ಆನ್ಲೈನ್ ಆಹಾರಕ್ಕೆ 40 ಜಿರಳೆ ಹಾವಳಿ
Team Udayavani, Mar 14, 2019, 3:43 AM IST
ರೆಸ್ಟೋರೆಂಟ್ಗಳಲ್ಲಿ ತಿನ್ನುವ, ಆನ್ಲೈನ್ನಲ್ಲಿ ಆರ್ಡರ್ ಮಾಡಿ ತರಿಸುವ ಆಹಾರದಲ್ಲಿ ಮಣ್ಣು, ಕಲ್ಲು, ಜಿರಳೆ ಸಿಕ್ಕ ಸುದ್ದಿಯನ್ನು ನೀವುಓದುತ್ತಲೇ ಇರುತ್ತೀರಿ ಆ ಸಾಲಿಗೆ ಈ ಸುದ್ದಿ ಹೊಸ ಸೇರ್ಪಡೆ.
ಆದರೂ ಇದು ಬೆಚ್ಚಿಬೀಳಿಸುತ್ತದೆ. ಚೀನಾದಲ್ಲಿ ಮಹಿಳೆ ಆನ್ಲೈನ್ ಮೂಲಕ ತರಿಸಿದ್ದ ಆಹಾರದಲ್ಲಿ 40ಕ್ಕೂ ಹೆಚ್ಚು ಜಿರಳೆಗಳು ಪತ್ತೆಯಾಗಿವೆ. ಬಾತುಕೋಳಿ ಮಾಂಸದ ಖಾದ್ಯವನ್ನು ಅವರು ತರಿಸಿಕೊಂಡಿದ್ದರು. ಅದನ್ನು ಅವರು ಮತ್ತು ಅವರ ಸ್ನೇಹಿತೆ ತಟ್ಟೆಗೆ ಬಡಿಸಿಕೊಂಡರು.
ಅವರ ಸ್ನೇಹಿತೆಗೆ ಒಂದು ಸತ್ತ ಜಿರಳೆ ಕೈಗೆ ಸಿಕ್ಕಿತು. ಅನುಮಾನ ಬಂದು ಸಂಪೂರ್ಣ ಪೊಟ್ಟಣವನ್ನು ಶೋಧಿಸಿದಾಗ 40ಕ್ಕೂ ಹೆಚ್ಚು ಜಿರಳೆಗಳು ಪತ್ತೆಯಾಗಿವೆ. ಪೊಲೀಸರಿಗೆ ಈ ಕುರಿತು ಅವರು ದೂರು ನೀಡಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!