Lok Sabha ಚುನಾವಣೆ ಪ್ರಕ್ರಿಯೆ ವೀಕ್ಷಣೆಗೆ 5 ದೇಶಗಳ ತಂಡ ಬೆಳಗಾವಿಗೆ

ಚುನಾವಣ ಆಯೋಗದ ಆಹ್ವಾನದ ಮೇರೆಗೆ ಆಗಮನ

Team Udayavani, May 6, 2024, 11:52 PM IST

Lok Sabha ಚುನಾವಣೆ ಪ್ರಕ್ರಿಯೆ ವೀಕ್ಷಣೆಗೆ 5 ದೇಶಗಳ ತಂಡ ಬೆಳಗಾವಿಗೆ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆ ಹಾಗೂ ಅದಕ್ಕಾಗಿ ಮಾಡಿಕೊಂಡಿರುವ ಸಿದ್ಧತೆಗಳನ್ನು ವೀಕ್ಷಿಸಲು 5 ದೇಶಗಳ ಚುನಾವಣ ಆಯೋಗದ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಸೋಮವಾರ ಬೆಳಗಾವಿಗೆ ಭೇಟಿ ನೀಡಿದರು.

ಚುನಾವಣ ಆಯೋಗದ ಆಹ್ವಾನದ ಮೇರೆಗೆ ಕಾಂಬೋಡಿಯಾ, ನೇಪಾಲ, ಟ್ಯುನಿಸಿಯಾ, ಮೊಲ್ಡೋವಾ ಹಾಗೂ ಸಿಷೆಲ್‌ ದೇಶಗಳಿಂದ ಬಂದಿರುವ 10 ಅಧಿಕಾರಿಗಳ ತಂಡವು ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಸಿದ್ಧತೆ ಹಾಗೂ ವಿವಿಧ ಹಂತದ ಪ್ರಕ್ರಿಯೆಗಳನ್ನು ವೀಕ್ಷಿಸಿತು.

ಕಾಂಬೋಡಿಯಾದ ರಾಷ್ಟ್ರೀಯ ಚುನಾವಣ ಮಂಡಳಿ ಸದಸ್ಯ ಹೆಲ್‌ ಸರಾಥ್‌, ಕಾಂಬೋಡಿಯಾದ ಚುನಾವಣ ಮಂಡಳಿ ಮುಖ್ಯ ಕಾರ್ಯದರ್ಶಿ ಹೌಟ್‌ ಬೋರಿನ್‌, ಮೊಲ್ಡೊವಾದ ಕೇಂದ್ರ ಚುನಾವಣ ಆಯೋಗದ ಸದಸ್ಯೆ ಡಾ| ನಾ ಮಂಟೇನುವಾ, ಆಯೋಗದ ಸ್ಥಳೀಯ ಜಿಲ್ಲಾ ಚುನಾವಣ ಪರಿಷತ್‌ ಮುಖ್ಯಸ್ಥ ಆ್ಯಡ್ರಿಯನ್‌ ಗಮರ್ತಾ ಎಸಾನು, ನೇಪಾಲದ ಮುಖ್ಯ ಚುನಾವಣ ಆಯುಕ್ತ ದಿನೇಶ್‌ ಕುಮಾರ್‌ ಥಾಪಾಲಿಯಾ, ಸಿಷೆಲ್‌ ದೇಶದ ಚುನಾವಣ ಆಯೋಗದ ಮುಖ್ಯಸ್ಥ ಡ್ಯಾನಿ ಸಿಲ್ವಾ ಲುಕಾಸ್‌, ಆಯುಕ್ತ ನೊರ್ಲಿಸ್‌ ನಿಕೋಲಸ್‌ ರೋಸ್‌ ಹೋರೌ, ಟ್ಯುನಿಷಿಯಾದ ಇಂಡಿಪೆಂಡೆಂಟ್‌ ಎಲೆಕ್ಷನ್‌ ಹೈಕಮಿಷನ್‌ನ ಅಧಿಕೃತ ವಕ್ತಾರ ಎಂ.ಎಂ.ಟಿಲಿ, ಪ್ರಾದೇಶಿಕ ನಿರ್ದೇಶಕ ಜೆಲ್ಲಾಲಿ ನಬೀಲ್‌ ಈ ತಂಡದಲ್ಲಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿ ನಿತೇಶ್‌ ಪಾಟೀಲ್‌ ಅವರಿಂದ ಸಮಗ್ರ ಮಾಹಿತಿ ಪಡೆದುಕೊಂಡ ಅಧಿಕಾರಿಗಳು ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬಂದಿ ಜತೆಗೆ ಸಂವಾದ ನಡೆಸಿ ತಮ್ಮ ದೇಶದ ಮತ್ತು ಭಾರತದ ಚುನಾವಣೆ ವ್ಯವಸ್ಥೆಗಿರುವ ವ್ಯತ್ಯಾಸದ ಕುರಿತು ಅಭಿಪ್ರಾಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ನೇಪಾಲದ ಚುನಾವಣ ಆಯೋಗದ ಅಧೀನ ಕಾರ್ಯದರ್ಶಿ ಥಾನೇಶ್ವರ ಬುಸಾಲ್‌, ಭಾರತದಲ್ಲಿ ಚುನಾವಣೆ ಪ್ರಕ್ರಿಯೆ ಶಿಸ್ತುಬದ್ಧವಾಗಿ ನಡೆಯುತ್ತದೆ. ಇಲ್ಲಿ ಸಿಬಂದಿಗೆ ಹೆಚ್ಚಿನ ತರಬೇತಿ ನೀಡಲಾಗಿದೆ. ಈ ವಿಧಾನದಿಂದ ಚುನಾವಣೆ ವೆಚ್ಚ ತಗ್ಗಿಸಬಹುದು. ಭಾರತೀಯರು ಚುನಾವಣೆ ಮೇಲಿಟ್ಟ ವಿಶ್ವಾಸ ಕಂಡು ಖುಷಿಯಾಗಿದೆ ಎಂದರು.

ಜಿಲ್ಲಾ ಚುನಾವಣಾಧಿಕಾರಿ ನಿತೇಶ ಪಾಟೀಲ್‌ ಮಾತನಾಡಿ, ಜಿಲ್ಲೆಯಲ್ಲಿರುವ ಅಧಿಕಾರಿಗಳ ತಂಡ ಮಂಗಳವಾರ ನಡೆಯುವ ಮತದಾನ ವೇಳೆ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಲಿದ್ದಾರೆ ಎಂದರು.

ಟಾಪ್ ನ್ಯೂಸ್

Railway ಮೂರು ವಿಭಾಗದ ರೈಲ್ವೇ ಅಧಿಕಾರಿಗಳ ಸಮಿತಿ ರಚನೆಗೆ ಸೋಮಣ್ಣ ಸೂಚನೆ

landslide ಅವೈಜ್ಞಾನಿಕ ಕಾಮಗಾರಿ; ನಿರಂತರ ಭೂ ಕುಸಿತದ ಗಾಬರಿ

landslide ಅವೈಜ್ಞಾನಿಕ ಕಾಮಗಾರಿ; ನಿರಂತರ ಭೂ ಕುಸಿತದ ಗಾಬರಿ

Hill Collapse ಉಳುವರೆಯಲ್ಲಿ ಉಳಿದದ್ದು ಮನೆ ನೆಲಗಟ್ಟು !

Hill Collapse ಉಳುವರೆಯಲ್ಲಿ ಉಳಿದದ್ದು ಮನೆ ನೆಲಗಟ್ಟು !

Ankola ಗಂಗಾವಳಿ ತಟದಲ್ಲಿ ಬದುಕು ಕಸಿದ ಗುಡ್ಡ

Ankola ಗಂಗಾವಳಿ ತಟದಲ್ಲಿ ಬದುಕು ಕಸಿದ ಗುಡ್ಡ

DHAMMIKA

Sri Lanka : ಮಾಜಿ ಕ್ರಿಕೆಟಿಗ ಧಮ್ಮಿಕ ನಿರೋಶನ್‌ ಹತ್ಯೆ

Jaiswal

T20 Batting Ranking: ಮೂರಕ್ಕೇರಿದ ಯಶಸ್ವಿ ಜೈಸ್ವಾಲ್‌

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

Padubidri – Karkala ರಸ್ತೆ ಟೋಲ್‌ ಸಂಗ್ರಹಕ್ಕಾಗಿ ಕಾರ್ಯಾದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud Case: ಲಾಭಾಂಶದ ಆಮಿಷ… ಮಹಿಳೆಗೆ ಆನ್‌ಲೈನ್‌ನಲ್ಲಿ 9.50 ಲಕ್ಷ ರೂ. ವಂಚನೆ

Fraud Case: ಲಾಭಾಂಶದ ಆಮಿಷ… ಮಹಿಳೆಗೆ ಆನ್‌ಲೈನ್‌ನಲ್ಲಿ 9.50 ಲಕ್ಷ ರೂ. ವಂಚನೆ

Governmnet-Emp

Government Employees; ಸರಕಾರದ ನಿಲುವುಗಳಿಗೆ ತಕ್ಕಂತೆ ಕೆಲಸ ಮಾಡಿ: ಸಿದ್ದರಾಮಯ್ಯ

Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು

Haveri: ಬಸ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಮಹಿಳೆ ಮೃತ್ಯು.. ಸಾರ್ವಜನಿಕರಿಂದ ಆಕ್ರೋಶ

ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ತಾಲೂಕಿನ ಶಾಲೆಗಳಿಗೆ ಜು.18 ರಂದು ರಜೆ

ಚಿಕ್ಕಮಗಳೂರು, ಕೊಪ್ಪ, ಮೂಡಿಗೆರೆ, ಕಳಸ, ಶೃಂಗೇರಿ ತಾಲೂಕಿನ ಶಾಲೆಗಳಿಗೆ ಜು.18 ರಂದು ರಜೆ

CM-siddu

Reservation for Job; ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಮೀಸಲು: ಸರ್ಕಾರ ಯೂಟರ್ನ್‌

MUST WATCH

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ಹೊಸ ಸೇರ್ಪಡೆ

Railway ಮೂರು ವಿಭಾಗದ ರೈಲ್ವೇ ಅಧಿಕಾರಿಗಳ ಸಮಿತಿ ರಚನೆಗೆ ಸೋಮಣ್ಣ ಸೂಚನೆ

landslide ಅವೈಜ್ಞಾನಿಕ ಕಾಮಗಾರಿ; ನಿರಂತರ ಭೂ ಕುಸಿತದ ಗಾಬರಿ

landslide ಅವೈಜ್ಞಾನಿಕ ಕಾಮಗಾರಿ; ನಿರಂತರ ಭೂ ಕುಸಿತದ ಗಾಬರಿ

Hill Collapse ಉಳುವರೆಯಲ್ಲಿ ಉಳಿದದ್ದು ಮನೆ ನೆಲಗಟ್ಟು !

Hill Collapse ಉಳುವರೆಯಲ್ಲಿ ಉಳಿದದ್ದು ಮನೆ ನೆಲಗಟ್ಟು !

Ankola ಗಂಗಾವಳಿ ತಟದಲ್ಲಿ ಬದುಕು ಕಸಿದ ಗುಡ್ಡ

Ankola ಗಂಗಾವಳಿ ತಟದಲ್ಲಿ ಬದುಕು ಕಸಿದ ಗುಡ್ಡ

DHAMMIKA

Sri Lanka : ಮಾಜಿ ಕ್ರಿಕೆಟಿಗ ಧಮ್ಮಿಕ ನಿರೋಶನ್‌ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.