ಟೀಚರ್‌ column: ಆಧುನಿಕ ಯುಗದಲ್ಲಿ ಆಧುನಿಕರಾಗಿರಿ

Team Udayavani, Jan 19, 2017, 12:46 AM IST

Teacher-18-1.jpg

ಕಲಿಸುವ ಮತ್ತು ಕಲಿಯುವ ಎರಡೂ ಪದ್ಧತಿಗಳು ಬಹಳಷ್ಟು ಬದಲಾವಣೆಗೊಂಡಿವೆ. ವರ್ತಮಾನಕ್ಕೆ ತಕ್ಕಂತೆ ಬದಲಾಗುವುದೂ ಒಂದು ಶಿಕ್ಷಣವೇ.

ಪಾಠ ಮಾಡುವುದೆಂದರೇನು? ಸರಿಯಾದ ಸಮಯಕ್ಕೆ ಸಿಲೆಬಸ್‌ ಮುಗಿಸುವುದೇ? ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆಯುವಂತೆ ಮಾಡುವುದೇ? ಇರುವ ಪಠ್ಯವನ್ನು ಓದಿ ಹೇಳಿ ಅದರ ಸಾರಾಂಶವನ್ನು ವಿವರಿಸುವುದೇ? ಏನು? ಒಬ್ಬ ಶ್ರೇಷ್ಠ ಶಿಕ್ಷಕ ಹೇಗಿರಬೇಕು? ಪಠ್ಯವನ್ನು ಬೋಧಿಸಿದರಷ್ಟೇ ಉತ್ತಮ ಶಿಕ್ಷಕರಾಗುವುದಿಲ್ಲ. ಪಠ್ಯವಲ್ಲದೆ, ಹೊರಗೆ ನಡೆಯುತ್ತಿರುವ ಸತ್ಯವನ್ನೂ ತಿಳಿಸಿ, ಥಿಯರಿಯೊಂದಿಗೆ ಪ್ರಾಯೋಗಿಕ ಜ್ಞಾನವನ್ನೂ ಬೆಳೆಸುವವನು ಶ್ರೇಷ್ಠ ಶಿಕ್ಷಕ.

ಕೆಲವು ಶಿಕ್ಷಕರಿರುತ್ತಾರೆ. ನೀತಿ ಕತೆಗಳ ಆಗರ ಅವರು. ಮಕ್ಕಳಿಗೆ ಪಾಠದ ಜತೆಗೆ ನೀತಿ ಕತೆಗಳನ್ನೂ ಹೇಳಿ ತಾವು ಕಲಿಯುತ್ತಿರುವುದಕ್ಕೆ ಸಂಪರ್ಕ ಕಲ್ಪಿಸುತ್ತಾರೆ. ನೀವೂ ಹೀಗೆ ನೀತಿವಂತರಾಗಬೇಕು ಎನ್ನುತ್ತಾರೆ. ಸತ್ಯ ಹರಿಶ್ಚಂದ್ರನ ಕತೆಯನ್ನು ಹೇಳುತ್ತಾರೆ. ಗಾಂಧೀಜಿಯ ಆದರ್ಶವನ್ನು ಮನದಟ್ಟು ಮಾಡಿಸುತ್ತಾರೆ. ಶಿಕ್ಷಕ ಹೇಳಿದ್ದನ್ನೆಲ್ಲವನ್ನೂ ಮಕ್ಕಳು ಕೇಳುತ್ತಾರೆಂದಲ್ಲ. ಅದೂ ಈಗಿನ ಸೂಪರ್‌ಫಾಸ್ಟ್‌ ಮಕ್ಕಳಿಗೆ ಇದನ್ನೆಲ್ಲ ಹೇಳುವವರು ಒಂದು ಮಟ್ಟಿಗೆ ಅಸಡ್ಡೆಯ ವ್ಯಕ್ತಿಗಳಾಗಿಯೂ ಕಾಣಬಹುದು. ಆದರೂ ಪ್ರತಿ ಕಾಲಕ್ಕೂ ಆದರ್ಶದ ಕನಸಿನಲ್ಲೇ ಬೆಳೆಯಬೇಕು. ಅದು ಎಂದಿಗೂ ವಿದ್ಯಾರ್ಥಿಗಳಿಗೆ ಕೊರತೆ ಮಾಡಬಾರದು.

ಹಾಗಾದರೆ ನೀತಿ ಹೇಳುವುದು ಹೇಗೆ? ಅದನ್ನು ಪ್ರಾಯೋಗಿಕ ವಾಗಿ ತಿಳಿದು ಬೋಧಿಸುವವನು ಶ್ರೇಷ್ಠ ಶಿಕ್ಷಕ. ಆಧುನಿಕ ಯುಗಕ್ಕೆ ಅತ್ಯಾಧುನಿಕ ರೀತಿಯಲ್ಲಿ ಮೂಡಿಬಂದರೆ ವಿದ್ಯಾರ್ಥಿಗಳ ತಲೆಗೆ ಒಂದಿಷ್ಟು ಹೊಕ್ಕಬಹುದು. ಅದಕ್ಕೆ ಬೇಕಾದ ರೀತಿ, ವಿಧಾನವನ್ನು ಕಂಡುಕೊಂಡು, ಕಲಿತುಕೊಳ್ಳುವುದೂ ಶಿಕ್ಷಕರ ಇಂದಿನ ಅಗತ್ಯ. ಎಷ್ಟೋ ಬಾರಿ ವಿದ್ಯಾರ್ಥಿಗಳು ಒಂದು ಕಥೆಯ ಸಾರವನ್ನು ತಿಳಿಯದೇ, ಅದನ್ನು ಭಾಗಶಃ ಅರ್ಥ ಮಾಡಿಕೊಂಡು ತಪ್ಪು ದಾರಿಗೆ ಹೋಗುವ ಸಾಧ್ಯತೆಯೂ ಇರುತ್ತದೆ. ಅಂಥ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವ ಹೊಣೆ ಶಿಕ್ಷಕರದ್ದು. ಲೋಕ ಜ್ಞಾನದ ಮಹತ್ವವನ್ನು ಮನದಟ್ಟು ಮಾಡಿಕೊಡುವುದು ಮತ್ತೂಂದು ಆದ್ಯತೆಯ ಅಂಶ. ಅದರತ್ತಲೂ ಗಮನಹರಿಸುವವ ಶ್ರೇಷ್ಠ ಶಿಕ್ಷಕನೆಂದು ಹೇಳುವುದರಲ್ಲಿ ಸಂಶಯವಿಲ್ಲ.

– ಸಂದೇಶ್‌

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.