ಒಳಪಂಗಡದಿಂದ ವೀರಶೈವ ಗೌಣ ಆಗದಿರಲಿ

­ಹೋರಾಟಗಳು ಭಾವೈಕ್ಯತೆಗೆ ಕಾರಣ ಆಗಲಿ­ ಡಾ| ಸಂಗನಬಸವ ಸ್ವಾಮೀಜಿ ಪ್ರತಿಪಾದನೆ

Team Udayavani, Feb 22, 2021, 4:53 PM IST

kottur Swamiji

ಬಳ್ಳಾರಿ: ಒಳಪಂಗಡಗಳ ಮೀಸಲಾತಿ ಹೋರಾಟದಿಂದ ವೀರಶೈವ ಗೌಣ ಆಗಬಾರದು ಎಂದು ಕೊಟ್ಟೂರುಸ್ವಾಮಿ ಮಠದ ಡಾ| ಸಂಗನಬಸವ ಸ್ವಾಮೀಜಿ ಪ್ರತಿಪಾದಿಸಿದರು.

ನಗರದ ಕೊಟ್ಟೂರುಸ್ವಾಮಿ ಮಠದ ಕಲ್ಯಾಣ ಮಂಟಪದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ, ಪ್ರಮಾಣ ವಚನ ಬೋಧಿಸುವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಯಾವುದೇ ಹೋರಾಟಗಳು ಭಾವೈಕ್ಯತೆಗೆ ಕಾರಣ ಆಗಬೇಕು. ತಮ್ಮನ್ನು 2ಎ ಗೆ ಸೇರಿಸಿ ಎಂದು ಪಂಚಮಸಾಲಿಯವರು ಪ್ರಬಲ ಪ್ರದರ್ಶನ ಮಾಡುತ್ತಿದ್ದಾರೆ. ಅದು ಏನೇ ಇರಲಿ. ಆದರೆ, ಈ ವಿವಿಧ ಒಳ ಪಂಗಡಗಳ ಮೀಸಲಾತಿ ಹೋರಾಟದಿಂದ ವೀರಶೈವ ಗೌಣ ಆಗಬಾರದು. ಒಳ ಪಂಗಡಗಳ ಬಗ್ಗೆ ಯಾರೇ ಪ್ರಶ್ನಿಸಿದರೂ, ಮೊದಲು ವೀರಶೈವ ಎಂದು ಹೇಳಬೇಕು. ಈ ನಿಟ್ಟಿನಲ್ಲಿ ತಾವೆಲ್ಲರೂ ಪ್ರಾಮಾಣಿಕವಗಿ ನಡೆದುಕೊಳ್ಳಬೇಕು ಎಂದು ಕೋರಿದರು.

ಶೇ.15ಕ್ಕೆ ಇಳಿಕೆ: ರಾಜ್ಯದಲ್ಲಿ ವೀರಶೈವ ಸಮುದಾಯ ಈ ಮೊದಲು ಶೇ.35ರಷ್ಟು ಜನಸಂಖ್ಯೆಯಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವ ಧಿಯಲ್ಲಿ ವೀರಶೈವ-ಲಿಂಗಾಯತ ಎಂದು ಬೇರ್ಪಡಿಸಿ, ವೀರಶೈವ ಸಮುದಾಯವನ್ನು ಶೇ.15ಕ್ಕೆ ಇಳಿಸಲಾಗಿದೆ.

ಇದು ಸಮುದಾಯದ ಅಭಿವೃದ್ಧಿಗೆ ಸಮಸ್ಯೆಯಾಗಲಿದ್ದು, ವೀರಶೈವರೆಲ್ಲರೂ ಒಗ್ಗೂಡಬೇಕು ಎಂದು ಕೋರಿದರು. ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕಚೇರಿ ನಿರ್ಮಾಣಕ್ಕೆ ಮಠದಿಂದ ತಾವು ಒಂದುಲಕ್ಷ ರೂ. ದೇಣಿಗೆ ನೀಡುವುದಾಗಿ ಹೇಳಿದರಲ್ಲದೆ, ಶ್ರೀಮಂತರು ಸಹಕಾರ ನೀಡಬೇಕು. ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿ ಜನಗಣತಿ ಮಾಡಬೇಕು ಎಂದು ಸಲಹೆ ನೀಡಿದರು.

ಮಹಾಸಭಾದ ರಾಜ್ಯಾಧ್ಯಕ್ಷ ಎನ್‌.ತಿಪ್ಪಣ್ಣ ಮಾತನಾಡಿ, ಮಹಾಸಭಾ ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಮಹಾಸಭಾದ ನೂತನ ಜಿಲ್ಲಾಧ್ಯಕ್ಷ ಚಾನಾಳ್‌ ಶೇಖರ್‌ ಸ್ವಾಗತಿಸಿದರು. ಮಹಾಸಭಾದ ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ದರೂರು ಪುರುಷೋತ್ತಮಗೌಡ, ಕೇಣಿ ಬಸಪ್ಪ, ಚುನಾವಣಾಧಿಕಾರಿ ಯಾಗಿದ್ದ ಎನ್‌.ಪಿ.ಲಿಂಗನಗೌಡ ಸೇರಿ ಹಲವರು ಇದ್ದರು. ನಿವೃತ್ತ ಉಪನ್ಯಾಸಕ ರಾಜಶೇಖರ ಅವರು ಪ್ರಮಾಣ ವಚನ ಬೋಧಿಸಿದರು.

ಟಾಪ್ ನ್ಯೂಸ್

3 days fast as penance for Jagannath being a Modi devotee: Patra

Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ

Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ

Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Uppinangady: ಹೆದ್ದಾರಿ ತಡೆಗೋಡೆ ಕುಸಿತ

Uppinangady: ಹೆದ್ದಾರಿ ತಡೆಗೋಡೆ ಕುಸಿತ

MAHE

MAHE ಟೈಮ್ಸ್‌ ಉನ್ನತ ಶಿಕ್ಷಣ ಯುವ ವಿ.ವಿ. ಶ್ರೇಯಾಂಕ: ಮಾಹೆಗೆ 175ನೇ ಸ್ಥಾನ

ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

IPL 2024; ಸ್ಟಾರ್ಕ್‌ ಸುಂಟರಗಾಳಿ ; ಕೋಲ್ಕತಾ ಫೈನಲ್‌ ಸವಾರಿ

puPU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

PU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Uppinangady: ಹೆದ್ದಾರಿ ತಡೆಗೋಡೆ ಕುಸಿತ

Uppinangady: ಹೆದ್ದಾರಿ ತಡೆಗೋಡೆ ಕುಸಿತ

MAHE

MAHE ಟೈಮ್ಸ್‌ ಉನ್ನತ ಶಿಕ್ಷಣ ಯುವ ವಿ.ವಿ. ಶ್ರೇಯಾಂಕ: ಮಾಹೆಗೆ 175ನೇ ಸ್ಥಾನ

ಸಾಲ ಮರುಪಾವತಿ ಮಾಡದಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ: ರೈತ ಆತ್ಮಹತ್ಯೆ

ಸಾಲ ಮರುಪಾವತಿ ಮಾಡದಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ: ರೈತ ಆತ್ಮಹತ್ಯೆ

Molakalmuru ಆಸ್ಪತ್ರೆಯಲ್ಲಿ ಮೊಂಬತ್ತಿಯಲ್ಲಿ ಚಿಕಿತ್ಸೆ!

Molakalmuru ಆಸ್ಪತ್ರೆಯಲ್ಲಿ ಮೊಂಬತ್ತಿಯಲ್ಲಿ ಚಿಕಿತ್ಸೆ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

3 days fast as penance for Jagannath being a Modi devotee: Patra

Sambit Patra; ಜಗನ್ನಾಥನೇ ಮೋದಿ ಭಕ್ತ ಎಂದಿದ್ದಕ್ಕೆ 3 ದಿನ ಉಪವಾಸ ಪ್ರಾಯಶ್ಚಿತ್ತ: ಪಾತ್ರಾ

Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ

Kasaragod ಜಿಲ್ಲೆಯಾದ್ಯಂತ ಮಳೆ; ಹೆದ್ದಾರಿಯಲ್ಲಿ ಸಂಚಾರ ದುಸ್ತರ

This time 2004 result will repeat: Jairam Ramesh

Loksabha: ಈ ಬಾರಿ 2004ರ ರಿಸಲ್ಟ್ ಮರುಕಳಿಸಲಿದೆ: ಜೈರಾಂ ರಮೇಶ್‌

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Uppinangady: ಹೆದ್ದಾರಿ ತಡೆಗೋಡೆ ಕುಸಿತ

Uppinangady: ಹೆದ್ದಾರಿ ತಡೆಗೋಡೆ ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.