ಒಂದು ಫೋನ್ ಕೊಂಡರೆ 1 ಕೇಜಿ ಈರುಳ್ಳಿ ಫ್ರೀ
Team Udayavani, Dec 10, 2019, 7:37 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಈರುಳ್ಳಿ ದರ ದಿನೇ ದಿನೇ ಹೆಚ್ಚುತ್ತಿರುವ ಸಂದರ್ಭದಲ್ಲಿ ಜನರು ದುಬಾರಿ ಉಡುಗೊರೆ ರೂಪದಲ್ಲಿ ಈರುಳ್ಳಿಯನ್ನೇ ನೀಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಚೆನ್ನೈನ ಮೊಬೈಲ್ ಫೋನ್ ಅಂಗಡಿಯೊಂದು ಗ್ರಾಹಕರಿಗೆ ಈರುಳ್ಳಿ ಆಮಿಷ ತೋರಿಸಿ ವ್ಯಾಪಾರ ಶುರು ಮಾಡಿದೆ. 1 ಸ್ಮಾರ್ಟ್ ಫೋನ್ ಕೊಂಡರೆ 1 ಕೆಜಿ ಈರುಳ್ಳಿಯನ್ನು ಉಚಿತವಾಗಿ ಇಲ್ಲಿನ ಎಸ್ಟಿಆರ್ ಮೊಬೈಲ್ಸ್ ಎಂಬ ಅಂಗಡಿ ನೀಡುತ್ತಿದೆ.
ಕಳೆದ ಒಂದು ವಾರದಿಂದ ಈ ಆಫರ್ ನಡೆಯುತ್ತಿದೆ. ಇದರಿಂದಾಗಿ ಅಂಗಡಿ ಭಾರೀ ಪ್ರಚಾರ ಪಡೆದಿದೆ. ಅಲ್ಲದೇ, ವ್ಯಾಪಾರದಲ್ಲೂ ಚೇತರಿಕೆಯಾಗಿದೆ ಎಂದು ಅಂಗಡಿ ಮಾಲೀಕ ಸರವನಕುಮಾರ್ ತಿಳಿಸಿದ್ದಾರೆ. ನನ್ನ ಅಂಗಡಿಯಲ್ಲಿ ಪ್ರತಿದಿನ ಸಾಮಾನ್ಯವಾಗಿ 3ರಿಂದ 4 ಮೊಬೈಲ್ಗಳು ಮಾರಾಟವಾಗುತ್ತವೆ. ಈರುಳ್ಳಿ ಉಚಿತವಾಗಿ ನೀಡಲು ಆರಂಭಿಸಿದ ಬಳಿಕ ಕನಿಷ್ಠ 10 ಫೋನ್ಗಳು ಮಾರಾಟವಾಗುತ್ತಿವೆ ಎಂದಿದ್ದಾರೆ. ತಮಿಳುನಾಡಿನ ಕಡಲೂರ್ನಲ್ಲಿ ಮದುವೆ ಸಮಾರಂಭದಲ್ಲಿ ವಧೂವರರಿಗೆ ಈರುಳ್ಳಿಯ ಗುಚ್ಚ ನೀಡಿ ಹರಸಿದ್ದೂ ಸುದ್ದಿಯಾಗಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…