ಗೂಗಲ್ ಪ್ಲೇಸ್ಟೋರ್ ನಿಂದ ಕಣ್ಮರೆಯಾದ ‘ದೇಸಿ ಟಿಕ್ ಟಾಕ್’ ಮಿತ್ರೊನ್ ಆ್ಯಪ್: ಕಾರಣವೇನು ?

Team Udayavani, Jun 3, 2020, 9:05 AM IST

mitron

ನವದೆಹಲಿ: ಟಿಕ್ ಟಾಕ್ ಗೆ ಪರ್ಯಾಯವಾಗಿ ಭಾರತದಲ್ಲಿ ಸದ್ದು ಮಾಡಿದ ಮಿತ್ರೊನ್ ಆ್ಯಪ್ ಅಧಿಕೃತವಾಗಿ ಗೂಗಲ್ ಪ್ಲೇಸ್ಟೋರ್ ನಿಂದ ಕಣ್ಮರೆಯಾಗಿದೆ.  ಚೀನಾ ಆ್ಯಪ್ ಗಳ ಮೇಲಿನ ಅಭಿಯಾನದಿಂದಾಗಿ,  ದೇಸಿ ಅಪ್ಲಿಕೇಶನ್ ಎಂದೇ  ಗುರುತಿಸಿಕೊಂಡಿದ್ದ  ಮಿತ್ರೊನ್  ಕೆಲವೇ ದಿನಗಳಲ್ಲಿ  50 ಲಕ್ಷ ಡೌನ್ ಲೋಡ್ ಆಗಿದ್ದು ಮಾತ್ರವಲ್ಲದೆ ಉತ್ತಮ ರೇಟಿಂಗ್ ಪಡೆದುಕೊಂಡಿತ್ತು.

ಇದೀಗ ಗೂಗಲ್ ತನ್ನ ಪ್ಲೇಸ್ಟೊರ್ ನಿಂದ ಅಧಿಕೃತವಾಗಿ ಮಿತ್ರೊನ್ ಆ್ಯಪ್ ಅನ್ನು ತೆಗೆದುಹಾಕಿದೆ. ಈ ಬಗ್ಗೆ ಗೂಗಲ್ ಆಗಲಿ, ಅಥವಾ ಮಿತ್ರೊನ್ ಸಂಸ್ಥೆಯಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಸದ್ಯ ಗೂಗಲ್ ಪ್ಲೇಸ್ಟೋರ್ ನಲ್ಲಿ 25ಕ್ಕಿಂತ ಹೆಚ್ಚು ನಕಲಿ ಮಿತ್ರೊನ್ ಆ್ಯಪ್ ಗಳಿದ್ದು ಸ್ಮಾರ್ಟ್ ಫೋನ್ ಬಳಕೆದಾರರು ಜಾಗೃತೆ ವಹಿಸುವುದು ಅತ್ಯಗತ್ಯ. ಮಾತ್ರವಲ್ಲದೆ ಈಗಾಗಲೇ ಡೌನ್ ಲೋಡ್ ಮಾಡಿದ್ದರೆ ಅಧಿಕೃತ ಮಾನ್ಯತೆ ದೊರಕುವವರೆಗೂ ಅನ್ ಇನ್ ಸ್ಟಾಲ್ ಮಾಡುವುದು ಒಳಿತು ಎಂದು ಮಾಧ್ಯಮದ ವರದಿ ತಿಳಿಸಿದೆ.

ಐಐಟಿ ರೂರ್ಕಿಯ ವಿದ್ಯಾರ್ಥಿ ಶಿಬಾಂಕ್ ಅಗರ್ ವಾಲ್ ಈ ಮಿತ್ರೊನ್ ಆ್ಯಪ್ ನ ಸ್ಥಾಪಕ. ಗಮನಾರ್ಹ ಸಂಗತಿಯೆಂದರೇ ಮಿತ್ರೋನ್ ಆ್ಯಪ್‌ಗೆ ಪಾಕಿಸ್ತಾನ ಮೂಲದ ಡೆವಲಪರ್‌ ರಚಿಸಿದ್ದ ಕೋಡಿಂಗ್ ಬಳಸಲಾಗಿತ್ತು. ಪಾಕಿಸ್ತಾನದಲ್ಲಿ ರಚಿಸಿದ್ದ ಟಿಕ್‌ ಟಿಕ್‌ ಎನ್ನುವ ಆ್ಯಪ್ ಕೋಡಿಂಗ್ ಅನ್ನು ಖರೀದಿಸಿದ್ದ ಮಿತ್ರೊನ್ ಡೆವಲಪರ್ಸ್, ಅದರ ಯಥಾವತ್ ಕಾಪಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, 2571 ರೂ. ತೆತ್ತರೆ ಯಾರು ಬೇಕಾದರೂ ಕೋಡ್‌ ಕ್ಯಾನನ್‌ನಲ್ಲಿ ಪಾಕ್ ಮೂಲದ ಟಿಕ್‌ ಟಿಕ್ ಆ್ಯಪ್‌ನಲ್ಲಿ ಬಳಸಿರುವ ಸೋರ್ಸ್ ಕೋಡ್ ಖರೀದಿಗೆ ಅವಕಾಶವಿತ್ತು.

ವರದಿಯ ಪ್ರಕಾರ ಸ್ಪ್ಯಾಮ್ ಮತ್ತು ಭದ್ರತಾ ಮಾರ್ಗ ಸೂಚಿಗಳನ್ನು ಸ್ಪಷ್ವವಾಗಿ ಉಲ್ಲಂಘಿಸಿದಕ್ಕಾಗಿ ಪ್ಲೇಸ್ಟೋರ್ ನಿಂದ ರಿಮೂವ್ ಮಾಡಲಾಗಿದೆ ಎಂದು ತಿಳಿದುಬಂದಿದೆ.  ಗೂಗಲ್ ಪಾಲಿಸಿ ಪ್ರಕಾರ, ಇತರ ಆ್ಯಪ್ ಗಳ ಕೋಡ್ ಅನ್ನು ಯಾವುದೇ ಬದಲಾವಣೆಗಳಿಲ್ಲದೆ ಕಾಪಿ ಮಾಡುವುದು ಅಪರಾಧವಾಗಿದ್ದು, ಈಗಾಗಲೇ ಅಂತಹ ಹಲವಾರು ಆ್ಯಪ್ ಗಳನ್ನು  ಪ್ಲೇಸ್ಟೋರ್ ನಿಂದ ತೆಗೆದುಹಾಕಲಾಗಿದೆ ಎನ್ನಲಾಗಿದೆ.

ಟಾಪ್ ನ್ಯೂಸ್

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewe

Nothing ಫೋನ್ (2ಎ), ನಥಿಂಗ್ಸ್ ಬಡ್ಸ್ ಮತ್ತು ನೆಕ್‌ಬ್ಯಾಂಡ್ ಪ್ರೋ ಬಿಡುಗಡೆ

1-wqeqwe

Flipkart ನಿಂದ ಯುಪಿಐ ಹ್ಯಾಂಡಲ್ ಆರಂಭ

1-weqweqweqwe

Boult Z40 Ultra TWS ಬಿಡುಗಡೆ: ಅತ್ಯುತ್ತಮ ಗುಣಮಟ್ಟದ ಸೌಂಡ್

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

1 ಮಿಲಿಯನ್ ಮಾರಾಟ ಕಂಡ ಭಾರತೀಯ ಬ್ರಾಂಡ್ ಇಯರ್ ಬಡ್ ಯಾವುದಿದು?

18

ಅಧಿಕ ಹೃದಯ ಬಡಿತದ ಸೂಚನೆ ನೀಡಿದ ಆಪಲ್ ವಾಚ್: ಅಪಾಯದಿಂದ ಪಾರಾದ ಬೆಂಗಳೂರಿನ ಟೆಕಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

vijayapura

ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.