ಕತ್ತಲೆಯಲ್ಲೇ ಸೈನಿಕರಿಗೆ ಚಿಕಿತ್ಸೆ ನೀಡಿ ಬದುಕಿಸಿದೆವು

Team Udayavani, Dec 23, 2021, 8:00 AM IST

ಕತ್ತಲೆಯಲ್ಲೇ ಸೈನಿಕರಿಗೆ ಚಿಕಿತ್ಸೆ ನೀಡಿ ಬದುಕಿಸಿದೆವು

ಗಂಜೀಮಠ ನಿವಾಸಿಯಾಗಿರುವ ಏಕನಾಥ ಶೆಣೈ ಅವರು 1971ರ ಜನವರಿಯಲ್ಲಿ ಸೈನ್ಯಕ್ಕೆ ಸೇರ್ಪಡೆಯಾಗಿದ್ದು ಅದೇ ವರ್ಷ ಬಾಂಗ್ಲಾ ಯುದ್ಧ ನಡೆದಿತ್ತು. ಒಟ್ಟು 17 ವರ್ಷ ಸೇವೆ ಸಲ್ಲಿಸಿದ್ದಾರೆ. ನಾಯ್ಕ ಹುದ್ದೆಗೆ ಪದೋನ್ನತಿಗೊಂಡು ನಿವೃತ್ತರಾದರು.

ಏಕನಾಥ ಶೆಣೈ
ಬಾಂಗ್ಲಾ ಯುದ್ಧ ನಡೆಯುವಾಗ ನನಗೆ 19 ವರ್ಷ. ಆರ್ಮಿ ಮೆಡಿಕಲ್‌ ಕೋಪ್ಸ್‌ (ಎಎಂಸಿ) ಆಗಿದ್ದೆ. ತರಬೇತಿಯಲ್ಲಿರುವಾಗಲೇ ಯುದ್ಧ ಘೋಷಣೆಯಾದ ಹಿನ್ನೆಲೆಯಲ್ಲಿ ಸೇವೆ ಆರಂಭಿಸಿದೆವು. ಮೇರಥ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಗಾಯಗೊಂಡ ಸೈನಿಕರಿಗೆ ಚಿಕಿತ್ಸೆ ನೀಡುವ ಕೆಲಸ ನಮ್ಮದಾಗಿತ್ತು. ಕೈ, ಕಾಲು, ಕಣ್ಣು ಕಳೆದುಕೊಂಡ ಸೈನಿಕರಿಗೆ ಚಿಕಿತ್ಸೆ ನೀಡುವ ಕೆಲಸವನ್ನು ನಿತ್ಯವೂ ಮಾಡುತ್ತಿದ್ದೆವು. 1,000 ಬೆಡ್‌ಗಳಿದ್ದ ಆಸ್ಪತ್ರೆಯಲ್ಲಿ ಕೆಲವೊಮ್ಮೆ ಬೆಡ್‌ಗಳು ಸಾಕಾಗದೆ ನೆಲದಲ್ಲಿಯೇ ಮಲಗಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಜೀವನದಲ್ಲಿ ಮೊದಲ ಬಾರಿಗೆ ಅಂತಹ ದೃಶ್ಯ ನೋಡಿದ್ದೆ. ಸೈನಿಕರಲ್ಲದೆ ಇನ್ನೊಂದು ಬದಿಯಲ್ಲಿ ಯುದ್ದ ಕೈದಿಗಳಿಗೂ ಪ್ರತ್ಯೇಕ ಕ್ಯಾಂಪ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಸುತ್ತ ತಂತಿ ಬೇಲಿ ಹಾಕಲಾಗಿತ್ತು. ಕೃತಕ ಅವಯವಗಳನ್ನು ಜೋಡಿಸುವ ಕೆಲಸಗಳೂ ನಡೆಯುತ್ತಿದ್ದವು. ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ ಗಳ ಕೊರತೆ ಇರಲಿಲ್ಲ.

ಯುದ್ಧದ ಹಿನ್ನೆಲೆಯಲ್ಲಿ ರಾತ್ರಿ ಲೈಟ್‌ ಆಫ್’ ಆದೇಶವಿತ್ತು. ಹಾಗಾಗಿ ಸರಿಯಾದ ಬೆಳಕಿನ ವ್ಯವಸ್ಥೆಯೂ ಇಲ್ಲದ ಪರಿಸ್ಥಿತಿಯಲ್ಲಿ ಸೇವೆ ಮಾಡುವ ಅನಿವಾರ್ಯತೆ ಇತ್ತು. ಆಗಷ್ಟೇ ಕೈ, ಕಾಲುಗಳನ್ನು ಕಳೆದುಕೊಂಡು ಬಂದ ಸೈನಿಕರನ್ನು ನೋಡಿ ಸ್ವಲ್ಪವೂ ಧೃತಿಗೆಡದೆ ಚಿಕಿತ್ಸೆಗೆ ಮುಂದಾಗುತ್ತಿದ್ದೆವು. ಆ ದೃಶ್ಯಗಳು ಈಗಲೂ ಕಣ್ಣ ಮುಂದಿವೆ. ಬಳಿಕ ನಾನು ಮೇರಥ್‌ನಿಂದ ಶ್ರೀನಗರದ ಮಿಲಿಟರಿ ಆಸ್ಪತ್ರೆಗೆ ಸರ್ಜಿಕಲ್‌ ವಾರ್ಡ್‌ನಲ್ಲಿ ಸೇವೆಗೆ ಸೇರ್ಪಡೆಯಾದೆ. ಅಲ್ಲಿ ಕೂಡ ನೆಲಬಾಂಬ್‌ಗಳಿಂದ ಗಾಯಗೊಂಡ ಸೈನಿಕರು ಚಿಕಿತ್ಸೆಗೆ ಬರುತ್ತಿದ್ದರು.

ನಿರೂಪಣೆ: ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Modi (2)

Interview; ಈಗ ಜಾಗತಿಕ ಗುಣಮಟ್ಟದ ಸಂಪುಟ ಟಿಪ್ಪಣಿ: ಮೋದಿ

Modi 2

TMC ಸನ್ಯಾಸಿಗಳಿಗೆ ಅವಮಾನ ಮಾಡುವಷ್ಟು ಕೀಳುಮಟ್ಟಕ್ಕೆ: ಪ್ರಧಾನಿ ಆಕ್ರೋಶ

Agri

Report; 4 ವರ್ಷಗಳಲ್ಲಿ ದೇಶದ ಕೃಷಿ ಪ್ರದೇಶದ 50 ಲಕ್ಷ ಮರಗಳು ಕಣ್ಮರೆ!

arrested

Bihar; ಮೋದಿಗೆ ಮತ ಹಾಕಬೇಡಿ ಎಂದ ಶಿಕ್ಷಕನ ಬಂಧಿಸಿದ ಪೊಲೀಸರು!

Mangaluru University; ಪದವಿ 3 ವರ್ಷಕ್ಕೆ; ಪಠ್ಯಕ್ರಮ ಬದಲಾವಣೆಗೆ ವಿ.ವಿ. ನಿರ್ಧಾರ

Mangaluru University; ಪದವಿ 3 ವರ್ಷಕ್ಕೆ; ಪಠ್ಯಕ್ರಮ ಬದಲಾವಣೆಗೆ ವಿ.ವಿ. ನಿರ್ಧಾರ

Kharge 2

Congress ವರಿಷ್ಠರ ಸೂಚನೆಯಂತೆ ವರ್ತಿಸಿ: ಎಂಪಿ ಅಧೀರ್‌ಗೆ ಖರ್ಗೆ ತಾಕೀತು

Lok Sabha Elections ಹಂತ-5: ಇಂದು ಮತ; ರಾಹುಲ್‌, ರಾಜನಾಥ್‌,ಸ್ಮೃತಿ ಭವಿಷ್ಯ ನಿರ್ಧಾರ

Lok Sabha Elections ಹಂತ-5: ಇಂದು ಮತ; ರಾಹುಲ್‌, ರಾಜನಾಥ್‌,ಸ್ಮೃತಿ ಭವಿಷ್ಯ ನಿರ್ಧಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

swati maliwal

AAP; ಸಂತ್ರಸ್ತೆಯಾದ ಸ್ವಾತಿ ಮಲಿವಾಲ್

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ

Sunil Chhetri

Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್‌ಬಾಲ್‌ನ ತೆಂಡುಲ್ಕರ್‌ ಚೆಟ್ರಿ

ರಘುಪತಿ ಭಟ್‌

ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಟಿಕೆಟ್‌!: ಟಿಕೆಟ್‌ ವಂಚಿತ ರಘುಪತಿ ಭಟ್‌ ಬಿರುನುಡಿ

POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ಜನ

POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್‌ ಆಕ್ರಮಿತ ಕಾಶ್ಮೀರ ಜನ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Modi (2)

Interview; ಈಗ ಜಾಗತಿಕ ಗುಣಮಟ್ಟದ ಸಂಪುಟ ಟಿಪ್ಪಣಿ: ಮೋದಿ

rishi-sunak

British ದೊರೆಗಿಂತ ಪಿಎಂ ರಿಷಿ ದಂಪತಿ ಶ್ರೀಮಂತರು!

Modi 2

TMC ಸನ್ಯಾಸಿಗಳಿಗೆ ಅವಮಾನ ಮಾಡುವಷ್ಟು ಕೀಳುಮಟ್ಟಕ್ಕೆ: ಪ್ರಧಾನಿ ಆಕ್ರೋಶ

Agri

Report; 4 ವರ್ಷಗಳಲ್ಲಿ ದೇಶದ ಕೃಷಿ ಪ್ರದೇಶದ 50 ಲಕ್ಷ ಮರಗಳು ಕಣ್ಮರೆ!

arrested

Bihar; ಮೋದಿಗೆ ಮತ ಹಾಕಬೇಡಿ ಎಂದ ಶಿಕ್ಷಕನ ಬಂಧಿಸಿದ ಪೊಲೀಸರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.