ಆಡದ ಮಾತಿನ ಹಂಬಲದಲ್ಲಿ…


Team Udayavani, May 28, 2017, 3:45 AM IST

hambala.jpg

ಇವನನ್ನು ಎಂದಾದರೂ ಇವನಿರುವ ಸಿœತಿಯಲ್ಲಿಯೇ ನೋಡಿ ತೀರಬೇಕೆಂಬ ಹಂಬಲ- ಎಷ್ಟೋ ವರ್ಷಗಳ ಹಿಂದೊಮ್ಮೆ ಇವನ ಕುರಿತು ಎಲ್ಲೋ ಯಾರೋ ಬರೆದ ಒಂದು ಮಾತನ್ನು ಓದಿದಾಗಿನಿಂದಲೇ ಮೊದಲುಗೊಂಡಿತ್ತು. ಆ ಮಾತಿನ ಜೊತೆಗೆ ಇವನ¨ªೊಂದು “ಚಿತ್ರ’ವೂ ಇತ್ತು. ನೂರು ಮಾತಲ್ಲಿ ಹೇಳಲಾಗದ್ದನ್ನು ಹಾಗೇ ಸುಮ್ಮನೆ ಮುಟ್ಟಿಸಿಬಿಡುವ “ಚಿತ್ರ’ವೂ “ಮಾತೇ’ ತಾನೆ?  ಆದರೆ, ಕೇವಲ ಎರಡೇ ಆಯಾಮದ ಆ “ಚಿತ್ರ’ ಇವನನ್ನು ಇವನು ಇರುವ ಹಾಗೆಯೇ ತೋರಿಸಲು ಎಷ್ಟು ಸೋತಿತ್ತು ಎನ್ನುವುದು ಮಾತ್ರ ಈಗ ಎರಡು ವರ್ಷಗಳ ಹಿಂದೊಮ್ಮೆ ಮೊದಲ ಬಾರಿಗೆ ಇವನನ್ನು ಇಲ್ಲಿ ನೇರವಾಗಿ ಕಂಡಾಗ ತಿಳಿಯಿತು! ಮತ್ತೆ ಮೊನ್ನೆ ತಾನೇ ಇನ್ನೊಮ್ಮೆ ಇವನನ್ನು ಕಂಡಾಗ, ಇವನಾಡುತ್ತಿರುವ ಮಾತು ಇನ್ನೂ ಕೊಂಚ ಆಳಕ್ಕೆ ಇಳಿದಂತಾಯಿತು.

  ತಾನು ಹುಟ್ಟಿದಂದಿನಿಂದಲೂ ಹೀಗೆ ತನ್ನ ಹುಟ್ಟುಡುಗೆಯಲ್ಲಿಯೇ ಉಳಿದು, ಕುಳಿತ ಕಲ್ಲು ಬಂಡೆಯಿಂದಲೇ ತಾನು ಉದ್ಭವವಾಗಿ¨ªೋ ಎನ್ನುವಂತೆ ಲೋಕವನ್ನೇ ಮರೆತು ಗದ್ದಕ್ಕೆ ಕೈಕೊಟ್ಟು, ತನ್ನೊಳಗೇ ತಾನಾಡುತ್ತಿರುವ ಮಾತಿಗೆ ಕಿವಿಗೊಟ್ಟು, ಉಳಿದಿದ್ದನ್ನೆಲ್ಲ ಮರೆತಂತೆ ಕುಳಿತ ಇವನಿಗೆ The Thinker ಎಂಬ ಅನ್ವರ್ಥ ನಾಮ! ವಿಶ್ವವಿಖ್ಯಾತ ಶಿಲ್ಪಿ Auguste Rodinನ ಕೈಯಿಂದ ಮಣ್ಣಿನ ಮೂರ್ತಿಯಾಗಿ ಹುಟ್ಟಿ ನಂತರ ಕಂಚಿನ ಎರಕದಲ್ಲಿ ಮೂಡಿಬಂದವನಿವನು. ಡಾಂಟೆ ಕವಿಯ ಕೃತಿಯೊಂದರ ಸ್ಫೂರ್ತಿಯಲ್ಲಿ ಮೂಡಿಬಂದ, ತನ್ನದೇ ಮಹತ್ವಾಕಾಂಕ್ಷೆಯ ಹೊತ್ತಗೆ ನರಕದ ಬಾಗಿಲು ವಿನಲ್ಲಿ ಇವನನ್ನು ಕೂರಿಸಿ ಇವನನ್ನು “ಕವಿ’ ಎಂದು ಕರೆದ ರಾಡೆನ್‌, ನಂತರ ಸುಮ್ಮನೆ ಕುಳಿತ ಇವನ ಭಂಗಿಯÇÉೇ ಇನ್ಯಾವುದೋ ನೆರಳು ಕಂಡು, ಇವನನ್ನೊಂದು ಸ್ವತಂತ್ರ ಕೃತಿಯಾಗಿಯೇ ಕಂಚಿನಲ್ಲಿ ರೂಪಿಸಿ, ಇವನಿಗೆ “ಥಿಂಕರ್‌’ ಎಂಬ ಹೊಸ ಹೆಸರನ್ನಿಟ್ಟ ಕಥೆಯೇ ಒಂದು ಸುಂದರ ರೂಪಕದಂತಿದೆ.  ಲೋಕವನ್ನೇ ಮರೆತು, ತಾನು ನರಕದ ಬಾಗಿಲಿನಲ್ಲಿ ಕುಳಿತಿದ್ದೇನೆಂಬುದನ್ನೂ ಮರೆತು, ಗಲ್ಲಕ್ಕೆ ಕೈಕೊಟ್ಟು ತನ್ನೊಳಗಿನ ಮಾತನ್ನು ಕೇಳಲು ಶುರುವಿಟ್ಟಿದ್ದೇ ಕಾರಣವಾಗಿ ನರಕದ ಬಾಗಿಲಿನಲ್ಲಿ “ಕವಿ’ಯಾದವನು ಅಲ್ಲಿಂದ ಹೊರಬಿದ್ದು, ತಾನೇ ತಾನಾಗಿ “ಚಿಂತಕ’ನಾಗಲು ಸಾಧ್ಯವಾಗಿದ್ದು ಎಂಥ ಚೋದ್ಯ! ಉಳಿದೆಲ್ಲ ಮಾತುಗಳಿಂದಲೂ ಪಾರಾಗಿ, ನಮ್ಮೊಳಗಿನದ್ದೇ ಇಂಥ¨ªೊಂದು ಮಾತು ಆಡಲು, ಕೇಳಲು ಮನುಷ್ಯ ಮಾತ್ರರಾದ ನಮಗೆಲ್ಲ ಸಾಧ್ಯ ಎಂಬ ಸಂಭಾವ್ಯವೇ ಕಣ್ಣು ಕೀಳದೆ ಇವನು ಕುಳಿತ ಎÇÉಾ ಕೋನಗಳಿಂದಲೂ ಇವನನ್ನು ನೋಡುತ್ತ ಕಣ್ತುಂಬಿಸಿ ಕೊಳ್ಳಬೇಕೆನ್ನುವ ಹಂಬಲವೊಂದನ್ನು ನಮ್ಮೊಳಗೆ ಹುಟ್ಟಿಸುತ್ತಿರಬಹುದು. ಇವನು ಕುಳಿತ ಭಂಗಿ ಮಾತ್ರ ಹಾಗೆ ಕುಳಿತುಕೊಳ್ಳಲು ಹೋದಾಗ ಅದು ಅಷ್ಟು ಸುಲಭವೂ ಸಹಜವೂ ಅಲ್ಲ ಎಂದು ಅರಿವಾಗಿಸುತ್ತದೆ. ತನ್ನ ಬಲ ಮೊಣಕೈಯನ್ನು ಎಡತೊಡೆಗೆ ಊರಿ, ಗದ್ದಕ್ಕೆ ಬಲಗೈಯನ್ನು ಊರುಗೊಟ್ಟು ಕಾಲೆºರಳುಗಳನ್ನು ಯಾವುದೋ ಭಾವ ತೀವ್ರತೆಯಲ್ಲಿ ಕುಳಿತ ಕಲ್ಲು ಬಂಡೆಯೊಳಗೇ ಹುದುಗಿಸುತ್ತಿರುವಂತೆ ತೋರುತ್ತಿರುವ ಈ ಭಂಗಿಯÇÉೇ ಒಂದು ಚೆಲುವಿದೆ. ಈ ಭಂಗಿ ಸಹಜವೋ ಅಲ್ಲವೋ ಎನ್ನುವ ಅರೆಗಳಿಗೆಯ ಬೆರಗಿಗೇ ನಮ್ಮೊಳಗೆ ಮಾತೊಂದು ಹುಟ್ಟಿಬಿಡುವಂತೆ ಮಾಡುವ ಶಕ್ತಿಯಿದೆ. ಇನ್ನು ಈ ಭಂಗಿಯಲ್ಲಿ ಕುಳಿತ ಇವನ ಮೈಮೇಲೆ ನೂಲಿನೆಳೆಯೂ ಇಲ್ಲ. ಇಂಗ್ಲಿಷಿನಲ್ಲಿ ಇದಕ್ಕೆ butt naked ಎಂಬ ಸುಂದರ ಹೆಸರು! ಎÇÉಾ ಉಪಾಧಿಗಳಿಂದ ಬಿಡಿಸಿಕೊಂಡ, ಯಾವ ನಿಯಮಾಧೀನತೆಗೂ ಸಿಕ್ಕಿಕೊಳ್ಳದ, conditioned ಸಿದ್ಧ ಮಾದರಿಗಳಿಂದ ಭಿನ್ನವಾಗಿ ಬಟ್‌ ನೇಕೆಡ್‌ ಆಗದ ಹೊರತು ಹೀಗೆ ಸ್ವಗತಕ್ಕಿಳಿಯಲು, ಇಂಥ¨ªೊಂದು ಮಗ್ನತೆಯಲ್ಲಿ, ಧ್ಯಾನದಲ್ಲಿ ಕಳೆದುಹೋಗಲು ಹೇಗೆ ತಾನೇ ಸಾಧ್ಯ! ಬೆತ್ತಲಾಗದೆ ಬಯಲು ಸಿಕ್ಕುವುದಾದರೂ ಹೇಗೆ?

ಪ್ರಪಂಚದ ಹಲವಾರು ಕಡೆ ಈ ಥಿಂಕರ್‌ ಹೀಗೆ ಗದ್ದಕ್ಕೆ ಕೈಕೊಟ್ಟು ಕುಳಿತಿ¨ªಾನೆ. ನಾನು ಇವನನ್ನು ಕಂಡಿದ್ದು ಫಿಲಿಡೆಲ್ಫಿಯಾದ ರಾಡೆನ್‌ ಮ್ಯೂಸಿಯಮ್ಮಿನಲ್ಲಿ. ಮ್ಯೂಸಿಯಮ್ಮಿನ ಹೊರಭಾಗದಲ್ಲಿ ಇವನು ಕುಳಿತಿರುವ ಜಾಗವೇ ನನಗೆ ಇನ್ನೊಂದು ರೂಪಕದಂತೆ ತೋರಿದೆ. ನಗರದ ಪ್ರಮುಖ ದಾರಿಯೊಂದರಲ್ಲಿ ಈ ಮ್ಯೂಸಿಯಂ ಇದೆ.

ಮ್ಯೂಸಿಯಮ್ಮಿನ ಮುಖ್ಯದ್ವಾರವನ್ನೂ ಉದ್ಯಾನವನ್ನೂ ದಾಟಿ ಹೊರಭಾಗದಲ್ಲಿ ಈ ಥಿಂಕರ್‌, ನಿಂತವರೂ ತಲೆ ಎತ್ತಿ ನೋಡುವಂತೆ ಎತ್ತರದಲ್ಲಿ ಕುಳಿತಿ¨ªಾನೆ. ಇವನ ಮುಂದೆ ಪ್ರತಿದಿನವೂ ಈ ಮಹಾನಗರ ತನ್ನೆಲ್ಲ ಸಮಸ್ತ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುತ್ತದೆ. ತನ್ನ ಸುತ್ತ ಇಡೀ ಲೋಕ ತನ್ನ ದೈನಂದಿನ ರಗಳೆಗಳಲ್ಲಿ, ಧಾವಂತಗಳಲ್ಲಿ, ಅನಿವಾರ್ಯಗಳಲ್ಲಿ ದಾಪುಗಾಲಿಟ್ಟು ಧಾವಿಸುತ್ತಿರುವಾಗ ಇದಾವುದರ ಪರಿವೆಯೇ ಇಲ್ಲದೆ ಇವನೊಬ್ಬ ಮಾತ್ರ ತನ್ನÇÉೇ ತಾನು ಹೀಗೆ ನಿಮಗ್ನನಾಗಿ ಕುಳಿತ ಪರಿಯೇ ಇವನ ಕಡೆಗೊಮ್ಮೆ ಕಣ್ಣು ಹಾಯಿಸಬೇಕೆಂಬ ಬಯಕೆಯನ್ನು ಲೋಕದ ಎದೆಯೊಳಗೆ ಹುಟ್ಟಿಸುತ್ತಿರುವಂತಿದೆ. ಲೋಕಕ್ಕೆ ಆಡುವ ಮಾತುಗಳನ್ನಷ್ಟೇ ಅಲ್ಲ, ಆಡದ ಮಾತುಗಳನ್ನೂ ಕೇಳುವ ಹಂಬಲವಿದೆ. ಆಟಕ್ಕೆ ತೊಡಗಿದವರ ಕಡೆಗಷ್ಟೇ ಅಲ್ಲ, ವಿಮನಸ್ಕರಾಗಿ ಸುಮ್ಮನೆ ಕುಳಿತವರ ಕಡೆಗೂ ಒಂದು ಕಣ್ಣಿದೆ.  ಇಂಥ¨ªೊಂದು ಮೌನಮಾತ್ರ ತನ್ನೊಳಗೂ ಹೀಗೊಂದು ಮಾತನ್ನು ಹುಟ್ಟಿಸಬಲ್ಲದು ಎಂಬ ಅರಿವೂ ಆಸೆಯೂ ಇದೆ.  ಆಡದ ಮಾತುಗಳನ್ನೆಲ್ಲ ಇಂಥ ಮೌನವೂ ಮತ್ತು ಈ ಮೌನದ ಕುರಿತು ಇರುವ ಬೆರಗೂ ಸದಾ ಪೊರೆಯುತ್ತಿದೆ. 

ಆಡದ ಮಾತುಗಳ ಕುರಿತೇ ಎಂಬಂತೆ ರೂಮಿ ಆಡುತ್ತಿ¨ªಾನೆ,
ಜೀವ ಬಲದ ಜೀವವೊಂದು ಮಿಡುಕಿದೆ 
ನಿನ್ನಾತ್ಮದೊಳಗೆ,
ಹುದುಗಿದೆ ನಿನ್ನ ಮೈಯೊಳಗೇ
ಅನಘÂì ರತ್ನವೊಂದು
ನೀನೇ ಶೋಧಿಸಬೇಕು ಹತ್ತಿ ಬೆಟ್ಟವನ್ನು,
ಹೊಕ್ಕು ಆ ಗಣಿಯನ್ನು.

ಅದನ್ನೇ ಹುಡುಕಿ ಅಲೆದಿರುವ ಅಲೆಮಾರಿ, 
ಅಯ್ಯೋ… ಸಾಕು ಹುಡುಕಿದ್ದು ಹೊರಗೆ
ಈಗ ನಿನ್ನೊಳಗೇ ಇಳಿ, ತಿಳಿ!
ಈ ಏಕಾಂತವೇ ಲೇಸು 
ಮಿಕ್ಕೆÇÉಾ ನೂರು, ಸಾವಿರ
ಜೊತೆಗಳಿಗಿಂತಾ.
ಈ ಸ್ವಾತಂತ್ರ್ಯಕ್ಕಿನ್ನಾವುದು ಸಮ?
ನೀವೇ ಇಟ್ಟುಕೊಳ್ಳಿ ನಿಮ್ಮ ನಿಮ್ಮ ಭೂಮಿ, ಕಾಣಿಗಳನೆÇÉಾ
ನಿಮ್ಮ ಹೆಸರಿನಲ್ಲಿ.

ಸತ್ಯದ ಜೊತೆ ಸಿಗುವ ಒಂದೇ ಒಂದು ಗಳಿಗೆ
ಮಿಗಿಲು ಈ ಇಡೀ ಲೋಕಕ್ಕಿಂತ,
ಜೀವಕ್ಕೆಂತಾ. 

ಲೋಕಾಂತದೊಳಗೂ ಸಿಗುವ ಈ ಏಕಾಂತವನ್ನು ನಾವಷ್ಟೇ ಸೃಷ್ಟಿಸಿಕೊಳ್ಳಲು ಸಾಧ್ಯ. ಆಗ ಮಾತ್ರ ಆಡದ ಮಾತುಗಳನ್ನೂ ಕಾಣಲು, ಕೇಳಲು ಸಾಧ್ಯವಾಗಬಹುದೇನೋ!

– ಮೀರಾ ಪಿ. ಆರ್‌., ನ್ಯೂಜೆರ್ಸಿ

ಟಾಪ್ ನ್ಯೂಸ್

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

1-wqeqweqw

Yellow alert; ಬೆಂಗಳೂರು ನಗರ ಸೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

suicide (2)

Mangaluru: ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಆತ್ಮಹತ್ಯೆ

1-qeewqewqe

Maldives; ಪ್ರವಾಸೋದ್ಯಮದ ಭಾಗವಾಗಿ: ಭಾರತೀಯರನ್ನು ಅಂಗಲಾಚಿದ ಮಾಲ್ಡೀವ್ಸ್!

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು

India’s first-ever ‘hybrid pitch’ was unveiled at the HPCA stadium

HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು

1-wqeqweqw

Yellow alert; ಬೆಂಗಳೂರು ನಗರ ಸೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಮಳೆ

1-weewqeq

Gadag; ಮತದಾನದ ಮುನ್ನಾ ದಿನ ಬಸ್‌ಗಳು ಫುಲ್ ರಶ್: ಜನರ ಪರದಾಟ

1-wqeeqw

Hunsur: ಹಣ್ಣಿನ ತೋಟ ಸೇರಿಕೊಂಡಿದ್ದ ಹೆಣ್ಣುಹುಲಿ ಸೆರೆ

1-wqewqewqe

Hubli: ಇಲ್ಲಿ ಮತ ಚಲಾಯಿಸಿ ಬಂದವರಿಗೆ ಸಿಗುತ್ತೆ ಫ್ರೀ ಐಸ್ ಕ್ರೀಮ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.