ನಾಯಿ ಮರಿ ನಾಯಿ ಮರಿ ತಿಂಡಿ ಬೇಕೇ?


Team Udayavani, Jun 17, 2017, 3:35 PM IST

1249.jpg

 ಬೆಂಗಳೂರಿನಲ್ಲಿ ಡಾಗ್‌ ಕಲ್ಚರ್‌ ಹೆಚ್ಚುತ್ತಿದೆ. ಕಚೇರಿಗಳಿಗೆ ನಾಯಿಗಳನ್ನು ಕರೆತರುವುದು, ಶ್ವಾನಪ್ರಿಯರ ಸಭೆಗಳು ನಡೆಯುತ್ತಿರುವುದು ಅದಕ್ಕೆ ಸಾಕ್ಷಿ. ಈ ಬೆಳವಣಿಗೆಗೆ ಪೂರಕವಾಗಿ ಡಾಗ್‌ ರೆಸ್ಟೋರೆಂಟುಗಳೂ ಜನಪ್ರಿಯವಾಗುತ್ತಿವೆ.

ಮನುಷ್ಯ ಪ್ರಾಣಿಯನ್ನು ಹೊರತುಪಡಿಸಿ ಮನುಷ್ಯನೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಇನ್ನೊಂದು ಪ್ರಾಣಿ ಎಂದ ಕೂಡಲೆ ಥಟ್ಟನೆ ಯಾರಿಗೇ ಆದರೂ ನೆನಪಾಗುವುದು ನಾಯಿ. ಎಷ್ಟೋ ಜನ ಮನೆಗಳಲ್ಲಿ ನಾಯಿ ಸಾಕುತ್ತಾರೆ. ಆದರೆ, ನಾಯಿ ಮತ್ತು ಮಾನವನ ಸಂಬಂಧ ಮೂವತ್ತರಿಂದ ನಲವತ್ತು ಸಾವಿರ ವರ್ಷಗಳಷ್ಟು ಹಳೆಯದು ಎಂದು ಗೊತ್ತೇ? ಮನುಷ್ಯನ ಭಾವನೆಗಳನ್ನು ಕ್ಷಣಮಾತ್ರದಲ್ಲಿ ಅರ್ಥ ಮಾಡಿಕೊಳ್ಳುವ ಸೂಕ್ಷ್ಮತೆಯನ್ನು ಹೊಂದಿರುವ ನಾಯಿಗಳನ್ನು ಮನುಷ್ಯ ಇಷ್ಟಪಡುವುದರಲ್ಲಿ ಏನೂ ತಪ್ಪಿಲ್ಲ ಬಿಡಿ. ಮನೆಯಲ್ಲಿರುವ ಮುದ್ದಿನ, ಪ್ರೀತಿಪಾತ್ರ ನಾಯಿ ಮತ್ತು ಯಜಮಾನನ ನಡುವಿನ ಒಡನಾಟ ಸಂಕುಚಿತವಾದುದು ಅಥವಾ ನಿರ್ದಿಷ್ಟ ವ್ಯಾಪ್ತಿಗೆ ಒಳಪಟ್ಟಿದೆ ಎನ್ನುವುದೂ ಅಷ್ಟೇ ನಿಜ. ಸಾಮಾನ್ಯವಾಗಿ ನಗರಪ್ರದೇಶಗಳಲ್ಲಿರುವ ಮಂದಿ ತಮ್ಮ ನಾಯಿಯನ್ನು ವಾಕಿಂಗ್‌ ಕರೆದೊಯ್ಯುವರು, ವಾರಾಂತ್ಯದ ದಿನಗಳಲ್ಲಿ ಸಮೀಪದ ಉದ್ಯಾನವನಕ್ಕೋ, ಮೈದಾನಕ್ಕೋ ಕರೆದೊಯ್ಯುವರು, ಅಷ್ಟೆ. ಹೋಟೆಲ್‌, ಸಿನಿಮಾ ಮಂದಿರ, ಮಾಲ್‌ ಹೀಗೆ ಮನೆಮಂದಿ ಹೋಗುವಲ್ಲೆಲ್ಲಾ ನಾಯಿಗಳನ್ನು ಕರೆದೊಯ್ಯುವ ಹಾಗಿಲ್ಲವಲ್ಲ. ಒಂದು ನಿಮಿಷ ನಿಲ್ಲಿ. ಈ ವ್ಯಾಪ್ತಿ ಈಗ ಕೊಂಚ ಹಿಗ್ಗುತ್ತಿದೆ. ಬೆಂಗಳೂರಿನಲ್ಲಿ ಡಾಗ್‌ ಕಲ್ಚರ್‌ ಹೆಚ್ಚುತ್ತಿದೆ. ಕಚೇರಿಗಳಿಗೆ ನಾಯಿಗಳನ್ನು ಕರೆತರುವುದು, ಶ್ವಾನಪ್ರಿಯರ ಸಭೆಗಳು ನಡೆಯುತ್ತಿರುವುದು ಅದಕ್ಕೆ ಸಾಕ್ಷಿ. ಈ ಬೆಳವಣಿಗೆಗೆ ಪೂರಕವಾಗಿ ಡಾಗ್‌ ರೆಸ್ಟೋರೆಂಟುಗಳೂ ಜನಪ್ರಿಯವಾಗುತ್ತಿವೆ.

ಏನಿದು ಡಾಗ್‌ ರೆಸ್ಟೋರೆಂಟು?
ಇದು ಹೊಚ್ಚ ಹೊಸ ಪರಿಕಲ್ಪನೆಯೇನೂ ಅಲ್ಲ. ಅನೇಕ ಹೊರದೇಶಗಳಲ್ಲಿ ಇದು ಈಗಾಗಲೇ ನಡೆಯುತ್ತಿದ್ದು, ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದೆ. ನಿಮ್ಮ ಪ್ರೀತಿಪಾತ್ರ ನಾಯಿಗಳಿಗಾಗಿ ಈ ರೆಸ್ಟೋರೆಂಟು. ಅನೇಕ ಪ್ರತಿಷ್ಟಿತ ಹೋಟೆಲುಗಳಲ್ಲಿ “ನೋ ಪೆಟ್ಸ್‌’ ಬೋರ್ಡು ಹಾಕಿರುವುದನ್ನು ಕಾಣಬಹುದು. ಈ ಸಂಸ್ಕೃತಿಗೆ ವಿರೋಧವೆಂಬಂತೆ ನಾಯಿಗಳಿಗೋಸ್ಕರವೇ ಮೀಸಲಾಗಿ ಹುಟ್ಟಿಕೊಂಡದ್ದು ಈ ಡಾಗ್‌ ರೆಸ್ಟೋರೆಂಟ್‌ ಪರಿಕಲ್ಪನೆ. ಇದರಿಂದ ಪ್ರೇರಣೆ ಪಡೆದ ಬೆಂಗಳೂರಿನ ಅನೇಕ ರೆಸ್ಟೋರೆಂಟುಗಳು ಈಗೀಗ ನಾಯಿಗಳನ್ನು ಕರೆತರಲು ಯಜಮಾನರಿಗೆ ಅನುಮತಿಯನ್ನು ನೀಡುತ್ತಿವೆ. ಹೀಗಾಗಿ ಈಗ ಮನೆಮಂದಿ ಒಟ್ಟಾಗಿ ಫ್ಯಾಮಿಲಿ ಡಿನ್ನರ್‌ ಅಥವಾ ಲಂಚ್‌ಗೆ ಹೊರಟಂಥ ಸಮಯದಲ್ಲಿ ಮನೆಯ ಸದಸ್ಯನೇ ಆದ ನಾಯಿಯನ್ನು ಮನೆಯಲ್ಲೇ ಬಿಟ್ಟು ಬರಬೇಕೆಂದಿಲ್ಲ. ತಮ್ಮೊಡನೆ ಕರೆತರಬಹುದು.

ಇಲ್ಲೇನಿರುತ್ತೆ?
ಡಾಗ್‌ ರೆಸ್ಟೋರೆಂಟುಗಳು ನಾಯಿಗಳಿಗೆಂದೇ ಇರುವುದರಿಂದ ಅವುಗಳಿಗೆ ಪ್ಲೇ ಏರಿಯಾ, ಮತ್ತು ಅವು ಸ್ವತ್ಛಂದವಾಗಿ ಓಡಾಡುವಂತೆ ರೆಸ್ಟೋರೆಂಟಿನ ವಿನ್ಯಾಸವನ್ನು ಮಾಡಿರುತ್ತಾರೆ. ಅಲ್ಲದೆ ಇಲ್ಲಿ ಗ್ರಾಹಕರು ತಮ್ಮೊಡನೆ ಕರೆತರುವ ನಾಯಿಗಳಲ್ಲದೆ ರೆಸ್ಟೋರೆಂಟಿನವರೇ ಒಂದಷ್ಟು ಉತ್ತಮ ತಳಿಯ ಅಪರೂಪದ ನಾಯಿಗಳನ್ನು ಸಾಕಿರುತ್ತಾರೆ. ಅವು ಗ್ರಾಹಕರು ಒಳ ಬರುತ್ತಿದ್ದಂತೆ ಸ್ವಾಗತಿಸುವುದಲ್ಲದೆ ಮನೆಮಂದಿಯೊಂದಿಗೆ ಬಹು ಬೇಗ ಹೊಂದಿಕೊಂಡು ಅವರ ನಾಯಿ ಜೊತೆ ದೋಸ್ತಿ ಬೆಳೆಸಿಕೊಂಡುಬಿಡುತ್ತದೆ. ಡಾಗ್‌ ರೆಸ್ಟೋರೆಂಟ್‌ ಎಂದ ಮಾತ್ರಕ್ಕೆ ಇಲ್ಲಿ ಮನುಷ್ಯರ ಆಹಾರ ಸಿಗುವುದಿಲ್ಲ ಎಂದುಕೊಳ್ಳಬೇಕಿಲ್ಲ. ಅದೂ ಸಿಗುತ್ತೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ನಾಯಿಗೆಂದೇ ವಿಶೇಷವಾಗಿ ತಯಾರಾದ ಖಾದ್ಯಗಳು, ತಿನಿಸುಗಳು ಇಲ್ಲಿ ಸಿಗುತ್ತವೆ. ನಾಯಿಗಳಿಗೆಂದೇ ಪ್ರತ್ಯೇಕ ಮೆನು ಇರುತ್ತೆ. ಆದರೆ ಆರ್ಡರ್‌ ಮಾತ್ರ ನೀವು ಮಾಡಬೇಕು!

ಎಲ್ಲೆಲ್ಲಿವೆ?
ದರ್‌ಪಪ್‌ 
ದರ್‌ಪಪ್‌ ಅಂಥ ಒಂದು ಡಾಗ್‌ ಕೆಫೆ. ಸುಂದರ ಹೊರಾಂಗಣ ಮತ್ತು ಕಿಚನ್‌, ಡೈನಿಂಗ್‌ ರೂಮ್‌ ಮತ್ತು ಸಮೃದ್ಧ ಪಾರ್ಕಿಂಗ್‌ ಜಾಗ ಈ ಕೆಫೆಯ ವೈಶಿಷ್ಟé. ಇಲ್ಲಿನ ಗೋಡೆಗಳ ಮೇಲೆಲ್ಲಾ ನಾಯಿಗಳದ್ದೇ ಚಿತ್ತಾರ. ಇಲ್ಲಿಗೆ ಬರುವ ನಾಯಿಪ್ರೇಮಿಗಳಿಗೆ ಖಂಡಿತಾ ನಿರಾಶೆಯಾಗದು. ತಮ್ಮ ಪ್ರೀತಿಪಾತ್ರ ನಾಯಿಯೊಡನೆ ಓಪನ್‌ ಏರ್‌ ಪ್ರದೇಶದಲ್ಲಿ ಆಟವಾಡುವುದರ ಜೊತೆಗೆ, ಭೋಜನ ಮಾಡುವ ಅವಕಾಶವನ್ನು ಈ ಕೆಫೆ ಒದಗಿಸುತ್ತದೆ. ಒಟ್ಟಿನಲ್ಲಿ ಯಜಮಾನ ಮತ್ತು ನಾಯಿ ಜೊತೆಗಿನ ಬಾಂಧವ್ಯವನ್ನು ಹೆಚ್ಚಿಸುವುದೇ ಈ ಕೆಫೆಯ ಉದ್ದೇಶ ಎನ್ನುತ್ತಾರೆ ಮಾಲೀಕರು. 
ಎಲ್ಲಿ?: ವೈಟ್‌ ರೋಸ್‌ ಲೇಔಟ್‌, ಅಭಯಧಾಮ ರಸ್ತೆ, ವೈಟ್‌ಫೀಲ್ಡ್‌
ಸಂಪರ್ಕ: 096865 20315

ಅರ್ಬನ್‌ ಸೊಲೇಸ್‌
ಈ ಕೆಫೆಯ ವೈಶಿಷ್ಟéವೆಂದರೆ ಡೈನಿಂಗ್‌ ಟೇಬಲ್‌ ಕುರ್ಚಿ ಮೇಲೆ ನಾಯಿಯನ್ನೂ ಕುಳ್ಳಿರಿಸಬಹುದು. ಅಂದರೆ ಮನೆಮಂದಿಯೊಂದಿಗೆ ನಿಮ್ಮ ನಾಯಿಯೂ ಒಂದೇ ಟೇಬಲ್‌ನಲ್ಲಿ ಭೋಜನ ಸ್ವೀಕರಿಸಬಹುದು. ಆದರೆ ಒಂದೇ ಶರತ್ತು ಏನೆಂದರೆ ನಾಯಿ ಯಾವುದೇ ಅವಾಂತರವನ್ನು ಮಾಡಬಾರದು.
ಎಲ್ಲಿ?: ಅಣ್ಣಾಸ್ವಾಮಿ ಮೊದಲಿಯಾರ್‌ ರಸ್ತೆ, ಹಲಸೂರು
ಸಂಪರ್ಕ: 09845013055

ದಿ ಬ್ಲ್ಯಾಕ್‌ ರ್ಯಾಬಿಟ್‌
ಈ ರೆಸ್ಟೋರೆಂಟಿಗೆ ನಾಯಿಯನ್ನು ಕರೆದೊಯ್ಯಬಹುದಾದರೂ ಅವುಗಳಿಗೆಂದೇ ಪ್ರತ್ಯೇಕ ಕೋàಣೆಯಿದೆ. ಅಲ್ಲಿ ನಾಯಿಯನ್ನು ಬಿಡಬೇಕಾಗುತ್ತದೆ. ಆದರೆ ನಿಮ್ಮ ನಾಯಿಯನ್ನು ನೋಡಿಕೊಳ್ಳಲು ತರಬೇತುಗೊಂಡ ವ್ಯಕ್ತಿಯನ್ನು ಹೋಟೆಲಿವನರೇ ನೇಮಿಸಿರುತ್ತಾರೆ. ಆದ್ದರಿಂದ ಯಜಮಾನರು ತಮ್ಮ ನಾಯಿ ಬಗ್ಗೆ ಒಂದಿನಿತೂ ಚಿಂತಿಸದೆ ನಿಶ್ಚಿಂತರಾಗಿ ಭೋಜನವನ್ನು ಸ್ವೀಕರಿಸಬಹುದು. ಅಲ್ಲದೆ  ಇಲ್ಲೂ ನಾಯಿಗಳಿಗೆ ಪ್ರತ್ಯೇಕ ಮೆನು ಇದೆ.
ಎಲ್ಲಿ?: ಎಚ್‌ಎಎಲ್‌ 2ನೇ ಹಂತ, ಇಂದಿರಾನಗರ
ಸಂಪರ್ಕ: 090660 31156

ಸ್ಪೂನ್‌ ಫ‌ುಲ್‌ ಆಫ್ ಶುಗರ್‌
ಬಾಯಿ ತುಂಬಾ ಸಕ್ಕರೆ ಎನ್ನುವ ಹೆಸರಿನ ಈ ರೆಸ್ಟೋರೆಂಟು ನಿಜಕ್ಕೂ ಶ್ವಾನಪ್ರಿಯರಿಗೆ ಖುಷಿ ಕೊಡುತ್ತೆ. ಇಲ್ಲಿನ ಒಳಾಂಗಣ ಮತ್ತು ಹೊರಾಂಗಣ ಎರಡೂ ನಾಯಿಗಳಿಗೆ ಖಂಡಿತ ಇಷ್ಟವಾಗುತ್ತೆ. ಅಂಗಳದಲ್ಲಿ ತಮ್ಮ ನಾಯಿ ಆಟವಾಡುವುದನ್ನೋ, ಮಲಗಿರುವುದನ್ನೋ ನೋಡುತ್ತಾ ನಾಯಿಯ ಮಾಲೀಕರು ಇಲ್ಲಿನ ಸ್ವಾದಿಷ್ಟಕರ ತಿನಿಸುಗಳ, ಪೇಯಗಳ ರುಚಿ ನೋಡಬಹುದು.
ಎಲ್ಲಿ?: 1ನೇ ಮುಖ್ಯರಸ್ತೆ, 1ನೇ ಹಂತ, ಇಂದಿರಾನಗರ
ಸಂಪರ್ಕ: 080 2525 5534

ಹೋಲ್‌ ಇನ್‌ ದಿ ವಾಲ್‌ ಕೆಫೆ
ಈ ರೆಸ್ಟೋರೆಂಟಿನ ವೈಶಿಷ್ಟéವೆಂದರೆ ನಾಯಿಗಳಿಗೆ ಪ್ರತ್ಯೇಕ ಮೆನು ಇಲ್ಲ. ಅರೇ, ಹಾಗಾದರೆ ಅದು ವೈಶಿÒಷ್ಟÂ ಹೇಗಾಯ್ತು ಎಂಬ ಅನುಮಾನ ಸುಳಿಯುವುದು ಸಹಜವೇ. ಮನುಷ್ಯರ ಮೆನುವನ್ನು ನಾಯಿಗಳ ಜೊತೆಗೂ ಹಂಚಿ ತಿನ್ನಬಹುದು. ಅದುವೇ ಇಲ್ಲಿನ ವೈಶಿಷ್ಟé. 
ಎಲ್ಲಿ?: 8ನೇ ಮುಖ್ಯರಸ್ತೆ, ಕೋರಮಂಗಲ 4ನೇ ಬ್ಲಾಕ್‌
ಸಂಪರ್ಕ: 080 4094 9490

ರಾಸ್ತಾ ಕೆಫೆ
ಮೈಸೂರು ರಸ್ತೆಯಲ್ಲಿರುವ ರಾಸ್ತಾ ಕೆಫೆಯ ವೈಶಿಷ್ಟé ಸುತ್ತಲಿನ ವಾತಾವರಣ. ಪ್ರಕೃತಿಯ ನಡುವೆ, ಹುಲ್ಲು ಹಾಸಿನ ಮೇಲೆ ನಾಯಿಗಳು ಮನಸೋಇಚ್ಚೆ ಓಡಾಡಬಹುದು. ಯಜಮಾನರೊಡನೆ ಹೊರಳಾಡಿ ಆಟವಾಡಬಹುದು. ಅದರ ಜೊತೆಗೆ ಸ್ವಾದಿಷ್ಟಕರ ತಿಂಡಿ ತಿನಿಸುಗಳಂತೂ ಇದ್ದೇ ಇವೆ.
ಎಲ್ಲಿ?: ಮಾಯಗಾನಹಳ್ಳಿ, ಮೈಸೂರು ರಸ್ತೆ
ಸಂಪರ್ಕ: 099000 72782

ಟಾಪ್ ನ್ಯೂಸ್

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Torture of husband by burning with cigarette: Wife arrested based on CCTV video

Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ

Afghan batsman Rahmanullah Gurbaz to return to KKR team

KKR ತಂಡಕ್ಕೆ ಮರಳಲಿರುವ ಅಫ್ಘಾನ್‌ ಬ್ಯಾಟರ್‌ ರಹ್ಮಾನುಲ್ಲ ಗುರ್ಬಾಝ್

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು

man hits his wife because he could not afford the treatment!

ಚಿಕಿತ್ಸೆ ವೆಚ್ಚ ಭರಿಸಲಾಗದೆ ಹೆಂಡತಿಯನ್ನೇ ಕೊಂದ!

CSIR: Opportunity to wear unironed clothes every Monday!

CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!

Teacher Recruitment Scam: Supreme Court Slams Bengal Govt

West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

Torture of husband by burning with cigarette: Wife arrested based on CCTV video

Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.