ಜಗತ್ತಿನ ಅತೀ ವೇಗದ ಇಂಟರ್ ನೆಟ್ ಡೇಟಾ ದಾಖಲೆ: ಸೆಕೆಂಡ್ ನಲ್ಲಿ ಸಾವಿರ ಸಿನಿಮಾ ಡೌನ್ ಲೋಡ್ !


Team Udayavani, Oct 27, 2020, 8:14 PM IST

speed-inter-net

ಪ್ರತಿಯೊಬ್ಬರೂ ಕೂಡ ಇಂಟರ್ ನೆಟ್ ಬಳಸುವಾಗ ಡೇಟಾ ವೇಗ ಇನ್ನಷ್ಟು ಹೆಚ್ಚಿರಬೇಕಿತ್ತಲ್ಲಾ ಎಂದು  ಒಂದಲ್ಲಾ ಒಂದು ಬಾರಿ ಯೋಚಿಸಿರುತ್ತಾರೆ. ಆದರೇ ಎಷ್ಟು ವೇಗ ? 40 Mbps ಅಥವಾ 1 Gbps ?

ಆಸ್ಟ್ರೇಲಿಯಾದ  ಕೆಲವು ವಿಶ್ವವಿದ್ಯಾನಿಲಯದ ಸಂಶೋಧಕರು ಅತೀ ವೇಗದ ಇಂಟರ್ ನೆಟ್ ಡೇಟಾದ ಸಂಪರ್ಕ ಸಾಧಿಸಿದ್ದು, ಇದರಲ್ಲಿ ಸೆಕೆಂಡ್ ಗೆ 1,000 ಸಿನಿಮಾಗಳನ್ನು ಡೌನ್ ಲೋಡ್ ಮಾಡಬಹುದಾಗಿದೆ.

ಆಶ್ಚಯರ್ವಾದರೂ ಸತ್ಯ. ಆಸ್ಟ್ರೇಲಿಯಾದ ಮೊನಾಶ್ ವಿಶ್ವವಿದ್ಯಾಲಯ, ಸ್ವಿನ್‌ ಬರ್ನ್ ವಿಶ್ವವಿದ್ಯಾಲಯ ಮತ್ತು ಆರ್‌ಎಂಐಟಿ ವಿಶ್ವವಿದ್ಯಾನಿಲಯಗಳು ಒಟ್ಟಾಗಿ ಅಂತರ್ಜಾಲ ವೇಗದ ದಾಖಲೆಯನ್ನು ಮುರಿಯುವ ಮಾರ್ಗವನ್ನು ರೂಪಿಸಿವೆ.

ಈ ಸಂಶೋಧಕರು ನಡೆಸಿರುವ ಪರೀಕ್ಷೆಯಲ್ಲಿ ಪ್ರತಿ ಸೆಕೆಂಡ್ ಗೆ 44.2 ಟೆರಾಬಿಟ್ಸ್ ವೇಗಾದ ಡೇಟಾ ದಾಖಲಾಗಿದೆ.  ಈ ಡೇಟಾದಲ್ಲಿ ಎಚ್ ಡಿ ಗುಣಮಟ್ಟದ 1,000 ಸಿನಿಮಾಗಳನ್ನು ಪ್ರತಿ ಸೆಕೆಂಡ್ ಗೆ ಡೌನ್ ಲೋಡ್ ಮಾಡಬಹುದಾಗಿದೆ.  ಆಪ್ಟಿಕಲ್ ಚಿಪ್ ಬಳಸಿ ಇದನ್ನು ಅಭಿವೃದ್ಧಿ ಪಡಿಸಲಾಗಿದ್ದು ಹಲವು ರಾಷ್ಟ್ರಗಳಿಗೆ  ಟೆಲಿಕಮ್ಯೂನಿಕೇಷನ್ ಸಾಮಾರ್ಥ್ಯ ಹೆಚ್ಚಿಸಕೊಳ್ಳಲು ಈ ಸಂಶೋಧನೆ ನೆರವಾಗಲಿದೆ.

ಪ್ರಸ್ತುತ ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಫೈಬರ್ ಆಪ್ಟಿಕ್ ತಂತ್ರಜ್ಞಾನದೊಂದಿಗೆ ‘ಬ್ರಾಡ್ ಬ್ಯಾಂಡ್ ಇಂಟರ್ ನೆಟ್’ ನೆಟ್ ವರ್ಕ್ ನಲ್ಲಿ ಬಳಸುವಂತಹ ಒಂದು ಹೊಸ ಸಾಧನವನ್ನು ಉಪಯೋಗಿಸಿ ಅತ್ಯಂತ ವೇಗಾದ ಡೇಟಾ ಸಂಪರ್ಕ ಸಾಧಿಸಲಾಗಿದೆ. ಇದನ್ನು ಆಸ್ಟ್ರೇಲಿಯಾದ ಆರ್ ಎಂಐಟಿ ಯುನಿವರ್ಸಿಟಿಯಿಂದ ಮೋನಾಷ್ ಯುನಿವರ್ಸಿಟಿ ಕ್ಲೇಟನ್ ಕ್ಯಾಂಪಸ್ ವರೆಗಿನ 76.6 ಕಿ.ಮೀ ಫೈಬರ್ ನಲ್ಲಿ ಪರೀಕ್ಷೆ ನಡೆಸಲಾಗಿದೆ.

ಇಲ್ಲಿ ಉಪಯೋಗಿಸಲಾಗಿರುವ ಹೊಸ ಸಾಧನವು 80 ಲೇಸರ್ ಗಳಿಗೆ ಬದಲಾಗಿ ಬಳಸಬಹುದಾಗಿದ್ದು, ಮೈಕ್ರೋ ಕಾಂಬ್ ಎಂದೇ ಕರೆಯಲಾಗಿದೆ. ಅಂದರೇ ಒಂದೇ ಆಪ್ಟಿಕಲ್ ಚಿಪ್ ಬಳಸಿ ಇಂಟರ್ನೆಟ್ ವೇಗವನ್ನು ಸಾಧಿಸಲಾಗಿದೆ.  ಇದು ಪ್ರಸ್ತುತ ಬಳಕೆಯಲ್ಲಿರುವ ಟೆಲಿಕಮ್ಯೂನಿಕೇಷನ್  ಸಾಧನಗಳಿಗಿಂತ ಚಿಕ್ಕದಾಗಿದೆ ಮತ್ತು ಹಗುರವಾಗಿದೆ.

ಆಪ್ಟಿಕಲ್ ಫೈಬರ್ ಗೆ ಮೈಕ್ರೋ ಕಾಂಬ್ ಆಳವಡಿಸಿ ಗರಿಷ್ಟ ಮಟ್ಟದ ಡೇಟಾ ರವಾನಿಸಲಾಗಿದೆ. ಮೈಕ್ರೋ ಕಾಂಬ್ ಚಿಪ್ ಗಳಿಗೆ ಸಂಬಂಧಿಸಿದ ಸಂಶೋಧನೆ ಕಳೆದ 10 ವರ್ಷಗಳಿಂದ ನಡೆಯುತ್ತಿದೆ.

ಈ ಸಂಶೋಧನೆ ಇನ್ನೂ ಪರೀಕ್ಷಾರ್ಥ  ಹಂತದಲ್ಲಿದ್ದು ಭವಿಷ್ಯದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೋಟ್ಯಂತರ ಜನರು ಮನೆಯಿಂದ ಕೆಲಸ ಮಾಡುತ್ತಿರುವ ಮತ್ತು ಇಂಟರ್ನೆಟ್ ಭಾರೀ ಹೊರೆಯಿರುವ ಈ ಸಮಯದಲ್ಲಿ ಸಂಶೋಧನೆಯು ಗೇಮ್ ಚೇಂಜರ್ ಆಗುವ ಸಾಮರ್ಥ್ಯವನ್ನು ಹೊಂದಿದೆ.

-ಮಿಥುನ್ ಮೊಗೇರ

ಟಾಪ್ ನ್ಯೂಸ್

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.