ಗಿನ್ನೆಸ್‌ ದಾಖಲೆ ಸೇರಲಿದೆ‌ 1.10 ಅಡಿ ಕುದುರೆ

Team Udayavani, Sep 7, 2019, 3:43 PM IST

ಈ ಕುದುರೆ ಒಂದು ಡಾಬರ್‌ಮನ್‌ ನಾಯಿಗಿಂತಲೂ ಗಾತ್ರದಲ್ಲಿ ಚಿಕ್ಕದಿದೆ. ಆದರೆ ಅದರ ವ್ಯಕ್ತಿತ್ವ ಮತ್ತು ಹೃದಯ ಆ ಕುದುರೆಗಿಂತ ದೊಡ್ಡದಿದೆ ಎಂದು ಅದರ ಮಾಲೀಕರು ಹೇಳುತ್ತಾರೆ. ಪೋಲೆಂಡ್‌ನ‌ ಈ ಕುಬ್ಜ ಕುದುರೆಯ ಹೆಸರು ಬಾಂಬೆಲ್‌. ಸಂಪೂರ್ಣ ಬೆಳೆದ ಈ ಕುದುರೆಯ ಎತ್ತರ
ಕೇವಲ 1.10 ಅಡಿ. ಈಗ ಬಾಂಬೆಲ್‌ ಜಗತ್ತಿನ ಅತಿ ಕುಳ್ಳ ಕುದುರೆ ಎಂದು ಗಿನ್ನೆಸ್‌ ದಾಖಲೆಗೆ ಸೇರಲು ಸಿದ್ಧವಾಗುತ್ತಿದೆ. ಬಾಂಬೆಲ್‌ ಎಲ್ಲಾ ಕುದುರೆಗಳಂತೆ ಎತ್ತರ ಬೆಳೆಯಲಿಲ್ಲ ಎಂದು ನಮಗೆ ಬೇಸರವಿಲ್ಲ. ಆತ ಹತ್ತಿರದ ಮಕ್ಕಳ ಆಸ್ಪತ್ರೆಯಲ್ಲಿರುವ ಹಲ ವಾರು ಮಕ್ಕಳ ಖುಷಿಗೆ
ಕಾರಣವಾಗಿದ್ದಾನೆ. ಅದುವೇ ನಮಗೆ ಹೆಮ್ಮೆ ಎಂದು ಅದರ ಮಾಲೀಕರಾದ ಕಾತರಿನ ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ