ವೈದ್ಯರು, ಆ್ಯಂಬುಲೆನ್ಸ್‌ ಬಂದರೂ ಚಿಕಿತ್ಸೆಗೆ ಮನೆ ಬಾಗಿಲು ತೆರೆಯದ ಗರ್ಭಿಣಿ

ತಾಸುಗಟ್ಟಲೆ ಕಾದು ಮನೆಯ ಕಿಟಿಕಿಯಲ್ಲೇ ಔಷಧ ಇಟ್ಟು ಹಿಂದಿರುಗಿದ ವೈದ್ಯರು

Team Udayavani, Feb 12, 2022, 2:21 PM IST

ವೈದ್ಯರು, ಆ್ಯಂಬುಲೆನ್ಸ್‌ ಬಂದರೂ ಚಿಕಿತ್ಸೆಗೆ ಮನೆ ಬಾಗಿಲು ತೆರೆಯದ ಗರ್ಭಿಣಿ

ಎಚ್‌.ಡಿ.ಕೋಟೆ : ಆದಿವಾಸಿ ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಮನೆ ಬಾಗಿಲಿಗೇ ಆ್ಯಂಬುಲೆನ್ಸ್‌ ಸಹಿತ ತಾಲೂಕು ಆರೋಗ್ಯಾಧಿಕಾರಿ (ಟಿಎಚ್‌ಒ), ನರ್ಸ್‌, ಆರೋಗ್ಯ ಸಿಬ್ಬಂದಿ ಧಾವಿಸಿದರೂ ಆಕೆ, ಚಿಕಿತ್ಸೆ ನಿರಾಕರಿಸಿ ಬಾಗಿಲು ಹಾಕಿಕೊಂಡು ಮನೆಯಲ್ಲೇ ಹೆರಿಗೆಯಾಗಿರುವ ಘಟನೆ ತಾಲೂಕಿನ ಹಿರೇಹಳ್ಳಿ ಹಾಡಿಯಲ್ಲಿ ಜರುಗಿದೆ.

ಖುದ್ದ ತಾಲೂಕು ಆರೋಗ್ಯಾಧಿಕಾರಿಗಳೇ ತಾಸುಗಟ್ಟಲೆ ಮನೆ ಹೊಸ್ತಿಲಿನಲ್ಲೇ ನಿಂತರೂ ಆಕೆ ಬಾಗಿಲನ್ನು ತೆರೆಯಲೇ ಇಲ್ಲ. ಹಿರೇಹಳ್ಳಿ ಹಾಡಿ ಸುಧಾಕರ ಪತ್ನಿ ರತಿ ಎಂಬಾಕೆಯೇ ಮನೆಯಲ್ಲಿಯೇ ಹೆರಿಗೆ ಮಾಡಿಕೊಂಡ ಮಹಿಳೆ. ರತಿಗೆ ಈಗಾಗಲೇ 4 ಮಕ್ಕಳಿದ್ದು, 5ನೇ ಮಗುವಿಗೆ ಗರ್ಭ ಧರಿಸಿದ್ದರು. ತುಂಬು ಗರ್ಭಿಯಾಗಿದ್ದ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ
ವಿಷಯ ತಿಳಿದ ಆ ಭಾಗದ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹಾಡಿಗೆ ಧಾವಿಸಿ, ಆಸ್ಪತ್ರೆಗೆ ಬರುವಂತೆ ಗರ್ಭಿಣಿ ರತಿಗೆ ಮನವಿ ಮಾಡಿಕೊಂಡರೂ ಆಕೆ ಒಪ್ಪಿಕೊಳ್ಳಲೇ ಇಲ್ಲ. ಆಗ ಈ ವಿಚಾರವನ್ನು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್‌ ಅವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಕಾದು ಸುಸ್ತಾದ ವೈದ್ಯರು: ಕೂಡಲೇ ಡಾ|ರವಿಕುಮಾರ್‌ ಮತ್ತು ತಂಡವು ಆ್ಯಂಬುಲೆನ್ಸ್‌ ಸಹಿತ ಹಿರೇಹಳ್ಳಿ ಹಾಡಿಗೆ ಭೇಟಿ ನೀಡುವಷ್ಟರಲ್ಲಿ ರತಿಗೆ ಮನೆಯಲ್ಲೇ ಸುಲಲಿತವಾಗಿ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆದರೂ ಮನೆಯ ಹೆರಿಗೆ ಸುರಕ್ಷಿತವಲ್ಲ, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುವಂತೆ ಆಸ್ಪತ್ರೆ ಸಿಬ್ಬಂದಿ ಪರಿಪರಿಯಾಗಿ  ವಿನಂತಿಸಿಕೊಂಡರೂ ಆಕೆ ಸುತಾರಂ ಒಪ್ಪದೇ ಮನೆ ಬಾಗಿಲನ್ನು ಭದ್ರಪಡಿಸಿಕೊಂಡಿದ್ದಾರೆ. ಟಿಎಚ್‌ಒ ಡಾ| ರವಿಕುಮಾರ್‌, ಉದ್ಭವ ಸಂಸ್ಥೆಯ ವೈದ್ಯೆ ಡಾ|ಕವಿತಾ, ನರ್ಸ್‌ ಹಾಗೂ ಆಶಾ ಕಾರ್ಯಕರ್ತೆ ತಾಸುಗಟ್ಟಲೇ ಕಾದು ಕುಳಿತರೂ ರತಿ ಮಾತ್ರ ಮನೆ ಬಾಗಿಲನ್ನು ತೆರೆಯಲೇ ಇಲ್ಲ. ತುರ್ತು ವಾಹನದೊಂದಿಗೆ ಮನೆಯ ಬಳಿ ಕಾದೂಕಾದೂ ಸುಸ್ತಾದ ವೈದ್ಯರು ಕಡೆಗೆ
ಮನೆಯ ಕಿಟಕಿ ಮೂಲಕ ಬಾಣಂತಿ ರತಿಗೆ ಔಷಧಗಳನ್ನು ನೀಡಿ ಅದನ್ನು ಬಳಕೆ ಮಾಡುವ ವಿಧಾನ ತಿಳಿಸಿ ವಾಪಸ್‌ ತೆರಳಿದರು. ಹೆರಿಗೆ ಬಳಿಕ ತಾಯಿ-ಮಗು ಆರೋಗ್ಯವಾಗಿದ್ದಾರೆ.

ಸವಾಲು: ಅದಿವಾಸಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್ಕಾರ ಹಲವು ಯೋಜನೆಗಳನ್ನೂ ರೂಪಿಸಿ ದ್ದರೂ ಇವುಗಳನ್ನು ಸದುಪಯೋಗ ಪಡೆಯುತ್ತಿಲ್ಲ. ಅನಕ್ಷರತೆ, ಮೌಡ್ಯದಿಂದ ಆರೋಗ್ಯ ಸೇವೆಯನ್ನೂ ಪಡೆಯಲು ಹಿಂದೇ ಟು ಹಾಕುತ್ತಿದ್ದಾರೆ. ಬಹುತೇಕ ಹಾಡಿಗಳಲ್ಲಿ ಇದೇ ಮನಸ್ಥಿತಿ ಇರುವುದರಿಂದ ಕೋವಿಡ್‌ ಲಸಿಕೆ ನೀಡುವುದು ಆರೋಗ್ಯ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ : ಪದವಿ ಪೂರ್ವ ಕಾಲೇಜುಗಳಿಗೆ ಫೆ.15ರವರೆಗೆ ರಜೆ ವಿಸ್ತರಣೆ: ಆದೇಶ

– ಎಚ್. ಬಿ. ಬಸವರಾಜ್

ಟಾಪ್ ನ್ಯೂಸ್

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

High Court: ಅಶ್ಲೀಲ ವೀಡಿಯೋ ಹಂಚಿಕೆ: ಪ್ರೀತಂಗೌಡ ವಿರುದ್ಧದ ಪ್ರಕರಣ ವಿಚಾರಣೆ ಮುಂದಕ್ಕೆ

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

KEA: 206 ಸೀಟು ರದ್ದು ಮಾಡಿಕೊಂಡ ಅಭ್ಯರ್ಥಿಗಳು

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌

Araga Jnanendra ಕಾಲದ ಹಗರಣ ತನಿಖೆ ನಡೆಸಿ: ಕಿಮ್ಮನೆ ರತ್ನಾಕರ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.