ಫೇರ್‌ನೆಸ್‌ ಕ್ರೀಮ್‌ನ ಮೋಹವೇ?

ಹುಚ್ಚು ಮನಸ್ಸಿನ ಹತ್ತು ಮುಖಗಳು

Team Udayavani, May 1, 2019, 6:00 AM IST

Avalu-cream

ಬಿಳಿ ಇದ್ದರೇನೇ ಗೌರವ ಅನ್ನೋ ನಂಬಿಕೆಯ ಬುಡವನ್ನು ಇತ್ತೀಚೆಗೆ ತ್ರಿಭಾಷಾ ತಾರೆ ಸಾಯಿ ಪಲ್ಲವಿ ಭಿನ್ನ ಧ್ವನಿಯಲ್ಲಿ ಗುಡುಗಿ ಅಲುಗಾಡಿಸಿಬಿಟ್ಟರು. 2 ಕೋಟಿ ರೂ.ನ, ಫೇರ್‌ನೆಸ್‌ ಕ್ರೀಮ್‌ ಜಾಹೀರಾತಿನ ಆಫ‌ರನ್ನು ತಿರಸ್ಕರಿಸಿದ ಅವರ ನಿಲುವಿನಲ್ಲಿ ಹೊರಹೊಮ್ಮಿದ ಪ್ರತಿಧ್ವನಿಗಳೇ ಬೇರೆ. ಇಂಥ ಜಾಹೀರಾತುಗಳಿಂದ ನಾವು ಹೇಗೆ ಮೋಸ ಹೋಗಿದ್ದೇವೆ ಎನ್ನುವುದರ ನೋಟ ಇಲ್ಲಿದೆ…

ಅವಳ ಬಣ್ಣ ಕೊಂಚ ಕಪ್ಪು, ಆದರೇನು ನನಗೆ ಒಪ್ಪು ಕಪ್ಪಗಿದ್ದರೇನು ಮೈಯಿ ಪ್ರೇಮ ಕರಿಯದೇ? ಒಪ್ಪೆ ಮನವು ಕಪ್ಪ ಮೀರಿ ಒಲವು ಹರಿಯದೇ? ಬಳ್ಳಾರಿ ರಾಘವ ಬರೆದ, ಕಾಳಿಂಗ ರಾಯರ ಕಂಠದಲ್ಲಿ ಮೊಳಗಿದ, ಈ ಸಾಲುಗಳು ಎಷ್ಟೊಂದು ಅರ್ಥಗರ್ಭಿತ! ಮುಖದ ಬಣ್ಣವನ್ನು ಬಿಳಿಯಾಗಿಸುವ ಉದ್ಯಮವು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ಈ ಕಾಲದಲ್ಲಿ, ಈ ಸಾಲುಗಳನ್ನು ಅದೆಷ್ಟು ಬಾರಿ ಮೆಲುಕು ಹಾಕಿದರೂ ಸಾಲದು.

ಯಾಕೋ ಇತ್ತೀಚೆಗೆ ತ್ರಿಭಾಷಾ ತಾರೆ ಸಾಯಿಪಲ್ಲವಿ, ಫೇರ್‌ನೆಸ್‌ ಕ್ರೀಮ್‌ ಜಾಹೀರಾತಿಗೆ ನಕಾರ ಎತ್ತಿದ ಮೇಲೆ ಈ ಹಾಡು ಮತ್ತೆ ಮತ್ತೆ ಕಾಡುತ್ತಿದೆ. “ಸಿನಿಮಾದಲ್ಲೇ ಕ್ರೀಮು, ಪೌಡರ್‌ ಹಚ್ಚದ ನಾನು, ನಿಮ್ಮ ಕ್ರೀಮ್‌ ಅನ್ನು ಲೇಪಿಸಿಕೊಂಡು ಜನರಿಗೇಕೆ ಮೋಸ ಮಾಡಲಿ?’ ಎನ್ನುವ ಸಾಯಿಪಲ್ಲವಿಯ ಧ್ವನಿಯಲ್ಲಿ ದಿಟ್ಟತನವಿತ್ತು. ಕ್ರೀಮ್‌ ಉತ್ಪನ್ನ ಕಂಪನಿಗಳ ಮುಖವಾಡವನ್ನೂ ಅದು ಕಳಚಿತ್ತು.

ನಿಜ ಅಲ್ವಾ? ಬಿಳಿಯಾಗಿಸುವ ಕ್ರೀಂಗಳನ್ನು ಹಚ್ಚಿದರೆ ಮುಖದ ಬಣ್ಣವು ಬಿಳುಪಾಗಿ ಸೌಂದರ್ಯವು ಹೆಚ್ಚುತ್ತದೆ, ಅದರಿಂದ ಆತ್ಮ­ಸ್ಥೈರ್ಯವೂ ಹೆಚ್ಚಿ, ಅತಿ ಸುಲಭದಲ್ಲಿ ಕೆಲಸವೋ, ಬಾಳಸಂಗಾತಿಯೋ ದೊರೆಯುವಂತಾಗುತ್ತದೆ ಎಂದೆಲ್ಲ ಬಿಂಬಿಸುವ ಜಾಹೀರಾತುಗಳನ್ನು ನಿತ್ಯವೂ ಕಾಣುತ್ತಿರುತ್ತೇವೆ. ಇಂಥ ಜಾಹೀರಾತುಗಳು ಅವಾಸ್ತವಿಕ ಮಾತ್ರವಲ್ಲ, ಅನೈತಿಕವೂ, ಕುಟಿಲವೂ ಆಗಿವೆ. ಉದ್ಯೋಗ, ಬಾಳ ಸಂಗಾತಿ ಇತ್ಯಾದಿಗಳೆಲ್ಲ ಅವರವರ ವ್ಯಕ್ತಿತ್ವ, ವೈಯಕ್ತಿಕ ಸಾಮರ್ಥ್ಯ ಹಾಗೂ ಸಾಧನೆಗಳ ಆಧಾರದಲ್ಲಿ ನಿರ್ಧರಿಸಲ್ಪಡುತ್ತವೆಯೇ ಹೊರತು ಮುಖದ ಬಣ್ಣದ ಆಧಾರದಲ್ಲಲ್ಲ.

ಮಾಡೆಲ್‌ನದ್ದು ಸಹಜ ಗೌರವರ್ಣ
ಅಷ್ಟಕ್ಕೂ ಈ ಜಾಹೀರಾತುಗಳ ರೂಪದರ್ಶಿಗಳು ಸಹಜವಾದ ಗೌರವರ್ಣವನ್ನೂ, ತಮ್ಮದೇ ಸೌಂದರ್ಯವನ್ನೂ ಹೊಂದಿದವರಾಗಿ­ರು­ತ್ತಾರೆಯೇ ಹೊರತು ಆ ಉತ್ಪನ್ನಗಳಿಂದ ಅವನ್ನು ಪಡೆದವ­ರೇನೂ ಆಗಿರುವುದಿಲ್ಲ.

ಚರ್ಮದ ರಹಸ್ಯ ಗೊತ್ತೇ?
ಬಿಳಿಯಾಗಿಸುವ ಕ್ರೀಂಗಳನ್ನು ಉತ್ತೇಜಿಸುವ ಜಾಹೀರಾತುಗಳನ್ನು ನಾವು, ಚರ್ಮ ತಜ್ಞರು, ಯಾವತ್ತೂ ವಿರೋಧಿಸುತ್ತಲೇ ಬಂದಿದ್ದೇವೆ. ನಮ್ಮ ಮೈ ಬಣ್ಣವು ಅನುವಂಶೀಯವಾಗಿ, ನಮ್ಮ ವಂಶವಾಹಿಗಳಲ್ಲೇ ಅಚ್ಚಾಗಿರುತ್ತದೆ. ಚರ್ಮದ ಬಣ್ಣದ ಗಾಢತೆಯು ಚರ್ಮದಲ್ಲಿರುವ ಮೆಲನಿನ್‌ ಎಂಬ ಸಂಯುಕ್ತದ ಪ್ರಮಾಣಕ್ಕೆ ಅನುಗುಣ­ವಾಗಿರುತ್ತದೆ.

ಈ ಮೆಲನಿನ್‌ ಸಂಯುಕ್ತವು ಸೂರ್ಯರಶ್ಮಿಯ­ಲ್ಲಿರುವ ಅತಿ ನೇರಳೆ (ಅಲ್ಟ್ರಾ ವಯಲೆಟ್) ಕಿರಣಗಳನ್ನು ಹೀರಿ, ಅದರ ದುಷ್ಪರಿಣಾಮ­ಗಳಿಂದ ನಮ್ಮ ಚರ್ಮವನ್ನು ರಕ್ಷಿಸುತ್ತದೆ. ಇದೇ ಕಾರಣಕ್ಕೆ ಭಾರತದಂಥ ಉಷ್ಣವಲಯದ ವಾಸಿಗಳ ಚರ್ಮದಲ್ಲಿ ಮೆಲನಿನ್‌ ಹೆಚ್ಚಿದ್ದು, ಚರ್ಮದ ಬಣ್ಣವು ಗಾಢವಾಗಿರುತ್ತದೆ. ಚರ್ಮದಲ್ಲಿರುವ ಮೆಲನಿನ್‌ ಪ್ರಮಾಣ ಮತ್ತು ಅತಿ ನೇರಳೆ ಕಿರಣಗಳಿಗೆ ಚರ್ಮವು ಸ್ಪಂದಿಸುವ ಬಗೆಯನ್ನಾಧರಿಸಿ ಚರ್ಮವನ್ನು ಆರು ವಿಧಗಳಾಗಿ ವಿಂಗಡಿಸಲಾಗುತ್ತದೆ.

ಪಾಶ್ಚಿಮಾತ್ಯರ ಚರ್ಮವು ಹೆಚ್ಚು ಬಿಳುಪಾದ 1-3ನೇ ವಿಧದ್ದಾಗಿದ್ದರೆ, ಉಷ್ಣವಲಯದಲ್ಲಿ ವಾಸಿಸುತ್ತಿರುವ ಭಾರತೀಯರ ಚರ್ಮವು ಕಡಿಮೆ ಬಿಳುಪಿರುವ 4-6ನೇ ವಿಧದ್ದಾಗಿದೆ. ಸೂರ್ಯನ ಕಿರಣಗಳಿಗೆ ಒಡ್ಡಲ್ಪ­ಟ್ಟಾಗ ಮೆಲನಿನ್‌ ಕಡಿಮೆಯಿರುವ ಬಿಳಿ ಬಣ್ಣದ ಚರ್ಮವು ಕಡು ಬಣ್ಣವುಳ್ಳವರಿಗಿಂತ ಹೆಚ್ಚು ಬೇಗನೆ ಹಾನಿಗೆ ಈಡಾಗುತ್ತದೆ, ಸುಕ್ಕಾಗುತ್ತದೆ, ಮುಪ್ಪಾಗುತ್ತದೆ. ಕಡುಬಣ್ಣವು­ಳ್ಳವರು ಪ್ರಕೃತಿ ಸಹಜ ವಾಗಿಯೇ ತಮ್ಮ ಚರ್ಮ­ವನ್ನು ರಕ್ಷಿಸಿಕೊಳ್ಳಬಲ್ಲ ಅದೃಷ್ಟವಂತರಾಗಿರುತ್ತಾರೆ!

ಬಿಳುಪಾಗಿಸುತ್ತವೆಂದರೆ…
ಫೇರ್‌ನೆಸ್‌ ಕ್ರೀಮ್‌ಗಳಲ್ಲಿ 20-40 ಬಗೆಯ ಸಂಯುಕ್ತಗಳಿರುತ್ತವೆ; ಅವುಗಳಲ್ಲಿ ಕೆಲವು ಪರಿಣಾಮಕಾರಿ ಹಾಗೂ ಸುರಕ್ಷಿತವೆಂದು ವೈಜ್ಞಾನಿಕವಾಗಿ ಶ್ರುತ ಪಟ್ಟಿದ್ದರೆ, ಮತ್ತೆ ಕೆಲವು ಚರ್ಮಕ್ಕೇ ಹಾನಿಕಾರಕ. ಯಾವುದೇ ಕ್ರೀಂನಿಂದ ಚರ್ಮವು ಅತಿಯಾಗಿ ಬಿಳುಪಾಗುತ್ತಿದ್ದರೆ, ಅದು ಒಳ್ಳೆಯದಲ್ಲ. ಅವುಗಳಲ್ಲಿ ಹೈಡ್ರೋಕ್ವಿನೋನ್‌, ಸ್ಟೀರಾಯ್ಡ್ ಗಳಂಥ ಶಕ್ತಿಶಾಲಿ ಸಂಯುಕ್ತಗಳಿರುವ ಸಾಧ್ಯತೆಗಳಿರುತ್ತವೆ. ಆದ್ದ­ರಿಂದಲೇ ಬಿಳುಪಾಗಿಸುವ ಕ್ರೀಂಗಳಲ್ಲಿ ಬಳಸಲಾಗುವ ಎಲ್ಲಾ ಸಂಯುಕ್ತಗಳ ಬಗ್ಗೆ ಏನನ್ನೂ ಅಡಗಿಸಿಡದೆ, ಪೂರ್ಣವಾದ ಮಾಹಿತಿ­ಯನ್ನು ಮುದ್ರಿಸ­ಬೇಕೆಂದು ಚರ್ಮ ತಜ್ಞರು ಆಗ್ರಹಿಸುತ್ತಲೇ ಇದ್ದಾರೆ.

ಕ್ರೀಂಗಳಲ್ಲಿನ‌ ಸುಗಂಧದ್ರವ್ಯ­ಗಳು, ಅಲ್ಪ ಪ್ರಮಾಣದಲ್ಲಿ ಬೆರೆಸಿರಬಹುದಾದ ಸನ್‌ ಸ್ಕ್ರೀನ್‌ಗಳು ಚರ್ಮವನ್ನು ಇನ್ನಷ್ಟು ಕಪ್ಪಾಗಿಸಬಹುದು. ಈ ಕ್ರೀಂಗಳಲ್ಲಿ ಬೆಳಕಿನಿಂದ ಉತ್ತೇಜಿಸಲ್ಪಡಬಲ್ಲ ಸಂಯುಕ್ತಗಳಿದ್ದರೆ ಅವು ಸಂವೇದನಾಶೀಲ ಚರ್ಮ­ವುಳ್ಳವರಲ್ಲಿ ಹಾನಿಯುಂಟು ಮಾಡಬಹುದು.

ನೈಸರ್ಗಿಕ ಉಪಚಾರವೇ ಉತ್ತಮ
ಚರ್ಮದ ಬಣ್ಣಕ್ಕಿಂತಲೂ ಅದರ ಆರೋಗ್ಯ ಹಾಗೂ ನೈಸರ್ಗಿಕ ಕಾಂತಿಗಳನ್ನು ಕಾಪಾಡಿಕೊಳ್ಳುವುದು ಅತಿ ಮುಖ್ಯ. ವಾತಾವರಣದ ಜೊತೆಗೆ ಜೀವನ ಶೈಲಿ ಹಾಗೂ ನೈರ್ಮಲ್ಯ ಪಾಲನೆಯ ವಿಧಾನ­ಗಳು ಚರ್ಮದ ಬಣ್ಣದ ಮೇಲೆ ಅಪಾರ ಪ್ರಭಾವ ಬೀರುತ್ತವೆ. ಪರಿಸರ ಮಾಲಿನ್ಯ, ಶೀಘ್ರ ತಿನಿಸುಗಳು, ಒತ್ತಡಭರಿತ ಜೀವನ, ನಿದ್ರೆಯ ಕೊರತೆ- ಎಲ್ಲವೂ ಚರ್ಮದ ಬಣ್ಣ, ಕಾಂತಿಗಳ ಮೇಲೆ ದುಷ್ಪರಿಣಾಮ ಬೀರುತ್ತವೆ.

ಸಮ­ತೋಲಿತ­ ಆಹಾರವನ್ನು ಸರಿ­ಯಾದ ಪ್ರಮಾಣದಲ್ಲಿ ಸರಿಯಾದ ಸಮಯದಲ್ಲಿ ಸೇವಿಸುವುದು, ನಿರಂತರ­ವಾದ ದೈಹಿಕ ವ್ಯಾಯಾಮ ಹಾಗೂ ರಾತ್ರಿಯಲ್ಲಿ 7-8 ಗಂಟೆಗಳ ನಿದ್ದೆಗಳಿಂದಲೇ ಅದನ್ನು ಸಾಧಿಸಲು ಸಾಧ್ಯವಿದೆ. ಇಡಿಯಾದ ಧಾನ್ಯಗಳು, ವಿವಿಧ ಬಣ್ಣಗಳ ತರಕಾರಿಗಳು, ಬೀಜಗಳು, ಅಗಸಿ, ಮೊಟ್ಟೆ ಹಾಗೂ ಮೀನುಗಳು ಚರ್ಮದ ಆರೋಗ್ಯಕ್ಕೆ ಪೂರಕವಾದ ಆಹಾರಗಳಾಗಿವೆ. ಜೊತೆಗೆ, ದಿನಕ್ಕೆ 2-3 ಲೀಟರ್‌ ನೀರನ್ನು ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

ಕೋಟಿ ಕೋಟಿ ದುಡಿವ ಕ್ರೀಮು
ಗೌರವರ್ಣದ ಮುಖವನ್ನು ಹೊಂದಿರಬೇಕೆನ್ನುವ ಜನರ ಹುಚ್ಚು ಆಸೆಯನ್ನು ಬಳಸಿಕೊಂಡೇ ಈ ಉತ್ಪನ್ನಗಳು ಹೇರಳವಾಗಿ ಸಂಪಾದಿಸಿಕೊಳ್ಳುತ್ತಿವೆ. ಭಾರತದಲ್ಲಿಂದು ಫೇರ್‌ನೆಸ್‌ ಕ್ರೀಂಗಳ ವಾರ್ಷಿಕ ವಹಿವಾಟು ಸುಮಾರು 2000 ಕೋಟಿ ರೂ.! 2023ರ ವೇಳೆಗೆ ಇದು 5000 ಕೋಟಿ ರೂ. ದಾಟಿದರೂ ಆಶ್ಚರ್ಯವಿಲ್ಲ ಎನ್ನುತ್ತದೆ ಒಂದು ಲೆಕ್ಕಾಚಾರ.

— ಡಾ. ಬಾಲಸರಸ್ವತಿ, ಮಂಗಳೂರು

ಟಾಪ್ ನ್ಯೂಸ್

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.