Udayavni Special

ಕೋವಿಡ್ ಬಂದು ಬಾಗಿಲು ತಟ್ಟಿತು!


Team Udayavani, Sep 23, 2020, 8:10 PM IST

aVALU-TDY-3

ಸಾಂದರ್ಭಿಕ ಚಿತ್ರ

ಊರಿಗೆ ಬಂದೋಳು ನೀರಿಗೆ ಬಾರಳೆ… ಎನ್ನುವ ಗಾದೆಯಂತೆ…ಊರೆಲ್ಲ ಹಬ್ಬಿದಕೊರೊನಾ ಮನೆಮಂದಿಗೆ ಬಾರದೆ ಇದ್ದೀತೆ? ಎಂಬ ಅಂದಾಜು, ಆತಂಕ ನಮಗೂ ಇತ್ತು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಗೆ ಬಗೆಯ ಕಷಾಯ ಸೇವನೆ, ಯೋಗ, ಪ್ರಾಣಾಯಾಮ… ಇತ್ಯಾದಿಗಳ ಪ್ರಯೋಗ ನಡೆಸಿದ್ದೆವು. ಹೀಗಿದ್ದಾಗಲೇ ಯಜಮಾನರ ಆಫೀಸಿನಲ್ಲಿ ಕೋವಿಡ್ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿತ್ತು. ಒಂದು ದಿನ ನಮ್ಮ ಮನೆಯ ಬಾಗಿಲನ್ನೂ ತಟ್ಟಿತು.

ಯಜಮಾನರಿಗೆಕೋವಿಡ್‌ ಪಾಸಿಟಿವ್‌ ಎಂದಾಯ್ತು. ಇಂಥದೊಂದು ಸಂದರ್ಭ ಜೊತೆಯಾಗುವುದು ಎಷ್ಟೇ ನಿರೀಕ್ಷಿತ ಎಂದುಕೊಂಡಿದ್ದರೂ, ಅಂಥಕ್ಷಣಗಳನ್ನು ಎದುರಿಸುವ ಹೊತ್ತಿಗೆ ಒಂದಷ್ಟು ತಳಮಳ ಕಾಡುವುದು ಸಹಜ. ಧೈರ್ಯ ತಂದುಕೊಂಡು ಯಜಮಾನರನ್ನು ಆಸ್ಪತ್ರೆಗೆ ಸೇರಿಸಿರಾಯ್ತು. ಅವರು, ನಾಲ್ಕು ದಿನಗಳಲ್ಲಿ ಗುಣಮುಖರಾಗಿ ಬಂದರು. ಇನ್ನು ಹದಿನಾಲ್ಕು ದಿನಗಳಕ್ವಾರಂಟೈನ್‌ ಮಾಡಬೇಕು ಎಂಬ ವೈದ್ಯರ ಅಣತಿಯೊಂದಿಗೆ. ಕೋವಿಡ್ ಕಾಯಿಲೆಯ ಸ್ವರೂಪಗಳನ್ನು ಅನುಭವಿಸುವುದು ಒಂದು ತೂಕವಾದರೆ, ಈ ಕ್ವಾರಂಟೈನ್‌ ಎಂಬ ಕಟ್ಟಪ್ಪಣೆಯದು ಇನ್ನೊಂದು ತೂಕ…! ಹೇಳಿದಷ್ಟು ಸುಲಭವಲ್ಲ. ಇದಕ್ಕೊಂದಷ್ಟು ಮಾನಸಿಕ ತಯಾರಿ ಬೇಕು.ಯಾರ ಸಂಪರ್ಕಕ್ಕೂ ಬಾರದೆ ನಾಲ್ಕು ಗೋಡೆಯ ಮಧ್ಯೆ ಇದ್ದು ಹದಿನಾಲ್ಕು ದಿನಗಳನ್ನು ಕಳೆಯುವುದು ಒಂದು ಶಿಕ್ಷೆಯೇ ಸೈ. ಒಂದೆರಡು ದಿನ ಹೇಗೋ ಸಹಿಸಿಕೊಂಡರೂ ಕ್ರಮೇಣ ಕಾಡುವ ಏಕತಾನತೆ, ಮನಸಿನ ಮೇಲೆ ಪರಿಣಾಮ ಬೀರುತ್ತಾ ಹೋಗುತ್ತದೆ. ಅದರಲ್ಲೂ ತೀರಾ ಸಣ್ಣ ಮನೆಗಳಲ್ಲಿ ಇರುವವರಿಗೆ ಈ ಕ್ವಾರಂಟೈನ್‌ ಅವಧಿಯನ್ನು ನಿಭಾಯಿಸುವುದು ಪರಮ ಹಿಂಸೆಯಂತೆಯೇ ಭಾಸವಾಗುತ್ತದೆ. ಕ್ವಾರಂಟೈನ್‌ನ ಸಮಯದಲ್ಲಿ ಮನೆಯ ಇತರ ಸದಸ್ಯರ ಸಹಕಾರ ಬಹಳ ಮುಖ್ಯ. ಒಂದಷ್ಟು ಓದುವ, ಬರೆಯುವ ಹವ್ಯಾಸಗಳು, ಸಂಗೀತಕೇಳುವುದು, ಆತ್ಮೀಯರೊಂದಿಗೆ ಮಾತಾಡುವುದು, ಸಿನೆಮಾ, ಯಕ್ಷಗಾನ ಇತ್ಯಾದಿ ಸೃಜನಶೀಲ ಕಲೆಯ ವೀಕ್ಷಣೆ… ಈ ರೀತಿಯಲ್ಲಿ ತೊಡಗಿಸಿಕೊಂಡಿದ್ದರೆ ದಿನಗಳನ್ನು ಕಳೆಯುವುದು ಸುಲಭ. ಮನೆಯ ಇತರ ಸದಸ್ಯರಿಗೂ ಇದು ಒಂದು ರೀತಿಯ ಕಿರಿಕಿರಿಯೇ. ಅವರೂ ಈ ಮಾನಸಿಕ ಸಿದ್ಧತೆಯನ್ನು ಮಾಡಿಕೊಳ್ಳಲೇಬೇಕು. ಅದರಲ್ಲೂ ರೋಗಿಯನ್ನು ನೋಡಿಕೊಳ್ಳುವ ಗೃಹಿಣಿಗೆ ದುಪ್ಪಟ್ಟು ತಾಳ್ಮೆ ಬೇಕು. ನಾವಿರುವುದು ಅಪಾರ್ಟ್‌ಮೆಂಟ್‌ನಲ್ಲಿ.

ಅದು ಮುಖ್ಯ ರಸ್ತೆಗೆ ಕೊಂಚ ಹಿಂಬಾಗದಲ್ಲಿದೆ.ಕೋವಿಡ್‌ ಎಂದಾಕ್ಷಣ ಮನೆಯಕಿಟಕಿ, ಬಾಗಿಲು ಹಾಕಿಕೊಳ್ಳಬೇಕಾದ್ದು ಇತರರ ಆರೋಗ್ಯದ ದೃಷ್ಟಿಯಿಂದ ಅನಿವಾರ್ಯ. ಮೊದಲ ಒಂದೆರಡು ದಿನಗಳು ಅನಿವಾರ್ಯವಾಗಿ ಕಳೆದುಹೋದವು. ರೋಗಿಯ ಊಟೋಪಚಾರ, ಮನೆವಾರ್ತೆಗಳಲ್ಲಿ ಹೊತ್ತು ಸಾಗಿತು. ನಂತರದ ದಿನಗಳಲ್ಲಿ ಏಕತಾನತೆಯ ಅನುಭವ ಆಗತೊಡಗಿತು. ಜನಸಂಚಾರದ ಶಬ್ದವೇಕೇಳುತ್ತಿರಲಿಲ್ಲ. ಒಂದು ರೀತಿಯಲ್ಲಿ ಸುತ್ತಲಿನ ಪ್ರಪಂಚವೇ ಸ್ತಬ್ದವಾದಂತೆ..!

ಅಗತ್ಯವಿರುವ ವಸ್ತುಗಳನ್ನು ಅಪಾರ್ಟ್‌ಮೆಂಟ್‌ನ ಮಿತ್ರರು ಪೂರೈಸುತ್ತಿದ್ದರು. ಅದನ್ನು ತೆಗೆದಿಟ್ಟುಕೊಳ್ಳುವಾಗ ಮಾತ್ರ ಬಾಗಿಲು ತೆರೆಯುವುದು ಬಿಟ್ಟರೆ, ಮತ್ತೆ ಬಾಗಿಲು ತೆರೆಯುವ ಅವಕಾಶವಿರಲಿಲ್ಲ. ಯಾರನ್ನೂ ನೋಡುವಂತಿಲ್ಲ. ಯಾರೊಂದಿಗೂ ಮಾತಾಡುವಂತಿಲ್ಲ, ಹೊರಹೋಗುವಂತಿಲ್ಲ. ಸುಖವಾಗಿ ಪಯಣಿಸುತ್ತಿದ್ದ ವಾಹನವೊಂದು ಇದ್ದಕ್ಕಿದ್ದಂತೆಕೆಟ್ಟು ನಿಂತಾಗ ಆಗುತ್ತದಲ್ಲ; ಅಂಥಾ ಅನುಭವ!

ಇಂಥ ಸಂದರ್ಭದಲ್ಲಿ ನನ್ನನ್ನು ಏಕತಾನತೆಯಿಂದ ಹೊರ ತಂದಿದ್ದು ಬಾಲ್ಕನಿಯಲ್ಲಿದ್ದ ನನ್ನ ಪುಟ್ಟಕೈತೋಟ..! ಒಂದಷ್ಟು ಬೀಜಗಳನ್ನು ಬಿತ್ತಿ ಅದರ ಬೆಳವಣಿಗೆಯನ್ನು ಗಮನಿಸುತ್ತಾ ಇದ್ದೆ. ಪ್ರತೀ ದಿನಕಾಣಿಸುತ್ತಿದ್ದ ಅದರ ಬದಲಾವಣೆ, ಜೀವಂತಿಕೆಯ ಸಂಕೇತವೆನಿಸುತ್ತಿತ್ತು. ಮನೆಯ ಒಳಗಡೆ ಒಂದಷ್ಟು ಗಿಡಗಳನ್ನು ಬೆಳೆಸಿದ್ದೂ ಒಂದು ರೀತಿಯಲ್ಲಿ ಪ್ರಯೋಜನಕ್ಕೆ ಬಂದಿತು.ಕಿಟಕಿ- ಬಾಗಿಲುಗಳನ್ನು ಮುಚ್ಚಲೇಬೇಕಾದ ಅನಿವಾರ್ಯತೆಯಲ್ಲಿ, ಈ ಗಿಡಗಳು ಮನೆಯೊಳಗೆ ಆಮ್ಲಜನಕ ಪೂರೈಸುತ್ತಾ ವಾತಾವರಣವನ್ನು ತಾಜಾ ಆಗಿ ಇಡುವಲ್ಲಿ ಸಹಕಾರಿಯಾದವು. ಮೊಬೈಲು, ಸಾಮಾಜಿಕ ಜಾಲತಾಣಗಳು, ಇತ್ಯಾದಿಗಳೂ ಒಂದು ಮಟ್ಟದಲ್ಲಿ ಸಹಾಯ ಮಾಡಿದವು. ಆದರೆ ಮನುಷ್ಯ ಸಂಘಜೀವಿ. ಬಾಂಧವ್ಯಕ್ಕೆ ಮಿಗಿಲಾದದ್ದು ಯಾವುದೂ ಇಲ್ಲ…! ಏಕತಾನತೆ,ಕಳವಳ, ಆಗೊಮ್ಮೆ ಈಗೊಮ್ಮೆ ಭಯ,ಕಸಿವಿಸಿ ಇಂಥ ತಲ್ಲಣದ ಭಾವಗಳೊಂದಿಗೇ ಹದಿನಾಲ್ಕು ದಿನಗಳುಕಳೆದುಹೋಗಿ… ಅಬ್ಟಾ,ಕಡೆಗೂ ನಾವೆಲ್ಲರೂ ನಿರೀಕ್ಷಿಸುತ್ತಿದ್ದ ಹದಿನೈದನೇ ದಿನವೂ ಬಂದೇಬಿಟ್ಟಿತು…ಕೋಣೆಯೊಳಗಿನ ಸೆರೆವಾಸದಿಂದ ಮುಕ್ತರಾದ  ಯಜಮಾನರ ಮುಖದಲ್ಲಿ ಸಂತಸ..! ಮತ್ತೆ ಸೂರ್ಯನ ಬೆಳಕು ನೋಡುವ ಸಂಭ್ರಮ.. ಪುಳಕ..! ವರ್ಣನಾತೀತ ಅನುಭವವಿದು… ಸ್ವಾತಂತ್ರ್ಯದ ಖುಷಿ ಏನೆಂದು ಈ ಹದಿನಾಲ್ಕು ದಿನಗಳ ಅನುಭವ ಹೇಳಿಕೊಟ್ಟಿತು…

ಕೋವಿಡ್‌ ಬಂದರೆ ಹೆದರುವ ಅವಶ್ಯಕತೆಯಿಲ್ಲ. ಒಂದಷ್ಟು ಎಚ್ಚರಿಕೆ, ಮಾನಸಿಕ ಸಿದ್ಧತೆ ಮಾಡಿಕೊಂಡರೆ ಸಾಕು. ಕೋವಿಡ್ ಕಾರಣಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದವರುಕ್ವಾರಂಟೈನ್‌ ಆಗುವ ಅಗತ್ಯ ಖಂಡಿತ ಇದೆ. ಇವತ್ತು ಕೋವಿಡ್ ಇಷ್ಟೊಂದು ಹರಡಿರುವುದರಲ್ಲಿಕ್ವಾರಂಟೈನನ್ನು ಸರಿಯಾಗಿ ಪಾಲಿಸದೇ ಇದ್ದುದೇ ಕಾರಣವಾಗಿದೆ. ಜೀವ ತುಂಬಾ ತುಂಬಾ ಮುಖ್ಯ. ನಮ್ಮಂತೆಯೇ ಇತರರದೂ ಕೂಡಾ…! ಅದನ್ನು ಮರೆಯಬಾರದು.

 

– ಸುಮನಾ ಮಂಜುನಾಥ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪುಲ್ವಾಮಾ ದಾಳಿಗೆ ನಾವು ಕಾರಣವಲ್ಲ: ಮತ್ತೆ ಉಲ್ಟಾ ಹೊಡೆದ ಪಾಕ್ ಸಚಿವ ಫವಾದ್ ಚೌಧರಿ

ಪುಲ್ವಾಮಾ ದಾಳಿಗೆ ನಾವು ಕಾರಣವಲ್ಲ: ಮತ್ತೆ ಉಲ್ಟಾ ಹೊಡೆದ ಪಾಕ್ ಸಚಿವ ಫವಾದ್ ಚೌಧರಿ

ಉಗ್ರರಿಂದ ಗುಂಡಿನ ದಾಳಿ: ಮೂವರು ಬಿಜೆಪಿ ನಾಯಕರ ಹತ್ಯೆ

ಉಗ್ರರಿಂದ ಗುಂಡಿನ ದಾಳಿ: ಮೂವರು ಬಿಜೆಪಿ ನಾಯಕರ ಹತ್ಯೆ

ಉರುಳಿ ಬಿದ್ದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಐವರು ಸಾವು, ಹಲವರಿಗೆ ಗಾಯ

ಪಲ್ಟಿಯಾದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಆರು ಮಂದಿ ಸಾವು, ಹಲವರಿಗೆ ಗಾಯ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

Interview: There is no goal to profit from the loss of others

ಸಂದರ್ಶನ: ಅನ್ಯರ ನಷ್ಟದಿಂದ ಲಾಭ ಗಳಿಸುವ ಗುರಿಯಿಲ್ಲ

ಸ್ವಂತ ಉನ್ನತಿಯ ಮಹತ್ವಾಕಾಂಕ್ಷೆ ; ಎಲ್ಲರ ಸೌಖ್ಯದ ದರ್ಶನ

ಸ್ವಂತ ಉನ್ನತಿಯ ಮಹತ್ವಾಕಾಂಕ್ಷೆ ; ಎಲ್ಲರ ಸೌಖ್ಯದ ದರ್ಶನ

ಅಮೆರಿಕ ಚುನಾವಣೆ ವೆಚ್ಚ 1.4 ಲ.ಕೋ. ರೂ?

ಅಮೆರಿಕ ಚುನಾವಣೆ ವೆಚ್ಚ 1.4 ಲ.ಕೋ. ರೂ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

avalu-tdy-4

ಕೊರಗುವುದೇ ಬದುಕಾಗಬಾರದು…

ಕಹಿಯೇ ಜೀವನ ಲೆಕ್ಕಾಚಾರ!

ಕಹಿಯೇ ಜೀವನ ಲೆಕ್ಕಾಚಾರ!

avalu-tdy-2

ಕರೆಂಟ್‌ ಇಲ್ಲದಿದ್ದರೆ..

avalu-tdy-1

ಗೃಹಿಣಿಯೇ ಸಾಧಕಿ

avalu-tdy-2

ತೆಳ್ಳಗಾಗೋಕೆ ಸುಲಭದ ದಾರಿ ಯಾವುದು?

MUST WATCH

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

ಹೊಸ ಸೇರ್ಪಡೆ

ಪುಲ್ವಾಮಾ ದಾಳಿಗೆ ನಾವು ಕಾರಣವಲ್ಲ: ಮತ್ತೆ ಉಲ್ಟಾ ಹೊಡೆದ ಪಾಕ್ ಸಚಿವ ಫವಾದ್ ಚೌಧರಿ

ಪುಲ್ವಾಮಾ ದಾಳಿಗೆ ನಾವು ಕಾರಣವಲ್ಲ: ಮತ್ತೆ ಉಲ್ಟಾ ಹೊಡೆದ ಪಾಕ್ ಸಚಿವ ಫವಾದ್ ಚೌಧರಿ

ಉಗ್ರರಿಂದ ಗುಂಡಿನ ದಾಳಿ: ಮೂವರು ಬಿಜೆಪಿ ನಾಯಕರ ಹತ್ಯೆ

ಉಗ್ರರಿಂದ ಗುಂಡಿನ ದಾಳಿ: ಮೂವರು ಬಿಜೆಪಿ ನಾಯಕರ ಹತ್ಯೆ

ಉರುಳಿ ಬಿದ್ದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಐವರು ಸಾವು, ಹಲವರಿಗೆ ಗಾಯ

ಪಲ್ಟಿಯಾದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಆರು ಮಂದಿ ಸಾವು, ಹಲವರಿಗೆ ಗಾಯ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

Interview: There is no goal to profit from the loss of others

ಸಂದರ್ಶನ: ಅನ್ಯರ ನಷ್ಟದಿಂದ ಲಾಭ ಗಳಿಸುವ ಗುರಿಯಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.