ಕೊಡಗಿನ ಬೆಡಗಿಯ ಕಂಬ್ಯಾಕ್‌ ಸ್ಟೋರಿ

Team Udayavani, Feb 24, 2019, 12:30 AM IST

ಸಾಮಾನ್ಯವಾಗಿ ನಾಯಕ ನಟಿಯರು ಮದುವೆಯಾದ ಮೇಲೆ ಚಿತ್ರರಂಗಕ್ಕೆ ಗುಡ್‌ ಬೈ ಹೇಳ್ಳೋದೆ ಹೆಚ್ಚು. ಅದರಲ್ಲೂ ಕನ್ನಡ ಚಿತ್ರರಂಗದ ಮಟ್ಟಿಗೆ ಹೇಳುವುದಾದರೆ, ಮದುವೆಯಾದ ನಾಯಕ ನಟಿಯರು ಮತ್ತೆ ಚಿತ್ರರಂಗಕ್ಕೆ ಬರುತ್ತೇವೆ ಎಂದರೂ, ಅಲ್ಲಿ ಅವರಿಗೆ ಮತ್ತೆ ನಾಯಕಿಯ ಪಾತ್ರಗಳು ಸಿಗೋದು ತುಂಬ ವಿರಳ. ಹೀಗೆ ಬಂದ ಬಹುತೇಕ ನಟಿಯರು ಚಿತ್ರಗಳಲ್ಲಿ ಹೀರೋ-ಹೀರೋಯಿನ್‌ಗೆ ಅಕ್ಕ, ಅತ್ತಿಗೆ, ತಾಯಿ ಪಾತ್ರಕ್ಕಷ್ಟೇ ಸೀಮಿತವಾದ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. 

ಈಗ ಈ ವಿಷಯವನ್ನು ಪ್ರಸ್ತಾಪಿಸುತ್ತಿರುವುದಕ್ಕೆ ಒಂದು ಕಾರಣವಿದೆ. ಪಂಚರಂಗಿ, ಅಣ್ಣಾಬಾಂಡ್‌, ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ ಮೊದಲಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಿಧಿ ಸುಬ್ಬಯ್ಯ 2017ರ ಫೆಬ್ರವರಿ ತಿಂಗಳಲ್ಲಿ ಲವೇಶ್‌ ಕುಮಾರ್‌ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದರು. ಎಲ್ಲಾ ನಟಿಯರಂತೆ ನಿಧಿ ಸುಬ್ಬಯ್ಯ ಕೂಡ ಮದುವೆಯ ಬಳಿಕ ಚಿತ್ರರಂಗಕ್ಕೆ ಗುಡ್‌ ಬೈ ಹೇಳಲಿದ್ದಾರೆ ಎಂದು ಕೆಲವರು ಭಾವಿಸಿದ್ದರು. ಇನ್ನೂ ಕೆಲವರು ನಿಧಿ ಮತ್ತೆ ಚಿತ್ರರಂಗಕ್ಕೆ ಬಂದರೆ ಪೋಷಕ ಪಾತ್ರಗಳಿಗಷ್ಟೇ ಸೀಮಿತವಾಗಬಹುದು ಎಂದುಕೊಂಡಿದ್ದರು. ಆದರೆ ಈಗ ನಿಧಿ ಸುಬ್ಬಯ್ಯ ಈ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿ ಚಿತ್ರರಂಗದಲ್ಲಿ ಮತ್ತೆ ಹೀರೋಯಿನ್‌ ಆಗಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸುವ ತಯಾರಿಯಲ್ಲಿದ್ದಾರೆ.
 
ಹೌದು, ಮತ್ತೆ ತೆರೆಮೇಲೆ ಬರಲು ತೆರೆಮರೆಯಲ್ಲೇ ಒಂದಷ್ಟು ತಯಾರಿ ಮಾಡಿಕೊಂಡಿರುವ ನಿಧಿ ಸುಬ್ಬಯ್ಯ, ದ್ವಾರಕೀಶ್‌ ಬ್ಯಾನರ್‌ನಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ನಟಿಸುತ್ತಿರುವ ಆನಂದ್‌ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡಿದ್ದ ನಿಧಿ, ಈಗಾಗಲೇ ಶೂಟಿಂಗ್‌ನಲ್ಲೂ ಕೂಡ ಭಾಗವಹಿಸುತ್ತಿದ್ದಾರೆ. ಇನ್ನು ಆನಂದ್‌ ಚಿತ್ರಕ್ಕೆ ಪಿ. ವಾಸು ನಿರ್ದೇಶನವಿದ್ದು, ಚಿತ್ರದಲ್ಲಿ ನಿಧಿ ಸುಬ್ಬಯ್ಯ ಜೊತೆ ರಚಿತಾ ರಾಮ್‌ ಕೂಡ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 

ಕನ್ನಡದಲ್ಲಿ 5ಜಿ ಚಿತ್ರದ ಬಳಿಕ, ಬಾಲಿವುಡ್‌ನ‌ತ್ತ ಮುಖ ಮಾಡಿದ್ದ ನಿಧಿ ರೆಬಾ ಎಂಬ ಹಿಂದಿ ಚಿತ್ರದಲ್ಲೂ ನಟಿಸಿದ್ದರು. ಅದಾದ ಬಳಿಕ ಹಸೆಮಣೆ ಏರಿದ್ದ ನಿಧಿ, ಖಾಸಗಿ ಜೀವನದಲ್ಲಿ ಬ್ಯುಸಿಯಾಗಿದ್ದರು. ಇದೀಗ, ಸಣ್ಣದೊಂದು ಬ್ರೇಕ್‌ನ ನಂತರ ಬೆಳ್ಳಿತೆರೆಗೆ ವಾಪಸ್‌ ಆಗಿರುವ ನಿಧಿ ಹಿಂದಿನಂತೆ ಮತ್ತೆ ತಮ್ಮ ಚಾರ್ಮ್ನಿಂದ ಸಿನಿಪ್ರಿಯರನ್ನು ಸೆಳೆಯಲು ಯಶಸ್ವಿಯಾಗುತ್ತಾರಾ? ಅನ್ನೋದನ್ನ ಕಾದು ನೋಡಬೇಕು. ಈಗಾಗಲೇ ನಿಧಿ ನಾಯಕಿಯಾಗಿರುವ ಆನಂದ್‌ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು,ಇದೇ ವರ್ಷಾಂತ್ಯಕ್ಕೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜಗತ್ತಿನಲ್ಲಿ ಹಲವಾರು ವರ್ಷಗಳಿಗೊಮ್ಮೆ ಬರುವ ಮಹಾಮಾರಿಗಳು ಜನಸಮುದಾಯದ ಸ್ವಾಸ್ಥ್ಯವನ್ನು ಅಲ್ಲಾಡಿಸುತ್ತವೆ. ಇಂಥ ಸಂದರ್ಭದಲ್ಲೆಲ್ಲ ಮನುಷ್ಯನ ದೇಹಬಲ, ಹಣಬಲ...

  • ಗುಡುಗಿದರೆ ಸಿಂಹ, ಕುಳಿತರೆ ಬುದ್ಧ, ಸಿಡಿದೆದ್ದರೆ ಸೇರಿಗೆ ಸವ್ವಾಸೇರು. ಇಂಎ ಪಾಟೀಲ ಪುಟ್ಟಪ್ಪ ಎಂಬ ಸಿಂಹ ಧ್ವನಿಯೊಂದು ಮೌನವಾಗಿದೆ. ಹಾವೇರಿ ನೆಲದ ಕುಡಿ ಪಾಪು...

  • ಸೂರ್ಯನ ನೆರಳು. ಹೆಸರು ವಿಚಿತ್ರವಾಗಿದೆಯಲ್ಲವೆ? ಸೂರ್ಯನಿಗೆ ನೆರಳಿದೆಯೆ? ತನ್ನೆಲ್ಲ ಕಡೆಗಳಿಂದಲೂ ಬೆಳಕನ್ನು ಹೊಮ್ಮುತ್ತಿರುವ ಸೂರ್ಯ ಯಾವುದೋ ವಸ್ತುವಿನ ಮೇಲೆ...

  • ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಎಂದರೆ ಇಡೀ ಜಗತ್ತು ಮಾಯಾನಗರಿಗೆ ಲಗ್ಗೆ ಇಟ್ಟಂತೆ! ಜಾಗತಿಕ ಚಲನಚಿತ್ರ ಕ್ಷೇತ್ರದ ಎಲ್ಲ ಆಯಾಮಗಳು, ಸಂವೇದನೆಗಳು- ಇಲ್ಲಿನ...

  • ಕಳೆದ ತಿಂಗಳು ಅಣ್ಣನ ಮಗಳು ವನಿತಾಳ ಮದುವೆಗೆಂದು ನಾನು ಕುಮಟೆಗೆ ಹೋಗಿ ಬರಬೇಕಾಯಿತು. ಮದುವೆ ಅಕಸ್ಮಾತ್‌ ನಿಶ್ಚಯವಾದ್ದರಿಂದ ಮೊದಲೇ ಟಿಕೆಟ್‌ ಬುಕ್‌ ಮಾಡುವ...

ಹೊಸ ಸೇರ್ಪಡೆ