ಜಪಾನ್ ರೋಬೋಗಳಿಗೂ ನಡೆಯುತ್ತದೆ ಅಂತ್ಯಕ್ರಿಯೆ
Team Udayavani, May 3, 2018, 4:17 AM IST
ಮನುಷ್ಯರಿಗೆ ಅಂತ್ಯಕ್ರಿಯೆ ನಡೆಸುವಂತೆ ರೋಬೋಗಳಿಗೂ ಅಂತ್ಯಕ್ರಿಯೆ ನಡೆಸಲಾಗುತ್ತದೆಯಾ? ಜಪಾನ್ ರಾಜಧಾನಿ ಟೋಕಿಯೋದಲ್ಲಿ ಅದೂ ನಡೆಯುತ್ತದೆ.
ಟೋಕಿಯೋದ ಇಸುಮಿ ಎಂಬಲ್ಲಿಯ 450 ವರ್ಷಗಳಷ್ಟು ಹಳೆಯದಾದ ಬೌದ್ಧ ದೇಗುಲದಲ್ಲಿ ಅದನ್ನು ನಡೆಸಲಾಗುತ್ತದೆ. ಅಲ್ಲಿನ ಮುಖ್ಯ ಧರ್ಮಗುರು ಪ್ರಕಾರ ಮಾನವರಿಗೆ ಹೇಗೆ ಆತ್ಮ ಇರುತ್ತದೆಯೋ ಹಾಗೆಯೇ ರೋಬೋಗಳಿಗೂ ಇರುತ್ತದೆ. ಅಂದ ಹಾಗೆ ರೋಬೋಗಳೆಂದರೆ ದೊಡ್ಡ ದೊಡ್ಡ ಯಂತ್ರ ಮಾನವರಲ್ಲ. ಸಣ್ಣ ಪ್ರಮಾಣದ ರೋಬೋ ಡಾಗ್ಗಳು.
ಟೋಕಿಯೋದ ಸಾವಿರಾರು ಮಂದಿ ನಿವಾಸಿಗಳು ಅವಧಿ ಮೀರಿದ, ರೋಬೋ ಡಾಗ್ಗಳನ್ನು ಅಂತ್ಯಕ್ರಿಯೆಗಾಗಿ ಇಲ್ಲಿಗೆ ಕಳುಹಿಸುತ್ತಾರೆ.ಅವುಗಳ ಮಾಲಕರು ಯಾವ ಕಾರಣದಿಂದ ರೋಬೋ ಡಾಗ್ ಅನ್ನು ಕೈಬಿಡಬೇಕಾಯಿತು ಎಂಬ ಅಶ್ರುತರ್ಪಣ ಇರುವ ಪತ್ರವನ್ನೂ ಅದರ ಜತೆಗೆ ಇರಿಸುತ್ತಾರೆ. ಇಷ್ಟು ಮಾತ್ರವಲ್ಲದೆ ಇಲ್ಲಿ ಕಾರ್ಯನಿರ್ವಹಿಸದೇ ಇರುವ ರೋಬೋ ಡಾಗ್ಗಳ ಬಿಡಿಭಾಗಗಳಲ್ಲಿ ಒಳ್ಳೆಯದ್ದನ್ನು ಆರಿಸಿ ಬೇರೆ ಕಡೆಗೆ ನೀಡುವ ವ್ಯವಸ್ಥೆ ಇದ್ದು ಇದೊಂದು ರೀತಿ ಅಂಗಾಂಗ ದಾನದಂತೆ ಎನ್ನುತ್ತಾರೆ ಇಲ್ಲಿಗೆ ಬರುವವರು
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ