UV Fusion: ಜಾತ್ರೆಯಲ್ಲಿ ಕಂಡ ಜೀವನ


Team Udayavani, Jan 18, 2024, 3:42 PM IST

17-

ಮೊನ್ನೆ ಒಂದು ಜಾತ್ರೆ ಹೋಗಿದ್ದೆ. ಎಲ್ಲ ಹಬ್ಬಗಳಂತೆ ಅಲ್ಲಿಯೂ ಐಸ್‌ ಕ್ರೀಮ್‌, ಗೇಮ್ಸ್, ತಿಂಡಿ ತಿನಿಸು, ಬಳೆ, ಆಟಿಕೆ ಅಂಗಡಿ ಹೀಗೆ ಹತ್ತು ಹಲವಾರು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳು ರಸ್ತೆಯ ಬದಿಯಲ್ಲಿ ತಲೆಎತ್ತಿದ್ದವು. ಈ ಜನಜಂಗುಳಿಯ ನಡುವೆ ದಾರಿ ಮಾಡಿಕೊಂಡು ಮುಂದೆ ಸಾಗುತ್ತಿದ್ದಾಗ ಒಬ್ಬ ಹುಡುಗ ಕಣ್ಣಿಗೆ ಕಾಣಿಸಿದ.‌

ನೋಡಲು 14ರಿಂದ 16 ವರ್ಷದ ಒಳಗಿನ ಬಾಲಕ. ಬಹಳ ಹಳೆಯ ಬಟ್ಟೆಗಳನ್ನು ಧರಿಸಿದ್ದ ಅವನು ಕೈಯಲ್ಲಿ ಆಲಂಕಾರಿಕ ಕೃತಕ ಹೂವಿನ ಮಾಲೆಯನ್ನು ಹಿಡಿದುಕೊಂಡು ಮಾರುತ್ತಿದ್ದ. ಅವನ ಒಂದು ಫೋಟೋ ತೆಗೆಯುವ ಮನಸ್ಸಾಗಿ ಒಂದೆರೆಡು ಫೋಟೋ ಕ್ಲಿಕ್ಕಿಸಿದೆ.  ಅನಂತರ ತೆಗೆದ ಫೋಟೋವನ್ನು ಆ ಹುಡುಗನಿಗೆ ತೋರಿಸಿದೆ. ಅವನಿಗೂ ಖುಷಿಯಾಯಿತು. ಅವಕಾಶ ದೊರೆಯಿತೆಂದು ಅವನೊಡನೆ ಮಾತಿಗಿಳಿದೆ.

7ನೇ ತರಗತಿಯಲ್ಲಿ ಕಲಿಯುತ್ತಿರುವ ಆತ ತನ್ನೂರಿನಿಂದ ಇಲ್ಲಿಗೆ ಬಂದು ದುಡಿಯುತ್ತಿದ್ದ. ಅವನ ಜತೆ ದೊಡ್ಡ ಗುಂಪೇ ಇಲ್ಲಿಗೆ ವ್ಯಾಪಾರದ ಸಲುವಾಗಿ ಬಂದಿತ್ತು. ಆತನ ತಾಯಿಗೆ ಅನಾರೋಗ್ಯ. ತಂದೆ ಆರೋಗ್ಯವು ಉತ್ತಮವಾಗಿಲ್ಲ. ಹೀಗೆ ತುಂಬ ಹೊತ್ತು ಮಾತನಾಡಿ ನಾನು ನನ್ನ ದಾರಿ ಹಿಡಿದೆ. ಇನ್ನೊಂದು ಕಡೆ ಕೆಲವು ಹೆಂಗಸರು ಸಣ್ಣ ಮಕ್ಕಳನ್ನು ಸೊಂಟದಲ್ಲಿ ಕೂರಿಸಿಕೊಂಡು ಪೆನ್ನುಗಳನ್ನು ಮಾರಾಟ ಮಾಡುತ್ತಿದ್ದರು. ತಿಂಗಳ ಮಗುವನ್ನು ಮುಂದಿಟ್ಟುಕೊಂಡು ಜನರಲ್ಲಿ ಸಹಾನುಭೂತಿ ಗಿಟ್ಟಿಸಿಕೊಳ್ಳುತ್ತಾರೆ ಎಂದು ಒಂದು ಕಡೆ ಸಿಟ್ಟು ಬಂದರೇ, ಇನ್ನೊಂದು ಕಡೆಯಲ್ಲಿ ಆ ಎಳೆಗೂಸನ್ನು ಹಿಡಿದುಕೊಂಡು ಮಾರಾಟಕ್ಕೆ ಬರುತ್ತಾರಲ್ಲ ಎಂದು ಬೇಸರವೂ ಆಯಿತು.

ಕೆಲವು ಕಡೆಗಳಲ್ಲಿ ಸಣ್ಣ ಹುಡುಗಿಯನ್ನು ಇಟ್ಟುಕೊಂಡು ಹಗ್ಗದಲ್ಲಿ ನಡೆಯುವ ಸಾಹಸ ಪ್ರದರ್ಶಿಸುತ್ತಿದ್ದರೆ, ಅವರ ಧೈರ್ಯ ಮೆಚ್ಚಬೇಕೋ, ಶಾಲೆಗೆ ಹೋಗುವ ಮಕ್ಕಳು ಈ ರೀತಿ ದುಡಿಯಬೇಕಾದ ಅನಿವಾರ್ಯತೆಗೆ ಮರುಗಬೇಕೋ ತಿಳಿಯಲಿಲ್ಲ.  ಹೀಗೆ ಶಾಲೆಗೇ ಹೋಗುವ ಮಕ್ಕಳು ದುಡಿಯುವ ಸಲುವಾಗಿ ಶಾಲೆ ಬಿಟ್ಟರೆ ಮಕ್ಕಳ ಗತಿ ಏನಾಗಬೇಡ?

ಈ ವಿಷಯದಲ್ಲಿ ನಾನು ಅದೃಷ್ಟವಂತೆ ಎಂತೆನಿಸಿತು. ನನ್ನ ಹೆತ್ತವರ ಬಗ್ಗೆ ಹೆಮ್ಮೆಯಾಯಿತು. ಏನೇ ಕಷ್ಟ ಇದ್ದರೂ ಯಾವುದನ್ನೂ ತೋರಿಸದೆ ನಮ್ಮನ್ನು ಓದಿಸಲು ಹಗಲು ರಾತ್ರಿ ಎನ್ನದೆ ದುಡಿಯುವ ಅವರ ಋಣ ತೀರಿಸಲು ಸಾಧ್ಯವೇ?

ಈ ಜಾತ್ರೆಯಲ್ಲಿ ನನಗೆ ಹಲವಾರು ವ್ಯಕ್ತಿತ್ವಗಳ ದರ್ಶನವಾಯಿತು. ಪ್ರತೀ ವ್ಯಕ್ತಿತ್ವವೂ ನನಗೆ ಒಂದೊಂದು ಪಾಠ ಕಲಿಸಿದೆ.

- ಪೂರ್ಣಶ್ರೀ ಕೆ.

ಎಸ್‌.ಡಿ.ಎಂ. ಕಾಲೇಜು ಉಜಿರೆ

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 23 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.