ಈ ಕಾಲೇಜಲ್ಲಿ ಗಡ್ಡ ಬಿಟ್ರೆ,ಗರ್ಲ್ ಫ್ರೆಂಡ್ ಇದ್ರೆ ದಂಡ
Team Udayavani, Jan 11, 2017, 5:27 AM IST
ಕಾಲೇಜುಗಳಲ್ಲಿ ಮೊಬೈಲ್ ನಿಷೇಧ, ವಸ್ತ್ರಸಂಹಿತೆ ಹಲವು ಕಡೇ ಇದೆ. ಆದರೆ ಕೇರಳದ ತೃಶ್ಶೂರ್ನ ಪಂಬಾಡಿಯ ನೆಹರೂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಯುವಕರು ಗರ್ಲ್ಫ್ರೆಂಡ್ ಹೊಂದುವುದಕ್ಕೆ ಮತ್ತು ಗಡ್ಡ ಬಿಡುವುದಕ್ಕೂ ನಿಷೇಧ ಹೇರಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
ನಾಲ್ಕು ದಿನಗಳ ಹಿಂದೆ ಕಾಲೇಜಿನ ವಿದ್ಯಾರ್ಥಿಯೊಬ್ಬ ಕಾಲೇಜಿನ ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಬಳಿಕ ಕಾಲೇಜಿನ ಕುರಿತಾದ ಹಲವು ಅಚ್ಚರಿಯ ವಿಷಯಗಳು, ನಿಷೇಧದ ಸುದ್ದಿಗಳು ಒಂದೊಂದಾಗಿ ಹೊರಬರುತ್ತಿವೆ. ಜೊತೆಗೆ ಕಾಲೇಜಿನಲ್ಲಿ ಶಿಕ್ಷೆ ನೀಡಲೆಂದೇ ಟಾರ್ಚರ್ ರೂಂ ಕೂಡಾ ಇದೆಯಂತೆ.
ಕಾಲೇಜಿನ ನಿಯಮ ಉಲ್ಲಂ ಸಿದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರ ಉಸ್ತುವಾರಿಯಲ್ಲಿರುವ ಈ ವಿಶೇಷ ಟಾರ್ಚರ್ ರೂಂನಲ್ಲಿ ವಿವಿಧ ರೀತಿಯ ಶಿಕ್ಷೆಗಳನ್ನು ವಿಧಿಸಲಾಗುತ್ತದೆಯಂತೆ. ಒಂದು ವೇಳೆ ವಿದ್ಯಾರ್ಥಿಗಳು ಗಡ್ಡ ಬಿಟ್ಟರೆ ದಂಡ ಕಟ್ಟುವುದು ಕಡ್ಡಾಯವಂತೆ. ಇಲ್ಲದೇ ಹೋದಲ್ಲಿ ಪರೀಕ್ಷೆ ಬರೆಯಲು ಅವಕಾಶವನ್ನೇ ನೀಡುವುದಿಲ್ಲವಂತೆ.
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ