ವೈದ್ಯರನ್ನು ಗುರಾಯಿಸಿದ ನವಜಾತ ಶಿಶು
Team Udayavani, Feb 25, 2020, 6:51 AM IST
ನಗು, ನಾಚಿಕೆ, ಸಿಟ್ಟು ಎಲ್ಲವನ್ನೂ ಹೇಳಲು ಸಾಮಾಜಿಕ ಜಾಲತಾಣಿಗರು ಮೀಮ್ಗಳನ್ನು, ಜಿಫ್ ಇಮೇಜ್ಗಳನ್ನು ಬಳಸುವುದು ಎಲ್ಲರಿಗೂ ತಿಳಿದೇ ಇದೆ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ, ಆಗತಾನೇ ಹುಟ್ಟಿದ ಶಿಶು ಕೂಡ ಇಂಥ ಮೀಮ್ಗಳಿಗೆ ಸೇರುವ ಮೂಲಕ ಎಲ್ಲರನ್ನೂ ನಗು ತರಿಸಿದೆ.
ಸಾಮಾನ್ಯವಾಗಿ ಮಕ್ಕಳು ಭೂಮಿಗೆ ಬರುವಾಗ ಅಳುತ್ತಾ ಬರುತ್ತವೆ. ಆದರೆ ಬ್ರಝಿಲ್ ನ ರಿಯೋ ಡಿ ಜನೈರೋದಲ್ಲಿ ಇಸಾಬೆಲಾ ಪರೇರಿಯಾ ಎಂಬ ಮಗುವು ಜನ್ಮತಾಳಿದೊಡನೆ, ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರನ್ನು ಮುಖ ಗಂಟಿಕ್ಕಿಕೊಂಡು ಸಿಟ್ಟಿನಿಂದ ಗುರಾಯಿಸಿದ್ದಾಳೆ.
ಆಕೆ ಕರುಳಬಳ್ಳಿ ಕತ್ತಿರಿಸುವವರೆಗೂ ಸ್ವಲ್ಪವೂ ಅತ್ತಿಲ್ಲವಂತೆ. ಛಾಯಾಗ್ರಾಹಕ ರೋಡ್ರಿಗೊ ಈ ಸಂದರ್ಭವನ್ನು ಸೆರೆಹಿಡಿದು ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಇಸಬೆಲಾ ನೆಟ್ಟಿಗರ ಫೇವರಿಟ್ ಆಗಿದ್ದಾಳೆ.