ಮಗುವನ್ನು ನಿಲ್ದಾಣದಲ್ಲಿ ಬಿಟ್ಟು ವಿಮಾನವೇರಿದ ತಾಯಿ!
Team Udayavani, Mar 13, 2019, 1:20 PM IST
ಸೌದಿಯ ವಿಮಾನವೊಂದು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಕಿಂಗ್ ಅಬ್ದುಲ್ ಅಜೀಜ್ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣಕ್ಕೆ ಮರಳಿದೆ. ಮಹಿಳಾ ಪ್ರಯಾಣಿಕರೊಬ್ಬರು ತಮ್ಮ ಮಗುವನ್ನು ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿಯೇ ಬಿಟ್ಟು ಬಂದಿದ್ದು ಇದಕ್ಕೆ ಕಾರಣ. ವಿಮಾನ ಟೇಕ್ ಆಫ್ ಆದ ಬಳಿಕ ಅವರಿಗೆ ಮಗುವನ್ನು ಬಿಟ್ಟುಬಂದಿದ್ದು ನೆನಪಾಗಿದೆ. ಇದನ್ನು ಕೇಳಿದರೆ ಮಕ್ಕಳನ್ನು ಇಷ್ಟರ ಮಟ್ಟಿಗೆ ಮರೆಯುವ ತಾಯಂದಿರೂ ಇದ್ದಾರೆಯೇ ಎಂದು ಆಶ್ಚರ್ಯವಾಗುತ್ತದೆ. ಟರ್ಮಿನಲ್ನಲ್ಲಿ ಅವರು ತಮ್ಮ ಮಗುವಿನ ಜೊತೆ ಕಾಯುವಿಕೆ ಜಾಗದಲ್ಲಿ ಇದ್ದರು. ವಿಮಾನ
ಬರುತ್ತಲೇ ತಮ್ಮ ಜೊತೆ ತಮ್ಮ ಮಗು ಇರುವುದನ್ನು ಮರೆತು ವಿಮಾನವೇರಿದರು. ಬಳಿಕ ವಿಮಾನ ಸಿಬ್ಬಂದಿಗೆ, ತಾವು ಮಗುವನ್ನು ಮರೆತುಬಂದಿದ್ದು, ವಾಪಸ್ಸು ವಿಮಾನ ನಿಲ್ದಾಣಕ್ಕೆ ಹೋಗಲೇಬೇಕು ಎಂದು ವಿನಂತಿಸಿಕೊಂಡರು. ಪೈಲಟ್ ವಿಮಾನ ನಿಲ್ದಾಣ ಸಿಬ್ಬಂದಿಯನ್ನು ಸಂಪರ್ಕಿಸಿ ವಿಮಾನ ಮರಳಿ ನಿಲುಗಡೆ ಮಾಡಲು ಅನುಮತಿ ಪಡೆದು, ವಿಮಾನ ನಿಲುಗಡೆ ಮಾಡಿದರು. ಬಳಿಕ ತಾಯಿ ಮತ್ತು ಮಗು ಒಂದಾದರು. ಮಗುವನ್ನೇ ಮರೆತ ತಾಯಿ ಕುರಿತು ಜಾಲತಾಣಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ