ಮಂಗವನ್ನೂ ಬಿಡದ ಸೆಲ್ಫಿ ಹುಚ್ಚು?   

Team Udayavani, Jun 18, 2019, 12:00 PM IST

ಗೊರಿಲ್ಲಾವೊಂದು ಕೆಮರಾ ಕ್ಲಿಕ್ಕಿಸಿ ಸೆಲ್ಫಿ ತೆಗೆದುಕೊಂಡಿದ್ದು ನೆನಪಿದೆಯಾ? ಅದು ಜಗತ್ತಿನಾದ್ಯಂತ ಸುದ್ದಿ ಮಾಡಿತ್ತು. ಇಂಡೋನೇಷ್ಯಾಗೆ ಪ್ರವಾಸಕ್ಕೆಂದು ಹೋಗಿದ್ದ ಆಸ್ಟ್ರೇಲಿಯಾದ ಕುಟುಂಬಕ್ಕೆ ಕೂಡಾ ಇಂಥದ್ದೇ ಅಚ್ಚರಿ ಎದುರಾಗಿದೆ. ಅದೇನೆಂದರೆ ಮಂಗವೊಂದು ಅವರ ಜೊತೆ ಸೆಲ್ಫಿ ತೆಗೆದುಕೊಂಡಿದೆ. ಬಾಲಿಯ ಉಬುಡ್‌ ಮಂಕಿ ಫಾರೆಸ್ಟ್‌ಗೆ ಕುಟುಂಬ ಭೇಟಿ ನೀಡಿದ್ದ ವೇಳೆ, ಅಲ್ಲಿ ನೆಲದ ಮೇಲೆ ಮಂಡಿಯೂರಿ ಕೂತು ಫೋಟೊ ತೆಗೆಸಿಕೊಳಕ್ಷೆು ಮುಂದಾದರು. ಅಲ್ಲಿಯ ಸಿಬ್ಬಂದಿ ಅವರ ಫೋಟೊ ತೆಗೆಯುವವರಿದ್ದರು. ಆಗ ಎಲ್ಲಿಂದಲೋ ಧುಪ್ಪೆಂದು ಬಂದ ಮಂಗ ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದೆ. ಅದು ಸೆಲ್ಫಿ ತೆಗೆದಿದ್ದಲ್ಲದೆ ತಾನೂ ಫೋಟೊ ಚೌಕಟ್ಟಿನ ಒಳಗೆ ಬರುತ್ತಿದ್ದೇನೋ ಇಲ್ಲವೋ ಎಂದು ಧೃಡಪಡಿಸಿಕೊಂಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ