ಮತ್ತೆ ಸ್ಯಾಟಲೈಟ್‌ ಫೋನ್‌ ರಿಂಗಣ : ರಾಜ್ಯದ ಗಡಿಭಾಗದ ಐದಾರು ಕಡೆ ಬಳಕೆ

Team Udayavani, Jul 5, 2021, 7:30 AM IST

ಮತ್ತೆ ಸ್ಯಾಟಲೈಟ್‌ ಫೋನ್‌ ರಿಂಗಣ : ರಾಜ್ಯದ ಗಡಿಭಾಗದ ಐದಾರು ಕಡೆ ಬಳಕೆ

ಬೆಂಗಳೂರು : ಕರಾವಳಿ ಸಹಿತ ಕರ್ನಾಟಕ – ಕೇರಳ ಗಡಿಭಾಗದ ಅರಣ್ಯ, ಗ್ರಾಮಾಂತರ ಪ್ರದೇಶಗಳಲ್ಲಿ ನಿಷೇಧಿತ ಸ್ಯಾಟಲೈಟ್‌ ಫೋನ್‌ ಮತ್ತೆ ಸದ್ದು ಮಾಡುತ್ತಿವೆ.

ಉಗ್ರ ಮತ್ತು ನಕ್ಸಲ್‌ ಹಾಗೂ ಭೂಗತ ಚಟುವಟಿಕೆಗಳಿಗಾಗಿ ಇವನ್ನು ಬಳಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ರಾಜ್ಯ ಗುಪ್ತಚರ ಮತ್ತು ಆಂತರಿಕ ಭದ್ರತ ವಿಭಾಗ (ಐಎಸ್‌ ಡಿ) ತನಿಖೆಗೆ ಮುಂದಾಗಿದೆ.

ಕೊರೊನಾ ವಿಷಮ ಪರಿಸ್ಥಿತಿಯ ಲಾಭ ಪಡೆಯಲು ಕೆಲವು ಉಗ್ರ ಮತ್ತು ನಕ್ಸಲ್‌ ಸಂಘಟನೆಗಳ ಸದಸ್ಯರು ಸ್ಯಾಟಲೈಟ್‌ ಫೋನ್‌ ಗಳನ್ನು ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಕೇಂದ್ರ ಗುಪ್ತಚರ ಇಲಾಖೆ ಸೂಚನೆ ಮೇರೆಗೆ ಕಾರ್ಯಾಚರಣೆ ನಡೆಸಿದಾಗ ಆರೇಳು ತಿಂಗಳುಗಳಲ್ಲಿ ರಾಜ್ಯದ 8-10 ಕಡೆಗಳಿಂದ ಸ್ಯಾಟಲೈಟ್‌ ಫೋನ್‌ ಗಳ ಮೂಲಕ ನೆರೆ ರಾಜ್ಯ, ದೇಶಗಳಿಗೆ ಕರೆ ಹೋಗಿರುವುದು ಬೆಳಕಿಗೆ ಬಂದಿದೆ.

ಆರು ತಿಂಗಳುಗಳಿಂದ ಸಕ್ರಿಯ
ಜನವರಿಯಿಂದ ರಾಜ್ಯದಲ್ಲಿ ಮತ್ತೆ ಸ್ಯಾಟಲೈಟ್‌ ಫೋನ್‌ ಬಳಕೆ ಆರಂಭವಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದಟ್ಟಾರಣ್ಯ ಪ್ರದೇಶಗಳು, ಮೈಸೂರು, ಚಾಮರಾಜನಗರದ ಕೆಲವು ಪ್ರದೇಶಗಳಲ್ಲಿ ಲೋಕೇಶನ್‌ ಪತ್ತೆಯಾಗಿತ್ತು.

ಪ್ರಾಥಮಿಕ ತನಿಖೆಯಲ್ಲಿ ಮತ್ತೂಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದ್ದು, ಕೇರಳ ಮತ್ತು ಗಡಿ ಭಾಗದ ವ್ಯಕ್ತಿಗಳೇ ಸ್ಯಾಟಲೈಟ್‌ ಫೋನ್‌ ಬಳಸುತ್ತಿದ್ದಾರೆ.

ದುಬಾೖ, ಅರಬ್‌ ರಾಷ್ಟ್ರಗಳಿಗೆ ಕರೆ
ಬಹಳಷ್ಟು ಕರೆಗಳು ದುಬಾೖ, ಅರಬ್‌ ರಾಷ್ಟ್ರಗಳಿಗೆ ಹೋಗಿರುವುದು ಪತ್ತೆಯಾಗಿದೆ. ಸೌದಿ ರಾಷ್ಟ್ರಗಳಿಂದ ಬಂದವರೇ ಸ್ಯಾಟಲೈಟ್‌ ಫೋನ್‌ ಬಳಸುತ್ತಿದ್ದಾರೆ ಎಂದು ತನಿಖೆಯಲ್ಲಿ ಕಂಡು ಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲೆಲ್ಲಿಂದ ಕರೆ?
ಗುಂಡ್ಲು ಪೇಟೆ, ಎಚ್‌.ಡಿ. ಕೋಟೆ, ಮೈಸೂರು ಗ್ರಾಮಾಂತರ, ಕೊಡಗು, ಮಡಿಕೇರಿ, ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿ, ಬೆಳ್ತಂಗಡಿ, ಬಂಟ್ವಾಳ ಮತ್ತು ಹನೂರು ತಾಲೂಕಿನ ಕಾವೇರಿ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಈ ಫೋನ್‌ಗಳು ಸಕ್ರಿಯವಾಗಿದ್ದು, ಐಎಸ್‌ಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

ನಕ್ಸಲ್‌ ಪ್ರದೇಶಗಳಲ್ಲಿ ಸಕ್ರಿಯ
ಕೊರಿಯಾದ “ತುರಾಯ್‌’ ಬ್ರ್ಯಾಂಡ್‌ನ‌ ಸ್ಯಾಟಲೈಟ್‌ ಫೋನ್‌ ಬಳಕೆಯಾಗಿದೆ. ತುರಾಯ್‌ ಬ್ರ್ಯಾಂಡ್‌ನ‌ 3 ಮಾದರಿಯ ಸ್ಯಾಟಲೈಟ್‌ ಫೋನ್‌ಗಳಿದ್ದು, ಅವುಗಳ ಲೋಕೇಶನ್‌ ಪತ್ತೆ ತತ್‌ಕ್ಷಣ ಸಾಧ್ಯವಿಲ್ಲ. 24 ತಾಸುಗಳ ಬಳಿಕ ಲೋಕೇಶನ್‌ ಪತ್ತೆಯಾಗುತ್ತದೆ. ಆಗ ಸ್ಥಳ ಪರಿಶೀಲಿಸಿದಾಗ ಯಾರೂ ಇರುವುದಿಲ್ಲ. ಈ ಮಧ್ಯೆ ಕೇರಳ- ಕರ್ನಾಟಕ-ತಮಿಳುನಾಡು ಭಾಗದ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಧಿಕವಾಗಿದ್ದಾರೆ. ಅವರು ಸ್ಯಾಟಲೈಟ್‌ ಫೋನ್‌ ಗಳನ್ನು ಬಳಕೆ ಮಾಡಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

BJP notice to Union Minister Sinha who did not come to campaign and did not vote

BJP: ಪ್ರಚಾರಕ್ಕೆ ಬರದ, ವೋಟ್‌ ಮಾಡದ ಕೇಂದ್ರ ಸಚಿವ ಸಿನ್ಹಾಗೆ ಬಿಜೆಪಿ ನೋಟಿಸ್‌

Mangaluru ಮನೆಯ ಬೀಗ ಮುರಿದು ಚಿನ್ನಾಭರಣ ಕಳವು

Mangaluru ಮನೆಯ ಬೀಗ ಮುರಿದು ಚಿನ್ನಾಭರಣ ಕಳವು

Mangaluru ಸಂಶಯಾಸ್ಪದ ವರ್ತನೆ: ಯುವಕ ಪೊಲೀಸರ ವಶಕ್ಕೆ

Mangaluru ಸಂಶಯಾಸ್ಪದ ವರ್ತನೆ: ಯುವಕ ಪೊಲೀಸರ ವಶಕ್ಕೆ

Road Mishap ಜಾಲ್ಸೂರು: ಬಸ್‌ – ಲಾರಿ ಢಿಕ್ಕಿ; ಹಾನಿ

Road Mishap ಜಾಲ್ಸೂರು: ಬಸ್‌ – ಲಾರಿ ಢಿಕ್ಕಿ; ಹಾನಿ

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

women trafficking

Honnali; ಕೆಲಸಕ್ಕೆಂದು ಕರೆದುಕೊಂಡು ಒಂದು ಲಕ್ಷ ರೂ ಗೆ ಮಹಿಳೆಯ ಮಾರಾಟ!

ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

Bidar; ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2nd PUC Exam-2 Result Declared; 35.25% students passed

2nd PUC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ

11-gadaga

ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದೆ:ವಿ.ಪ. ಸದಸ್ಯ ಎಸ್.ವಿ. ಸಂಕನೂರ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

Politics: ರಾಜ್ಯ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲ; ವರ್ಷದ ಸಾಧನೆ ಶೂನ್ಯ; ಬೊಮ್ಮಾಯಿ ಟೀಕೆ

11

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಸರ್ಕಾರದ ಪರ ಮೃದು ಧೋರಣೆ ಇಲ್ಲ: ಮೃತ್ಯುಂಜಯ ಸ್ವಾಮೀಜಿ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

Hasan: ಲೈಂಗಿಕ ದೌರ್ಜನ್ಯ ಪ್ರಕರಣ; 20 ದಿನಗಳ ನಂತರ ತವರಿಗೆ ಆಗಮಿಸಿದ ಎಚ್.ಡಿ.ರೇವಣ್ಣ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

BJP notice to Union Minister Sinha who did not come to campaign and did not vote

BJP: ಪ್ರಚಾರಕ್ಕೆ ಬರದ, ವೋಟ್‌ ಮಾಡದ ಕೇಂದ್ರ ಸಚಿವ ಸಿನ್ಹಾಗೆ ಬಿಜೆಪಿ ನೋಟಿಸ್‌

Mangaluru ಮನೆಯ ಬೀಗ ಮುರಿದು ಚಿನ್ನಾಭರಣ ಕಳವು

Mangaluru ಮನೆಯ ಬೀಗ ಮುರಿದು ಚಿನ್ನಾಭರಣ ಕಳವು

Mangaluru ಸಂಶಯಾಸ್ಪದ ವರ್ತನೆ: ಯುವಕ ಪೊಲೀಸರ ವಶಕ್ಕೆ

Mangaluru ಸಂಶಯಾಸ್ಪದ ವರ್ತನೆ: ಯುವಕ ಪೊಲೀಸರ ವಶಕ್ಕೆ

Road Mishap ಜಾಲ್ಸೂರು: ಬಸ್‌ – ಲಾರಿ ಢಿಕ್ಕಿ; ಹಾನಿ

Road Mishap ಜಾಲ್ಸೂರು: ಬಸ್‌ – ಲಾರಿ ಢಿಕ್ಕಿ; ಹಾನಿ

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

Kadaba ಕಾರು ಚರಂಡಿಗೆ ಬಿದ್ದು ಮಂಡ್ಯ ಮೂಲದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.