯವಿಲ್ಲ, ಆದರೆ ಒಬ್ಬನೇ ಕಾಣಿಸುತ್ತಿದ್ದಾನಲ್ಲ’ ಎಲ್ಲರದೂ ಮಾಮೂಲಿ ಉತ್ತರ.
“ಇವರಾರ ಪ್ರೀತಿಯೂ ಪಕ್ವಗೊಂಡಿಲ್ಲ’ ಎಂದು ಒಲವು ಗೊಣಗಿಕೊಂಡಿತು.
ಒಲವು ಕೊನೆಯ ಬಾರಿ ಎಂಬಂತೆ ಇಬ್ಬರು ಪ್ರೇಮಿಗಳನ್ನು ಕರೆತಂದಿತು.

ಮತ್ತಿಬ್ಬರು ಪ್ರೇಮಿಗಳು ಬಂದರು. ಭಾವನೆಗಳ ಪರಿಚಯ ಮಾಡಿಕೊಂಡರು. ಬಳಿಕ ಆ ಕಡೆ ಬೆಟ್ಟು ಮಾಡಿ “ಇವರಿಬ್ಬರ ಪರಿಚಯವಿದೆಯೇ?’ ಕೇಳಿತು.

“ಓಹೋ… ಇಬ್ಬºರ ಪರಿಚಯವೂ ಇದೆ. ಪ್ರೀತಿಸಲು ಆರಂಭಿಸಿದ ದಿನದಿಂದಲೂ ಇದೆ’ ಎಂದವರು ಉದ್ಗರಿಸಿದರು.
ಒಲವಿಗೆ ಖುಷಿಯಾಯಿತು. ಇವರದು ಪಕ್ವ ಪ್ರೀತಿಯೆಂದು ತನ್ನವರಿಗೆ ಪರಿಚಯಿಸಿತ‌ು. ಪ್ರೇಮಿಗಳಿಗೆ ಅಭಿನಂದಿಸಿ ಕಳುಹಿಸಿಕೊಟ್ಟಿತು.
ಪಕ್ವ ಪ್ರೇಮಿಗಳಿಗೆ ಪರಿಚಯವಿದ್ದ  ಆ ಇಬ್ಬರೆಂದರೆ ನಲಿವು ಮತ್ತು ನೋವು !

– ಸ್ವಾತಿ

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಾಲವನ್ನು ತಡೆಯೋರು ಯಾರೂ ಇಲ್ಲ…

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

ಕಪಾಟಿನಲ್ಲಿ ಸಿಗುತ್ತಿದ್ದರು ರಾಜ್‌ಕುಮಾರ್‌!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

Mahavir Jayanti: ಮಹಾವೀರ ಸ್ಮರಣೆ; ಅರಮನೆಯ ಮೆಟ್ಟಿಲಿಳಿದು ಅಧ್ಯಾತ್ಮದ ಅಂಬರವೇರಿದ!

14

ನಾನು ಕೃಪಿ, ಅಶ್ವತ್ಥಾಮನ ತಾಯಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.