ಆಗ ಬ್ರಿಟಿಷರು, ಈಗ ನಾವೇ ಎಲ್ಲ ಸಮಸ್ಯೆಗಳಿಗೂ ಕಾರಣರು!


Team Udayavani, Apr 28, 2021, 7:00 AM IST

ಆಗ ಬ್ರಿಟಿಷರು, ಈಗ ನಾವೇ ಎಲ್ಲ ಸಮಸ್ಯೆಗಳಿಗೂ ಕಾರಣರು!

ಈಗ ಕೊರೊನಾ ಸೋಂಕಿನ ಕಾಲಘಟ್ಟದಲ್ಲಿದ್ದೇವೆ. 1918ರಲ್ಲಿ ಸ್ಪಾನಿಶ್‌ ಫ್ಲೂ ಸೋಂಕಿನ ಮಾದರಿಯಲ್ಲಿ ನೂರು ವರ್ಷಗಳ ಬಳಿಕ ನೇಚರ್‌ ಕೊರೊನಾ ವೈರಸ್‌ನ್ನು ರವಾನೆ ಮಾಡಿದೆ. ಈ ವೇಳೆ ಗಾಂಧೀಜಿಯವರಿಗೆ ಸ್ಪಾನಿಶ್‌ ಫ್ಲೂ ಬಾರದಿದ್ದರೂ ಬೇರೆ ಅನಾರೋಗ್ಯ ಕಾಡಿತ್ತು. ಆದರೆ ಆ ಸಂದರ್ಭ ಆಶ್ರಮದ ಸ್ವಯಂಸೇವಕರಿಂದ ಜನರಲ್ಲಿ ಅರಿವು ಮೂಡಿಸಿದ್ದರು. ಸ್ಪಾನಿಶ್‌ ಫ್ಲೂ ಬರುವ ಮುನ್ನವೇ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಉಗುಳಬಾರದು, ಸಿಂಬಳ ಸುರಿಸಬಾರದು, ಮಲಮೂತ್ರ ವಿಸರ್ಜಿಸಬಾರದು. ಹೀಗೆ ಮಾಡಿದರೆ ರೋಗಾಣುಗಳು ಬೇರೆಯವರಿಗೆ ಹರಡುತ್ತದೆ ಮತ್ತು ಇದು ದೇವರ ಮತ್ತು ಮಾನವತೆ ವಿರುದ್ಧ ಎಸಗುವ ಪಾಪಗಳಾಗಿವೆ ಎಂದು ಎಚ್ಚರಿಸಿದ್ದರು. ಯಾವುದೇ ಅಧಿಕಾರವಿಲ್ಲದೆ ಇದನ್ನು ಹೇಳಿದ್ದು ಎಂಬುದು ಉಲ್ಲೇಖನೀಯ. ಇಲ್ಲಿ ಅಪ್ಪಟ ವೈಜ್ಞಾನಿಕ/ವೈಚಾರಿಕ (ತಾರ್ಕಿಕ) ಮತ್ತು ಧರ್ಮದ ಎರಡೂ ವ್ಯಾಖ್ಯಾನಗಳಿವೆ. ಒಂದು ಶತಕದ ಬಳಿಕ ಈಗ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಕಾನೂನು ಕ್ರಮ ತೆಗೆದುಕೊಳ್ಳುವವರೆಗೆ ಮುಟ್ಟಿದ್ದೇವೆ.

ಸ್ವಾತಂತ್ರ್ಯಪೂರ್ವದಲ್ಲಿ ಚಳವಳಿಯ ಭಾಗವಾಗಿ ಮಂಗಳೂರಿನಲ್ಲಿ ನಿತ್ಯ “ಉಗ್ರ’ ಭಾಷಣವಿರುತ್ತಿತ್ತು. ಹೋರಾಟಗಾರರ ಆರ್ಭಟದ ಉಪನ್ಯಾಸ ಕೇಳಿ ರಾಷ್ಟ್ರಭಕ್ತಿ ಉಕ್ಕಿಹರಿ ಯುತ್ತಿತ್ತಲ್ಲದೆ ಅವರ ಮಾತುಗಳು ಕೇಳುಗರ ಪ್ರತಿಯೊಂದು ರಕ್ತನಾಳಗಳಲ್ಲಿಯೂ ತುಂಬಿ ಹರಿಯುತ್ತಿತ್ತು. ಮಹಾವೀರ ಎಂಬ ವಾಗ್ಮಿಗಳು “ಹಿಂದೂಸ್ಥಾನದ 33 ಕೋಟಿ ಜನರು ಸಿಂಬಳ ತೆಗೆದು ಸಿಡಿಸಿದರೆ ಅದರ ಪ್ರವಾಹದಲ್ಲಿ ಬ್ರಿಟಿಷರು ತೇಲಿ ಹೋದಾರು’ ಎಂದಾಗ ಪ್ರಚಂಡ ಕರತಾಡನ ಕೇಳುತ್ತಿತ್ತು. ಆಗ ಭಾಷಣಕಾರರಿಗೆ ಬ್ರಿಟಿಷರ ಅವಹೇಳನವೇ ತರ್ಕವಾಗಿತ್ತು. ಹೊಟ್ಟೆನೋವಿನಿಂದ ಹಿಡಿದು ಎಲ್ಲ ಸಾಮಾಜಿಕ ಕಾಯಿಲೆಗಳಿಗೂ ಹಿಂದೂಸ್ಥಾನಕ್ಕೆ ಸ್ವಾತಂತ್ರ್ಯ ಇಲ್ಲದಿರುವುದೇ ಕಾರಣ ಎಂಬುದು ವಿಷಯ ಬಂಡವಾಳವಾಗಿತ್ತು.

ಸ್ವಾತಂತ್ರ್ಯ ಚಳವಳಿ ನಾಯಕರ ಪೈಕಿ ರಾಷ್ಟ್ರ ನಿರ್ಮಾಣದ ಅಗತ್ಯವನ್ನು ಅತ್ಯಂತ ಸ್ಪಷ್ಟವಾಗಿ ಅರ್ಥ ಮಾಡಿಕೊಂಡವರು ಜವಾಹರಲಾಲ್‌ ನೆಹರೂ ಮತ್ತು ಸರ್ದಾರ್‌ ವಲ್ಲಭಭಾಯಿ ಪಟೇಲರು. 1947ರಲ್ಲಿ ದೇಶದ ಆಡಳಿತದ ಹೊಣೆ ವಹಿಸಿ
ಕೊಂಡ ನೆಹರೂ ಮತ್ತು ಪಟೇಲರಿಗೆ ಭಾರತದಲ್ಲಿ ಸ್ವರಾಜ್ಯ ಅಧಿಕಾರವನ್ನು ಬಲವಾಗಿ ಸ್ಥಾಪಿಸಿ ಅದನ್ನು ಶಕ್ತಿಶಾಲಿ ಆರೋಗ್ಯಕರ ಪ್ರಜಾಪ್ರಭುತ್ವದ ದೇಶವನ್ನಾಗಿ ರೂಪಿಸಬೇಕೆಂಬ ದೃಢನಿಶ್ಚಯವಿತ್ತು. ಗಾಂಧೀಜಿಯವರಿಗೆ ಪ್ರತಿಯೊಬ್ಬರ ಅಂತರಾತ್ಮವನ್ನು ರೂಪಿಸಿ ಈ ಮೂಲಕ ರಾಷ್ಟ್ರದ ಅಧಿಕಾರಶಕ್ತಿಯನ್ನು ನಿಯಂತ್ರಿಸಬೇಕು ಎಂಬ ಹಂಬಲವಿತ್ತು ಎಂದು ಮೂವರು ಪ್ರಧಾನಿಗಳಿಗೆ ಮಾಧ್ಯಮ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದ ಎಚ್‌.ವೈ.ಶಾರದಾಪ್ರಸಾದ್‌ ಒಂದೆಡೆ ಹೇಳುತ್ತಾರೆ.

ಇಲ್ಲಿ ಎರಡೂ ಕಡೆಯವರ ಅಂತಿಮ ಗುರಿ ಒಂದೇ ಆಗಿದ್ದರೂ ಮಾರ್ಗ ಮಾತ್ರ ಬೇರೆ. ಆದರೆ ತುಳಿದ ಮಾರ್ಗವೂ ಫ‌ಲದಾಯಕವಾಗಲಿಲ್ಲ ಎನ್ನುವುದು ಅನುಭವವೇದ್ಯ.

ಶತಮಾನದ ಬಳಿಕ
ಈಗ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಸಲ್ಲುತ್ತಿವೆ. ದೇಶದಲ್ಲಿ ಬಹುಕಾಲ ಕಾಂಗ್ರೆಸ್‌, ಕೆಲವು ಕಾಲ ಬಿಜೆಪಿಯೂ, ಅಲ್ಪಕಾಲ ಇತರ ಪಕ್ಷಗಳೂ ದೇಶವನ್ನು ಅಳೆದವು ಅಥವಾ ಆಳಿದವು ಎಂದಿಟ್ಟುಕೊಳ್ಳಿ. ಈಗ ಕೊರೊನಾ ಸೋಂಕಿನ ಕಾಲಘಟ್ಟದಲ್ಲಿದ್ದೇವೆ. 1918ರಲ್ಲಿ ಸ್ಪಾನಿಶ್‌ ಫ್ಲೂ ಸೋಂಕಿನ ಮಾದರಿಯಲ್ಲಿ ನೂರು ವರ್ಷಗಳ ಬಳಿಕ ನೇಚರ್‌ ಕೊರೊನಾ ವೈರಸ್‌ನ್ನು ರವಾನೆ ಮಾಡಿದೆ.

ವೈರಸ್‌ಗಳು ಹೇಗೆ ಹರಡುತ್ತವೆ? ಹೇಗೆ ವಿಕಾಸಗೊಳ್ಳುತ್ತವೆ? ಹೇಗೆ ಮರಣವನ್ನು ತಂದೊಡ್ಡುತ್ತವೆ ಎಂಬುದನ್ನು ವೈಜ್ಞಾನಿಕ, ಸತಾರ್ಕಿಕವಾಗಿ ಮಂಡಿಸಬಲ್ಲ ಮೇಧಾವಿಗಳೂ ಇದ್ದಾರೆ. ಉಳಿದ ವಿಷಯಗಳಿಗಿಂತ ಅತೀ ಸುಲಭದಲ್ಲಿ ಅರ್ಥವಾಗುವುದೆಂದರೆ ವೈರಸ್‌ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತದೆ, ಅನಗತ್ಯವಾಗಿ ಓಡಾಡದೆ ಇರುವುದು, ಇತರರನ್ನು ಸಂಪರ್ಕಿಸದೆ ಇರುವುದು ಇತ್ಯಾದಿಗಳು. ಇದಕ್ಕೇನು ಪಿಎಚ್‌.ಡಿ. ಪ್ರಬಂಧ ಮಂಡಿಸುವ, ಐಎಎಸ್‌, ಐಪಿಎಸ್‌ ಪರೀಕ್ಷೆಗಳನ್ನು ಪಾಸು ಮಾಡುವ ಬುದ್ಧಿಮತ್ತೆ ಬೇಕಿಲ್ಲ. ಆದರೆ ಇದನ್ನೇ ಡಾಕ್ಟರ್‌, ಐಎಎಸ್‌,ಐಪಿ ಎಸ್‌ ಮಹಾಶಯರು ಹೇಳಬೇಕಾಗಿದೆ. ಹಿಂದೆ
ಸಾಂಪ್ರದಾಯಿಕರು ವೈಯಕ್ತಿಕ ಅಂತರ ಕಾಪಾಡಿ ಎಂದು ಶೌಚದ ಹೆಸರಿನಲ್ಲಿ ಹೇಳುವಾಗ ಇದಕ್ಕೆ ಒಂದು ವರ್ಗ ಟೀಕೆಗಳ ಸುರಿಮಳೆಯನ್ನೇ ಸುರಿಸುವುದು ಹೊಸ ವಿಷಯವಲ್ಲ. ಈಗ ಅಕಾಡೆಮಿಕ್‌ ಆಗಿ ಕಲಿತ ಆಧುನಿಕವಾದಿಗಳು ಅದನ್ನೇ ಉರು ಹೊಡೆಯುತ್ತಿದ್ದರೂ ಕೇಳುಗರು ಬೇರೆಯವರ ಸಂಪರ್ಕಕ್ಕೆ ಒಳಗಾಗಿ ಸೋಂಕಿತರಾಗುತ್ತಿದ್ದಾರೆನ್ನುವಾಗ ಅತ್ತ ಗಾಂಧೀಜಿಯವರ ಪ್ರತಿಯೊಬ್ಬರ ಆತ್ಮವಿಕಾಸದ ಕನಸೂ ಜಾರಿಗೊಂಡಿಲ್ಲ, ಮತ್ತೂಂದೆಡೆ ಅಭಿವೃದ್ಧಿಯುತ ರಾಷ್ಟ್ರದ ಚುಕ್ಕಾಣಿ ಮೂಲಕ ಎಲ್ಲವನ್ನು ಸಾಧಿಸ‌ಬಹುದೆಂಬ ನೆಹರೂ, ಪಟೇಲರ ಕನಸೂ ನನಸಾಗಿಲ್ಲ ಎಂದೆನಿಸುತ್ತದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಎಲ್ಲ ಸಮಸ್ಯೆಗಳಿಗೂ ಬ್ರಿಟಿಷರು ಏಕೈಕ ಕಾರಣರಾಗಿದ್ದರು ಎಂಬುದನ್ನು ಸ್ವಾತಂತ್ರ್ಯ ಹೋರಾಟಗಾರರು ಕಂಡು ಹಿಡಿದಿದ್ದರು. ಒಮ್ಮೆ ಗಾಂಧೀಜಿಯವರು ಒಂದೇ ವರ್ಷದಲ್ಲಿ ಸ್ವಾತಂತ್ರ್ಯ ತಂದು ಕೊಡುತ್ತೇವೆ ಎಂದು ಹೇಳಿದ್ದನ್ನು ತಾಜಾ ನಂಬಿದ, ಸ್ವಾತಂತ್ರ್ಯ ಹೋರಾಟಕ್ಕಾಗಿ ತನ್ನ ಸರ್ವಸ್ವವನ್ನೂ ಕಳೆದುಕೊಂಡ ಕಾರ್ನಾಡು ಸದಾಶಿವ ರಾಯರು, ಒಂದು ವರ್ಷದ ಬಳಿಕ ಸ್ವಾತಂತ್ರ್ಯ ಸಿಗದೆ ಹೋದುದಕ್ಕೆ ಬಹಳ ನೊಂದುಕೊಂಡರಂತೆ. ಅಷ್ಟರ ಮಟ್ಟಿಗೆ ಗಾಂಧೀಜಿ ಮಾತನ್ನು ನಂಬುವವರಾಗಿದ್ದರು ಅವರು. ಸ್ವತಂತ್ರ ಭಾರತದಲ್ಲಿ ಅವರ ಸ್ಥಿತಿ ಹೇಗೆ ಬಂತೆಂದರೆ ಸಕಲವನ್ನೂ ದಾನ ಮಾಡಿದ ಅವರು ಬೇರೆಯವರ ದಾನದಿಂದ ಬದುಕು ಸವೆಸಬೇಕಾಯಿತು. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್‌ ಸಿಕ್ಕುವ ಎಲ್ಲ ಅರ್ಹತೆ ಇದ್ದರೂ ಅದನ್ನು ಪಡೆಯುವಲ್ಲಿ ವಿಫ‌ಲರಾದರೂ ಒಂದಿನಿತೂ ಬೇಸರ ವ್ಯಕ್ತಪಡಿಸದೆ ಇಹಲೋಕ ತ್ಯಜಿಸಿದರು.

ಸ್ವಾತಂತ್ರ್ಯ ಬಳಿಕ 50-60-70 ವರ್ಷಗಳಾದರೂ ಹಾಲಿ ಎಲ್ಲ ಸಮಸ್ಯೆಗಳಿಗೂ ಆಡಳಿತ ಪಕ್ಷದವರು ವಿರೋಧ ಪಕ್ಷದವರನ್ನೂ ಅದೇ ವಿಪಕ್ಷದವರು ಆಡಳಿತ ಪಕ್ಷದವರಾದಾಗ ಮಾಜಿ ಆಡಳಿತ ಪಕ್ಷದವರನ್ನೂ ಬೆಟ್ಟು ಮಾಡಿದ / ಬೆಟ್ಟು ಮಾಡುತ್ತಿರುವ ಇತಿಹಾಸ ನಮ್ಮೆದುರಿಗೆ ಇದೆ. ಆಗ ಬ್ರಿಟಿಷರು, ಬಳಿಕ ಭಾರತೀಯರೇ ಭಾರತೀಯರಿಗೆ ಸಮಸ್ಯೆಗಳ ಮೂಲ ಕಾರಣ ಕರ್ತರಾಗಿ ಕಾಣಿಸುತ್ತಾರೆ. ಆಗಲಾದರೂ ಬ್ರಿಟಿಷ ರಾದರೂ ಬೈಯಲು ಸಿಗುತ್ತಿದ್ದರು, ಈಗ ನಮ್ಮನ್ನೇ ನಾವು ಬೈಸಿಕೊಳ್ಳಬೇಕಾಗಿದೆಯಲ್ಲ? ಇದೆಂಥ ವಿಪರ್ಯಾಸ?

– ಮಟಪಾಡಿ ಕುಮಾರಸ್ವಾಮಿ

ಟಾಪ್ ನ್ಯೂಸ್

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

1-qweqewqe

BSNL 4G; ಆಗಸ್ಟ್‌ನಲ್ಲಿ ದೇಶಾದ್ಯಂತ ಸೇವೆ: ಮೂಲಗಳು

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ

Kasaragod ಸಾರಿಗೆ ಬಸ್‌ಗಳಲ್ಲಿ ಕೆಮರಾ ಅಳವಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಹಂತ 2: ಮತದಾನದ ಹಕ್ಕು ಚಲಾವಣೆಗೆ ಸಕಲ ಸಿದ್ಧತೆ

Lok Sabha Election ಹಂತ 2: ಮತದಾನದ ಹಕ್ಕು ಚಲಾವಣೆಗೆ ಸಕಲ ಸಿದ್ಧತೆ

ICSE: ರಾಜ್ಯದ ವಿದ್ಯಾರ್ಥಿಗಳಿಗೆ‌ ಶೇ. 99 ಮೀರಿದ ಫ‌ಲಿತಾಂಶ; ವಿದ್ಯಾರ್ಥಿನಿಯರೇ ಮೇಲುಗೈ

ICSE: ರಾಜ್ಯದ ವಿದ್ಯಾರ್ಥಿಗಳಿಗೆ‌ ಶೇ. 99 ಮೀರಿದ ಫ‌ಲಿತಾಂಶ; ವಿದ್ಯಾರ್ಥಿನಿಯರೇ ಮೇಲುಗೈ

Lok Sabha ಚುನಾವಣೆ ಪ್ರಕ್ರಿಯೆ ವೀಕ್ಷಣೆಗೆ 5 ದೇಶಗಳ ತಂಡ ಬೆಳಗಾವಿಗೆ

Lok Sabha ಚುನಾವಣೆ ಪ್ರಕ್ರಿಯೆ ವೀಕ್ಷಣೆಗೆ 5 ದೇಶಗಳ ತಂಡ ಬೆಳಗಾವಿಗೆ

ರಾಜ್ಯ ಕಾಂಗ್ರೆಸ್‌ ಸರಕಾರ ಸಂಪೂರ್ಣ ನಿಷ್ಕ್ರಿಯ: ಬಿ.ವೈ.ವಿಜಯೇಂದ್ರ

ರಾಜ್ಯ ಕಾಂಗ್ರೆಸ್‌ ಸರಕಾರ ಸಂಪೂರ್ಣ ನಿಷ್ಕ್ರಿಯ: ಬಿ.ವೈ.ವಿಜಯೇಂದ್ರ

Congress ಗೆಲುವಿನಲ್ಲಿದೆ ಮಹಿಳೆಯರ ಗೆಲುವು: ಸಿಎಂ ಸಿದ್ದರಾಮಯ್ಯ

Congress ಗೆಲುವಿನಲ್ಲಿದೆ ಮಹಿಳೆಯರ ಗೆಲುವು: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Weather ಕಡಲಬ್ಬರ ತುಸು ಜೋರು; ಗಾಳಿ ಬಿರುಸು

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Udupi ಮಲ್ಪೆ ಬೀಚ್‌ನಲ್ಲಿ ವಾಟರ್‌ ಗೇಮ್‌ ಸ್ಥಗಿತ

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Manjeshwar: ಆಟವಾಡುತ್ತಿದ್ದ 8 ವರ್ಷದ ಬಾಲಕಿ ಕುಸಿದು ಬಿದ್ದು ಸಾವು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Kota ಕಾರ್ಮಿಕನ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.