ಯೋಗವೈವಿಧ್ಯಕ್ಕೆ ನಾಳೆ ಕರುನಾಡು ಸಾಕ್ಷಿ


Team Udayavani, Jun 20, 2022, 10:25 AM IST

ಯೋಗವೈವಿಧ್ಯಕ್ಕೆ ನಾಳೆ ಕರುನಾಡು ಸಾಕ್ಷಿ

ನಾಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ಪ್ರಮುಖ ಕಾರ್ಯಕ್ರಮ ಮೈಸೂರು ಅರಮನೆ ಮುಂಭಾಗದಲ್ಲಿ ನಡೆಯಲಿದೆ. ಸುಮಾರು 15 ಸಾವಿರ ಮಂದಿ ಈ ಯೋಗಾಭ್ಯಾಸದಲ್ಲಿ ಭಾಗಿಯಾಗಲಿದ್ದಾರೆ. ಹಾಗಾದರೆ ಮೈಸೂರಿನ ಜತೆಗೆ ರಾಜ್ಯದ ಇತರ ಭಾಗಗಳಲ್ಲೂ ಹೇಗೆ ಯೋಗಾಭ್ಯಾಸ ನಡೆಯಲಿದೆ? ಎಷ್ಟು ಮಂದಿ ಇದರಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಒಂದು ಮಾಹಿತಿ ಇಲ್ಲಿದೆ.

ದಾವಣಗೆರೆ
ಉಚಿತ ಬಸ್‌ ವ್ಯವಸ್ಥೆ
ದಾವಣಗೆರೆ ಜಿಲ್ಲೆಯ ಐತಿಹಾಸಿಕ ತಾಣ ಸಂತೇಬೆನ್ನೂರಿನ ಪುಷ್ಕರಣಿ, ಇತಿಹಾಸ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಹರಿಹರದ ಹರಿಹರೇಶ್ವರ ದೇವಸ್ಥಾನ, ಹೊನ್ನಾಳಿಯ ಹಿರೇಕಲ್ಮಠದ ಆವರಣದಲ್ಲಿ ಕಾರ್ಯಕ್ರಮ­ಗಳು ನಡೆಯಲಿದ್ದು, ಒಟ್ಟಾರೆಯಾಗಿ 1,500 ಮಂದಿ ಭಾಗಿಯಾಗಲಿ­ದ್ದಾರೆ. ಪ್ರಮುಖ ಕಾರ್ಯಕ್ರಮ ಸಂತೇಬೆನ್ನೂರಿನ ಐತಿಹಾಸಿಕ ಪುಷ್ಕರಣಿಯ ಪಕ್ಕದಲ್ಲಿ ನಡೆಯಲಿದ್ದು, 1500 ಕ್ಕೂ ಹೆಚ್ಚು ಮಂದಿ ಸಾಮೂಹಿಕ ಯೋಗ ಪ್ರದರ್ಶನ ನೀಡಲಿದ್ದಾರೆ. ಜಿಲ್ಲಾಡಳಿತದಿಂದ ಯೋಗಾಸಕ್ತರಿಗಾಗಿ ದಾವಣಗೆರೆಯಿಂದ 10 ಬಸ್‌ಗಳಲ್ಲಿ ಉಚಿತವಾಗಿ ಸಂತೇಬೆನ್ನೂರಿಗೆ ಹೋಗಿ ಬರುವ ವ್ಯವಸ್ಥೆ ಮಾಡಲಾಗಿದೆ.

ದಕ್ಷಿಣ ಕನ್ನಡ
ಲಕ್ಷ ಮಂದಿ ಭಾಗಿ
ರಾಜ್ಯದಲ್ಲಿ ಅತೀ ಹೆಚ್ಚು ಮಂದಿ ಸೇರುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಇಲ್ಲಿ ಒಂದು ಲಕ್ಷ ಮಂದಿ ಭಾಗಿಯಾಗುತ್ತಿ­ದ್ದಾರೆ. ಪಾರಂಪರಿಕ ಮತ್ತು ಸಾಂಪ್ರದಾಯಿಕ ಸ್ಥಳಗಳಲ್ಲಿ ಸಾಮೂಹಿಕ ಯೋಗಾಸನ ನಡೆಯಲಿದೆ. ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಸುಳ್ಯದ ಚೆನ್ನಕೇಶವ ದೇವಸ್ಥಾನ, ಮಂಗಳೂರು ಪುರಭವನ, ಮೂಡುಬಿದಿರೆ ಆಳ್ವಾಸ್‌ ನುಡಿಸಿರಿ ವೇದಿಕೆ ಮತ್ತು ಸುಳ್ಯದ ಕೆ.ವಿ.ಜಿ. ಆರ್ಯುವೇದ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಸಾಮೂಹಿಕ ಯೋಗಾಸನ ಆಚರಿಸಲು ನಿರ್ಧರಿಸಲಾಗಿದೆ.

ಚಿಕ್ಕಬಳ್ಳಾಪುರ
ವಿದುರಾಶ್ವತ್ಥದಲ್ಲಿ ಯೋಗ
ಐತಿಹಾಸಿಕ ಶ್ರೀ ಭೋಗನಂದೀಶ್ವರ ಆವರಣ, ಗೌರಿಬಿದನೂರಿನ ವಿಧುರಾಶ್ವತ್ಥ ಹಾಗೂ ಚಿಂತಾಮಣಿಯ ಕೈವಾರದಲ್ಲಿ ಜನ ಸಾಮೂಹಿಕವಾಗಿ ಯೋಗಾಭ್ಯಾಸ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಎಲ್ಲವುಗಳನ್ನು ಸೇರಿ ಒಟ್ಟಾರೆಯಾಗಿ ಮೂರು ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಬಳ್ಳಾರಿ
ವಿರೂಪಾಕ್ಷನ ಸನ್ನಿಧಿ
ಹಂಪಿಯ ಬಸವಣ್ಣನ ಮಂಟಪದಿಂದ ವಿರೂಪಾಕ್ಷ ದೇವಸ್ಥಾನದ ವರೆಗಿನ ಸ್ಥಳದಲ್ಲಿ ಯೋಗಾಭ್ಯಾಸ ನಡೆಯಲಿದೆ. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಶ್ವಾಸಗುರು ವಚನಾನಂದ ಶ್ರೀಗಳ ನೇತೃತ್ವದಲ್ಲಿ ಐದು ಸಾವಿರ ಮಂದಿ ಯೋಗ ಮಾಡಲಿದ್ದಾರೆ. ಬೆಳಗ್ಗೆ 5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಅತ್ತ ಬಳ್ಳಾರಿಯಲ್ಲೂ ಕೋಟೆ ಮಲ್ಲೇಶ್ವರ ದೇವಸ್ಥಾನ ಆವರಣ, ಕೃಷ್ಣದೇವ ರಾಯ ವಿವಿ ಕ್ಯಾಂಪಸ್‌, ಕಂಪ್ಲಿ ಪಟ್ಟಣದಲ್ಲೂ ಯೋಗ ಕಾರ್ಯಕ್ರಮ ನಡೆಯಲಿವೆ. ಇಲ್ಲಿ ಒಟ್ಟಾರೆಯಾಗಿ ಒಂದು ಸಾವಿರ ಮಂದಿ ಯೋಗ ಮಾಡಲಿದ್ದಾರೆ.

ಹಾಸನ
ಹಳೇಬೀಡಿನಲ್ಲಿ ಯೋಗ
ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯದ ಆವರಣದಲ್ಲಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಅಲ್ಲಿ ವ್ಯವಸ್ಥೆ ಮಾಡಲಾಗಿದೆ. ಅತಿಥಿಗಳಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗಿಯಾಗಲಿದ್ದಾರೆ. ಇನ್ನುಳಿದಂತೆ ಶ್ರವಣಬೆಳಗೊಳ ಮತ್ತು ಅರಸೀಕೆರೆಯ ಮಹಾತ್ಮಾಗಾಂಧಿ ಸ್ಮಾರಕ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆ ನಡೆಯಲಿದೆ.

ಹಾವೇರಿ
ಸರ್ವಜ್ಞ ಜನ್ಮಸ್ಥಳ
ಪುರಸಿದ್ಧೇಶ್ವರ ದೇವಸ್ಥಾನ ಆವರಣದಲ್ಲಿ ಸುಮಾರು 1,500 ಜನರು, ಶಿಗ್ಗಾವಿ ತಾಲೂಕು ಬಾಡ ಗ್ರಾಮದ ಸಂತ ಕನಕದಾಸ ಅರಮನೆ ಆವರಣ, ಕವಿ ಸರ್ವಜ್ಞ ಅವರ ಜನ್ಮಸ್ಥಳ ಹಿರೇಕೆರೂರು ತಾಲೂಕು ಅಬಲೂರ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣ, ರಾಣಿಬೆನ್ನೂರು ತಾಲೂಕು ಶ್ರೀ ಗುರು ಮುಪ್ಪಿನಾರ್ಯ ಪರಮಹಂಸ ಮಹಾಸಂಸ್ಥಾನ ಹೊಳೆಮಠ ಐರಣಿ ಯಲ್ಲಿ ತಲಾ 500 ಜನರಿಗೆ ಯೋಗ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಉಡುಪಿ
30,000 ಮಂದಿ ಯೋಗಾಭ್ಯಾಸ
ಬಿಜೆಪಿ, ಆಯುಷ್‌ ಇಲಾಖೆ, ಪತಂಜಲಿ ಯೋಗ ಸಮಿತಿ ಇತ್ಯಾದಿ ಸಂಘ ಸಂಸ್ಥೆಗಳ ವತಿಯಿಂದ ಉಡುಪಿ ಜಿಲ್ಲೆಯ ಸುಮಾರು 300 ಕಡೆ ಜೂ. 21ರಂದು ಯೋಗ ಶಿಬಿರಗಳು ನಡೆಯಲಿದ್ದು ಸುಮಾರು 30,000 ಯೋಗಾಭ್ಯಾಸಿಗಳು ಭಾಗವಹಿಸುವ ನಿರೀಕ್ಷೆ ಇದೆ.

ಮಂಡ್ಯ
ಶ್ರೀರಂಗನ ಸನ್ನಿಧಿಯಲ್ಲಿ ಯೋಗ
ಮಂಡ್ಯ ಜಿಲ್ಲೆಯಲ್ಲಿನ ಪ್ರಮುಖ ಕಾರ್ಯಕ್ರಮ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇಗುಲದ ಮುಂದೆ ನಡೆಯಲಿದೆ. ಇಲ್ಲಿ ಸುಮಾರು 11 ಸಾವಿರ ಮಂದಿ ಭಾಗಿಯಾಗಲಿದ್ದಾರೆ. ಭಾಗವಹಿಸುವ ಎಲ್ಲ ಸಾರ್ವಜನಿಕರಿಗೆ ಕುಡಿಯುವ ನೀರು, ಉಪಾಹಾರ ಹಾಗೂ ಆಸನದ ವ್ಯವಸ್ಥೆಯನ್ನು ಸುಸಜ್ಜಿತವಾಗಿ ವ್ಯವಸ್ಥಿತಗೊಳಿಸಬೇಕು ಎಂದು ಸೂಚಿಸ ಲಾಗಿದೆ. ಈ ಮಧ್ಯೆ, ನಾಗಮಂಗಲದಲ್ಲಿ 3 ದಿನಗಳ ಯೋಗ ರಥೋತ್ಸವ ಆರಂಭವಾಗಿದ್ದು ನಿರ್ಮಲಾನಂದ ಶ್ರೀಗಳು ಚಾಲನೆ ನೀಡಿದ್ದಾರೆ.

ಶಿವಮೊಗ್ಗ
ವಿಶೇಷ ಮುದ್ರೆ ಬಿಡುಗಡೆ
ಜಿಲ್ಲೆಯ ವಿವಿಧೆಡೆ ಯೋಗ ಕಾರ್ಯಕ್ರಮಗಳು ನಡೆಯಲಿದ್ದು, ಒಟ್ಟಾರೆ 5 ಸಾವಿರ ಮಂದಿ ಭಾಗಿಯಾಗಲಿದ್ದಾರೆ. 8ನೇಅಂತಾರಾಷ್ಟ್ರೀಯ ಯೋಗ ದಿವಸ ಆಚರಣೆಯ ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ತನ್ನ ಎಲ್ಲ ಪ್ರಧಾನ ಅಂಚೆ ಕಚೇರಿಗಳಲ್ಲಿ ಚಿತ್ರಾತ್ಮಕ ವಿನ್ಯಾಸವುಳ್ಳ ವಿಶೇಷ ಮುದ್ರೆಗಳನ್ನು ಬಿಡುಗಡೆ ಮಾಡಲಿದೆ. ಅಂಚೆ ಕಚೇರಿಗಳ ಟಪಾಲಿನಲ್ಲಿ ರವಾನಿಸುವ ಎಲ್ಲ ಟಪಾಲುಗಳ ಮೇಲೆ ಜೂ.21ರಂದು ಮುದ್ರಿಸಲಾಗುತ್ತಿದೆ.

ಗದಗ
ದೇಗುಲಗಳ ಬಳಿ ಯೋಗ
ಜಾಗದ ಕೊರತೆಯಿಂದಾಗಿ ಈ ಬಾರಿ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ 8ನೇ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಇಲ್ಲಿ 2ರಿಂದ 3 ಸಾವಿರ, ನರಗುಂದ ಮತಕ್ಷೇತ್ರದ ಲಕ್ಕುಂಡಿಯ ನನ್ನೇಶ್ವರ ದೇವಸ್ಥಾನ ಆವರಣದ ಅತ್ತಿಮಬ್ಬೆ ವೇದಿಕೆ ಮುಂಭಾಗ, ರೋಣ ಮತಕ್ಷೇತ್ರದ ಸೂಡಿಯ ಜೋಡು ಕಳಸ ದೇವಸ್ಥಾನ ಆವರಣದಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ತಲಾ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1500 ಯೋಗಾಸಕ್ತರು ಪಾಲ್ಗೊಳ್ಳಲಿದ್ದಾರೆ. ಅದರಂತೆ ಶಿರಹಟ್ಟಿ ಮತ ಕ್ಷೇತ್ರದ ಲಕ್ಷೇಶ್ವರದ ಸೋಮೇಶ್ವರ ದೇವಸ್ಥಾನದಲ್ಲಿ 2000ಕ್ಕೂ ಹೆಚ್ಚು ಯೋಗ ಪಟುಗಳು ಯೋಗಾಸನದಲ್ಲಿ ತೊಡಗಿಕೊಳ್ಳಲಿದ್ದಾರೆ.

ಕೊಪ್ಪಳ
ಅಂಜನಾದ್ರಿಯಲ್ಲಿ ಕಾರ್ಯಕ್ರಮ
ವಿಶ್ವ ಪ್ರಸಿದ್ಧವಾಗಿರುವ ಅಂಜನಾದ್ರಿ, ಇಟಗಿಯ ಮಹಾದೇವ ದೇವಸ್ಥಾನಗಳಲ್ಲಿ ಸಾವಿರಾರು ಜನರು ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಯೋಗವನ್ನು ವಿಶ್ವಕ್ಕೆ ಪರಿಚಯಿಸಿರುವ ಭಾರತ ಈಗ ಇಲ್ಲಿನ ಐತಿಹಾಸಿಕ ಸ್ಥಳಗಳನ್ನು ಜಗತ್ತಿಗೆ ಪರಿಚಯಿಸಲು, ನಾಡಿನ ಗಮನ ಸೆಳೆಯುವಂತೆ ಮಾಡಲು ಮೊಟ್ಟ ಮೊದಲ ಬಾರಿಗೆ ಇತಿಹಾಸ ಪ್ರಸಿದ್ಧ ಸ್ಥಳದಲ್ಲಿ ಯೋಗ ದಿನಾಚರಣೆ ನಡೆಯಲಿದೆ. ಜಿಲ್ಲೆಯ ವಿವಿಧೆಡೆ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಒಟ್ಟು 1,800 ಮಂದಿ ಭಾಗಿಯಾಗಲಿದ್ದಾರೆ.

ಬಾಗಲಕೋಟೆ
ಪಟ್ಟದಕಲ್ಲಿನಲ್ಲಿ ಮುಖ್ಯ ಕಾರ್ಯಕ್ರಮ
ಈ ಬಾರಿಯ ವಿಶ್ವ ಯೋಗ ದಿನಾಚರಣೆಯ  ವಿಶ್ವ ಪಾರಂಪರಿಕ ಪ್ರವಾಸಿ ತಾಣ ಪಟ್ಟದಕಲ್ಲಿನಲ್ಲಿ ನಡೆಯಲಿದೆ. ಜೂ.21ರ ಬೆಳಗ್ಗೆ 7ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳ ಸುಮಾರು 3 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಆಯುಷ್‌ ಇಲಾಖೆ, ಜಿಲ್ಲಾಡಳಿತ ಸೇರಿ ಸುಮಾರು 500ಕ್ಕೂ ಹೆಚ್ಚು ಅಧಿಕಾರಿ-ಸಿಬಂದಿ ಯೋಗ ದಿನದಲ್ಲಿ ಭಾಗವಹಿಸಲಿದ್ದಾರೆ. ಇವರನ್ನು ಕರೆತರಲು 42 ಬಸ್‌ ವ್ಯವಸ್ಥೆ ಮಾಡಲಾಗಿದೆ.

ವಿಜಯಪುರ
ಗೋಲ್‌ಗ‌ುಂಬಜ್‌ ಬಳಿ ಯೋಗ
ವಿಜಯಪುರ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಐತಿಹಾಸಿಕ ಸ್ಮಾರಕಗಳು, ಧಾರ್ಮಿಕ ಪರಂಪರೆ ಕೇಂದ್ರಗಳ ಆವರಣಗಳಲ್ಲಿ ಯೋಗ ಶಿಬಿರ ಹಮ್ಮಿಕೊಂಡಿದೆ. ನಗರದಲ್ಲಿ ವಿಶ್ವ ವಿಖ್ಯಾತ ಐತಿಹಾಸಿಕ ಗೋಲಗುಂಬಜ್‌, ನಗರದ ಹೊರ ವಲಯದಲ್ಲಿರುವ ತೊರವಿ ಸಂಗೀತ ಮಹಲ್‌, ಬಸವನಬಾಗೇವಾಡಿ ಮೂಲ ನಂದೀಶ್ವರ ಹಾಗೂ ಹೊರ್ತಿ ಗ್ರಾಮದ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಸೇರಿ ಜಿಲ್ಲೆಯ ನಾಲ್ಕು ಕಡೆಗಳಲ್ಲಿ ಯೋಗ ಕಾರ್ಯಕ್ರಮ ನಡೆಯಲಿದೆ. ಒಟ್ಟು 10 ಸಾವಿರ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ.

 

ಟಾಪ್ ನ್ಯೂಸ್

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.