ಸಾಕು ಹಾವನ್ನು ತಂದು ವಿಮಾನದಲ್ಲಿ ಬಿಟ್ಟು ಹೋದ!
Team Udayavani, Mar 24, 2017, 4:11 AM IST
ವಿಮಾನ ಪ್ರಯಾಣದ ವೇಳೆ ಹಾವೊಂದು ಅಚಾನಕ್ ಆಗಿ ಪ್ರತ್ಯಕ್ಷವಾದರೆ ಪ್ರಯಾಣಿಕರ ಪರಿಸ್ಥಿತಿ ಹೇಗಾಗಬೇಡ? ಅಲಾಸ್ಕಾದ ಆ್ಯಂಕೊರೇಜ್ಗೆ ತೆರಳುತ್ತಿದ್ದ ವಿಮಾನದಲ್ಲಿ ಈ ರೀತಿಯ ಘಟನೆ ನಡೆದಿದೆ. ಹಾವೊಂದು ಬಾಲಕನೊಬ್ಬನ ಕಣ್ಣಿಗೆ ಬಿದ್ದಿದೆ.
ಕೂಡಲೇ ಆತ ಸಿಬ್ಬಂದಿಗೆ ತಿಳಿಸಿದ. “ವಿಮಾನದಲ್ಲಿ ಹಾವು ಇದೆ, ಅದರೆ ಎಲ್ಲಿ ಇದೆ ಎಂದು ನಮಗೆ ತಿಳಿದಿಲ್ಲ’ ಎಂದು ಅವರು ಘೋಷಿಸಿದರು. ಇದನ್ನು ಕೇಳಿದ ಪ್ರಯಾಣಿಕರು ಬೆಚ್ಚಿ ಬಿದ್ದರು. ಸಿಬ್ಬಂದಿ ತುಂಬಾ ಪ್ರಾಯಾಸದಿಂದ ಈ ಹಾವನ್ನು ಹಿಡಿದರು. ಈ ಹಾವು ಹೇಗೆ ಬಂದಿತು ಎಂದು ಸಿಬ್ಬಂದಿ ಮತ್ತು ಪ್ರಯಾಣಿಕರು ಎಷ್ಟೇ ಯೋಚಿಸಿದರೂ ಉತ್ತರ ಸಿಗಲಿಲ್ಲ.
ಆದರೆ ಇದಾಗ ಕೆಲವು ಸಮಯಗಳ ಬಳಿಕ ಅನಾಮಿಕನೊಬ್ಬ ತನ್ನ ಸಾಕು ಹಾವು ವಿಮಾನದಲ್ಲಿ ಕಾಣೆಯಾಗಿದೆ ಎಂದು ದೂರು ನೀಡಿದ. ಆಗಲೇ ಇದು ಪ್ರಯಾಣಿಕನೊಬ್ಬನ ಕೆಲಸ ಎಂದು ತಿಳಿದು ಬಂದಿದೆ. ವಿಮಾನ ಪ್ರಯಾಣದ ನೀತಿ ನಿಯಮಗಳ ಉಲ್ಲಂ ಸಿ ಹಾವನ್ನು ವಿಮಾನದೊಳಗೆ ಕರೆತಂದ ಆತನಿಗೆ ಶಿಕ್ಷೆ ಕೂಡ ಕಾಯುತ್ತಿದೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ