ಔಷಧದಂಗಡಿಗೆ ತಾನೇ ತೆರಳಿ ಚಿಕಿತ್ಸೆ ಪಡೆದ ನಾಯಿ!
Team Udayavani, Jun 26, 2019, 10:35 AM IST
ನಾಯಿ ಗಾಯಾಳುವಾದರೆ ಅದಕ್ಕೆ ಔಷಧದ ಅಂಗಡಿಗೆ ಹೋಗುವಷ್ಟು ತಿಳಿವಳಿಕೆ ಇದೆ ಎಂದು ನಿಮಗೆ ಗೊತ್ತಿತ್ತೇ? ಹೌದು, ಟರ್ಕಿಯ ಇಸ್ತಾಂಬುಲ್ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಗಾಯಗೊಂಡಿದ್ದ ಬೀದಿ ನಾಯಿಯೊಂದು ನೇರವಾಗಿ ಔಷಧದ ಅಂಗಡಿಗೆ ತೆರಳಿ, ಫಾರ್ಮಸಿಯ ಮಾಲಕರಿಂದ ಔಷಧೋಪಚಾರ ಪಡೆದು ಹಿಂದಿರುಗಿದೆ. “ನನ್ನ ಅಂಗಡಿಗೆ ನಾಯಿ ಬಾಲ ಅಲ್ಲಾಡಿಸುತ್ತಾ ಬಂದಿತು. ನನ್ನ ಮುಖವನ್ನೇ ದೈನ್ಯದಿಂದ ನೋಡುತ್ತಿತ್ತು. ಅದರ ಕಾಲಿಗೆ ಗಾಯವಾಗಿರುವುದು ತಿಳಿಯಿತು. ಅದಕ್ಕೆ ಔಷಧಿ ಹಚ್ಚಿದೆ. ನನಗೆ ಧನ್ಯವಾದ ಹೇಳುವಂತೆ ಮಲಗಿ ಕಾಲು ನೀಡಿತು. ಸ್ವಲ್ಪ ಹೊತ್ತು ವಿಶ್ರಮಿಸಿ, ಅನಂತರ ತೆರಳಿತು ಎಂದು ಮಾಲೀಕರು ತಿಳಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದ್ದು, ಜಾಲತಾಣಿಗರ ಮನಗೆದ್ದಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ