Udayavni Special

ಬಿಹಾರ್ ಟು ಬಾಲಿವುಡ್ ರೈತನ ಮಗ “Gangs of wasseypur” ನ ಸುಲ್ತಾನ್ ನಾಗಿ ಬೆಳೆದ ರೋಚಕ ಹಾದಿ

ರಾತ್ರಿ ಹೊಟೇಲ್ ಕೆಲಸ, ಹಗಲು ರಂಗದ ಮೇಲೆ ನಟನೆ

ಸುಹಾನ್ ಶೇಕ್, Oct 28, 2020, 9:06 PM IST

ಬಿಹಾರ್ ಟು ಬಾಲಿವುಡ್ ರೈತನ ಮಗ “Gangs of wasseypur” ನ ಸುಲ್ತಾನ್ ನಾಗಿ ಬೆಳೆದ ರೋಚಕ ಹಾದಿ

ಕನಸು ಕಾಣುವ ದಾರಿಯಲ್ಲಿ ಬರುವ ಎಷ್ಟೋ ಹಂತಗಳನ್ನು ನಾವು ಬಾಯಿ ತಪ್ಪಿನಿಂದ ಸಮಸ್ಯಗಳೆಂದು ಕರೆಯುತ್ತೇವೆ. ನಿಜವಾಗಿಯೂ ಅವು ಆಯಾ ಕ್ಷಣಕ್ಕೆ,ಸಂದರ್ಭಗಳಿಗಷ್ಟೇ ಸಮಸ್ಯೆಗಳು.ಅವುಗಳನ್ನು ದಾಟಿ ಬಂದರೆ ಅವು ನಾವು ಗೆದ್ದ ಸವಾಲುಗಳಾಗಿ ನಿಲ್ಲುತ್ತದೆ. ಸವಾಲು ಗೆದ್ದವ ಮಾತ್ರ ಸಾಧಕನಾಗಬಲ್ಲ. ಸೋತವ ಮತ್ತಷ್ಟು ಕಲಿಯುವ ಕಲಿ ಆಗಬಲ್ಲ.!

ಬಿಹಾರದ ಗೋಪಲ್ ಗಂಜ್ ಜಿಲ್ಲೆಯ ಬಿಲ್ ಸಂದ್ ಗ್ರಾಮ. ರೈತಾಪಿ ಕಾರ್ಯವನ್ನು ನಂಬಿಕೊಂಡು ಬದುಕುವ ಕುಟುಂಬಗಳೇ ಹೆಚ್ಚಾಗಿರುವ ಪ್ರದೇಶ. ಇಂಥ ಗ್ರಾಮದಲ್ಲಿ, ರೈತ ಕುಟುಂಬದಲ್ಲಿ ಹುಟ್ಟಿ, ಪ್ರಾರಂಭಿಕ ಬಾಲ್ಯದ ವಯಸ್ಸನ್ನು ಅದೇ ಗ್ರಾಮದಲ್ಲಿ ಕಳೆದ ಪಂಕಾಜ್ ತ್ರಿಪಾಠಿ. ಇಂದು ಬಾಲಿವುಡ್ ನಲ್ಲಿ ಬಹು ಬೇಡಿಕೆ ನಟನಾಗಿ ಬೆಳೆದಿರಿವುದರ ಹಿಂದೆ ಬೆಂದು,ನೊಂದು,ಎದ್ದು ಬಂದ ದಾರಿಯ ಪಯಣ ರೋಚಕವಾಗಿದೆ.

ಬಾಲ್ಯದಲ್ಲೇ ಇತ್ತು ನಟನೆಯ ಹುಚ್ಚು : ಪಂಕಾಜ್ ಬೆಳೆದ ಗ್ರಾಮದಲ್ಲಿ ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದ ವೇಳೆಯಲ್ಲಿ ನಡೆಯುವ “ನಾಟಕ್ “ ನಲ್ಲಿ ಪಂಕಾಜ್ ಹೆಣ್ಣು ವೇಷಧಾರಿಯಾಗಿ ಬಣ್ಣ ಹಚ್ಚುತ್ತಾರೆ. ಪ್ರತಿ ಬಾರಿ ಹೆಣ್ಣಿನ ಪಾತ್ರಕ್ಕೆ ತಕ್ಕಂತೆ, ಧ್ವನಿ,ಗತ್ತು,ಗಾಂಭಿರ್ಯವನ್ನು ಬದಲಾಯಿಸಿಕೊಳ್ಳುತ್ತಿದ್ದ ಪಂಕಾಜ್ ಅವರ ನಟನೆ ಸ್ಥಳೀಯರಲ್ಲಿ ಪುಳಕವನ್ನುಂಟು ಮಾಡುತ್ತದೆ. ಆ ಸಮಯದಲ್ಲೇ ಕೆಲವರು ನಟನಾಗುವ ಸಲಹೆಯನ್ನು ಪಂಕಾಜ್ ಅವರಿಗೆ ನೀಡುತ್ತಾರೆ. ಪಂಕಾಜ್ ರಲ್ಲಿ ಆದಾಗಲೇ ನಟನಾಗಿ ಬಣ್ಣ ಹಚ್ಚಬೇಕೆನ್ನುವ ಸಣ್ಣ ಕಿಚ್ಚು ಮನಸ್ಸಿನ ಒಂದು ಬದಿಯಲ್ಲಿ ಗಟ್ಟಿಯಾಗಿ ಕೂತು ಕಾಡಲು ಆರಂಭಿಸುತ್ತದೆ. ಪಂಕಾಜ್ ತನ್ನ 13 ನೇ ವಯಸ್ಸಿನವರೆಗೆ ಊರಿನಲ್ಲಿ ಬಣ್ಣ ಹಚ್ಚುತ್ತಾರೆ.ನಟನೆಯ ವಿಷಯದಲ್ಲಿ ಪಂಕಾಜ್ ಆತ್ಮವಿಶ್ವಾಸದ ಮೂಟೆ ಹೊತ್ತು, ಅಪ್ಪನ ಆಸೆಯಂತೆ ಡಾಕ್ಟರ್ ಆಗಲು ಬಿಹಾರದಿಂದ ಪಾಟ್ನಾಕ್ಕೆ ಪಯಣ ಬೆಳೆಸುತ್ತಾರೆ.

ರಾಜಕೀಯ,ಹೋರಾಟ, ಜೈಲುವಾಸ..! : ಬಿಹಾರದಿಂದ ಪಾಟ್ನಾಕ್ಕೆ ದಾಪುಗಾಲಿಟ್ಟ ಪಂಕಾಜ್ ಬಹುಬೇಗ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗುತ್ತಾರೆ. ವಿದ್ಯಾರ್ಥಿ ಪರಿಷತ್ ಗೆ ಸೇರುವ ಪಂಕಾಜ್ ಹೋರಾಟದ ಸಂದರ್ಭದಲ್ಲಿ ಜೈಲುವಾಸವನ್ನು ಅನುಭವಿಸುತ್ತಾರೆ.1993 ರಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ಕಾವುಗೆ ಧ್ವನಿಗೂಡಿಸಿದ ಪಂಕಾಜ್ ಪೊಲೀಸರಿಂದ ಸೆರೆಯಾಗಿ, ಏಳು ದಿನಗಳ ಕಾಲ ಜೈಲಿನಲ್ಲಿ ಕೂರುತ್ತಾರೆ.ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ಪಂಕಾಜ್ ಗ್ರಂಥಾಲಯದ ಸಹಾಯದಿಂದ ಹಿಂದಿ ಹಾಗೂ ಪಾಶ್ಚತ್ಯ ಸಾಹಿತ್ಯವನ್ನು ಓದುತ್ತಾರೆ.

ಪಂಕಾಜ್ ಪಾಟ್ನಾದಲ್ಲಿದ್ದ ವೇಳೆಯಲ್ಲಿ ನಾಟಕಗಳನ್ನು ನೋಡುವ ಹವ್ಯಾಸವನ್ನು ರೂಢಿಸಿಕೊಳ್ಳುತ್ತಾರೆ. ಹೀಗೆ ನಾಟಕಗಳನ್ನು ನೋಡುವಾಗ ಒಂದು ದಿನ ‘ಅಂಧ ಕುವಾನ್’ ನಾಟಕದಲ್ಲಿ ನಟಿ ಪ್ರಣೀತಾ ಜೈಸ್ವಾಲ್ ನಟನೆ ಪಂಕಾಜ್ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಆದಾದ ಬಳಿಕ ಪಾಟ್ನಾದಲ್ಲಿ ನಡೆಯುವ ನಾಟಕಗಳನ್ನು ತಪ್ಪದೆ ನೋಡುವ ಖಾಯಂ ವೀಕ್ಷಕನಾಗಿ ಪಂಕಾಜ್ ಬೆಳೆಯುತ್ತಾರೆ. ಕೆಲವೊಮ್ಮೆ ಸೈಕಲ್ ನಲ್ಲಿ ಕ್ರಮಿಸುವ ದೂರಕ್ಕೆ, ದೇಹಕ್ಕೆ ದಣಿವೆ ಇಲ್ಲದ ಹಾಗೆ ಪಂಕಾಜ್ ನಾಟಕದ ಲೋಕದೊಳಗೆ ಮಗ್ನನಾಗಿ ಬಿಡುತ್ತಾರೆ.

ಹೊಟೇಲ್ ಕೆಲಸ, ಅರೆ ಹೊತ್ತಿನ ನಿದ್ದೆ ಹಾಗೂ ನಟನೆ : ಪಂಕಾಜ್ ರಂಗಭೂಮಿಯ ಕಲಾವಿದನಾಗಿ ಸ್ಥಳೀಯ ರಂಗದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ನಡುವೆ ಪಂಕಾಜ್ ರಿಗೆ ಬದುಕಿನ ಬವಣೆ ಕಾಡಲು ಶುರು ಆಗುತ್ತದೆ. ಬಿಹಾರ್ ರಂಗಭೂಮಿಗೆ 3 ವರ್ಷಕ್ಕೆ ಸೇರುವ ಪಂಕಾಜ್ ಕಷ್ಟಪಟ್ಟು ಕಲಾವಿದನ ಹಾದಿಯಲ್ಲಿ ಬಣ್ಣ ಹಚ್ಚಲು ಶುರು ಮಾಡುತ್ತಾರೆ. ತಮ್ಮ ಖರ್ಚಿಗಾಗಿ ಖಾಸಗಿ ಹೊಟೇಲ್ ವೊಂದರಲ್ಲಿ ರಾತ್ರಿ ಪಾಳಿಯ ಕೆಲಸ ಮಾಡಿ, ಬೆಳಗ್ಗಿನ ವೇಳೆಯಲ್ಲಿ ರಂಗಭೂಮಿಯಲ್ಲಿ ತೊಡಗಿಕೊಳ್ಳುತ್ತಾರೆ. ಕಣ್ಣು ಪೂರ್ತಿ ನೆಮ್ಮದಿಯಾಗುವ ನಿದ್ದೆಯೂ ಇಲ್ಲದೆ, ದೇಹ ಪೂರ್ತಿ ವಿಶ್ರಾಂತಿ ಆಗುವ ದಿನವೂ ಇಲ್ಲದೆ ಪಂಕಾಜ್ ಸವಾಲಿನ ದಿನಗಳಲ್ಲಿ ಸಾಗಿ ಬರುತ್ತಾರೆ.

ಸಾವಿರಾರು ಕನಸುಗಳ ತಾಣ NSD ಯಲ್ಲಿ ಪಂಕಾಜ್ .. : ನಟನೆಯಲ್ಲಿ ಪಳಗಿದ ಪಂಕಾಜ್ ತ್ರಿಪಾಠಿ, ದೊಡ್ಡ ಪರದೆಯಲ್ಲಿ ಕಾಣುವ ಹಂಬಲದೊಂದಿಗೆ ದಿಲ್ಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ದಾಖಲಾತಿಯನ್ನು ಪಡೆದುಕೊಳ್ಳುತ್ತಾರೆ. 2004 ರಲ್ಲಿ ಎನ್ ಎಸ್ ಡಿ ಯಿಂದ ಪದವಿಯನ್ನು ಪಡೆದುಕೊಳ್ಳುತ್ತಾರೆ. ಅದೇ ವರ್ಷ ಪಂಕಾಜ್ ಮೃದುಲಾ ತ್ರಿಪಾಠಿ ರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇದಾದ ಬಳಿಕ ಜವಾಬ್ದಾರಿ ಮೂಟೆಯ ಹೊರೆ ಪಂಕಾಜ್ ಬೆನ್ನಿಗೆ ಇನ್ನಷ್ಟು ಹೆಚ್ಚು ಮಾಡುತ್ತದೆ. 2004 ರಲ್ಲಿ ಪಂಕಾಜ್ ದಿಲ್ಲಿಯಿಂದ ಅವಕಾಶವನ್ನು ಹುಡುಕಲು ಕನಸಿನ ನಗರ ಮುಂಬಯಿಗೆ ಪಯಣ ಬೆಳೆಸುತ್ತಾರೆ.

ಮುಂಬಯಿಯಲ್ಲಿ ಅವಕಾಶವನ್ನು ಹುಡುಕುವ ಭರದಲ್ಲಿ ಅಲೆದಾಟ ನಡೆಸುವ ಪಂಕಾಜ್ ಗೆ ಟಿವಿ ಸೀರಿಯಲ್ ಹಾಗೂ ಇತರ ಕಡೆ ಸಣ್ಣ ಪುಟ್ಟ ನಟನೆಗೆ ಅವಕಾಶ ಲಭಿಸುತ್ತದೆ. ಸಣ್ಣ ಪುಟ್ಟ ನಟನೆಯಲ್ಲಿ ಸಿಗುತ್ತಿದ್ದ ಸಂಬಳ ಎರಡು ಹೊತ್ತಿನ ಊಟಕ್ಕೂ ಸಾಲದ್ದಷ್ಟು ಇರುತ್ತಿತ್ತು. ಪಂಕಾಜ್ ತ್ರಿಪಾಠಿಗೆ ಮೊದಲ ಬಾರಿ ‘ ರನ್ ‘ ಚಿತ್ರದಲ್ಲಿ ಪಾತ್ರಕ್ಕೆ ಬಣ್ಣ ಹಚ್ಚುವ ಅವಕಾಶ ದೊರಕಿತ್ತು.ಆದರೆ ಆ ಪಾತ್ರ ಹೀಗೆ ಬಂದು, ಹಾಗೆ ಹೋಗುವಷ್ಟು ಸಣ್ಣದಾಗಿತ್ತು. ನೂರಾರು ಕಡೆ ಆಡಿಷನ್ ನೀಡಿ, ಕಾಯುವ ದಿನಗಳು ಪಂಕಾಗ್ ಬದುಕಿನ ಅತ್ಯಂತ ಕರಾಳ ದಿನಗಳಾಗಿತ್ತು.

ಬದುಕು ಬದಲಾಯಿಸಿದ Gangs of wasseypur :  ವರ್ಷಗಳು ಉರುಳುತ್ತವೆ.2010 ರಲ್ಲಿ ಸ್ಟಾರ್ ಪ್ಲಸ್ ನಲ್ಲಿ ಬರುತ್ತಿದ್ದ “ ಗುಲಾಲ್ “ ಕಾರ್ಯಕ್ರಮದಲ್ಲಿ ಪಂಕಾಜ್ ನಟಿಸುತ್ತಾ ಇದ್ರು. ನಟನೆ ನೋಡಿ ಮೆಚ್ಚಿದ ನಿರ್ದೇಶಕ ಮುಕೇಶ್ ಚಾಬ್ರ. ಅವರನ್ನು ಅನುರಾಗ್ ಕಶ್ಯಪ್ ರ Gangs of wasseypur ಚಿತ್ರದ ಆಡಿಷನ್ ನಲ್ಲಿ ಭಾಗವಹಿಸಲು ಹೇಳುತ್ತಾರೆ. ಪಂಕಾಜ್ ಸತತ ಎಂಟು ಗಂಟೆಯ ಆಡಿಷನ್ ಬಳಿಕವೂ ಅನುರಾಗ್ ಕಶ್ಯಪ್ ಪಂಕಾಜ್ ರನ್ನು ನಿರಾಕರಿಸುತ್ತಾರೆ.ಆದರೆ ಅದೃಷ್ಟ ಎಂಬಂತೆ, ಕಶ್ಯಪ್ ಮುಕೇಶ್ ಅವರ ಒತ್ತಾಯದಿಂದ ಪಂಕಾಜ್ ರನ್ನು ಚಿತ್ರಕ್ಕೆ ಆಯ್ದುಕೊಂಡು ಸುಲ್ತಾನ್ ಪಾತ್ರವನ್ನು ನೀಡುತ್ತಾರೆ.

ಪಂಕಾಜ್ ಸುಲ್ತಾನ್ ನಾಗಿ ಹಾಗೂ ಚಿತ್ರ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದ ಹಿಟ್ ಆಗಿ ಹೊರ ಹೊಮ್ಮಿದಾಗ, ಪಂಕಾಜ್ ತ್ರಿಪಾಠಿ ಎಂಬ ಬಿಹಾರದ ಹುಡುಗ ಬಾಲಿವುಡ್ ಬಣ್ಣದ ಲೋಕದಲ್ಲಿ ಮಿಂಚಲು ಆರಂಭಿಸುತ್ತಾರೆ.

ಸಾಲು ಸಾಲು ಸಿನಿಮಾಗಳ ಸರದಾರ : Gangs of wasseypur ಚಿತ್ರದ ನಟನೆಯಿಂದ ಜನಮಾನಸದಲ್ಲಿ ನೆಲೆ ನಿಲ್ಲುವ ಪಂಕಾಜ್ ತ್ರಿಪಾಠಿ, ಮುಂದೆ ಫುಕ್ರೆ, ಮಸಾನ್, ನಿಲ್ ಬಟ್ಟೆ ಸನ್ನಾಟಾ, ಬರೇಲಿ ಕಿ ಬರ್ಫಿ, ನ್ಯೂಟನ್ ,ಫುಕ್ರೆ ರಿಟಾನ್ಸ್, ಸ್ಟ್ರೀ, ಗುಂಜನ್ ಸಕ್ಸೇನಾ: ಕಾರ್ಗಿಲ್ ಗರ್ಲ್, ಇನ್ನು ಹಲವಾರು ಚಿತ್ರಗಳಲ್ಲಿ ಮಿಂಚಿದ್ದಾರೆ. ಮಿರ್ಜಾಪುರ್ ವೆಬ್ ಸಿರೀಸ್ ನ ಸೀಸನ್ 1 ಹಾಗೂ 2 ರಲ್ಲಿ ಹಾಗೂ Sacred Games ನ ಅಭಿನಯಕ್ಕೆ ಮನಸೋಲದವರೇ ಇಲ್ಲ. ನ್ಯೂಟಾನ್ ಚಿತ್ರದಲ್ಲಿನ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಸದ್ಯ ಪಂಕಾಜ್ ತ್ರಿಪಾಠಿ ತನ್ನ ಸಹಜ ನಟನೆಯಿಂದ ಎಂಥಾ ಪಾತ್ರವನ್ನೂ, ಪ್ರೇಕ್ಷಕನನ್ನು ಸೆಳೆದಿಟ್ಟುಕೊಳ್ಳುವಷ್ಟು ಇಷ್ಟವಾಗುವ ನಟ.

 

ಸುಹಾನ್ ಶೇಕ್

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.5ರಷ್ಟು ಕುಸಿತ; ಆರ್ಥಿಕ ಹಿಂಜರಿತ

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.5ರಷ್ಟು ಕುಸಿತ; ಆರ್ಥಿಕ ಹಿಂಜರಿತ?

ಅಂದು ಭಿಕ್ಷೆ ಬೇಡುತ್ತಿದ್ದವಳು ಈಗ ನ್ಯಾಯವಾದಿ! 50ಕ್ಕೂ ಅಧಿಕ ಕೇಸು ಗೆದ್ದ ಹಿರಿಮೆ ಈಕೆಯದ್ದು

ಅಂದು ಭಿಕ್ಷೆ ಬೇಡುತ್ತಿದ್ದವಳು ಈಗ ನ್ಯಾಯವಾದಿ! 50ಕ್ಕೂ ಅಧಿಕ ಕೇಸು ಗೆದ್ದ ಹಿರಿಮೆ ಈಕೆಯದ್ದು

WEBSITE-SIZE

ಧವನ್, ಪಾಂಡ್ಯ ಅಬ್ಬರದ ಹೊರತಾಗಿಯೂ ಆಸೀಸ್ ವಿರುದ್ದ ಮುಗ್ಗರಿಸಿದ ಭಾರತ !

ಕೋವಿಡ್ 19ಗೆ ಲಸಿಕೆ ಲಭ್ಯವಾಗುವವರೆಗೆ ಕಠಿಣ ಕಾನೂನು ಜಾರಿಗೊಳಿಸಿ: ಕೇಂದ್ರಕ್ಕೆ ಸುಪ್ರೀಂ

ಕೋವಿಡ್ 19ಗೆ ಲಸಿಕೆ ಲಭ್ಯವಾಗುವವರೆಗೆ ಕಠಿಣ ಕಾನೂನು ಜಾರಿಗೊಳಿಸಿ: ಕೇಂದ್ರಕ್ಕೆ ಸುಪ್ರೀಂ

ನಮ್ಮ ಸರಕಾರ ಮಹಾರಾಷ್ಟ್ರದ ಜನತೆಯ ಆಶೀರ್ವಾದದ ಫ‌ಲ! ಇಡಿ, ಸಿಬಿಐನಿಂದ ಬೆದರಿಸಲಾಗದು: ಉದ್ಧವ್‌

ನಮ್ಮ ಸರಕಾರಕ್ಕೆ ಮಹಾರಾಷ್ಟ್ರ ಜನತೆಯ ಆಶೀರ್ವಾದವಿದೆ! ED, CBIನಿಂದ ಬೆದರಿಸಲಾಗದು: ಉದ್ಧವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಏಕದಿನದ ಯಶಸ್ವಿ ಚೇಸಿಂಗ್‌ ದಾಖಲೆ: ಅಂತಿಮ ಓವರ್‌ನಲ್ಲಿ ಅತ್ಯಧಿಕ ರನ್‌ ಚೇಸ್

ಏಕದಿನದ ಯಶಸ್ವಿ ಚೇಸಿಂಗ್‌ ದಾಖಲೆ: ಅಂತಿಮ ಓವರ್‌ನಲ್ಲಿ ಅತ್ಯಧಿಕ ರನ್‌ ಚೇಸ್

0000

ಕಣ್ಣಿಲ್ಲದವನಲ್ಲಿ ಸಾಧಿಸುವ ಕನಸಿತ್ತು : ಕೋಟಿ ಕೋಟಿ ಲಾಭ ಗಳಿಸುವ ಸಂಸ್ಥೆಯ ಸಿಇಓ ಶ್ರೀಕಾಂತ್

ರಾಜಕೀಯ ಖೈದಿ: ಸೌದಿ ಮಹಿಳಾ ಹಕ್ಕು ಹೋರಾಟಗಾರ್ತಿ ಲೌಜೈನ್ ಅಲ್-ಹಾಥ್ಲೌಲ್ ರ ಬಗ್ಗೆ ಗೊತ್ತಾ?

ರಾಜಕೀಯ ಖೈದಿ: ಸೌದಿಯ ಮಹಿಳಾ ಹಕ್ಕು ಹೋರಾಟಗಾರ್ತಿ ಲೌಜೈನ್ ಅಲ್-ಹಥ್ಲೌಲ್ ರ ಬಗ್ಗೆ ಗೊತ್ತಾ?

ನೃತ್ಯಪಟುವಾಗಿದ್ದಾಕೆ ಟೀಂ ಇಂಡಿಯಾ ನಾಯಕಿಯಾದ ಕಥೆ: ಮಹಿಳಾ ಕ್ರಿಕೆಟ್ ನ ದಂತಕಥೆ ಮಿಥಾಲಿ

ನೃತ್ಯಪಟುವಾಗಿದ್ದಾಕೆ ಟೀಂ ಇಂಡಿಯಾ ನಾಯಕಿಯಾದ ಮಹಿಳಾ ಕ್ರಿಕೆಟ್ ನ ದಂತಕಥೆ ಮಿಥಾಲಿ

0320

ಹೃದಯವಂತ ವಡಪಾವ್ ಅಂಕಲ್ : ವಿದ್ಯಾರ್ಥಿಗಳಿಗೆ 5 ರೂಪಾಯಿಯಲ್ಲಿ ಹೊಟ್ಟೆ ತುಂಬುವ ವಡಪಾವ್

MUST WATCH

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

ಹೊಸ ಸೇರ್ಪಡೆ

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

QS‌ 2021 ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್‌

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ

ಮುಂಬಯಿಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ  ಭಾರೀ ಇಳಿಕೆ

ಮುಂಬಯಿಯಲ್ಲಿ ಅಪಘಾತಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.5ರಷ್ಟು ಕುಸಿತ; ಆರ್ಥಿಕ ಹಿಂಜರಿತ

2ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.5ರಷ್ಟು ಕುಸಿತ; ಆರ್ಥಿಕ ಹಿಂಜರಿತ?

ಗ್ರಾಪಂ ಚುನಾವಣೆಗೆ ಬಿಜೆಪಿ ಸಿದ್ಧತೆ

ಗ್ರಾಪಂ ಚುನಾವಣೆಗೆ ಬಿಜೆಪಿ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.