ಪತ್ನಿಯ ಹೊತ್ತಿದ್ದಕ್ಕೆ ಆಕೆಯ ತೂಕದ ಬಿಯರ್‌ ಬಹುಮಾನ

Team Udayavani, Jul 9, 2019, 11:13 AM IST

ಹೆಂಡತಿಯನ್ನು ಗಂಡ ಹೊತ್ತುಕೊಂಡು ಕಲ್ಲು ಮಣ್ಣುಗಳ ರಸ್ತೆಯಲ್ಲಿ ಓಡುವ ಸ್ಪರ್ಧೆ ಬಗ್ಗೆ ನಿಮಗೆ ತಿಳಿದೇ ಇದೆ. ಈ ಸ್ಪರ್ಧೆ ಈಗ ಜಾಗತಿಕ ಟ್ರೆಂಡ್‌. ಈ ಬಾರಿ ಫಿನ್ಲಂಡ್‌ನ‌ಲ್ಲಿ ನಡೆದ ವಾರ್ಷಿಕ ಅಂತಾರಾಷ್ಟ್ರೀಯ ಹೆಂಡತಿ ಹೊರುವ ಸ್ಪರ್ಧೆಯಲ್ಲಿ ಲಿಥುಯಾನಿಯದ ವ್ಯಕ್ತಿ ವ್ಯತುವಾತಸ್‌ ತನ್ನ ಪತ್ನಿ ನಿರಿಂಗರನ್ನು ಹೊತ್ತುಕೊಂಡು ಕೆಸರಿನಿಂದ ತುಂಬಿದ್ದ ಟ್ರ್ಯಾಕ್‌ನಲ್ಲಿ ಓಡಿ 1 ನಿಮಿಷ 6.72 ಸೆಕೆಂಡುಗಳಲ್ಲಿ ಗುರಿ ತಲುಪಿ ಸ್ಪರ್ಧೆಯ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೆ ಅವರು ಗೆದ್ದಿರುವ ಬಹುಮಾನ ಏನೆಂದು ಕೇಳಿದರೆ ನೀವು ಚಕಿತರಾಗುತ್ತೀರಿ. ಆತನ ಪತ್ನಿಯ ತೂಕಕ್ಕೆ ಸರಿಸಮನಾದ ತೂಕದಷ್ಟು ಬಿಯರ್‌. ಈ ಸ್ಪರ್ಧೆಯಲ್ಲಿ ಭಾಗವಹಿಸಲು 13 ರಾಷ್ಟ್ರಗಳ ದಂಪತಿಗಳು ಆಗಮಿಸಿದ್ದರಂತೆ!


ಈ ವಿಭಾಗದಿಂದ ಇನ್ನಷ್ಟು

  • ಕೆನಡಾದ ಎಲಿ ಬೊರೋಡಿಟ್‌ಸ್ಕೈ ಎಂಬುವರಿಗೆ ಇತ್ತೀಚೆಗೆ ಮರೆಯಲಾಗದ ಪಾಠದ ಅನುಭವವಾಗಿತ್ತು. ಬೆಣ್ಣೆ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುವ ಅವರು ರಾತ್ರಿ ಪಾಳಿಯಲ್ಲಿ...

  • ಬಹುತೇಕ ನಗರವಾಸಿಗಳಲ್ಲಿ ನಾಯಿ ನಂಬಿಕಸ್ಥ ಮತ್ತು ಕುಟುಂಬದ ಸದಸ್ಯನಂತೆಯೇ ಇರುತ್ತದೆ. ಮುದ್ದಿನಿಂದ ಸಾಕಿದ ನಾಯಿ ಒಡೆಯ ಹಾಗೂ ಮನೆಯವರ ಜೀವ ಉಳಿಸಿದ ಹಲವು ನಿದರ್ಶನಗಳು...

  • ಬಾಟಲ್‌ ಕ್ಯಾಪ್‌ ಚಾಲೆಂಜ್‌, ಐಸ್‌ ಬಕೆಟ್‌ ಚಾಲೆಂಜ್‌ಗಳಂಥ ಹಲವಾರು ಚಾಲೆಂಜ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಅಂಥ ಸಾಲಿಗೆ ಈಗ...

ಹೊಸ ಸೇರ್ಪಡೆ