ಸಿಯಾರಾ ಚಂಡಮಾರುತಕ್ಕೆ ಹೊಯ್ದಾಡಿದ ವಿಮಾನ
Team Udayavani, Feb 15, 2020, 7:28 AM IST
ಕಳೆದ ವಾರ ಐರೋಪ್ಯ ಒಕ್ಕೂಟವನ್ನು ಸಿಯಾರಾ ಚಂಡಮಾರುತ ತೀವ್ರ ತರವಾಗಿ ಬಾಧಿಸಿತ್ತು. ಅದರ ಪ್ರಭಾವ ಯುನೈಟೆಡ್ ಕಿಂಗ್ಡಮ್ನ ಬರ್ಮಿಂಗ್ಹ್ಯಾಮ್ ವಿಮಾನ ನಿಲ್ದಾಣದಲ್ಲಿಯೂ ಕಾಣಿಸಿಕೊಂಡಿತ್ತು.
ಜೋರಾಗಿ ಬೀಸುತ್ತಿದ್ದ ಬಿರುಗಾಳಿಗೆ ಸ್ಟೊಬಾರ್ಟ್ ವಿಮಾನ ಸಂಸ್ಥೆಯ ವಿಮಾನ ಏರ್ಪೋರ್ಟ್ನಲ್ಲಿ ಲ್ಯಾಂಡ್ ಆಗುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನ ಈಗ ವೈರಲ್ ಆಗಿದೆ. ಯೂಟ್ಯೂಬ್ನಲ್ಲಿ ಅದನ್ನು ಮೂರು ಲಕ್ಷಕ್ಕಿಂತಲೂ ಅಧಿಕ ಮಂದಿ ನೋಡಿ ಬೆಚ್ಚಿಬಿದ್ದಿದ್ದಾರೆ.
ಸಿಯಾರಾ ಚಂಡಮಾರುತದ ರಭಸಕ್ಕೆ ಸಿಲುಕಿದ ವಿಮಾನ ಎಡಕ್ಕೆ, ಬಲಕ್ಕೆ ವಾಲುತ್ತಾ ಇರುವುದು ವಿಡಿಯೋದಲ್ಲಿ ದಾಖಲಾಗಿದೆ. ಪೈಲಟ್ ಯಾವ ರೀತಿ ಪ್ರಯತ್ನ ಮಾಡಿದರೂ, ವಿಮಾನ ಲ್ಯಾಂಡ್ ಆಗಲೇ ಇಲ್ಲ. ಹೀಗಾಗಿ ಮತ್ತೆ ಆತ ವಿಮಾನವನ್ನು ಟೇಕಾಫ್ ಮಾಡಿದ್ದಾನೆ. ವಿಡಿಯೋ ನೋಡಿದ ವ್ಯಕ್ತಿಯೊಬ್ಬರು ‘ನಾನು ವಿಡಿಯೋಗಳಲ್ಲಿ ಇದು ಅತ್ಯಂತ ಅದ್ಭುತ’ ಎಂದು ಕಮೆಂಟ್ ಹಾಕಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?