Udayavni Special

ಕಥೆ: ಲೈಫ್ ಸೇವಿಂಗ್‌ ಮಿಷನ್‌


Team Udayavani, Sep 29, 2019, 5:19 AM IST

t-11

ಮೊನ್ನೆ ವಿಮಾನ ಮಂಗಳೂರು ತಲುಪುವಾಗ ರಾತ್ರಿ ಗಂಟೆ 12 ಆಗಿತ್ತು. ಏರ್‌ಪೋರ್ಟ್‌ನಲ್ಲಿ ಯಾರನ್ನೋ ಡ್ರಾಪ್‌ ಮಾಡಲು ಬಂದ ಸದಾನಂದ ಸಿಕ್ಕಿದ. ಯಾವಾಗಲೂ ಟ್ರಿಮ್‌ ಆಗಿ ಇರುತ್ತಿದ್ದ ಆತ ಗಡ್ಡ ಬಿಟ್ಟು ಮಾಸಿದ ಬಟ್ಟೆ ಹಾಕ್ಕೊಂಡು ಯಾಕೋ ತುಂಬಾ ಡಲ್ಲಾಗಿದ್ದ. “”ಯಾಕಯ್ನಾ ಹಿಂಗಿದ್ದೀಯಾ, ಎಲ್ಲಿಗ್‌ ಬಂತೊ ನಿನ್‌ ಲೈಫ್ ಸೇವಿಂಗ್‌ ಮಿಷನ್‌?” ಅಂತ ಕೇಳಿದೆ.

“”ಇನ್ಮೇಲೆ ಜೀವ ಹೋದ್ರೂ ಪ್ರಾಣ ಉಲ್ಸಕ್ಕೆ ಹೋಗೋಲ್ಲ” ಅಂದ.
“”ಯಾಕೊ ಏನಾಯ್ತು?” ಅಂದೆ.
“” ಅದೊಂದು ದೊಡ್ಡ ಕಥೆ, ಕಾರ್‌ ಹತ್ತು. ನಿನ್ನನ್ನು ಡ್ರಾಪ್‌ ಮಾಡ್ತಿನಿ” ಅಂದ. ನನ್ನ ಒತ್ತಾಯಕ್ಕೆ ದಾರಿಯಲ್ಲಿ ಕತೆ ಶುರು ಹಚ್ಕೊಂಡ.

“”ಏನಿಲ್ಲಾ, ನಾನು ಸಾಯ್ತಾ ಇರೋ ಎಷ್ಟೋ ಜನರನ್ನು ಉಳಿಸಿದೆ. ನಿಂಗೆ ಗೊತ್ತಲ್ಲ, ನಾನಿಲ್ಲದಿದ್ರೆ ಅವರು ಇವತ್ತು ಇರ್ತಾ ಇರ್ಲಿಲ್ಲ ಅಂತೆಲ್ಲಾ ಅನ್ಕೋತಿದ್ದೆ. ಆದರೆ ನಾನು ಉಳಿಸದಿದ್ದರೇನೇ ಒಳ್ಳೇದಿತ್ತು ಅಂತ ಕೆಲವೊಮ್ಮೆ ಅನ್ನಿಸ್ತಿದೆ” ಅಂತ ಕೊರಗಿದ.

ಸದಾನಂದ ನನ್ನ ಹಳೆಯ ಗೆಳೆಯ. ಕುಂದಾಪುರದಲ್ಲಿ ವಾಸ. ಪಿತ್ರಾರ್ಜಿತ ಆಸ್ತಿ ಸಾಕಷ್ಟಿದೆ. ಅವನನ್ನು “ಸದ್ದು’ ಅಂತ ಶಾರ್ಟಾಗಿ ಕರೆಯುತ್ತಿದ್ದೆ. ಹೆಸರಿಗೆ ತಕ್ಕಂತೆ ಆಗಾಗ ಸದ್ದು ಮಾಡ್ತಾನೇ ಇರ್ತಿದ್ದ. ಸುತ್ತಮುತ್ತ ಎಲ್ಲೇ ಅಪಘಾತ ಆಗ್ಲಿ , ಅವನಿಗೆ ಕರೆ ಬರುತ್ತಿತ್ತು. ಅಲ್ಲಿ ಆತ ಹಾಜರ್‌. ಗಾಯಾಳುವನ್ನು ಆಸ್ಪತ್ರೆಗೆ ಸೇರಿಸುತ್ತಿದ್ದ. ಅದರಲ್ಲೇ ಅವನಿಗೆ ದೊಡ್ಡ ಸಾಧನೆ ಮಾಡಿದೆನೆಂಬ ಸಾರ್ಥಕ್ಯದ ಭಾವ. ಅಂಥವನು ಇವತ್ತು ಬೇರೇನೇ ಹೇಳ್ಳೋದು ಕೇಳಿ ಆಶ್ಚರ್ಯ ಆಯ್ತು. “”ಏನೋ, ಯಾಕ್‌ ಹಿಂಗಂತೀಯಾ?” ಅಂತ ಕೇಳಿದೆ.
ಅದಕ್ಕೆ ಅವನು ಹೇಳಿದ…

ಏನಿಲ್ಲ , ನನ್ನ ಫ್ರೆಂಡ್‌ ಡಾಕ್ಟರ್‌ ಕೇಶವ ಗೊತ್ತಲ್ವಾ? ಮೊನ್ನೆ ಅವನ ಜತೆ ಒಬ್ಬರ ಮನೆಗೆ ಹೋಗಿದ್ದೆ. ಅಲ್ಲೊಬ್ಬ ನಡುವಯಸ್ಕ ಮಂಚದ ಮೇಲೆ ನರಳುತ್ತ ಮಲಗಿದ್ದ. ಆತ ನನ್ನನ್ನು ನೋಡಿದ ತಕ್ಷಣ “ಬಾಬಾ, ಬೆಬೆ’ ಅಂತ ಏನನ್ನೋ ಹೇಳ್ಳೋದಕ್ಕೆ ಪ್ರಯತ್ನ ಮಾಡ್ತಿದ್ದ. ಕೇಶವನಿಗೆ ಆಶ್ಚರ್ಯ! ಇಷ್ಟರವರೆಗೆ ಮಾತೇ ಆಡದವನು ನಿಂಗೆ ಏನೋ ಹೇಳ್ಳೋಕೆ ಪ್ರಯತ್ನಿಸ್ತಾ ಇದ್ದಾನಲ್ಲ , ನಿಂಗೆ ಗೊತ್ತಾ ಇವನು?- ಅಂತ ಕೇಳಿದ ಕೇಶವ. ಗೊತ್ತಿಲ್ಲ- ಅಂದೆ. ಆದರೆ ಇವನನ್ನು ಎಲ್ಲೊ ನೋಡಿದ್ದೇನಲ್ಲ ಅಂತನ್ನಿಸಲಾರಂಭಿಸಿತು.

ಡಾಕ್ಟರ್‌ ಕೇಶವ ಅವನಿಗೆ, “”ಏನ್‌ ಕೃಷ್ಣಾ, ಹೇಳು, ಹೇಳು” ಅಂದ.

ಅವನಿಗೆ ಮಾತೇ ಹೊರಡ್ಲಿಲ್ಲ. ಹಾಗೇ ಕತ್ತು ಪಕ್ಕಕ್ಕೆ ಹಾಕಿ ಪ್ರಾಣ ಬಿಟ್ಟ. ನಂಗೆ ಥ್ಯಾಂಕ್ಸ್‌ ಹೇಳುವುದಕ್ಕೋ ಅಥವಾ ಶಾಪ ಹಾಕುವುದಕ್ಕೋ ಪ್ರಯತ್ನಿಸಿ ಪ್ರಾಣ ಬಿಟ್ಟಿದ್ದ ಅಂತ ನನಗನ್ನಿಸಿ ಖೇದವೆನ್ನಿಸಿತು.

ಕೊನೆಗೂ ನೆನಪಾಯಿತು, ಹತ್ತು ವರ್ಷದ ಹಿಂದಿನ ಘಟನೆ.
ಈ ವ್ಯಕ್ತಿಗೆ ಆಗ ಇಪ್ಪತ್ತೋ, ಇಪ್ಪತ್ತೂಂದರ ಹರೆಯವಿದ್ದಿರಬೇಕು. ಪರ್ಕಳದ ಹೆದ್ದಾರಿಯಲ್ಲಿ ಬೈಕ್‌ ಆ್ಯಕ್ಸಿಡೆಂಟಲ್ಲಿ ರಸ್ತೆಯಲ್ಲಿ ಬಿದ್ದಿದ್ದ. ರಕ್ತ ಹರೀತಾ ಇತ್ತು. ಜನ ಗುಂಪು ಸೇರಿದ್ರು, ಯಾರೂ ಅವನ ಹತ್ತಿರ ಹೋಗೋಕೂ ರೆಡಿ ಇರಲಿಲ್ಲ- ಕೇಸು, ಕೋರ್ಟಿನ ಉಸಾಬರಿ ಯಾಕೆ ಬೇಕೂಂತ. ಅಂಥಾದ್ರಲ್ಲಿ ನಾನು ಅವನನ್ನು ಕಾರಿನಲ್ಲಿ ಎತ್ತಿ ಹಾಕಿ, ಹಾಸ್ಪಿಟಲ್‌ಗೆ ಸೇರಿಸಿದೆ. ತರೋದು ಐದು ನಿಮಿಷ ತಡವಾಗುತ್ತಿದ್ದರೂ ಅವನು ಉಳಿಯುತ್ತಿರಲಿಲ್ಲ ಅಂತ ಡಾಕ್ಟ್ರು ಹೇಳಿದಾಗ ಏನೋ ದೊಡ್ಡ ಕೆಲಸ ಮಾಡಿದ ಸಮಾಧಾನ ನನ್ನಲ್ಲಿ.

ಮನೆಗೆ ಬಂದು ಸ್ನಾನ ಮಾಡಿ ರಕ್ತಸಿಕ್ತ ಆಗಿದ್ದ ಬಟ್ಟೆ ಬದಲಾಯಿಸಿದೆ. ಆಮೇಲೆ, ಆ ಘಟನೆ ಮನಸ್ಸಿನಿಂದ ಮರೆಯಾಗಿತ್ತು.

ಹೋ ! ಈಗ ನನ್ನೆದುರು ಪ್ರಾಣ ಕಳೆದುಕೊಂಡವ ಅದೇ ವ್ಯಕ್ತಿ !
“”ಕಳೆದ ಹತ್ತು ವರ್ಷದಿಂದ ಹಾಸಿಗೆ ಹಿಡಿದೇ ಇದ್ದಾನೆ” ಎಂದರು ಅವನ ಮನೆಯವರು. ಆಗ ನನಗೆ ಸ್ಪಷ್ಟವಾಯಿತು, ಆವತ್ತು ರಸ್ತೆಯಲ್ಲಿ ಬಿದ್ದ ಇವನನ್ನೇ ಅಲ್ಲವೆ, ಆಸ್ಪತ್ರೆಗೆ ಸೇರಿಸಿದ್ದು ನಾನು !

ನನಗೆ ಬಾಯಿ ಬಾರದಾಯಿತು. ಮನಸ್ಸು ಭಾರವಾಯಿತು. ಅವನನ್ನು ಆಸ್ಪತ್ರೆಗೆ ಸೇರಿಸದೇ ಇದ್ದಿದ್ದರೆ ಇಂತಹ ನರಕಯಾತನೆ ಪಡುವುದು ತಪ್ಪುತ್ತಿತ್ತೋ ಏನೋ ! ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ದೇಹದ ಸ್ವಾಧೀನ ಕಳೆದುಕೊಂಡಿದ್ದ. ನಾನು ಅವನ ಜೀವ ಉಳಿಸಿ ಜೀವನಾನ ನರಕ ಮಾಡಿಬಿಟ್ಟೆ!

ಸದ್ದುವನ್ನು ನಾನು ಸಮಾಧಾನಿಸಿದೆ. “ನಾವೊಂದು ಅಂದುಕೊಂಡರೆ ವಿಧಿ ಬೇರೊಂದನ್ನು ಬಯಸುತ್ತಂತೆ. ಎಲ್ಲಾ ನಮ್ಮಿಂದಾನೇ ಅಂತ ಬೀಗುತ್ತೇವೆ. ಆದರೆ ಅದು ನಮ್ಮ ಅಹಂಕಾರ. ನೀನು ನಿನ್ನ ಕೆಲಸ ಮಾಡು, ಉಳಿಯೋದು ಸಾಯೋದರ ಬಗ್ಗೆ ಚಿಂತೆ ಮಾಡಬೇಡ’
ಅವನಿಗೆ ಕೊಂಚ ಸಮಾಧಾನವಾದಂತಾಯಿತು. ಅಷ್ಟರಲ್ಲಿ ನನ್ನ ಮನೆ ಬಂತು, ಅವನಿಗೆ ಯಾರದ್ದೋ ಫೋನ್‌ ಬಂತು. “ಬದುಕಿದ್ದಾನಲ್ಲ, ಈಗ್ಲೆ ಬಂದೆ’ ಅಂತ ನನ್ನನ್ನು ಕಾರಿನಿಂದ ಇಳಿಸಿ ದೌಡಾಯಿಸಿದ. ಬಹುಶಃ ಸದ್ದುವಿನ ಲೈಫ್ ಸೇವಿಂಗ್‌ ಮಿಷನ್‌ ಮತ್ತೆ ಶುರುಹಚ್ಚಿಕೊಂಡಿತು.

ಉದಯ ಜಾದೂಗಾರ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್‌: ದೇಶದಲ್ಲಿ ಮರಣ ಹೊಂದಿದವರಲ್ಲಿ 60 ವರ್ಷ ಮೇಲ್ಪಟ್ಟವರೇ ಹೆಚ್ಚು!

ಕೋವಿಡ್‌: ದೇಶದಲ್ಲಿ ಮರಣ ಹೊಂದಿದವರಲ್ಲಿ 60 ವರ್ಷ ಮೇಲ್ಪಟ್ಟವರೇ ಹೆಚ್ಚು!

ಸುಳ್ಯ: ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 62 ಮಂದಿಗೆ ಕ್ವಾರೆಂಟೈನ್ !

ಸುಳ್ಯ: ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 62 ಮಂದಿಗೆ ಕ್ವಾರೆಂಟೈನ್ !

ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರಿಗೆ ಅವಕಾಶ ಕೊಡಬೇಕು: ಕೆ.ಎಚ್.ಮುನಿಯಪ್ಪ

ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರಿಗೆ ಅವಕಾಶ ಕೊಡಬೇಕು: ಕೆ.ಎಚ್.ಮುನಿಯಪ್ಪ

ಪಂಪ್ ವೆಲ್ ಫ್ಲೈಓವರ್ ಗೆ ಇನ್ನೊಂದು ಹೆಸರು ಯಾಕೆ: ಯು ಟಿ ಖಾದರ್ ಪ್ರಶ್ನೆ

ಪಂಪ್ ವೆಲ್ ಫ್ಲೈಓವರ್ ಗೆ ಇನ್ನೊಂದು ಹೆಸರು ಯಾಕೆ? ಯು ಟಿ ಖಾದರ್ ಪ್ರಶ್ನೆ

ಸಿದ್ದರಾಮಯ್ಯ ಭೇಟಿ ಮಾಡಲು ಮುಗಿಬಿದ್ದ ಕಾರ್ಯಕರ್ತರು: ಎಲ್ಲೂ ಕಾಣದ ಸಾಮಾಜಿಕ ಅಂತರ

ಸಿದ್ದರಾಮಯ್ಯ ಭೇಟಿ ಮಾಡಲು ಮುಗಿಬಿದ್ದ ಕಾರ್ಯಕರ್ತರು: ಎಲ್ಲೂ ಕಾಣದ ಸಾಮಾಜಿಕ ಅಂತರ

ಸರ್ಕಾರಿ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಯಡಿಯೂರಪ್ಪ ಸೂಚನೆ

ಸರ್ಕಾರಿ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಯಡಿಯೂರಪ್ಪ ಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jagada-swasthya

ಮತ್ತೆ ಮರಳಲಿ ಜಗದ ಸ್ವಾಸ್ಥ್ಯ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ  ಸ್ಮತಿ

ಹಾವೇರಿಯ ಹೊಕ್ಕುಳ ಬಳ್ಳಿ ಪಾಟೀಲ ಪುಟ್ಟಪ್ಪ ಸ್ಮತಿ

Suryana-neralu

ಸೂರ್ಯನ ನೆರಳು

ಚಿತ್ರೋತ್ಸವದಲ್ಲಿ ಮೌನದ ಮಾತು

ಚಿತ್ರೋತ್ಸವದಲ್ಲಿ ಮೌನದ ಮಾತು

ಕತೆ: ಸಹಯಾತ್ರಿ

ಕತೆ: ಸಹಯಾತ್ರಿ

MUST WATCH

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

ಹೊಸ ಸೇರ್ಪಡೆ

ಕೋವಿಡ್‌: ದೇಶದಲ್ಲಿ ಮರಣ ಹೊಂದಿದವರಲ್ಲಿ 60 ವರ್ಷ ಮೇಲ್ಪಟ್ಟವರೇ ಹೆಚ್ಚು!

ಕೋವಿಡ್‌: ದೇಶದಲ್ಲಿ ಮರಣ ಹೊಂದಿದವರಲ್ಲಿ 60 ವರ್ಷ ಮೇಲ್ಪಟ್ಟವರೇ ಹೆಚ್ಚು!

ಸುಳ್ಯ: ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 62 ಮಂದಿಗೆ ಕ್ವಾರೆಂಟೈನ್ !

ಸುಳ್ಯ: ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 62 ಮಂದಿಗೆ ಕ್ವಾರೆಂಟೈನ್ !

03-June-14

ಮಹಾರಾಷ್ಟ್ರದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್‌ ಕಡ್ಡಾಯ

03-June-13

ಮಳೆ ಹಾನಿ ಪ್ರದೇಶಕ್ಕೆ ಬಸವಂತಪ್ಪ ಭೇಟಿ

ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.