ಜರ್ಮನಿಯಿಂದ ಸಹಾಯ ಹಸ್ತ

Team Udayavani, Jun 2, 2021, 8:41 PM IST

————

ಭಾರತದಲ್ಲಿ ಕೋವಿಡ್‌ನ‌ ಎರಡನೇ ಅಲೆಗೆ ತುತ್ತಾಗಿ ತುಂಬಿದ  ಚಿತಾಗಾರಗಳು, ಆರದ ಅಗ್ನಿ, ಎಲ್ಲೆಲ್ಲೂ ಆಪ್ತರನ್ನು ಕಳೆದುಕೊಂಡು ಗೋಳಾಡುತ್ತಿರುವವರ ಪರಿಸ್ಥಿತಿಯನ್ನು ಕಂಡು ನೊಂದ ಮನಸುಗಳಿಗೆ ಸಾಂತ್ವನ, ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ  ಜರ್ಮನಿಯ ರೈನ್‌ ಮೈನ್‌ ಕನ್ನಡ ಸಂಘ ಕರ್ನಾಟಕದ ಕೆಲವು ಸಂಘಸಂಸ್ಥೆಗಳೊಂದಿಗೆ ಕೈ ಜೋಡಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಭರವಸೆಯ ಆಶಾಕಿರಣ ಮೂಡಿಸಿದೆ.

ಮಾತೃಭೂಮಿಯಲ್ಲಿ ಕೋವಿಡ್‌ನಿಂದಾಗಿ ಅಸಹಜವಾಗುತ್ತಿರುವ ಜನ ಜೀವನವನ್ನು ಕಂಡು ಮಿಡಿದ ಜರ್ಮನಿಯಲ್ಲಿರುವ ಆರ್‌ಎಂಕೆಎಸ್‌ನ ಕನ್ನಡ ಮನಸುಗಳು, ಸಾಮಾಜಿಕ ಕಳಕಳಿಯುಳ್ಳ ಹಲವರೊಂದಿಗೆ  ಜೂಮ್‌ ಮೂಲಕ ಚರ್ಚಿಸಿ ಹಲವರ ಅಭಿಪ್ರಾಯಗಳನ್ನು ಸಂಗ್ರಹಿಸಿ ನಾವು ನೀಡುವ ಸಹಾಯದ ಸೇತುವೆ ಎಷ್ಟು ಭದ್ರವಾಗಿದೆ ಎಂದು ಖಾತ್ರಿ ಪಡಿಸಿಕೊಂಡು ನೋಂದಾಯಿತ ಎನ್‌ಜಿಒ ಗಳೊಂದಿಗೆ ಸೇರಿ ಅವಶ್ಯಕತೆಯುಳ್ಳ ಜನರು ಅವಕಾಶದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿದೆ. ಇದರೊಂದಿಗೆ ಅಜಲಾ ಫೌಂಡೇಶನ್‌, ವಿದ್ಯಾಪೋಷಕ ಹಾಗೂ ಶ್ರೀ ಸಾಯಿ ಭಾರ್ಗವ ಸೇವಾ ಫೌಂಡೇಶನ್‌ ಚಾರಿಟೆಬಲ್‌ ಟ್ರಸ್ಟ್‌  ಕೈ ಜೋಡಿಸಿದೆ.

ಆರ್‌ಎಂಕೆಎಸ್‌ನಿಂದ 25,000 ಯುರೋ ಸಂಗ್ರಹಿಸುವ ಗುರಿಯೊಂದಿಗೆ ಪರಿಚಯದವರಿಗೆ ಹಲವು ವಾಟ್ಸ್‌ಆ್ಯಪ್‌ ಗುಂಪುಗಳಿಗೆ ತಮ್ಮ ಮನವಿಯನ್ನು ಕಳುಹಿಸಲಾಯಿತು. ಸದಸ್ಯ-ಸದಸ್ಯರೇತರರು ಹಾಗೂ ಜರ್ಮನ್ನರೂ ಸೇರಿದಂತೆ 90 ಜನರು ದೇಣಿಗೆಯನ್ನು ನೀಡಿದ್ದಾರೆ. ಒಂದು ವಾರದಲ್ಲಿ 13,000 ಯುರೋ ಸಂಗ್ರಹವಾಗಿದ್ದು, ಎರಡನೇ ವಾರದ ವೇಳೆಗೆ 18,307 ಯುರೋ ಬಂದು ಸೇರಿತು.

ಇದಲ್ಲದೆ RMಓಖ ತನ್ನ  ಖಾತೆಯಿಂದ 1,000 ಯುರೋಗಳನ್ನು ದೇಣಿಗೆಯಾಗಿ ನೀಡಿದೆ. ಸಂಗ್ರಹವಾದ ಒಟ್ಟು  ಹಣದಲ್ಲಿ  7,200 ಯುರೋಗಳಷ್ಟು ಹಣವನ್ನು ಆಕ್ಸಿಜನ್‌ ಕಾನ್ಸನೆóàಟರ್ಸ್‌ ಮತ್ತು ಮೆಡಿಕಲ್‌ ಸಪ್ಲೆ„ಗಳಿಗೆ ವಿನಿಯೋಗಿಸುವ ಉದ್ದೇಶವಿದೆ. ಈಗಾಗಲೇ 7,200 ಯುರೋ ವೆಚ್ಚದಲ್ಲಿ  ಬ್ಯಾಂಕಾಕ್‌ನ ಮೂಲಕ 15 ಆಕ್ಸಿಜನ್‌ ಕಾನ್ಸಂಟ್ರೇಶನ್‌ಗಳನ್ನು ಏರ್‌ಕಾರ್ಗೋ ಮೂಲಕ ಕಳುಹಿಸಲಾಗಿದ್ದು ಭಾರತವನ್ನು ತಲುಪುವ ಮಾರ್ಗದಲ್ಲಿದೆ. ಆರ್‌ಎಂಕೆಎಸ್‌ನಿಂದ 5000 ಊಊಕ2 ಮಾಸ್ಕ್ಗಳನ್ನು ಖರೀದಿಸಲಾಗಿದ್ದು  ಅದನ್ನು ಭಾರತಕ್ಕೆ ತಲುಪಿಸಲು ಇಎಐ  ಫ್ರಾಂಕ್‌ಫ‌ರ್ಟ್‌ ಸಹಾಯ ಹಸ್ತ ನೀಡುತ್ತಿದೆ.

ಅಜಲಾ ಫೌಂಡೇಶನ್‌ ಜತೆಗೂಡಿ ಸಾವಿರ ಮನೆಗಳಿಗೆ ಐಸೊಲೇಶನ್‌ ಕಿಟ್‌ ಅದರೊಂದಿಗೆ ಔಷಧಗಳು, ಸ್ಯಾನಿಟೈಸರ್‌, ಮಾಸ್ಕ್, ಆಕ್ಸಿಮೀಟರ್‌ ಮತ್ತು ಥರ್ಮೋಮೀಟರ್‌ಗಳನ್ನು  ವಿತರಿಸಲಾಗಿದೆ. ಮತ್ತಷ್ಟು ಇಂತಹ ಕಿಟ್‌ಗಳನ್ನು ಕೊಂಡು ಅವಶ್ಯವಿರುವವರಿಗೆ ತಲುಪಿಸುವಲ್ಲಿ  ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಮಕ್ಕಳೇ ಆರೋಗ್ಯವಂತ ಸಮಾಜದ ಭವಿಷ್ಯ ಹಾಗಾಗಿ ಅನಾಥ ಮಕ್ಕಳಿಗೆ  ಆಹಾರ, ಮೆಡಿಕಲ್‌ ಸಪ್ಲೆ„ ಮತ್ತು ಅವಶ್ಯವಿರುವ ಹ್ಯುಮಾನಿಟೇರಿಯನ್‌ಗಳು ದೊರಕುವಂತೆ ಗಮನಹರಿಸಲಾಗಿದೆ.

ಅನ್ನ ದೇವರ ಮುಂದೆ ಇನ್ನು ದೇವರುಂಟೆ ? ಎಂಬ ಸರ್ವಜ್ಞರ ನುಡಿಯಂತೆ ಲಾಕ್‌ಡೌನ್‌ನಿಂದ ಕೆಲಸವನ್ನು ಕಳೆದುಕೊಂಡು ಅಸಹಾಯಕರಾಗಿರುವವರಿಗೆ ಬೆಂಗಳೂರಿನ ವಿದ್ಯಾಪೋಷಕ ಸಂಸ್ಥೆ 88,500 ರೂ.ಗಳ ವೆಚ್ಚದಲ್ಲಿ  ಕರ್ನಾಟಕ ರಾಜ್ಯ ಅಂಗವಿಕಲರ ಆರ್‌.ಪಿ.ಡಿ. ಟಾಸ್ಕ್ಫೋರ್ಸ್‌ ಟೀಮ್‌ನವರ ಕೋರಿಕೆ ಮೇರೆಗೆ ಸಂಕಷ್ಟದಲ್ಲಿರುವ ಅಂಗವಿಕಲ ಕುಟುಂಬಗಳಿಗೆ 700 ಬೆಲೆಯ 125 ದಿನಸಿ ಕಿಟ್‌ಗಳನ್ನು  ದಾವಣಗೆರೆ ಜಿಲ್ಲೆಯ ಹರಿಹರ, ನ್ಯಾಮತಿ, ಹೊನ್ನಾಳಿ ತಾಲೂಕಿನ ಕುಟುಂಬಗಳಿಗೆ ವಿತರಿಸಿದ್ದಾರೆ.

ಅಜಲಾ ಫೌಂಡೇಶನ್‌ನಿಂದ ಹಲವು ಬುಡಕಟ್ಟು ಜನರಿಗೂ ಒಂದು ತಿಂಗಳಿಗೆ ಆಗುವಷ್ಟು  ದಿನಸಿ ಸಾಮಗ್ರಿಗಳನ್ನು ಹಂಚಲಾಗಿದ್ದು, ಮತ್ತಷ್ಟು  ಜನರಿಗೆ ಆಹಾರವನ್ನು ಒದಗಿಸುವಲ್ಲಿ ಕಾರ್ಯಗತವಾಗಿದೆ. ಶ್ರೀ ಸಾಯಿ ಭಾರ್ಗವ ಸೇವಾ ಫೌಂಡೇಶನ್‌ನಿಂದ ಹಲವು ಬುಡಕಟ್ಟು ಜನರಿಗೂ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಸಾಮಗ್ರಿಗಳನ್ನು ಹಂಚಲಾಗಿದ್ದು  ಮತ್ತಷ್ಟು ಜನರಿಗೆ ಆಹಾರವನ್ನು ಒದಗಿಸುವಲ್ಲಿ  ಕಾರ್ಯಗತವಾಗಿದೆ. ಶ್ರೀ ಸಾಯಿ ಭಾರ್ಗವ ಸೇವಾ ಫೌಂಡೇಶನ್‌ ಚಾರಿಟೆಬಲ್‌ ಟ್ರಸ್ಟ್‌  ಹಲವು ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಆಹಾರವನ್ನು ಒದಗಿಸುತ್ತಾ ಹಸಿವನ್ನು  ಇಂಗಿಸುತ್ತಿದೆ.

ಕರ್ನಾಟಕ ಬಿಟ್ಟು ಸಾವಿರಾರು ಮೈಲಿಗಳಾಚೆ ಇರುವ ನಮಗೆ ಕರ್ನಾಟಕ ಕೇವಲ ಒಂದು ಜಾಗವಾಗಿ ಉಳಿಯದೆ ನಮ್ಮೆಲ್ಲ  ಸುಂದರ  ನೆನಪುಗಳಿಂದ ಕೂಡಿದ ಭದ್ರ ಭಾವುಕ ಅಡಿಪಾಯವಾಗಿದೆ. ಅಲ್ಲಿಯ ನೋವು ಇಲ್ಲಿ  ನಮ್ಮ ನಿದ್ದೆಗೆಡಿಸುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನಮಗಾದ ಅಳಿಲು ಸೇವೆ ಮಾಡುತ್ತಿರುವುದು ಧನ್ಯತೆಯ ಭಾವ ಉಂಟು ಮಾಡುತ್ತಿದೆ. ಈ ಮಹತ್ತರ ಕಾರ್ಯಕ್ಕೆ  ದೇಣಿಗೆ ನೀಡಿರುವವರ ಹಣಕ್ಕೆ ನಾವು ಜವಾಬ್ದಾರರಾಗಿ ನಡೆದುಕೊಳ್ಳಬೇಕು. ಅದು ಸೂಕ್ತ ವ್ಯಕ್ತಿಗಳಿಗೆ ಸಿಗುವಂತಾಗಿ ಆದಷ್ಟು  ಬೇಗ ನಮ್ಮ ನೆಲ, ನಮ್ಮ ಜನ ಆರೋಗ್ಯವಂತರಾಗಿ ನೆಮ್ಮದಿಯಿಂದ ಜೀವನ ಸಾಗಿಸುವಂತಾದರೆ ನಮ್ಮ ಪರಿಶ್ರಮಕ್ಕೆ ತಕ್ಕ ಫ‌ಲ ಸಿಕ್ಕಂತಾಗುವುದು.

ಶೋಭಾ ಚೌಹಾನ್‌, ಫ್ರಾಂಕ್ರ್ಟ್ಜರ್ಮನಿ

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.