ಮೈದುಂಬಿವೆ ಕೆರೆಗಳು; ರಾಜ್ಯದ ತುಂಬಿ ಹರಿಯುತ್ತಿರುವ ಕೆರೆಗಳ ಒಂದು ನೋಟ ಇಲ್ಲಿದೆ….


Team Udayavani, Sep 3, 2022, 6:35 AM IST

ಮೈದುಂಬಿವೆ ಕೆರೆಗಳು; ರಾಜ್ಯದ ತುಂಬಿ ಹರಿಯುತ್ತಿರುವ ಕೆರೆಗಳ ಒಂದು ನೋಟ ಇಲ್ಲಿದೆ….

ಮುಂಗಾರು ಆರಂಭವಾದಾಗಿನಿಂದಲೂ ರಾಜ್ಯದಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಹೀಗಾಗಿ ಅದೆಷ್ಟೋ ವರ್ಷಗಳಿಂದ ತುಂಬದ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಒಂದು ಕಡೆ ಪ್ರವಾಹ ರೈತರಿಗೆ ಸಂಕಷ್ಟ ತಂದಿದ್ದರೆ, ಇನ್ನೊಂದೆಡೆ ಎಷ್ಟೋ ವರ್ಷಗಳ ಬಳಿಕ ಕೆರೆ ತುಂಬಿದವಲ್ಲ ಎಂಬ ಸಮಾಧಾನದ ನಿಟ್ಟುಸಿರು ಅನ್ನದಾತರದ್ದಾಗಿದೆ. ರಾಜ್ಯದ ತುಂಬಿದ ಕೆರೆಗಳ ಒಂದು ನೋಟ ಇಲ್ಲಿದೆ…

ಚಿಕ್ಕಮಗಳೂರಿನಲ್ಲಿ 50 ಕೆರೆಗಳು ಭರ್ತಿ
ಇತ್ತೀಚೆಗೆ ಕಾಫಿನಾಡಿನಲ್ಲಿ ಸುರಿದ ಭಾರೀ ಮಳೆಗೆ 50 ಕೆರೆಗಳು ಭರ್ತಿಯಾಗಿದ್ದು, 20 ಕೆರೆಗಳು ಭರ್ತಿಯಾಗಿಲ್ಲ. ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ 70 ಕೆರೆಗಳು ಇದ್ದು, 27 ಕೆರೆಗಳು ತುಂಬಿಕೊಂಡಿವೆ. ಮೂಡಿಗೆರೆ ತಾಲೂಕಿನಲ್ಲಿ 7 ಮತ್ತು ಕಡೂರು ತಾಲೂಕಿನಲ್ಲಿ 16 ಕೆರೆಗಳು ಭರ್ತಿಯಾಗಿವೆ. ಅನೇಕ ವರ್ಷಗಳಿಂದ ತುಂಬದೆ ಇದ್ದ ಬೆಳವಾಡಿ ಕೆರೆ ಈ ವರ್ಷ ತುಂಬಿ ಕೋಡಿ ಬಿದ್ದಿದೆ.

ಚಿಕ್ಕಮಗಳೂರು ತಾಲೂಕು ಹಿರೇಕೊಳಲೆ ಕೆರೆ, ಇಂದಾವರ ತಾವರೆ ಕೆರೆ, ಹುಲಿಗುಂದರಾಯನ ಕೆರೆ, ಮಾವಿನಹಳ್ಳಿಕಟ್ಟೆ, ಕರ್ತಿಕೆರೆ, ಹಿರೇಮಗಳೂರು ದೊಡ್ಡ ಕೆರೆ, ಹುಣಸವಳ್ಳಿ ಕೆರೆ,ಲಕ್ಷ್ಮಿಪುರ ಕೆರೆ, ತಾವರೆ ಕೆರೆ, ನಲ್ಲೂರು ಗೌರಿ ಕೆರೆ, ಮತ್ತಾವರ ಹುಣಸೆಕಟ್ಟೆ, ಮೂಕ್ತಿ ಹಳ್ಳಿ ಕೆರೆ, ಲಕ್ಕಮ್ಮನಹಳ್ಳಿ, ಕಳಸಾಪುರ, ತಿಮ್ಮಪ್ಪನಾಯಕನ ಕೆರೆ, ಬೆಳವಾಡಿ ದೊಡ್ಡಕೆರೆ ಮತ್ತು ಈಶ್ವರ ಹಳ್ಳಿ ಊರ ಮುಂದಿನ ಕೆರೆ, ಮರ್ಲೆದೊಡ್ಡ ಕೆರೆ, ಹರಿಹರದಹಳ್ಳಿ ಯಬಳಸೆಕಟ್ಟೆ ಕೆರೆ, ಆರದಹಳ್ಳಿ ದೊಡ್ಡ ಕೆರೆ, ಮಾಗಡಿದೊಡ್ಡಕೆರೆ, ಅಂಬಳೆ ದೊಡ್ಡಕೆರೆ, ಕೋಟೆವೂರು ನಾಗರಬಾವಿಕೆರೆ, ವಸ್ತಾರೆ ಹಿರೇಕೆರೆ, ಬಾಳೆಹಳ್ಳಿ ಕರಿಯಪ್ಪಗೌಡನಕೆರೆ, ಆಲ್ದೂರು ಊರ ಮುಂದಿನಕೆರೆ, ದೊಡ್ಡಮಾಗರವಳ್ಳಿ ಊರ ಮುಂದಿನಕೆರೆ, ನರಗನಹಳ್ಳಿ ರಾಮೇಶ್ವರಕೆರೆ, ಕಳಸಾಪುರ ಊರ ಮುಂದಿನಕೆರೆ, ದಾಸರಹಳ್ಳಿ ಕೆರೆ ಭರ್ತಿಯಾಗಿವೆ.

ಮೂಡಿಗೆರೆ ತಾಲೂಕು ಉದುಸೆ ದೇವೀರಮ್ಮನ ಕೆರೆ, ಜೋಗಣ್ಣನ ದಿಣ್ಣೇಕೆರೆ, ಅಂಗಡಿದೊಡ್ಡಕೆರೆ, ಮಾಕೋನಹಳ್ಳಿ ಭೈರಮ್ಮನಕೆರೆ, ಲೋಕವಳ್ಳಿಯ ಊರ ಮುಂದಿನ ಕೆರೆ, ಉದಕಿ ನರಸೀಕೆರೆ, ಹೊರಟ್ಟಿ ಬೈದಲಕೆರೆ ತುಂಬಿದ್ದು, ಕಡೂರು ತಾಲೂ ಕಿನ ಗರ್ಜೆಕೆರೆ, ತಂಗಲಿ ಊರ ಮುಂದಿನ ಕೆರೆ, ಚಿಕ್ಕಪಟ್ಟಣಗೆರೆ ಊರ ಮುಂದಿನಕೆರೆ, ಚಿಕ್ಕಂಗಳಕೆರೆ, ಹಿರಿಯಂಗಳಕೆರೆ, ತುಂಬೆ ಹೊಂಡಕೆರೆ, ಬ್ರಹ್ಮಸಮುದ್ರ ಹಳೆಕೆರೆ, ಕಡೂರು ದೊಡ್ಡಕೆರೆ, ದೊಡ್ಡಬುಕ್ಕಸಾಗರ, ಸಖರಾಯಪಟ್ಟಣ ಅಯ್ಯನಕೆರೆ, ಯಳ್ಳಂ ಬಳಸೆ ಊರ ಮುಂದಿನ ಕೆರೆ, ಬೀರೂರು ದೇವನಕೆರೆ, ಹಿರಿಯಂಗಳ ಬಾರ್ತಿನಕೆರೆ, ಎಮ್ಮೆದೊಡ್ಡಿಯ ಮದಗದಕೆರೆ, ಹಳೆಮದಗಕೆರೆ, ಚೌಳಿಹಿರಿಯೂರು ಊರ ಮುಂದಿನ ಕೆರೆ, ಕಲ್ಲಳ್ಳಿ ಕುಕ್ಕಸಮುದ್ರಕೆರೆ ಕೋಡಿ ಬಿದ್ದಿದ್ದು, ಜಿಲ್ಲೆಯಲ್ಲಿರುವ ಬಹುತೇಕ ಕೆರೆಗಳು ತುಂಬಿಕೊಂಡಿವೆ.

ಚಿತ್ರದುರ್ಗ
88 ವರ್ಷಗಳ ಬಳಿಕ ಕೋಡಿ ಬಿದ್ದ ವಾಣಿ ವಿಲಾಸ ಸಾಗರ
ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿರುವ ಏಕೈಕ ಜಲಾಶಯ ವಾಣಿವಿಲಾಸ ಸಾಗರ ಬರೋಬ್ಬರಿ 88 ವರ್ಷಗಳ ಅನಂತರ ಕೋಡಿ ಬಿದ್ದಿದೆ. 130 ಅಡಿ ನೀರು ಸಂಗ್ರಹಣ ಸಾಮರ್ಥ್ಯದ ಡ್ಯಾಂನಲ್ಲಿ ಈಗ 129 ಅಡಿಗಿಂತ ಹೆಚ್ಚು ನೀರು ಸಂಗ್ರಹವಾಗಿದೆ. ಮೂರ್‍ನಾಲ್ಕು ದಿನ ಹೀಗೆಯೇ ಮಳೆಯಾದರೆ ಕೋಡಿಯಲ್ಲಿ ನೀರು ಹರಿಯಲಿದೆ. ಜಲಾಶಯ ನಿರ್ಮಾಣವಾದ ಒಂದು ಶತಮಾನದಲ್ಲಿ ಒಂದು ಬಾರಿ ಮಾತ್ರ ಕೋಡಿಯಲ್ಲಿ ನೀರು ಹರಿದಿದೆ. 1933ರಲ್ಲಿ 135.25 ಅಡಿ ನೀರು ಬಂದು ಕೋಡಿ ಬಿದ್ದಿತ್ತು. 1934ರಲ್ಲಿ 130.24 ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. 1919ರಲ್ಲಿ 128.30 ಅಡಿ ನೀರು ಬಂದಿತ್ತು. ಸೋಮವಾರ ರಾತ್ರಿ ಸುರಿದ ಮಳೆಯಿಂದ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದ ಕೆರೆ 50 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೋಡಿ ಬಿದ್ದಿದೆ. ನಗರಂಗೆರೆ ಗ್ರಾಮದ ಕೆರೆ ಎರಡನೇ ಬಾರಿಗೆ ಕೋಡಿ ಹರಿದಿದೆ. ಪರಶುರಾಂಪುರ ಹೋಬಳಿಯ ಕ್ಯಾದಿಗುಂಟೆ, ಪಿ. ಮಹದೇವಪುರ, ದೊಡ್ಡಚೆಲ್ಲೂರು, ಚಿಕ್ಕಚೆಲ್ಲೂರು, ಸಿದ್ದೇಶ್ವರನದುರ್ಗ, ಪಿಲ್ಲಹಳ್ಳಿ, ಪರಶುರಾಂಪುರ ಗ್ರಾಮಗಳ ಕೆರೆ ಕೋಡಿ ಬಿದ್ದಿವೆ.

ಚಾಮರಾಜನಗರ
18 ವರ್ಷದ ಬಳಿಕ ತುಂಬಿದ ಮರಗದ ಕೆರೆ
ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದ 231 ಎಕರೆ ವಿಸ್ತೀರ್ಣದ ಮರಗದ ಕೆರೆ ತುಂಬಿ 18 ವರ್ಷಗಳಾಗಿದ್ದವು. ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಸೋಮವಾರ ಭರ್ತಿಯಾಗಿ ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ. ಹರದನಹಳ್ಳಿ ಗ್ರಾಮ ಯಡಿಯೂರು ಸಿದ್ಧಲಿಂಗೇಶ್ವರರ ಜನ್ಮ ಸ್ಥಳ.
ಕಳೆದ ಎರಡು ತಿಂಗಳಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ಕೆರೆ ಅರ್ಧ ತುಂಬಿತ್ತು. ಕಳೆದ ಒಂದು ವಾರದಿಂದ ಮತ್ತೆ ಮಳೆ ಬಿದ್ದ ಪರಿಣಾಮವಾಗಿ ಅಮಚವಾಡಿ ಎಣ್ಣೆಹೊಳೆ ಕೋಡಿ, ಸೇರಿದಂತೆ ಚಿಕ್ಕಹೊಳೆ ಜಲಾಶಯದಿಂದ ಬಂಡಿಗೆರೆ ಕೆರೆಗೆ ನೀರು ಬಿಟ್ಟು ಅದರ ಕೋಡಿ ನೀರು ಸಹ ಸೇರಿ ಮರಗದ ಕೆರೆ ತುಂಬಿ ಸೋಮವಾರ ಬೆಳಿಗ್ಗೆ ಕೋಡಿ ಬೀಳಲು ಪ್ರಾರಂಭವಾಯಿತು. ಇದಲ್ಲದೆ ತಾಲೂಕಿನ ಬಂಡಿಗೆರೆ ಕೆರೆ, ದೊಡ್ಡಕೆರೆ, ಚಿಕ್ಕಕೆರೆ, ಸಿಂಡಗೆರೆ, ಮಾಲೆಗೆರೆ, ಕಾಗಲವಾಡಿ ಕೆರೆ, ಹೊಂಗನೂರು ಕೆರೆಗಳು ತುಂಬಿ ಕೋಡಿ ಬೀಳುತ್ತಿವೆ. ಈ ಕೆರೆಗಳು ತುಂಬಿ 10 -15 ವರ್ಷಗಳಾಗಿದ್ದವು.

ತುಮಕೂರು
300ಕ್ಕೂ ಹೆಚ್ಚು ಕೆರೆಗಳು ಭರ್ತಿ
ನಿರೀಕ್ಷೆಗೂ ಮೀರಿದ ಮಳೆ ಕಲ್ಪತರು ನಾಡಿನಲ್ಲಿ ಸುರಿಯುತ್ತಿದ್ದು, ಹತ್ತಾರು ವರ್ಷಗಳಿಂದ ತುಂಬದ ಕರೆಗಳು ಈಗ ಮೈದುಂಬಿವೆ. ಜಿಲ್ಲೆಯ ನೂರಾರು ಕೆರೆಗಳು ಕೋಡಿ ಬಿದ್ದಿದ್ದು, ಜಲಕಂಟಕ ಉಂಟಾಗಿದೆ. ಈ ಅವಧಿಯಲ್ಲಿ ಇಷ್ಟು ಕೆರೆಗಳು ತುಂಬಿ ಕೋಡಿಬಿದ್ದಿರುವುದು ದಾಖಲೆಯಾಗಿದೆ. ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ನೀರಾವರಿ ಕೆರೆಗಳು, ಹೇಮಾವತಿ ಕೆರೆಗಳು ಸೇರಿ 416 ಕೆರೆಗಳ ಪೈಕಿ 300ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿ ಕೋಡಿಬಿದ್ದಿವೆ.

ಇದರಲ್ಲಿ ಜಿಲ್ಲೆಯ ಮಧುಗಿರಿ ತಾಲೂಕಿನ ಬೆಲ್ಲದ ಮಡುಗು ಗ್ರಾಮದ ಕೆರೆ ನೀರಿನ ರಭಸಕ್ಕೆ ಕೆರೆಯೇ ಒಡೆದು ಹೋಗಿದೆ. ಬಹಳ ವರ್ಷಗಳ ಅನಂತರ ತುಮಕೂರಿನ ಅಮಾನಿಕೆರೆ, ಗೂಳೂರು, ಮರಳೂರು, ಮೈದಾಳ, ನಾಗವಲ್ಲಿ, ಕೆಂಬಳಲು, ಬುಗುಡನಹಳ್ಳಿ, ಹುಳ್ಳೇನಹಳ್ಳಿ, ಹರಳೂರು ಕೆರೆ ಸೇರಿದಂತೆ ನೂರಾರು ಕೆರೆಗಳು ಈಗ ತುಂಬಿ ಕೋಡಿ ಬಿದ್ದಿರುವುದು ದಾಖಲೆಯಾಗಿದ್ದು, ರೈತರಲ್ಲಿ ಸಂತಸ ಮೂಡಿದೆ.

ಬಳ್ಳಾರಿ ವಿಜಯನಗರ
ರಾಮದುರ್ಗ ಕೆರೆ ಭರ್ತಿ
ವಿಜಯನಗರ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸತತ ಸುರಿದ ಮಳೆಯಿಂದ ಕೂಡ್ಲಿಗಿ ತಾಲೂಕಿನ ರಾಮದುರ್ಗ ಕೆರೆ ಭರ್ತಿಯಾಗಿ ಕೋಡಿ ಹರಿದಿದ್ದು, ಜನರನ್ನು ಆಕರ್ಷಿಸುತ್ತಿದೆ. ಕಳೆದ ಕೆಲವು ವರ್ಷ ಮಳೆಯಾಗದ ಕಾರಣ ಕೆರೆ ಭರ್ತಿಯಾಗಿರಲಿಲ್ಲ. ಎರಡೂ¾ರು ವರ್ಷಗಳಿಂದ ಸುರಿದ ಉತ್ತಮ ಮಳೆಗೆ ಸತತ ಎರಡನೇ ವರ್ಷವೂ ಕೆರೆ ಭರ್ತಿಯಾಗಿದ್ದು, ಕೋಡಿ ಹರಿದು ಸ್ಥಳೀಯ ಜನರಲ್ಲಿ ಸಂತಸ ಮೂಡಿಸಿದೆ. ಹರಪನಹಳ್ಳಿ ತಾಲೂಕಿನ ಕಂಚಿಕೆರೆ, ಸತ್ತೂರು, ಬೆಂಡಿಗೇರಿ, ಸಿಂಗ್ರಹಳ್ಳಿ ಗ್ರಾಮಗಳಲ್ಲಿ ಕೆರೆಗಳು ಕೂಡ ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಕೆರೆಗಳಿಂದ ಹೊರಬರುತ್ತಿರುವ ನೀರಲ್ಲಿ ಜನ ಮೀನು ಹಿಡಿಯಲು ಮುಂದಾಗುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ಚೋರನೂರು ಗ್ರಾಮದ ಕೆರೆ ಕೂಡ ಭರ್ತಿಯಾಗಿ ಕೋಡಿ ಹರಿಯುತ್ತಿದೆ.

ದೊಡ್ಡಬಳ್ಳಾಪುರ
23 ವರ್ಷದ ಬಳಿಕ ತುಂಬಿದ ನಾಗರಕೆರೆ
ನಗರದ ಇತಿಹಾಸ ಪ್ರಸಿದ್ಧ ನಾಗರಕೆರೆ 23 ವರ್ಷಗಳ ಬಳಿಕ ಮತ್ತೂಮ್ಮೆ ಕೋಡಿ ಹರಿದಿದ್ದು, ಮತ್ತೂಮ್ಮೆ ನಗರವಾಸಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೆರೆ ಕೋಡಿ ಹರಿಯಲು ಆರಂಭಿಸಿದೆ. ನವೆಂಬರ್‌ ತಿಂಗಳಲ್ಲಿ ಕೋಡಿ ಬಿದ್ದಿತ್ತು. ಇದೇ ಆ.8ರಂದು ಸಹ ಕೋಡಿ ಬಿದ್ದು, ಸಣ್ಣ ಪ್ರಮಾಣದಲ್ಲಿ ನೀರು ಹೊರಹೋಗುತ್ತಿತ್ತು. ಆದರೆ ಮಂಗಳವಾರ ಬಿದ್ದಿರುವ ಕೋಡಿಯ ಹೊರಹರಿವು ಹೆಚ್ಚಾಗಿ ರಭಸವಾಗಿ ಹರಿಯುತ್ತಿದೆ.

ಹಾಸನ
11 ವರ್ಷದ ಬಳಿಕ ತುಂಬಿದ ಹಾರನಹಳ್ಳಿ ಕೆರೆ
ಜಿಲ್ಲೆಯಲ್ಲಿ ಈ ವರ್ಷ ಭಾರೀ ಮಳೆಯಿಂದಾಗಿ ಬಹುತೇಕ ಕೆರೆಗಳೂ ಭರ್ತಿ ಯಾಗಿದ್ದು, 11 ವರ್ಷಗಳ ಅನಂತರ ಹಾರನಹಳ್ಳಿ ದೊಡ್ಡಕೆರೆ ಭರ್ತಿಯಾಗಿ ಕೋಡಿ ಹರಿದಿದೆ. ಚನ್ನರಾಯಪಟ್ಟಣ ತಾಲೂ ಕಿನ ತೋಟಿ ಗ್ರಾಮದ ಕೆರೆ ಎರಡು ದಶಕಗಳ ಅನಂತರ ಭರ್ತಿಯಾಗಿ ಕೋಡಿ ಹರಿದಿದೆ. ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯ ಶೇ. 90 ರಷ್ಟು ಕೆರೆಗಳು ಭರ್ತಿಯಾಗಿವೆ. ಜಿಲ್ಲಾ ಪಂಚಾಯತ್‌ ವ್ಯಾಪ್ತಿಯ ಶೇ. 95 ರಷ್ಟು ಕೆರೆಗಳು ಭರ್ತಿಯಾಗಿ ಕೋಡಿ ಹರಿದಿವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಹಾಸನ ತಾಲೂಕು ಮೊಸಳೆ ಗ್ರಾಮದ ಕೆರೆ ಏರಿ ಒಡೆದು ಹೋಗಿದ್ದು ದುರಸ್ತಿ ಕಾರ್ಯ ನಡೆದಿದೆ. ಚನ್ನರಾಯಪಟ್ಟಣ ತಾಲೂಕು ಚನ್ನನ ಕೆರೆ ಏರಿಯೂ ಒಡೆದಿದೆ.

ಲಿಂಗಸುಗೂರು
ಬಿಲ್ಲಮರಾಜ ಕೆರೆಗೆ ಕೋಡಿ
ರಾಯಚೂರು ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಲಿಂಗಸುಗೂರು ಐತಿಹಾಸಿಕ ಕರಡಕಲ್‌ನ ಬಿಲ್ಲಮರಾಜನ ಕೆರೆ ಎಂದು ಕರೆಯಲ್ಪಡುವ ಕರಡಕಲ್‌ ಕೆರೆಯ ಕೋಡಿ ಒಡೆದು ನೀರು ಹಳ್ಳಕ್ಕೆ ಹರಿಯುತ್ತಿದೆ. ಸುಮಾರು 230 ಎಕರೆ ವಿಶಾಲವುಳ್ಳ ಕರಡಕಲ್‌ ಕೆರೆಗೆ ರಾಂಪುರ ಏತ ನೀರಾವರಿ ಯೋಜನೆಯ ಕಾಲುವೆ ಜೋಡಣೆ ಮಾಡಿ ಕೆರೆ ತುಂಬಿಸಿದ್ದರಿಂದ ವರ್ಷ ಪೂರ್ತಿ ಈ ಕೆರೆಯಲ್ಲಿ ನೀರಿರುತ್ತದೆ. ಇದರಿಂದಾಗಿ ಪಟ್ಟಣದಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ.

ಟಾಪ್ ನ್ಯೂಸ್

“Phone Tapping’ ಮಾಡಿಲ್ಲ; ಮಾಹಿತಿ ಕೊಟ್ಟರೆ ತನಿಖೆ: ಪರಮೇಶ್ವರ್‌

“Phone Tapping’ ಮಾಡಿಲ್ಲ; ಮಾಹಿತಿ ಕೊಟ್ಟರೆ ತನಿಖೆ: ಪರಮೇಶ್ವರ್‌

ಚೀನಾ ಯಂತ್ರಗಳ ಮೂಲಕ ಟ್ಯಾಪಿಂಗ್‌: ಅಶೋಕ್‌

China ಯಂತ್ರಗಳ ಮೂಲಕ ಟ್ಯಾಪಿಂಗ್‌: ಅಶೋಕ್‌

Sadananda Gowda ಭಾಗ್ಯಗಳ ನೆಪದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ

Sadananda Gowda ಭಾಗ್ಯಗಳ ನೆಪದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ

Congress ಸರಕಾರದಿಂದ ಪಾಳೇಗಾರಿಕೆ ರಾಜಕಾರಣ: ವಿಜಯೇಂದ್ರ

Congress ಸರಕಾರದಿಂದ ಪಾಳೇಗಾರಿಕೆ ರಾಜಕಾರಣ: ವಿಜಯೇಂದ್ರ

Hassan ಡಿವೈಎಸ್ಪಿ ಖಾತೆಗೇ ಕನ್ನ ; 16 ಲಕ್ಷ ರೂ. ದೋಚಿದ ಖದೀಮರು

Hassan ಡಿವೈಎಸ್ಪಿ ಖಾತೆಗೇ ಕನ್ನ ; 16 ಲಕ್ಷ ರೂ. ದೋಚಿದ ಖದೀಮರು

ಪದವೀಧರರ ಕ್ಷೇತ್ರದ ಮತದಾರರ ಧ್ವನಿಯಾಗಲು ಸ್ಪರ್ಧೆ : ರಘುಪತಿ ಭಟ್‌

ಪದವೀಧರರ ಕ್ಷೇತ್ರದ ಮತದಾರರ ಧ್ವನಿಯಾಗಲು ಸ್ಪರ್ಧೆ : ರಘುಪತಿ ಭಟ್‌

Belagavi; ಗೋಕಾಕ ಮಾಜಿ ಶಾಸಕ ಚಂದ್ರಶೇಖರ ಟಿ. ಗುಡ್ಡಕಾಯು ನಿಧನ

Belagavi; ಗೋಕಾಕ ಮಾಜಿ ಶಾಸಕ ಚಂದ್ರಶೇಖರ ಟಿ ಗುಡ್ಡಕಾಯು ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“Phone Tapping’ ಮಾಡಿಲ್ಲ; ಮಾಹಿತಿ ಕೊಟ್ಟರೆ ತನಿಖೆ: ಪರಮೇಶ್ವರ್‌

“Phone Tapping’ ಮಾಡಿಲ್ಲ; ಮಾಹಿತಿ ಕೊಟ್ಟರೆ ತನಿಖೆ: ಪರಮೇಶ್ವರ್‌

ಚೀನಾ ಯಂತ್ರಗಳ ಮೂಲಕ ಟ್ಯಾಪಿಂಗ್‌: ಅಶೋಕ್‌

China ಯಂತ್ರಗಳ ಮೂಲಕ ಟ್ಯಾಪಿಂಗ್‌: ಅಶೋಕ್‌

Congress ಸರಕಾರದಿಂದ ಪಾಳೇಗಾರಿಕೆ ರಾಜಕಾರಣ: ವಿಜಯೇಂದ್ರ

Congress ಸರಕಾರದಿಂದ ಪಾಳೇಗಾರಿಕೆ ರಾಜಕಾರಣ: ವಿಜಯೇಂದ್ರ

2nd PUC Exam-2 Result Declared; 35.25% students passed

2nd PUC ಪರೀಕ್ಷೆ-2 ಫಲಿತಾಂಶ ಪ್ರಕಟ; ಶೇ. 35.25 ವಿದ್ಯಾರ್ಥಿಗಳು ಉತ್ತೀರ್ಣ

11-gadaga

ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಹಾಳು ಮಾಡುತ್ತಿದೆ:ವಿ.ಪ. ಸದಸ್ಯ ಎಸ್.ವಿ. ಸಂಕನೂರ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

“Phone Tapping’ ಮಾಡಿಲ್ಲ; ಮಾಹಿತಿ ಕೊಟ್ಟರೆ ತನಿಖೆ: ಪರಮೇಶ್ವರ್‌

“Phone Tapping’ ಮಾಡಿಲ್ಲ; ಮಾಹಿತಿ ಕೊಟ್ಟರೆ ತನಿಖೆ: ಪರಮೇಶ್ವರ್‌

ಚೀನಾ ಯಂತ್ರಗಳ ಮೂಲಕ ಟ್ಯಾಪಿಂಗ್‌: ಅಶೋಕ್‌

China ಯಂತ್ರಗಳ ಮೂಲಕ ಟ್ಯಾಪಿಂಗ್‌: ಅಶೋಕ್‌

Sadananda Gowda ಭಾಗ್ಯಗಳ ನೆಪದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ

Sadananda Gowda ಭಾಗ್ಯಗಳ ನೆಪದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ

Congress ಸರಕಾರದಿಂದ ಪಾಳೇಗಾರಿಕೆ ರಾಜಕಾರಣ: ವಿಜಯೇಂದ್ರ

Congress ಸರಕಾರದಿಂದ ಪಾಳೇಗಾರಿಕೆ ರಾಜಕಾರಣ: ವಿಜಯೇಂದ್ರ

Hassan ಡಿವೈಎಸ್ಪಿ ಖಾತೆಗೇ ಕನ್ನ ; 16 ಲಕ್ಷ ರೂ. ದೋಚಿದ ಖದೀಮರು

Hassan ಡಿವೈಎಸ್ಪಿ ಖಾತೆಗೇ ಕನ್ನ ; 16 ಲಕ್ಷ ರೂ. ದೋಚಿದ ಖದೀಮರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.