ವೈರಲ್‌ ಆದ ವೆನಿಜುಯೆಲಾ ತಾಯಿಯ ವಿಡಿಯೋ

Team Udayavani, Sep 5, 2019, 1:16 PM IST

ಕಂಡರಿಯದ ಆರ್ಥಿಕ ಹಿಂಜರಿತ ಕಂಡ ವೆನಿಜುವೆಜುಯೆಲಾದ ಜನರು ಪೆರು ದೇಶಕ್ಕೆ ವಲಸೆ
ಹೋಗುತ್ತಿರುವುದು ತಿಳಿದಿರುವ ವಿಷಯವೇ. ಹೀಗೆ ಪೆರುವಿಗೆ ವಲಸೆ ಹೋಗಿರುವ 9 ತಿಂಗಳ ಮಗುವಿನ ತಾಯಿಯೊಬ್ಬರು ರಸ್ತೆ ಬದಿಯಲ್ಲಿ ಹಾಡಿ ಹಣ  ಸಂಪಾದಿಸುತ್ತಿದ್ದಾರೆ. ಆಕೆ ಸುಶ್ರಾವ್ಯವಾಗಿ ಹಾಡುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮಹಿಳೆ 9 ತಿಂಗಳ ಮಗುವನ್ನು ಎತ್ತಿಕೊಂಡು ಅದನ್ನು ಅದನ್ನು ಸಂತೈಸುತ್ತಲೇ ಹಾಡು ಹಾಡುತ್ತಾರೆ.

ಹಾದಿಹೋಕರು ಚಿಲ್ಲರೆ ನೀಡುತ್ತಾರಾ ಎಂದು ಅವರನ್ನು ಒಮ್ಮೆ ದಿಟ್ಟಿಸಿ ನೋಡುತ್ತಾರೆ. ಯಾರೂ ಹಣ ನೀಡದಿದ್ದರೂ ತಾವು ಹಾಡುವುದನ್ನು ಮಾತ್ರ ಅವರು ನಿಲ್ಲಿಸುವುದಿಲ್ಲ. ಈ ವಿಡಿಯೋ ಅಪ್ಲೋಡ್‌ ಆದ ಕೆಲವೇ ಕ್ಷಣಗಳಲ್ಲಿ 42,642 ಜನರು ವೀಕ್ಷಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ