ರಾಜ್ಯಪಾಲರ ಟ್ವಿಟರ್ ಖಾತೆ ಬ್ಲಾಕ್ ಮಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
Team Udayavani, Jan 31, 2022, 9:30 PM IST
ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ನಿರಂತರ ಟ್ವೀಟ್ ಬಾಣ ಸುರಿಸುತ್ತಿದ್ದ ರಾಜ್ಯಪಾಲ ಜಗದೀಪ್ ಧನ್ಕಾರ್ ಅವರ ಟ್ವಿಟ್ಟರ್ ಖಾತೆಯನ್ನು ಸಿಎಂ ಮಮತಾ ಬ್ಯಾನರ್ಜಿ, ವೈಯಕ್ತಿಕವಾಗಿ ಬ್ಲಾಕ್ ಮಾಡಿದ್ದಾರೆ.
“ನನ್ನ ಟ್ವಿಟರ್ ಖಾತೆಯಲ್ಲಿ ರಾಜ್ಯಪಾಲರನ್ನು ನಿರ್ಬಂಧಿಸಿದ್ದೇನೆ. ಕಳೆದ ಒಂದು ವರ್ಷದಿಂದ ನಮ್ಮ ತಾಳ್ಮೆ ಕಟ್ಟೆಯೂ ಒಡೆದಿದೆ.
ರಾಜ್ಯಪಾಲರನ ವರ್ತನೆ ಬಗ್ಗೆ ಪ್ರಧಾನಿಗೆ ಸಾಕಷ್ಟು ಪತ್ರಗಳನ್ನು ಬರೆದಿದ್ದೇನೆ. ಆದರೆ, ಮೋದಿ ಇದನ್ನು ಆಲಿಸುತ್ತಿಲ್ಲ’ ಎಂದು ಮಾಧ್ಯಮಗಳ ಮುಂದೆ ಮಮತಾ ಕಿಡಿಕಾರಿದರು.
ಇದನ್ನೂ ಓದಿ:ರಾಜ್ಯದಲ್ಲಿ 25 ಸಾವಿರಕ್ಕಿಂತ ಕಡಿಮೆ ಕೋವಿಡ್ ಕೇಸ್: ಇಂದು 56 ಸಾವು
“ರಾಜ್ಯಪಾಲರು ಎಲ್ಲರಿಗೂ ಕಿರುಕುಳ ನೀಡುತ್ತಿದ್ದರೂ ಪ್ರಧಾನಿ ಇವರನ್ನೇಕೆ ವರ್ಗಾಯಿಸುತ್ತಿಲ್ಲ? ಇಲ್ಲಿನ ರಾಜಭವನದಿಂದಲೇ ಪೆಗಾಸಸ್ ಕಾರ್ಯನಿರ್ವಹಿಸುತ್ತಿದೆ. ರಾಜ್ಯಪಾಲರೇ ಖುದ್ದಾಗಿ ನಮ್ಮ ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.