Udayavni Special

ಫೇಸ್ ಬುಕ್ ನಕಲಿ ಖಾತೆ ಐದೇ ನಿಮಿಷದಲ್ಲಿ ರಿಮೂವ್ ಮಾಡಿಸಲು ಹೀಗೆ ಮಾಡಿ


Team Udayavani, Jun 7, 2021, 3:45 PM IST

ಫೇಸ್ ಬುಕ್ ನಕಲಿ ಖಾತೆ ಐದೇ ನಿಮಿಷದಲ್ಲಿ ರಿಮೂವ್ ಮಾಡಿಸಲು ಹೀಗೆ ಮಾಡಿ

ಫೇಸ್‍ಬುಕ್‍ ನಲ್ಲಿ ಅನೇಕರು ನನ್ನ ಹೆಸರಿನ ಇನ್ನೊಂದು ಅಕೌಂಟ್‍ ರಚಿಸಲಾಗಿದೆ. ಫ್ರೆಂಡ್‍ ರಿಕ್ವೆಸ್ಟ್ ಬಂದರೆ ಆಕ್ಸೆಪ್ಟ್ ಮಾಡಬೇಡಿ. ನನ್ನ ಹೆಸರಿನಲ್ಲಿ ಮೆಸೆಂಜರ್‍ ಗೆ ಬಂದು ಹಾಯ್‍ ನಾನು ತೊಂದರೆಯಲ್ಲಿದ್ದೇನೆ ಹಣ ಕಳುಹಿಸಿ ಎಂದು ಕೇಳಿದರೆ ಕೊಡಬೇಡಿ ಎಂದು ಮನವಿ ಮಾಡುವುದನ್ನು ನೋಡಿದ್ದೇವೆ.

ಇನ್ನೂ ಕೆಲವರು ನನ್ನ ಅಕೌಂಟನ್ನು ಹ್ಯಾಕ್‍ ಮಾಡಲಾಗಿದೆ ಎಂದು ಹಾಕುತ್ತಾರೆ. ಅದಕ್ಕೆ ಕೆಲವರು ನಿಮ್ಮ ಪಾಸ್ ವರ್ಡ್‍ ಬದಲಿಸಿ ಎಂದು ಹಾಕುತ್ತಾರೆ. ಇದರ ಅಗತ್ಯ ಇಲ್ಲ. ನಿಮ್ಮ ಅಕೌಂಟ್‍ ಹ್ಯಾಕ್‍ ಆಗಿರಲ್ಲ. ನಿಮ್ಮ ಫೇಸ್‍ ಬುಕ್‍ ಅಕೌಂಟ್‍ ಹ್ಯಾಕ್‍ ಆಗೋದು ಎಂದರೆ, ನಿಮ್ಮ ಒರಿಜಿನಲ್‍ ಅಕೌಂಟ್‍ ಗೇ ಕನ್ನ ಹಾಕೋದು. ಆದರೆ ಇಲ್ಲಿ, ನಿಮ್ಮ ಒರಿಜಿನಲ್‍ ಅಕೌಂಟ್‍ ಗೆ ಏನೂ ಆಗಿರಲ್ಲ. ನಿಮ್ಮದೇ ಹೆಸರು, ಇನಿಷಿಯಲ್‍, ಅದೇ ಫೊಟೋ ಹಾಕಿ ಇನ್ನೊಂದು ಅಕೌಂಟ್‍ ರಚಿಸಲಾಗಿರುತ್ತದೆ.

ಈ ನಕಲಿ ಅಕೌಂಟನ್ನು ಕೇವಲ ಐದು ನಿಮಿಷದಲ್ಲಿ ಫೇಸ್‍ಬುಕ್‍ ನಿಂದ ತೆಗೆಸಿಹಾಕಬಹುದು. ಈ ಕೆಳಗೆ ವಿವರಿಸಿದ ಕ್ರಮವನ್ನು ಅನುಸರಿಸಿ, ನಿಮ್ಮ ಅಥವಾ ನಿಮ್ಮ ಗೆಳೆಯರ ನಕಲಿ ಅಕೌಂಟನ್ನು ತಕ್ಷಣ ರಿಮೂವ್‍ ಮಾಡಿಸಬಹುದು.

ಮೊದಲಿಗೆ ನಿಮ್ಮ ಗೆಳೆಯರ ಹೆಸರಿನಲ್ಲಿ ನಿಮಗೆ ಫ್ರೆಂಡ್‍ ರಿಕ್ವೆಸ್ಟ್ ಬರುತ್ತದೆ. ಅದಾಗಲೇ ನೀವು ಅವರಿಗೆ ಫ್ರೆಂಡ್‍ ಆಗಿರುತ್ತೀರಿ. ಆದರೂ ಮತ್ತೊಮ್ಮೆ ಅದೇ ಹೆಸರಿನಲ್ಲಿ ಫ್ರೆಂಡ್‍ ರಿಕ್ವೆಸ್ಟ್ ಬಂದಿದೆಯಲ್ಲ ಎಂದು ಅನುಮಾನಿಸಿ. ಆ ರಿಕ್ವೆಸ್ಟ್ ಸ್ವೀಕರಿಸಬೇಡಿ. ಆ ಅಕೌಂಟ್‍ ನಲ್ಲಿ ರೆಸ್ಪಾಂಡ್‍ ಪಕ್ಕದಲ್ಲಿ ಮೂರು ಚುಕ್ಕಿ ಇರುತ್ತವೆ ಅದನ್ನು ಒತ್ತಿ. ಅಲ್ಲಿ ನಿಮ್ಮ ಗೆಳೆಯರ ಹೆಸರಿನ ಪ್ರೊಫೈಲ್‍ ಸೆಟ್ಟಿಂಗ್ಸ್ ಇರುತ್ತದೆ. ಉದಾಹರಣೆಗೆ ನಟರಾಜ್‍ ಎಂಬ ಹೆಸರಿನ ಪ್ರೊಫೈಲ್‍ ಲಿಂಕ್‍ ಅಂತಿದೆ. ಅದರ ಕೆಳಗೆ ಫೇಸ್‍ಬುಕ್‍ .ಕಾಂ./ರಮೇಶ್‍ ಕುಮಾರ್ ಅಂತಿದೆ. ಅಸಲಿಗಾದರೆ ನಟರಾಜ್‍  ಹೆಸರಿನ ಮುಂದೆ ರಮೇಶ್‍ ಕುಮಾರ್ ಅಂತ ಬರುವುದಿಲ್ಲ. ನಿಮ್ಮ ಗೆಳೆಯರ ಒರಿಜಿನಲ್‍ ಖಾತೆಯಾದರೆ ಫೇಸ್ ಬುಕ್‍ .ಕಾಂ/ನಟರಾಜ್‍ ಅಂತಲೇ ಇರುತ್ತದೆ. ಅದು ನಮ್ಮ ಫೇಸ್ ಬುಕ್‍ ಯುನಿಕ್‍ ಐಡಿ. ಅಲ್ಲಿ ನಕಲಿ ಅಕೌಂಟ್‍ ಮಾಡಿದವನು ಪ್ರದರ್ಶನದ ಹೆಸರನ್ನಷ್ಟೇ ಬದಲಿಸಿದ್ದಾನೆ. ಯುನಿಕ್‍ ಐಡಿ ನಕಲಿ ಖಾತೆ ಸೃಷ್ಟಿಸಿದವನ ಹೆಸರಿನಲ್ಲಿರುತ್ತದೆ. ಅಥವಾ ಯಾವ್ಯಾವದೋ ಅಂಕಿಗಳನ್ನು ಒತ್ತಿರುತ್ತಾನೆ. ಅದನ್ನು ಗಮನಿಸಿಕೊಳ್ಳಿ. ಅಲ್ಲಿಗೆ ಅದು ನಕಲಿ ಅಕೌಂಟ್‍ ಎಂಬುದು ಖಚಿತ.

ಇದನ್ನೂ ಓದಿ:ಟೆಲಿಗ್ರಾಂ ವಾಟ್ಸ್ಯಾಪ್ ಗಿಂತ ಹೇಗೆ ಭಿನ್ನ.? ಟೆಲಿಗ್ರಾಂ ಬಗ್ಗೆ ನಿಮಗೆಷ್ಟು ಗೊತ್ತು..?

ಮುಂದಿನ ಹಂತ ಅದೇ ಪುಟದಲ್ಲಿ ಮೇಲೆ ಫೈಂಡ್‍ ಸಪೋರ್ಟ್ ಆರ್‍ ರಿಪೋರ್ಟ್ ಪ್ರೊಫೈಲ್‍ ಅಂತಿದೆ. ಅದನ್ನು ಒತ್ತಿ. ಆಗ ಮುಂದಿನ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಮೊದಲನೆಯ ಆಯ್ಕೆ Pretending to Be Someone ಅಂತಿರುತ್ತದೆ. ಅದನ್ನು ಒತ್ತಿ. ಮುಂದಿನ ಪುಟದಲ್ಲಿ Me, A Friend, Celebrity ಅಂತ ಬರುತ್ತದೆ.  ಆ ನಕಲಿ ಅಕೌಂಟ್‍ ನಿಮ್ಮದೇ ಆಗಿದ್ದರೆ, Me ಒತ್ತಿ, ನಂತರ Next ಒತ್ತಿ Submit/Done ಕೊಡಿ.

ಆ ಅಕೌಂಟ್‍ ನಿಮ್ಮ ಗೆಳೆಯರಾದರೆ A Friend ಒತ್ತಿ. ಆಗ ಮುಂದೆ, Which Friend  ಎಂದು ಕೇಳುತ್ತದೆ.  ಅದರ ಕೆಳಗೆ ಸರ್ಚ್ ಬಾರ್‍ ನಲ್ಲಿ ನಿಮ್ಮ ಗೆಳೆಯರ ಅಕೌಂಟಿನ ಸರಿಯಾದ ಹೆಸರನ್ನು ಒತ್ತಿ ಆಗ ನಿಮ್ಮ ಗೆಳೆಯರ ಅಕೌಂಟ್‍ ಹೆಸರು ಬರುತ್ತದೆ.  ಆ ಹೆಸರಿನ ಮೇಲೆ ಒತ್ತಿ. ಆಗ Does this go against our Community Standards? ಅಂತ ಬರುತ್ತದೆ. ಅದರ ಕೆಳಗೆ Submit ಅಂತ ನೀಲಿ ಬಣ್ಣದಲ್ಲಿ ಇರುತ್ತದೆ. ಅದರ ಮೇಲೆ Receive notifications about this report ಅಂತಿರುತ್ತದೆ. ಅದನ್ನು ಟಿಕ್‍ ಮಾಡಿ ಸಬ್‍ಮಿಟ್‍ ಕೊಡಿ. ಇಷ್ಟು ಮಾಡಿದರೆ Thank you, we have received your report ಬರುತ್ತದೆ. ಇಷ್ಟು ಮಾಡಿದರೆ ಸಾಕು. ನಂತರ ಐದೇ ನಿಮಿಷದಲ್ಲಿ ಆ ನಕಲಿ ಅಕೌಂಟ್‍ ಡಿಲೀಟ್‍ ಆಗುತ್ತದೆ. ನಿಮ್ಮ ಮೇಲ್‍ ಗೆ ಮೆಸೇಜ್‍ ಸಹ ಬರುತ್ತದೆ. ಮತ್ತೆ ನಿಮ್ಮ ಗೆಳೆಯನ ಹೆಸರು ಹಾಕಿ ಹುಡುಕಿದರೆ, ನಕಲಿ ಖಾತೆ ಡಿಲೀಟ್‍ ಆಗಿ, This Page isn’t available Right Now ಎಂಬುದು ಬರುತ್ತದೆ.

-ಕೆ.ಎಸ್. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

cpy

ಮುಂದಿನ ವಾರದಿಂದ ಪ್ರವಾಸೋದ್ಯಮಕ್ಕೆ ಅವಕಾಶ: ಸಚಿವ ಯೋಗೇಶ್ವರ್

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

ಗೋವಾಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಕೋವಿಡ್ ಲಸಿಕೆ, RT PCR ನೆಗೆಟಿವ್ ವರದಿ ಕಡ್ಡಾಯ

023

ಅಂದು ‘ನೋ’ ಎಂದವಳು ಇಂದು ‘ಎಸ್’ ಅಂತಾಳಾ?  ಶಾರುಖ್ ಸಿನಿಮಾದಲ್ಲಿ ‘ಸೂಪರ್’ ಬೆಡಗಿ ?

ramesh-jarkiholi

ಮನನೊಂದು ರಾಜೀನಾಮೆ ನಿರ್ಧಾರ ಮಾಡಿದ್ದು ಹೌದು, ಆದರೆ..:ಸುತ್ತೂರು ಮಠದಲ್ಲಿ ರಮೇಶ್ ಜಾರಕಿಹೊಳಿ

rekha-kadiresh

ರೇಖಾ ಕದಿರೇಶ್ ಕೊಲೆ ಪ್ರಕರಣ: ಸಂಬಂಧಿಗಳಿಂದಲೇ ಕೊಲೆ! ಫೈರಿಂಗ್ ಮಾಡಿ ಇಬ್ಬರ ಬಂಧನ

ನಾರದ ಕೇಸ್ ಅಫಿಡವಿತ್: ಸುಪ್ರೀಂಕೋರ್ಟ್ ನಲ್ಲಿ ಮಮತಾ ಬ್ಯಾನರ್ಜಿಗೆ ರಿಲೀಫ್

ನಾರದ ಕೇಸ್ ಅಫಿಡವಿತ್: ಸುಪ್ರೀಂಕೋರ್ಟ್ ನಲ್ಲಿ ಮಮತಾ ಬ್ಯಾನರ್ಜಿಗೆ ರಿಲೀಫ್

dfghjkjhg

ಖುರ್ಚಿ ಉಳಿಸಿಕೊಳ್ಳಲು ಅಂದು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದ್ರು : ಸಿಎಂಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೇಗಿದೆ ಸ್ಯಾಮ್‍ ಸಂಗ್‍ ಎಂ 42 ಎಂ ಸರಣಿಯ ಮೊದಲ 5ಜಿ ಫೋನ್‍?

ಸ್ಯಾಮ್‍ ಸಂಗ್‍ ಎಂ 42: ಹೇಗಿದೆ ಎಂ ಸರಣಿಯ ಮೊದಲ 5ಜಿ ಫೋನ್‍?

reliance-announces-jiophone-next-smartphone-in-partnership-with-google-available-from-september-10

ಸಪ್ಟೆಂಬರ್ ನಲ್ಲಿ ಜಿಯೋಫೋನ್ ನೆಕ್ಸ್ಟ್ ಮಾರುಕಟ್ಟೆಗೆ ಲಗ್ಗೆ..!?

Available in China from from 16 August, the snappily named Xiaomi Mi TV LUX OLED Transparent Edition

ಟಿವಿ ಇತಿಹಾಸದ ಹೊಸ ಅಧ್ಯಾಯ “ಟ್ರಾನ್ಸ್‌ ಪರೆಂಟ್ ಟಿವಿ”

64657

ವರ್ಕ್ ಫ್ರಂ ಹೋಮ್ ಮಾಡುವವರಿಗೆ ಈ ವಸ್ತುಗಳು ಸಹಕಾರಿ

ಮೇಡ್ ಇನ್ ಇಂಡಿಯಾ ನಿಸ್ಸಾನ್ ಎಸ್ ಯುವಿ ಮ್ಯಾಗ್ನೈಟ್ ಭಾರತದಿಂದ ಮೂರು ದೇಶಕ್ಕೆ ರಫ್ತು

ಮೇಡ್ ಇನ್ ಇಂಡಿಯಾ ನಿಸ್ಸಾನ್ ಎಸ್ ಯುವಿ ಮ್ಯಾಗ್ನೈಟ್ ಭಾರತದಿಂದ ಮೂರು ದೇಶಕ್ಕೆ ರಫ್ತು

MUST WATCH

udayavani youtube

4G ಜಮಾನದಲ್ಲೂ ನೆಟ್ವರ್ಕ್ ಇಲ್ಲದೇ ಮಡಾಮಕ್ಕಿ ಮಕ್ಕಳ ಪರದಾಟ!

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

ಹೊಸ ಸೇರ್ಪಡೆ

23-kalaghatagi 4

ಮುತ್ತಳ್ಳಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಚಿರತೆ

ertytrertyuhygtfdsa

ವಶಪಡಿಸಿಕೊಂಡಿದ್ದ ಡ್ರಗ್ಸ್ ನಾಶ ಮಾಡಲು ಕ್ರಮ ಕೈಗೊಳ್ಳಲಾಗಿದೆ : ಬೊಮ್ಮಾಯಿ

05

ಮತದಾರರ ಕರಡು ಪಟ್ಟಿ ಬಿಡುಗಡೆಗೆ ಸಿದ್ಧತೆ

06

ಲಾಡ್‌-ಛಬ್ಬಿ ಮುಸುಕಿನ ಗುದ್ದಾಟ?

cpy

ಮುಂದಿನ ವಾರದಿಂದ ಪ್ರವಾಸೋದ್ಯಮಕ್ಕೆ ಅವಕಾಶ: ಸಚಿವ ಯೋಗೇಶ್ವರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.