Udayavni Special

ಆರೋಗ್ಯವರ್ಧಕ ಬೆಳ್ಳುಳ್ಳಿ ಯಾವೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಗೊತ್ತೇ?


ಮಹೇಶ್ ಹೆಬ್ರಿ, Oct 26, 2020, 9:26 AM IST

Garlic-730

ಮನೆ ಮದ್ದು ಮತ್ತು ಆಯುರ್ವೇದದಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿರುವ ಬೆಳ್ಳುಳ್ಳಿ ತನ್ನ ಸಣ್ಣ ಗಾತ್ರದ ಎಸಳಿನಲ್ಲಿ ಸಾಗರ ಸಮಾನವಾದ ಆರೋಗ್ಯ ಗುಣಗಳನ್ನು ಹೊಂದಿದೆ. ಮಕ್ಕಳಿಗೆ ಹೊಟ್ಟೆ ಹುಳದ ಸಮಸ್ಯೆಗೆ, ಅಜೀರ್ಣ ಸಮಸ್ಯೆ ಸೇರಿದಂತೆ ಹಲವಾರು ಸಣ್ಣ ಆರೋಗ್ಯ ಸಮಸ್ಯೆಗಳಿಗೆ ತತ್ ಕ್ಷಣದ ರಾಮಬಾಣ ಈ ಬೆಳ್ಳುಳ್ಳಿ. ಇನ್ನು ಇದರಿಂದ ದೀರ್ಘಕಾಲೀನ ಆರೋಗ್ಯ ಪ್ರಯೋಜನಗಳೂ ಇವೆ. ಇವೆಲ್ಲದರ ಕುರಿತಾಗಿ ನೋಡುವುದಾದರೆ…

ಕರುಳಿನಲ್ಲಿ ಹುಣ್ಣು ಆಗಿದ್ದರೆ ಆಯುರ್ವೇದ ಸೂಚಿಸುವ ಸಿದ್ಧ ಔಷಧಿ ಎಂದರೆ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಹಸಿಯಾಗಿ ತಿನ್ನುವುದು. ವರ್ಷಾಂತರಗಳಿಂದ ಬೆಳ್ಳುಳ್ಳಿ ನಮ್ಮ ಅಡುಗೆಗಳಲ್ಲಿ ಪ್ರಮುಖ ಸಾಂಬಾರ ಪದಾರ್ಥವಾಗಿ ಉಪಯೋಗಿಸಲ್ಪಡುತ್ತಿದೆ. ಅಜ್ಜಿ ತಲೆ ಮೇಲೆ ಗುದ್ದಿದರೆ ನೂರು ಮೊಮ್ಮಕ್ಕಳು ಎಂಬ ಒಗ್ಗಟ್ಟಿಗೆ ಉತ್ತರ ನೀಡುವ ಈ ಪುಟ್ಟ ಬಿಳಿಯ ಎಸಳಿನಲ್ಲಿ ಆರೋಗ್ಯಕರ ಅಂಶಗಳ ಭಂಡಾರವೇ ಇದೆ.

ಬೆಳ್ಳುಳ್ಳಿ ಹೇಗೆ ನಮ್ಮನ್ನು ರಕ್ಷಿಸುತ್ತದೆ?
ನಮ್ಮ ಆಹಾರದ ಮೂಲಕ ಧಾಳಿಯಿಡುವ ವೈರಸ್ಸುಗಳು, ಬೂಸು, ಯೀಸ್ಟ್ ಮತ್ತು ಕ್ರಿಮಿಗಳ ಮೂಲಕ ಪ್ರಾರಂಭವಾಗುವ ಸೋಂಕು ಆಗದಿರುವಂತೆ ನೋಡಿಕೊಳ್ಳುತ್ತದೆ.

ಚರ್ಮದ ಸೋಂಕಿನಿಂದ ರಕ್ಷಿಸುತ್ತದೆ
ಬೆಳ್ಳುಳ್ಳಿಯ ಜೀವಿರೋಧಿ ಗುಣಗಳ ಕಾರಣ ಚರ್ಮವನ್ನು ಬಾಧಿಸುವ ಹಲವು ಬ್ಯಾಕ್ಟೀರಿಯಾಗಳಿಂದ ರಕ್ಷಣೆ ನೀಡುತ್ತದೆ.

ಉಪಯೋಗಿಸುವ ವಿಧಾನ: ಹುಳಕಡ್ಡಿ ಮತ್ತು ಬೆರಳಸಂದುಗಳಲ್ಲಿ ಆಗಿರುವ ಸೋಂಕು ನಿವಾರಿಸಲು ಬೆಳ್ಳುಳ್ಳಿಯನ್ನು ಅರೆದು ರಸ ಹಿಂಡಿ ತೆಗೆಯಿರಿ. ಇದರ ಕೆಲವು ತೊಟ್ಟುಗಳನ್ನು ಬಾಧಿಕ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಕೊಂಚ ಉರಿ ಎನಿಸಿದರೂ ಒಂದೆರಡು ದಿನಗಳಲ್ಲಿಯೇ ಉತ್ತಮ ಪರಿಣಾಮ ದೊರಕುತ್ತದೆ. ಸುಮಾರು ಒಂದು ಘಂಟೆಯ ಬಳಿಕ ತಣ್ಣೀರಿನಿಂದ ತೊಳೆದು ಒರಎಸಿಕೊಳ್ಳಿ. (ಸೋಪು ಉಪಯೋಗಿಸಬಾರದು) ದಿನಕ್ಕೆ ಎರಡು ಬಾರಿ ಹಚ್ಚಿಕೊಳ್ಳಬೇಕು.

ರಕ್ತ ಶೀಘ್ರ ಹೆಪ್ಪುಗಟ್ಟದಂತೆ ರಕ್ಷಿಸುತ್ತದೆ
ವಾಸ್ತವವಾಗಿ ಯಾವುದೇ ಗಾಯವಾದರೂ ರಕ್ತ ಹೆಪ್ಪುಗಟ್ಟಬೇಕು, ಆಗಲೇ ಸ್ರಾವ ನಿಲ್ಲುವುದು. ಇದು ದೇಹದ ಹೊರಭಾಗದ ಗಾಯಗಳಿಗೆ ಅನ್ವಯಿಸುತ್ತದೆ. ಒಂದು ವೇಳೆ ಯಾವುದೋ ಕಾರಣದಿಂದ ದೇಹದೊಳಗಣ ಭಾಗಗಳಲ್ಲಿ ಗಾಯವಾದರೆ, ಆಗ ರಕ್ತ ಕೂಡಲೇ ಹೆಪ್ಪುಗಟ್ಟಿಬಿಟ್ಟರೆ, ಒಳಗಿನ ರಕ್ತವಷ್ಟೂ ಹೆಪ್ಪುಗೊಳ್ಳುತ್ತಾ ಹೋಗಿ ಹೃದಯಾಘಾತಕ್ಕೆ ಕಾರಣವಾಗಬಲ್ಲದು. ಇನ್ನೊಂದೆಡೆ ರಕ್ತ ಹೆಪ್ಪುಗಟ್ಟಲು ದೀರ್ಘ ಸಮಯ ತೆಗೆದುಕೊಂಡರೆ ಶಸ್ತ್ರಚಿಕಿತ್ಸೆಯ ಬಳಿಕ ಗಾಯಗಳು ಮಾಗಲು ತುಂಬಾ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಆದುದರಿಂದ ನಮ್ಮ ದೇಹಕ್ಕೆ ಅತ್ಯಂತ ಶೀಘ್ರವೂ ಅಲ್ಲದ, ಅತ್ಯಂತ ನಿಧಾನವೂ ಅಲ್ಲದ ಹೆಪ್ಪುಗಟ್ಟುವ ಸಮಯದ ಅಗತ್ಯವಿದೆ. ಬೆಳ್ಳುಳ್ಳಿ ಈ ಸಮಯವನ್ನು ಪಾಲಿಸಲು ದೇಹಕ್ಕೆ ನೆರವಾಗುತ್ತದೆ. ಪ್ರತಿದಿನ ಖಾಲಿಹೊಟ್ಟೆಯಲ್ಲಿ ಒಂದೇ ಒಂದು ಎಸಳು ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ಸೇವಿಸುವುದು ಉತ್ತಮ.

ನಿಮ್ಮ ಹೃದಯವನ್ನು ರಕ್ಷಿಸುತ್ತದೆ
ಹೃದಯದಿಂದ ರಕ್ತ ಪೂರೈಕೆಯಾಗಲು ಹೃದಯ ರಕ್ತನಾಳಗಳ ಮೂಲಕ ಒಂದು ಒತ್ತಡದಲ್ಲಿ ರಕ್ತವನ್ನು ನೂಕುತ್ತದೆ. ಈ ನೂಕುವಿಕೆ ನರಗಳ ಒಳಭಾಗದಲ್ಲಿ ಸ್ವಲ್ಪ ಒತ್ತಡವನ್ನು ನೀಡುತ್ತದೆ. ಈ ಒತ್ತಡದ ಕಾರಣ ನರಗಳು ಪ್ರತಿ ಬಡಿತದಲ್ಲಿಯೂ ಹಿಗ್ಗುತ್ತದೆ. (ಈ ಹಿಗ್ಗುವಿಕೆಯನ್ನೇ ನಾಡಿ ಎನ್ನುತ್ತೇವೆ. ಇದು ಸ್ಪಷ್ಟವಾಗಿ ಅನುಭವಕ್ಕೆ ಬರುವಲ್ಲಿ ವೈದ್ಯರು ಹಿಡಿದು ಹೃದಯದ ಬಡಿತವನ್ನು ಪರೀಕ್ಷಿಸುತ್ತಾರೆ). ವಯಸ್ಸಿನೊಂದಿಗೇ ನಮ್ಮ ನರಗಳು ಈ ಸೆಳೆತವನ್ನು ಕಳೆದುಕೊಳ್ಳುತ್ತಾ ಬರುತ್ತವೆ.

ಹೆಚ್ಚು ಬಾಧಿತ ನರಗಳು ಒಳಗಿನಿಂದ ಮುಚ್ಚಿಕೊಂಡು ಹಲವು ತೊಂದರೆಗಳಿಗೆ ಆಹ್ವಾನ ನೀಡುತ್ತದೆ. ಉಲ್ಬಣಗೊಂಡ ಸ್ಥಿತಿ ಹೃದಯಾಘಾತಕ್ಕೂ ಕಾರಣವಾಗಬಲ್ಲುದು. ಬೆಳ್ಳುಳ್ಳಿ ಈ ಸ್ಥಿತಿಯಿಂದ ನಮ್ಮನ್ನು ರಕ್ಷಿಸುತ್ತದೆ. ಜೊತೆಗೇ ನರಗಳ ಒಳಗೆ ರಕ್ತ ಹೆಪ್ಪುಗಟ್ಟದಂತೆಯೂ ರಕ್ಷಣೆ ನೀಡುತ್ತದೆ.

ಹಲ್ಲುನೋವಿನಿಂದ ಮುಕ್ತಿ ನೀಡುತ್ತದೆ
ಒಸಡುಗಳ ಸಂದುಗಳಲ್ಲಿ ಉಳಿದಿದ್ದ ಆಹಾರ ಕೊಳೆತು ಬ್ಯಾಕ್ಟೀರಿಯಾಗಳು ಒಸಡಿನ ಮೇಲೆ ಧಾಳಿ ಮಾಡಿದಾಗ ಹಲ್ಲುನೋವು ಉಂಟಾಗುತ್ತದೆ. ಬೆಳ್ಳುಳ್ಳಿಯ ಜೀವಿರೋಧಿ  ಗುಣದ ಕಾರಣ ಈ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.

ಉಪಯೋಗಿಸುವ ವಿಧಾನ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ನಯವಾಗಿ ಅರೆದು ಹಲ್ಲುಜ್ಜುವ ಪೇಸ್ಟ್ ನಂತೆ ನೇರವಾಗಿ ಬ್ರಶ್ ಮೇಲೆ ಹಚ್ಚಿ ಹಲ್ಲುಜ್ಜಿರಿ. ಒಂದು ವೇಳೆ ಒಸಡುಗಳು ಹೆಚ್ಚು ಬಾಧಿತವಾಗಿದ್ದರೆ ಸ್ವಲ್ಪ ಹೆಚ್ಚಿನ ಉರಿ ತರಿಸಬಹುದು. ಈ ಉರಿ ತಾತ್ಕಾಲಿಕವಾಗಿದ್ದು ಸ್ವಲ್ಪ ಸಮಯದ ಬಳಿಕ ಕಡಿಮೆಯಾಗುತ್ತದೆ. ಆದರೆ ಹಲ್ಲುನೋವಿನಿಂದ ಶೀಘ್ರವೇ ಉಪಶಮನ ನೀಡುತ್ತದೆ.

– ಮಹೇಶ್ ಹೆಬ್ರಿ 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

Village

ವ್ಯಾಜ್ಯಮುಕ್ತ, ಭಯಮುಕ್ತ ರಾಜ್ಯ ನಮ್ಮದಾಗಲಿ…

Sportsಟಿ20: ಸರಣಿ ಗೆಲುವಿನತ್ತ ಭಾರತದ ದಿಟ್ಟ ಹೆಜ್ಜೆ

ಟಿ20: ಸರಣಿ ಗೆಲುವಿನತ್ತ ಭಾರತದ ದಿಟ್ಟ ಹೆಜ್ಜೆ

ಡಿ.10ಕ್ಕೆ ಹೊಸ ಸಂಸತ್‌ ಭವನಕ್ಕೆ ಮೋದಿ ಶಂಕು

ಡಿ.10ಕ್ಕೆ ಹೊಸ ಸಂಸತ್‌ ಭವನಕ್ಕೆ ಮೋದಿ ಶಂಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೋಡಬನ್ನಿ ಪ್ರಕೃತಿ ಸೌಂದರ್ಯದ ಕುಂದಾದ್ರಿ ಬೆಟ್ಟ; ಸಮುದ್ರ ಮಟ್ಟದಿಂದ 3200 ಅಡಿ ಎತ್ತರ

ನೋಡಬನ್ನಿ ಪ್ರಕೃತಿ ಸೌಂದರ್ಯದ ಕುಂದಾದ್ರಿ ಬೆಟ್ಟ; ಸಮುದ್ರ ಮಟ್ಟದಿಂದ 3200 ಅಡಿ ಎತ್ತರ!

ಭಾರತ- ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗಾವಸ್ಕರ್ ಸರಣಿಗಿದೆ ರೋಚಕ ಇತಿಹಾಸ

ಭಾರತ- ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗವಾಸ್ಕರ್ ಸರಣಿಗಿದೆ ರೋಚಕ ಇತಿಹಾಸ!

Untitled-1

ಬದುಕಿಗಾಗಿ ಗುಜರಿ ಆಯುತ್ತಿದ್ದ ಹುಡುಗ, ಅಂತಾರಾಷ್ಟ್ರೀಯ ಮಟ್ಟದ ಫೋಟೋಗ್ರಾಫರ್ ಆಗಿ ಬೆಳೆದ ಕಥೆ

whatsapp-OTP-scam

ವಾಟ್ಸಾಪ್ ಹೇಗೆ ಹ್ಯಾಕ್ ಆಗುತ್ತದೆ ಗೊತ್ತಾ? ಏನಿದು ನಿಗೂಢ OTP ಸ್ಕ್ಯಾಮ್…

coocking.jpg

ಒಂದೇ ಎಲೆಯುಳ್ಳ ಪುಟ್ಟ ಮೂಲಿಕಾ ಸಸ್ಯ…ಒಂದೆಲಗ ರುಚಿ ಹಲವು

MUST WATCH

udayavani youtube

ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಇಬ್ಬರ ಬಂಧನ

udayavani youtube

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ | Udayavani

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

ಹೊಸ ಸೇರ್ಪಡೆ

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ಗೆಳೆಯರನ್ನು ಆಗಾಗ ಮಾತಾಡಿಸ್ತಾ ಇದೀರಾ?

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ದೇಶದೊಳಗಿನ ಸೈನಿಕರೇ ಗೃಹ ರಕ್ಷಕರು

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಕಾಂಗ್ರೆಸ್‌ ಸಖ್ಯದಿಂದ ನನ್ನ ಹೆಸರು ಸರ್ವನಾಶ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

Village

ವ್ಯಾಜ್ಯಮುಕ್ತ, ಭಯಮುಕ್ತ ರಾಜ್ಯ ನಮ್ಮದಾಗಲಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.