ಬಾಯಿ ನೀರೂರಿಸುವ Tawa Fry

೧೯೮೩ ರಲ್ಲಿ ದಿವಂಗತ ಗಿರಿಧರ್ ಪೈಗಳಿಂದ ಪ್ರಾರಂಭವಾದ ಈ ಹೋಟೆಲ್ ಅಂಜಲ್ ತವಾ ಫ್ರೈ ಗೆ ತುಂಬಾನೇ ಜನಪ್ರಿಯ. ಇವರ ಅಳಿಯ ಮಂಜುನಾಥ್ ಪೈ ಅವರು ಪ್ರಾರಂಭಿಸಿದ್ದೆ ತವಾ ಫ್ರೈ ಅನ್ನೋ ಹೊಸ ಖಾದ್ಯ . ಆದ್ದರಿಂದಲೇ ಈ ಹೋಟೆಲ್ ನ ಹೆಸರು ಗಿರಿ ಮಂಜಾಸ್ ಅಂತಾನೆ ಮನೆ ಮಾತಾಗಿದೆ.
ಸತತ ಮೂರು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಹೋಟೆಲ್ ನಲ್ಲಿ ಎಲ್ಲಾ ಬಗೆಯ ಮೀನುಗಳು ಹಾಗೂ ಅದರ ಫ್ರೈಗಳು ಸವಿಯಲು ಸಿಗುತ್ತೆ.
ಇಲ್ಲಿನ ಪುನರ್ಪುಳಿಯ ರಸಂ ಆಹಾ! ಅದ್ಭುತ. 70ರ ದಶಕದ ಮನೆಯನ್ನು ನೆನಪಿಸುವಂತಿರುವ ಈ ಹೋಟೆಲ್ ನ ವಾತಾವರಣ ಹಾಗೂ ಮೀನಿನ ಊಟ ಮಂಗಳೂರಿನಲ್ಲಿ ಬೇರೆಲ್ಲೂ ಸಿಗುವುದಿಲ್ಲ. ಈಗಾಗಲೇ ಪ್ರಪಂಚದ ಮೂಲೆಮೂಲೆಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ಸಾಂಪ್ರದಾಯಿಕ ಶೈಲಿಯ ತವಾ ಫ್ರೈ ಅನ್ನು ಆಸ್ವಾದಿಸುತ್ತಾ ಇದ್ದಾರೆ


ಹೊಸ ಸೇರ್ಪಡೆ