ನಿಮ್ಮ ಫೋನ್‌ ಅಪ್‌ಡೇಟ್‌ ಆಗಿದ್ಯಾ?


Team Udayavani, Jan 4, 2021, 7:39 PM IST

ನಿಮ್ಮ ಫೋನ್‌ ಅಪ್‌ಡೇಟ್‌ ಆಗಿದ್ಯಾ?

ನಮ್ಮಲ್ಲಿ ಹಲವರು ಒಂದು ಮೊಬೈಲ್‌ ಫೋನ್‌ ಕೊಳ್ಳಬೇಕಾದಾಗ ಇದರಲ್ಲಿ ಒಳ್ಳೆಯ ಕ್ಯಾಮೆರಾ ಇದೆಯೇ? ಇಂಟರ್ನಲ್‌ ಮೆಮೊರಿ ಎಷ್ಟಿದೆ? ರ್ಯಾಮ್‌ ಎಷ್ಟಿದೆ? ಎಂದೆಲ್ಲ ವಿಚಾರಿಸಿ ತಮ್ಮ ಯಥಾಶಕ್ತಿಗಿಂತ ಹೆಚ್ಚು ದರ ನೀಡಿ ಒಂದು ಮೊಬೈಲ್‌ ಕೊಳ್ಳುತ್ತಾರೆ. ಕೊಂಡ ಬಳಿಕ ಅದಕ್ಕೆ ಟೆಂಪರ್ಡ್‌ ಗ್ಲಾಸು, ಫ್ಲಿಪ್‌ ಕವರ್‌ ಅಥವಾ ಬ್ಯಾಕ್‌ ಕವರ್‌ ಹಾಕಿ ಬಹಳ ಹುಷಾರಾಗಿ ನೋಡಿಕೊಳ್ಳುತ್ತಾರೆ. ಎರಡು ವರ್ಷವಾದರೂ ಕವರ್‌ ಕೊಳೆಯಾ  ದರೂ, ಕವರ್‌ನಿಂದ ಆಚೆ ತೆಗೆದ ಮೊಬೈಲ್‌ ಹಳತಾಗಿರುವುದಿಲ್ಲ. ಆದರೆ ಮೊಬೈಲ್‌ನೊಳಗೆ ಆ್ಯಪ್‌ಗಳನ್ನು ತೆರೆಯಲು ಹೋದರೆ, ಸರಿಯಾಗಿ ಓಪನ್‌ ಆಗುವುದಿಲ್ಲ, ಹಣ ಪಾವತಿ ಗೂಗಲ್‌ ಪೇ, ಫೋನ್‌ ಪೇಗಳು ಸರಿಯಾಗಿ ಕೆಲಸ ಮಾಡುವುದಿಲ್ಲ, ಜಿಮೇಲ್‌ ತೆರೆಯಲು ಕಷ್ಟವಾಗುತ್ತದೆ.

ಗೂಗಲ್‌ ಸ್ಟೋರ್‌ಗೆ ಹೋಗಿ ನೋಡಿದರೆ ಆ ಮೊಬೈಲ್‌ನಲ್ಲಿರುವ ಆ್ಯಪ್‌ಗ್ಳು ಅಪ್‌ಡೇಟೇ ಆಗಿರುವುದಿಲ್ಲ! ಒಂದು ವರ್ಷ ಅಥವಾ 6 ತಿಂಗಳ ಹಿಂದೆ ಇದ್ದ ವರ್ಷನ್‌ ಇರುತ್ತದೆ! ಹೀಗಾದಾಗನಿಮ್ಮ ಮೊಬೈಲ್‌ನಲ್ಲಿರುವ ಅಪ್ಲಿಕೇಷನ್‌ಗಳು ಸರಿಯಾಗಿ ಕೆಲಸ ಮಾಡುವುದಿಲ್ಲ. ಆದ್ದರಿಂದ ನಿಮ್ಮಮೊಬೈಲ್‌ನಲ್ಲಿರುವ ಎಲ್ಲ ಆ್ಯಪ್‌ಗ್ಳನ್ನು ಅಪ್‌ ಡೇಟ್‌ ಮಾಡಿ

ಏನು ಮಾಡಬೇಕು? :

ಎಲ್ಲ ಆ್ಯಪ್‌ಗ್ಳನ್ನು ಒಂದೇ ಬಾರಿ ಅಪ್‌ಡೇಟ್‌ ಮಾಡಲು ಹೆಚ್ಚೇನೂ ಕಷ್ಟ ಪಡಬೇಕಾಗಿಲ್ಲ. ನಿಮ್ಮಆಂಡ್ರಾಯ್ಡ್ ಮೊಬೈಲ್‌ನಲ್ಲಿ ಗೂಗಲ್‌ ಪ್ಲೇ ಸ್ಟೋರ್‌ತೆರೆಯಿರಿ. ಎಡಮೂಲೆಯಲ್ಲಿ ಸಣ್ಣದಾಗಿ ವಿಭೂತಿ ಪಟ್ಟೆಯಂಥ ಮೂರು ಗೆರೆಗಳಿವೆ. ಅದನ್ನು ಒತ್ತಿದಾಗ ಮೈ ಆ್ಯಪ್ಸ್‌ ಅಂಡ್‌ ಗೇಮ್ಸ್ ಎಂಬುದು ಮೊದಲ ಸಾಲಿನಲ್ಲೇ ಕಾಣುತ್ತದೆ. ಅದನ್ನು ಒತ್ತಿ,ಮೇಲೆಯೇ ಅಪ್‌ಡೇಟ್ಸ್ ಪೆಂಡಿಂಗ್‌ ಎಂದುತೋರಿಸುತ್ತದೆ. ಪಕ್ಕದಲ್ಲಿ ಅಪ್‌ಡೇಟ್‌ ಆಲ್‌ ಎಂದಿರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ. ನಿಮ್ಮಮೊಬೈಲ್‌ನಲ್ಲಿ ಇರುವ ಎಲ್ಲ ಆ್ಯಪ್‌ಗ್ಳನ್ನೂ ಅದು ಅಪ್‌ಡೇಟ್‌ ಮಾಡಲಾರಂಭಿಸುತ್ತದೆ. ಅನೇಕ ಆ್ಯಪ್‌ಗಳನ್ನು ಅಪ್‌ಡೇಟ್‌ ಮಾಡಬೇಕಿರುವುದರಿಂದ ಇದು ಪೂರ್ತಿಯಾಗಲು 20 ರಿಂದ 30 ನಿಮಿಷ ಹಿಡಿಯಬಹುದು. ಅಪ್‌ಡೇಟ್‌ಗಳು ಪೂರ್ತಿಯಾಗುವವರೆಗೆ ನಿಮ್ಮ ಮೊಬೈಲ್‌ ಒಂದೆಡೆ ಇಡಿ. ನಿಮ್ಮ ಮೊಬೈಲ್‌ ನೆಟ್‌ವರ್ಕ್‌ ಚೆನ್ನಾಗಿರುವ ಜಾಗದಲ್ಲಿ ಇಟ್ಟು ಅಪ್‌ಡೇಟ್‌ಗಳನ್ನು ಕೊಡಿ. ನೆಟ್ವರ್ಕ್‌ ವೇಗವಾಗಿದ್ದಾಗ ಬೇಗ ಅಪ್ಡೇಟ್‌ ಆಗುತ್ತದೆ.

ಅನೇಕ ಆ್ಯಪ್‌ಗಳು ಅಪ್‌ಡೇಟ್‌ ಆಗಬೇಕಿದ್ದರೆ ಒಮ್ಮೊಮ್ಮೆ 500 ಎಂಬಿ ಡಾಟಾ ಬೇಕಾಗಬಹುದು. ಆದ್ದರಿಂದ ಪ್ರಿಪೇಡ್‌ ಬಳಕೆದಾರರು ಅಂದಿನ ನಿಮ್ಮ ಡಾಟಾ ಬ್ಯಾಲನ್ಸ್ ನೋಡಿಕೊಂಡು ಅಪ್‌ಡೇಟ್‌ ಕೊಡಿ. ಅಪ್‌ಡೇಟ್‌ ಆದ ನಂತರ ನಿಮಗೆ ಮತ್ತೆ ಅಂದಿನ ಅಗತ್ಯ ಕೆಲಸಕ್ಕೆ ಡಾಟಾಬೇಕಾಗಬಹುದು! ಆದ್ದರಿಂದ ಪ್ರಿಪೇಡ್‌ಬಳಕೆದಾರರು ರಾತ್ರಿ ಅಪ್‌ಡೇಟ್‌ಮಾಡಿಕೊಳ್ಳುವುದು ಒಳಿತು. ಈ ಅಪ್‌ಡೇಟ್‌ಗಳಲ್ಲಿ ನೀವು ಇನ್‌ಸ್ಟಾಲ್‌ ಮಾಡಿಕೊಂಡ ಆ್ಯಪ್‌ಗಳಲ್ಲದೇ, ಫೋನಿನಲ್ಲೇ ಅಂತರ್ಗತವಾಗಿರುವ ಅನೇಕ ಆ್ಯಪ್‌ಗಳೂ ಅಪ್‌ಡೇಟ್‌ ಆಗಿ ನಿಮ್ಮ ಫೋನ್‌ ಸರಾಗವಾಗಿ ಕೆಲಸ ಮಾಡುತ್ತದೆ.

ಮೊಬೈಲ್‌ ಫೋನ್‌ ಅಪ್‌ಡೇಟ್‌ ಕೊಡಿ :

ಆ್ಯಪ್‌ಗ್ಳನ್ನೆಲ್ಲ ಅಪ್‌ಡೇಟ್‌ ಕೊಡುವುದು ಒಂದು ಅಗತ್ಯ ಕೆಲಸವಾದರೆ, ಮೊಬೈಲ್‌ ಫೋನ್‌ ಕಂಪನಿ ಬಿಡುಗಡೆ ಮಾಡುವ ಅಪ್‌ಡೇಟ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವುದು ಸಹ ಇನ್ನೊಂದುಮುಖ್ಯ ಕೆಲಸ. ಒಂದು ಕಂಪನಿ ತನ್ನ ಒಂದು ಹೊಸಮೊಬೈಲ್‌ ಬಿಡುಗಡೆ ಮಾಡಿದ ಬಳಿಕ ಕನಿಷ್ಠ 2 ವರ್ಷಗಳ ಕಾಲ, ಅದಕ್ಕೆ ಹೊಸ ಅಪ್‌ಡೇಟ್‌ಗಳನ್ನುನೀಡುತ್ತದೆ. ಕೆಲವೊಂದು ಕಂಪೆನಿಗಳು ಪ್ರತಿತಿಂಗಳು ಸೆಕ್ಯುರಿಟಿ ಪ್ಯಾಚ್‌ಗಳನ್ನು ಅಪ್‌ಡೇಟ್‌ಮಾಡುತ್ತವೆ. ಆ ಮೊಬೈಲ್‌ನಲ್ಲಿರುವ ದೋಷಗಳನ್ನುಪತ್ತೆ ಹಚ್ಚಿ ಹೊಸ ಅಪ್‌ಡೇಟ್‌ಗಳಲ್ಲಿ ಅದನ್ನು ನಿವಾರಿಸಿರುತ್ತವೆ.

ನಿಮ್ಮ ಮೊಬೈಲ್‌ನಲ್ಲಿ ಸೆಟಿಂಗ್ಸ್ ಗೆ ಹೋಗಿ, ಎಬೌಟ್‌ ಫೋನ್‌ ಒತ್ತಿ, ಅದರಲ್ಲಿ ಸಿಸ್ಟಂ ಅಪ್‌ ಡೇಟ್ಸ್‌ ಅಂತಿರುತ್ತದೆ. ಅದನ್ನು ಒತ್ತಿ, ಚೆಕಿಂಗ್‌ ಫಾರ್‌ ಅಪ್‌ಡೇಟ್ಸ್‌ ಎಂದು ರನ್‌ ಆಗಿ ಹೊಸ ಅಪ್‌ಡೇಟ್‌ಇದೆ ಎಂದು ತೋರಿಸುತ್ತದೆ. ಅದು ಇಷ್ಟು ಜಿಬಿಅಥವಾ ಎಂಬಿ ಇದೆ. ಇದರಲ್ಲಿ ಇಂತಿಂಥದೋಷಗಳನ್ನು ಸರಿಪಡಿಸಲಾಗಿದೆ ಎಂಬ ಅಪ್‌ಡೇಟ್‌ ಲಾಗ್‌ ಇರುತ್ತದೆ. ಅದನ್ನು ನೋಡಿ ಅಪ್‌ಡೇಟ್‌ ಎಂಬುದರ ಮೇಲೆ ಒತ್ತಿದರೆ ಹೊಸ ಅಪ್‌ಡೇಟ್‌ ಡೌನ್‌ಲೋಡ್‌ ಆಗುತ್ತದೆ. ಡೌನ್‌ಲೋಡ್‌ಆದ ಬಳಿಕ ಇನ್‌ಸ್ಟಾಲ್‌ ಕೇಳುತ್ತದೆ. ಅದಕ್ಕೆ ಓಕೆಕೊಡಿ. ಮತ್ತೆ ಫೋನನ್ನು ರೀಸ್ಟಾರ್ಟ್‌ ಮಾಡಲುಕೇಳುತ್ತದೆ. ಓಕೆ ಕೊಟ್ಟ ನಂತರ ಫೋನ್‌ ರೀಸ್ಟಾರ್ಟ್‌ಆಗುತ್ತದೆ. ಈ ಎಲ್ಲ ಪ್ರಕ್ರಿಯೆಗೆ ಅರ್ಧ ಗಂಟೆಗೂಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಒಮ್ಮೊಮ್ಮೆ ಹೊಸ ಅಪ್‌ಡೇಟ್‌ 1 ಜಿಬಿಯಿಂದ 2 ಜಿಬಿ ಸಹಇರುತ್ತದೆ. ಅದು ಡೌನ್‌ಲೋಡ್‌ ಆಗಲು ಒಂದು ಗಂಟೆಯೂ ಆಗಬಹುದು. ಈ ಅಪ್‌ಡೇಟ್‌ಗಳನ್ನಮಾಡಿಕೊಂಡಾಗ ನಿಮ್ಮ ಮೊಬೈಲ್‌ ಇಂಟರ್‌ಫೇಸ್‌ನ ವಿನ್ಯಾಸವೂ ಬದಲಾಗುತ್ತದೆ. ಮೊಬೈಲ್‌ ಸಾಫ್ಟ್ ವೇರ್‌ನಲ್ಲಿರುವ ಸಣ್ಣಪುಟ್ಟ ತೊಂದರೆಗಳೂ ನಿವಾರಣೆಯಾಗುತ್ತವೆ.

ಕನಿಷ್ಠ 2 ಜಿಬಿ ಬೇಕಾಗುತ್ತೆ! :  ಸಣ್ಣ ಅಪ್‌ಡೇಟ್‌ಗಳಲ್ಲದೇ, ಆಂಡ್ರಾಯ್ಡ್ ಆವೃತ್ತಿಗಳೂ ಸಹ ಅಪ್‌ಡೇಟ್‌ನಲ್ಲಿ ಬರುತ್ತವೆ. ಈಗ ಆಂಡ್ರಾಯ್ಡ್ 10 ಬಹುತೇಕರಲ್ಲಿ ಇದೆ. ನೀವು ಮೊಬೈಲ್‌ ಕೊಂಡು ಐದಾರು ತಿಂಗಳಾಗಿದ್ದರೆ, ಎರಡು ಮೂರು ತಿಂಗಳಲ್ಲಿ ನಿಮ್ಮ ಮೊಬೈಲ್‌ ಗೆ ಆಂಡ್ರಾಯ್ಡ್ 11 ಅಪ್‌ಡೇಟ್‌ ಬರಲೂಬಹುದು. ಈ ಅಪ್‌ಡೇಟ್‌ಗಳಿಗೆ ಕನಿಷ್ಠ 2 ಜಿಬಿ ಡಾಟಾ ಬೇಕಾಗುತ್ತದೆ.

 

– ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲು

ಪ್ರವಾದಿ ಮೊಹಮ್ಮದ್‌ ಬಗ್ಗೆ ನಿಂದನೆ : ಪಾಕ್‌ ಮಹಿಳೆಗೆ ಗಲ್ಲುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕ್ಸಿಯೋಮಿ 11ಐ ಹೈಪರ್‌ ಚಾರ್ಜ್‌ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ

ಕ್ಸಿಯೋಮಿ 11ಐ ಹೈಪರ್‌ ಚಾರ್ಜ್‌ 5ಜಿ ಸ್ಮಾರ್ಟ್‌ಫೋನ್‌ ಬಿಡುಗಡೆ

ರಿಯಲ್‌ಮಿ 9ಐ ಬಿಡುಗಡೆ : ಎರಡು ಬಣ್ಣಗಳಲ್ಲಿ ಲಭ್ಯ, ಜ.25ರಿಂದ ಮಾರುಕಟ್ಟೆಗೆ

ರಿಯಲ್‌ಮಿ 9ಐ ಬಿಡುಗಡೆ : ಎರಡು ಬಣ್ಣಗಳಲ್ಲಿ ಲಭ್ಯ, ಜ.25ರಿಂದ ಮಾರುಕಟ್ಟೆಗೆ

Surface Pro X Wi-Fi SQ1/8/128 Platinum

ಮೈಕ್ರೋಸಾಫ್ಟ್ ನಿಂದ ಸರ್ಫೇಸ್‍ ಪ್ರೊ ಎಕ್ಸ್ ಲ್ಯಾಪ್ ಟಾಪ್ ಬಿಡುಗಡೆ

ಟಾಟಾ ಸಫಾರಿ ಎಸ್‌ಯುವಿಯ ಡಾರ್ಕ್‌ ಎಡಿಶನ್‌ ಜ.17ರಂದು ಬಿಡುಗಡೆ

ಟಾಟಾ ಸಫಾರಿ ಎಸ್‌ಯುವಿಯ ಡಾರ್ಕ್‌ ಎಡಿಶನ್‌ ಜ.17ರಂದು ಬಿಡುಗಡೆ

ಭಾರತದ ಪ್ರಸಿದ್ಧ ಮೋಟಾರು ವಾಹನ ಸಂಸ್ಥೆಯಾದ ಮಾರುತಿ ಕಾರುಗಳ ಬೆಲೆ ಶೇ.4.3 ಏರಿಕೆ

ಭಾರತದ ಪ್ರಸಿದ್ಧ ಮೋಟಾರು ವಾಹನ ಸಂಸ್ಥೆಯಾದ ಮಾರುತಿ ಕಾರುಗಳ ಬೆಲೆ ಶೇ.4.3 ಏರಿಕೆ

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ಬೇಗ ಬಂದ್ ಆದ ಹೊಟೇಲು: ಊಟ ಸಿಕ್ಕಿಲ್ಲವೆಂದು ರೈತರಿಂದ ರಾತ್ರೋರಾತ್ರಿ ಪ್ರತಿಭಟನೆ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ದೆಹಲಿ ಗಲಭೆ ಅಪರಾಧಿಗೆ 5 ವರ್ಷ ಜೈಲು: ಪ್ರಕರಣದಲ್ಲಿ ಮೊದಲ ಶಿಕ್ಷೆ ಪ್ರಕಟ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಧಾರ್ಮಿಕ ಮುಖಂಡ ಕಾಳಿಚರಣ್‌ ಬಂಧನ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಬಾಲಕನ ಮಾತಿಗೆ ಫಿದಾ ಆದ ಮಹಿಂದ್ರಾ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

ಇಂಡೋನೇಷ್ಯಾಕ್ಕೆ ಹೊಸ ರಾಜಧಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.