ಮಹಡಿಯ ಮೇಲೆ ಮನೆಯ ಮಾಡಿ!


Team Udayavani, Jan 5, 2020, 5:09 AM IST

8

ಇಂಡಿಪೆಂಡೆಂಟ್‌ ಮನೆಗಳ ವಾಸದ ಸಾಧಕ-ಬಾಧಕಗಳಂತೆಯೇ ವಸತಿ ಸಮುತ್ಛಯದ ವಾಸಿಗರು ಒಮ್ಮೆ ಕಷ್ಟ, ಮತ್ತೂಮ್ಮೆ ಸುಖ, ಮಗದೊಮ್ಮೆ ಗೊಂದಲ, ಜಿಗುಪ್ಸೆ – ಹೀಗೆ ಸಕಲ ರಾಗಗಳನ್ನು ಇಷ್ಟವಿರಲಿ, ಇಲ್ಲದಿರಲಿ ಅನುಭವಿಸಲೇಬೇಕು. “ಗಗನಚುಂಬಿ ಕಟ್ಟಡಗಳ ನಡುವೆ ಮನೆ ಮಾಡಿ ಜಂಜಾಟಕ್ಕೆ ಅಂಜಿದಡೆಂತಯ್ನಾ’ ಎಂಬಂತೆ ಎಲ್ಲವನ್ನೂ ಅನುಭವಿಸಿಯೇ ಮುಂದೆ ಸಾಗಬೇಕು.

ಒಮ್ಮೆ ಒಳ್ಳೆಯ ನಿದ್ದೆ ಹತ್ತಿದ ಸಮಯ-ಮೇಲ್ಮಹಡಿಯಿಂದ ವಿಚಿತ್ರ ಶಬ್ದ ನಿಯಮಿತ ತಾಳದಲ್ಲಿ ಕೇಳಿಸುತ್ತಿತ್ತು. ಮೊದಲೆರಡು ಈ ಶಬ್ದಮೂಲ ಏನೆಂದು ಅರ್ಥವಾಗಲಿಲ್ಲ. ಕುತೂಹಲ ತಡೆಯಲಾಗದೆ ವಿಚಾರಿಸಿದಾಗ ತಿಳಿದದ್ದು, ಆ ಮನೆಯಾಕೆ ಬೆಳಿಗ್ಗೆ ಬೇಗನೇ ಕೆಲಸಕ್ಕೆ ಹೋಗುವವರು. ಹೀಗಾಗಿ, ಅಡುಗೆ ಕೆಲಸಗಳು ಬೆಳಿಗ್ಗೆ ಐದಕ್ಕೆ ಶುರು. ಅವರು ತೆಂಗಿನಕಾಯಿ ತುರಿಯುವ ಶಬ್ದ ನಿಯಮಿತವಾಗಿ ಕೇಳಿಸುತ್ತಿತ್ತು. ಈಗ ಈ ಶಬ್ದಕ್ಕೆ ಎಷ್ಟು ಹೊಂದಿಕೊಂಡಿರುವೆವೆಂದರೆ, ತುರಿಯುವ ಶಬ್ದ ಕೇಳಿದರೆ, ಅದು ಬೆಳಗಿನ ಐದೂವರೆ ಗಂಟೆಯ ಆಸುಪಾಸು ಎಂದರ್ಥ. ನಮ್ಮ ಅಲಾರಮ್‌ ಆಗಿಬಿಟ್ಟಿದೆ. ಆ ಶಬ್ದವಿಲ್ಲದೇ ಇದ್ದರೆ ಅಂದು ರಜೆ.

ಮತ್ತೂಬ್ಬರು ಸಂಗೀತ ಪ್ರೇಮಿಯ ಕಥೆಯೋ, ವಿಭಿನ್ನವಾಗಿದೆ. ಆತ ಹಾಡುಗಾರನಾಗಬೇಕೆಂಬ ಆಶಯದಿಂದ ಉತ್ಛ ಸ್ಥಾಯಿಯಲ್ಲಿ ಅಭ್ಯಾಸ ಶುರುಮಾಡಿದ್ದೇ ತಡ, ಅಕ್ಕಪಕ್ಕದವರ ನಿದ್ದೆ ಹಾರಿ ಹೋಗುತ್ತಿತ್ತು. ಕೊನೆಗೆ ಅವನ ಹಾಡುಗಾರಿಕೆಯ ಉಪಟಳ ಅಂತ್ಯ ಕಂಡದ್ದು ವಾಸಿಗರ ಕ್ಷೇಮಾಭಿವೃದ್ಧಿ ಸಂಘದವರ ಮಧ್ಯ ಪ್ರವೇಶದಿಂದ. “ಅಕ್ಕಪಕ್ಕದವರನ್ನು ಮನಸ್ಸಲ್ಲಿಟ್ಟುಕೊಂಡು ಅಭ್ಯಾಸ ಮುಂದುವರೆಸು, ಇಲ್ಲದೇ ಇದ್ದರೆ ಜಾಗ ಖಾಲಿ ಮಾಡು’ ಎಂದು ಸಂಘದವರು ಸೂಚಿಸಿದಾಗ.

ಎಂಟು ಮನೆಗಳಿಗೆ ನಡುವೆ ಮೊಗಸಾಲೆ. ಅದನ್ನು ಎಲ್ಲ ಮನೆಯವರು ಓಡಾಡಲು ಬಳಸುವುದು ಎಲ್ಲ ಕಡೆ ವಾಡಿಕೆ ತಾನೇ. ಅಲ್ಲಿ ಮಕ್ಕಳ ಕೇಕೆ, ಕುಣಿತ, ಆಟದ ಕಾರ್‌, ಸೈಕಲ್‌ಗ‌ಳನ್ನೂ ರಭಸವಾಗಿ ಓಡಿಸುತ್ತ ಸದಾ ಗದ್ದಲ ಮುಗಿಲಿಗೇರುತ್ತಿತ್ತು. ಫ್ಲಾಟ್‌ನಲ್ಲಿ ವಾಸಿಸುತ್ತಿದ್ದ ಮಧ್ಯ ವಯಸ್ಕ ಹೆಂಗಸು, ಹೊರಕ್ಕೆ ತಲೆ ಇಣುಕಿ, “ಈ ಜಾಗದಲ್ಲಿ ರಾದ್ಧಾಂತ ಮಾಡಬೇಡಿ ತೊಂದರೆಯಾಗುತ್ತೆ’ ಎಂದ ಕೂಡಲೇ ಆಟವಾಡುತಿದ್ದ ಮಗುವೊಂದರ ಮಾತೆ, “ಮಕ್ಕಳಲ್ಲವೇ ಆಂಟಿ…ಆಡಿಕೊಳ್ಳಲಿ ಬಿಡಿ, ಬೇರೆಲ್ಲಿ ಹೋದಾರು?’ ಎಂದು ಸಮರ್ಥಿಸಿದರು.

ಪ್ರಶ್ನಿಸಿದವರಿಗೆ ಸಹನೆಯೊಡೆದು, “ನಿಮ್ಮ ಮಕ್ಕಳನ್ನು ಮನೆಯೊಳಗೇ ಆಡಿಸಿಕೊಳ್ಳಿ, ಇಲ್ಲಿ ವಾಸಿಸುವವರಲ್ಲಿ, ರೋಗಿಗಳು, ವಯೋವೃದ್ಧರು, ಎಳೆ ಮಕ್ಕಳು ಎಲ್ಲರೂ ಇದ್ದಾರೆ, ಮಕ್ಕಳಾಟ ನೆರೆಯವರಿಗೆ ಕಿರಿಕಿರಿ ಆಗಬಾರದು’ ಎಂದು ದಬಾಯಿಸಿಬಿಟ್ಟರು.

ಇನ್ನೊಂದು ಕಡೆ ತುಂಟ ಪುಟಾಣಿ ರಬ್ಬರ್‌ ಹಾವು ಹಿಡಿದುಕೊಂಡು ಎಲ್ಲರನ್ನೂ ಬೆದರಿಸುತ್ತಿದ್ದ. ಮಕ್ಕಳೆಲ್ಲ ಓಡಿ ತಪ್ಪಿಸಿಕೊಳ್ಳುತ್ತಿದ್ದರು. “ಈ ಮಕ್ಕಳು ಬಿದ್ದರೆ ಗತಿಯೇನು’ ಎಂದು ಕಂಗಾಲಾದ ಹಿರಿಯರೊಬ್ಬರು ಬೈದೇ ಬಿಟ್ಟರು. “ಮರದಿಂದ ನೇರ ಇಲ್ಲೇ ಇಳಿದಿವೆ, ಮರ್ಕಟ ಮುಂಡೇವು, ಒಂದು ಗಳಿಗೆ ಶಾಂತಿ ಇಲ್ಲ’ ಎಂದು ವಟಗುಟ್ಟಿದರು ಅನ್ನಿ.
.
ಮೊನ್ನೆ ಹೀಗಾಯಿತು. ಐದು ನಿಮಿಷದ ಮೊದಲು ಶುಭ್ರಗೊಳಿಸಿದ್ದ ಬಾಲ್ಕನಿ ತೇವ ಕಂಡಾಗ ನನಗೆ ಗಾಬರಿಯಾಯಿತು. “ನೀರು ಎಲ್ಲಾದರೂ ಲೀಕ್‌ ಆಗ್ತಿದೆಯೇ ಮತ್ತೆ ರಿಪೇರಿಗೆ ಹಣ ಸುರಿಯಬೇಕೇನೋ’ ಎಂಬ ಅಂಜಿಕೆ ಶುರುವಾಯಿತು. ಸಂಶಯಗೊಂಡು ಸ್ವಲ್ಪ ಕಣ್ಣುಹಾಯಿಸಿದಾಗ ಕಂಡದ್ದು ಮೇಲ್ಗಡೆ ಮನೆಯಿಂದ ಜಿನುಗುತ್ತಿರುವ ನೀರ ಹನಿ. ಒದ್ದೆ ಬಟ್ಟೆಗಳನ್ನು ಹರವುವ ಮೊದಲು ಬಾಲ್ಕನಿಗೋಡೆಗೆ ಬಟ್ಟೆಗಳನ್ನು ಇಳಿಬಿಟ್ಟ ಪರಿಣಾಮ ಬಟ್ಟೆಯ ನೀರು ಗೋಡೆಯಿಂದಿಳಿದು ನಮ್ಮ ಬಾಲ್ಕನಿಯನ್ನು ತೇವಗೊಳಿಸುತಿತ್ತು. ನಂತರ ಅವರ ಗಮನಕ್ಕೆ ತಂದು ಎಚ್ಚರಿಸಿ ಬಚಾವ್‌ ಆದೆವು.

ಮತ್ತೂಂದು ಪ್ರಸಂಗದಲ್ಲಿ ಕಂಬಿಯಲ್ಲಿ ಒಣಗಿಸಿದ್ದ ಬಟ್ಟೆಗಳು ಮುಕ್ಕಾಲು ಒಣಗಿದ್ದು ಪುನಃ ತೇವಗೊಂಡಿತ್ತು. ಮಳೆಯಿಲ್ಲದೇ ಇದ್ದರೂ ಬಟ್ಟೆ ಒದ್ದೆಯಾದದ್ದು ಹೇಗೆ ಎಂಬ ಯಕ್ಷಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಮೇಲಿನ ಮನೆಯವರ ಸಸ್ಯ ಪ್ರೇಮ !ಅವರು ಪ್ಯಾರಾಫಿಟ್‌ ವಾಲ್‌ ಮೇಲಿರಿಸಿದ್ದ ಸಸ್ಯಕುಂಡಗಳಿಗೆ ನೀರುಣಿಸುವ ಸಂಭ್ರಮದಲ್ಲಿ, ಅಧಿಕವಾದ ನೀರು ಹೊರಚೆಲ್ಲಿ ಒಣಗಿದ ಬಟ್ಟೆಗಳನ್ನೂ ಮುತ್ತಿಟ್ಟಿತ್ತು. ಮತ್ತೆ ಯಥಾ ಪ್ರಕಾರ “ನಿಮ್ಮ ಸಸ್ಯ ಪ್ರೇಮವನ್ನು ಮನೆಯೊಳಕ್ಕೆ ಇರಿಸಿಕೊಳ್ಳಿ’ ಎಂದು ಸಲಹೆ ನೀಡಿದೆವು.

ಆಡಲು ಮೀಸಲಿಟ್ಟ ಜಾಗದಲ್ಲಿ, ಹಿರಿಯರ ಮೇಲ್ವಿಚಾರಣೆಯಲ್ಲಿ ಚಿಕ್ಕಮಕ್ಕಳಿಗೆ ಆಟೋಟಗಳನ್ನು ನಡೆಸಿದರೆ ಯಾರಿಗೂ ತೊಂದರೆ ಇರದು. ಬದಲಿಗೆ ಟೆರೇಸ್‌ನಲ್ಲೋ ವಾಹನಗಳನ್ನು ನಿಲ್ಲಿಸುವ ಜಾಗಗಳನ್ನೋ ಆಟದ ಅಡ್ಡೆಯಾಗಿಸಿಕೊಂಡರೆ ಅಶಿಸ್ತು ಮೈಗೂಡುವುದು.

ಮೈದಾನದಲ್ಲಿ ಆಡುವ ಕ್ರಿಕೆಟ್‌ ಆಟವನ್ನು ಕಾರ್‌ಪಾರ್ಕಿಂಗ್‌ನಲ್ಲೇ ಆಡಿ, ಮೇಲಿನ ಮನೆಯವರ ಗಾಜು ಮುರಿದು, ಅಸೋಸಿಯೇಶನ್‌ಗೆ ದಂಡ ಕಟ್ಟುವಂತೆ ಮಾಡುವ ತುಂಟ ಮಕ್ಕಳನ್ನು ನಿಭಾಯಿಸುವುದಾದರೂ ಹೇಗೆ !

ಇದಿರುಬದಿರು ಬಾಲ್ಕನಿಗಳಿರುವ ಕಡೆ ಇನ್ನೊಂದು ಬಗೆಯ ಸಮಸ್ಯೆ. ಬಾಲ್ಕನಿಯಲ್ಲಿ ನಿಂತು ಮೊಬೈಲುಗಳಲ್ಲಿ ಖಾಸಗಿ, ವೈಯಕ್ತಿಕ ಕರೆಗಳನ್ನು ಮಾಡುವುದು ವಾಡಿಕೆ. ಕೆಲವೊಮ್ಮೆ ಆ ಪ್ರೇಮ ಸಲ್ಲಾಪವೋ, ಬೈಗುಳವೋ, ಅರಚಾಟವೋ ಅಳುವೋ ಮೇಲಿನ ಬಾಲ್ಕನಿಯವರಿಗೂ ಕೇಳಿಸದೇ ಇರದು. ಆದರೇನು ಮಾಡುವುದು. ಕೇಳಿಸಿಕೊಳ್ಳಲೇಬೇಕಲ್ಲವೇ…

ಕೆ.ವಿ.ರಾಜಲಕ್ಷ್ಮಿ

ಟಾಪ್ ನ್ಯೂಸ್

joginder sharma

ಕ್ರಿಕೆಟ್ ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ

Supreme Court

ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ: ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ

1-sadsdasd

ಅದಾನಿ ಗ್ರೂಪ್ ವಿಚಾರದಲ್ಲಿ ಸಂಸತ್ ಉಭಯ ಸದನದಲ್ಲಿ ಕೋಲಾಹಲ

1-saddasd

ರಾಜ್ಯಸಭೆಯ ಕೊನೆಯ ಸಾಲಿಗೆ ಶಿಫ್ಟ್ ಆದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್

ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆದ್ದು ಸೆಮಿ ಫೈನಲ್ ಪ್ರವೇಶಿಸಿದ ಕರ್ನಾಟಕ

ರಣಜಿ ಟ್ರೋಫಿ: ಉತ್ತರಾಖಂಡ್ ವಿರುದ್ಧ ಗೆದ್ದು ಸೆಮಿ ಫೈನಲ್ ಪ್ರವೇಶಿಸಿದ ಕರ್ನಾಟಕ

1-fasdsadsa

ಹಿಂದೂಗಳ ಪರವಾದ ಯಾವುದೇ ಸರ್ಕಾರ ಇಲ್ಲ: ವಿಜಯ್ ರೇವಣ್ಕರ್

BJP Symbol

ಯುಪಿ ವಿಧಾನಪರಿಷತ್ ಚುನಾವಣೆ: ಬಿಜೆಪಿಗೆ ಭರ್ಜರಿ ಗೆಲುವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

ಹೊಸ ಸೇರ್ಪಡೆ

joginder sharma

ಕ್ರಿಕೆಟ್ ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ

Supreme Court

ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ: ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದ ಸುಪ್ರೀಂ

ello jogappa ninna aramane movie

ಅರಮನೆ ಹುಡುಕಾಟದಲ್ಲಿ ಜೋಗಪ್ಪ; ಕಂಬ್ಳಿಹುಳ ನಾಯಕನ ಹೊಸ ಚಿತ್ರ

1-sadsdasd

ಅದಾನಿ ಗ್ರೂಪ್ ವಿಚಾರದಲ್ಲಿ ಸಂಸತ್ ಉಭಯ ಸದನದಲ್ಲಿ ಕೋಲಾಹಲ

1-saddasd

ರಾಜ್ಯಸಭೆಯ ಕೊನೆಯ ಸಾಲಿಗೆ ಶಿಫ್ಟ್ ಆದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.