ಗಡಿ ಸಮಸ್ಯೆ: ಸಕಾರಾತ್ಮಕ ಮಾತುಕತೆ; ಭಾರತ-ಚೀನಾದಿಂದ ಜಂಟಿ ಹೇಳಿಕೆ ಬಿಡುಗಡೆ


Team Udayavani, Dec 23, 2022, 6:30 AM IST

tdy-15

ನವದೆಹಲಿ: ಪೂರ್ವ ಲಡಾಖ್‌ನ ಗಡಿ ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ಭಾರತ-ಚೀನಾ ಹೊಸದಾಗಿ ಡಿ.20ರಂದು ಉನ್ನತ ಮಟ್ಟದ ಸೇನಾ ಮಾತುಕತೆ ನಡೆಸಿವೆ ಎಂದು ಉಭಯ ದೇಶಗಳು ಗುರುವಾರ ಜಂಟಿಯಾಗಿ ಬಿಡುಗಡೆಗೊಳಿಸಿದ ಹೇಳಿಕೆ ಮೂಲಕ ತಿಳಿಸಿವೆ.

“ಡಿ.20ರಂದು ಚೀನಾ ಭಾಗದ ಚುಶುಲ್‌-ಮೊಲ್ಡೊ ಗಡಿಯ ಸಭೆಯ ಸ್ಥಳದಲ್ಲಿ 17ನೇ ಸುತ್ತಿನ ಭಾರತ-ಚೀನಾ ಕಾಪ್ಸ್‌ì ಕಮಾಂಡರ್‌ ಮಟ್ಟದ ಸಭೆ ನಡೆಸಲಾಯಿತು. ಮುಕ್ತ ಮತ್ತು ರಚನಾತ್ಮಕ ರೀತಿಯಲ್ಲಿ ಪಶ್ಚಿಮ ವಲಯದ ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಉದ್ದಕ್ಕೂ ಇರುವ ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ಎರಡೂ ಕಡೆಯಿಂದ ಮಾತುಕತೆ ನಡೆಯಿತು,’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ತಿಳಿಸಿದ್ದಾರೆ.

“ಈ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ಪುನಃಸ್ಥಾಪನೆ ನಿಟ್ಟಿನಲ್ಲಿ ಹಾಗೂ ಬಾಕಿ ಇರುವ ಸಮಸ್ಯೆಗಳು ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉಭಯ ಕಡೆಯವರು ನಿರಂತರ ಸಂಪರ್ಕದಲ್ಲಿರಲು ಹಾಗೂ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗದ ಮೂಲಕ ಮಾತುಕತೆ ನಡೆಸಲು ಒಪ್ಪಿವೆ,’ ಎಂದು ವಿವರಿಸಿದರು.

ಸದನದಲ್ಲಿ ಚರ್ಚೆಗೆ ಪಟ್ಟು:

ಚೀನಾದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿ ಚರ್ಚೆಯಾಗಬೇಕೆಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಆಗ್ರಹಿಸಿವೆ. ಲೋಕಸಭೆಯಲ್ಲಿ ಪ್ರತಿಪಕ್ಷಗಳ ಒತ್ತಾಯ, ಘೋಷಣೆಯಿಂದಾಗಿ ಸತತ 4 ಬಾರಿ ಕಲಾಪವನ್ನು ಮುಂದೂಡಲಾಯಿತು. ಆರೋಗ್ಯ ಸಚಿವ ಮನಸುಖ ಮಾಂಡವಿಯ ಅವರು ಕೊರೊನಾ ಸ್ಥಿತಿ ಕುರಿತು ಮಾತನಾಡುವಾಗಲೂ, ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗುತ್ತಲೇ ಇದ್ದರು. ಇನ್ನು, ರಾಜ್ಯಸಭೆಯಲ್ಲಿ ಚೀನಾ ಕುರಿತು ಚರ್ಚೆಗೆ ಅವಕಾಶ ಸಿಗದ ಕಾರಣ, ಎಲ್ಲ ಪ್ರತಿಪಕ್ಷಗಳೂ ದಿನದ ಮಟ್ಟಿಗೆ ಕಲಾಪ ಬಹಿಷ್ಕರಿಸಿ ಹೊರನಡೆದವು. ಅಧಿವೇಶನ ಆರಂಭವಾದಾಗಿನಿಂದಲೂ ಈ ಕುರಿತು ಚರ್ಚೆಯಾಗಬೇಕೆಂದು ಪ್ರತಿಪಕ್ಷಗಳ ಆಗ್ರಹಿಸುತ್ತಲೇ ಇವೆ.

ಟಾಪ್ ನ್ಯೂಸ್

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

1-raisi

Iran ತೀವ್ರಗಾಮಿ ಅಧ್ಯಕ್ಷ ಕಟ್ಟರ್‌ ಸಂಪ್ರದಾಯವಾದಿ ರೈಸಿ ಸಾವಿನ ಸುತ್ತ ನಾನಾ ಕತೆ

ಮೇಲ್ಮನೆಯಲ್ಲೂ ಕಾಂಗ್ರೆಸ್‌ಗೆ ಬಹುಮತ?

ಮೇಲ್ಮನೆಯಲ್ಲೂ ಕಾಂಗ್ರೆಸ್‌ಗೆ ಬಹುಮತ?

1-wewew

Dubai; 12 ವರ್ಷದ ಯತ್ನ: 8 ಕೋಟಿ ರೂ. ಗೆದ್ದ ಭಾರತೀಯ ಮಹಿಳೆ!

Prajwal ಎಲ್ಲಿದ್ದೀಯಪ್ಪಾ? ಬಂದುಬಿಡು: ಎಚ್‌ಡಿಕೆ

Prajwal ಎಲ್ಲಿದ್ದೀಯಪ್ಪಾ? ಬಂದುಬಿಡು: ಎಚ್‌ಡಿಕೆ

1-ub

Uber ಬಸ್‌ಗಳು ದಿಲ್ಲಿಯ ರಸ್ತೆಯಲ್ಲಿ ಓಡಲಿದೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ub

Uber ಬಸ್‌ಗಳು ದಿಲ್ಲಿಯ ರಸ್ತೆಯಲ್ಲಿ ಓಡಲಿದೆ!

IMD

Delhi ತಾಪ 47 ಡಿಗ್ರಿ: ಶಾಲೆಗಳಿಗೆ ಸುದೀರ್ಘ‌ ರಜೆ

covid

Covaxin ಸೈಡ್‌ಎಫೆಕ್ಟ್ ವರದಿಗೆ ಐಸಿಎಂಆರ್‌ ಕಿಡಿ

train-track

Train Drivers Association; ಆನೆ ಹಳಿ ದಾಟುವಾಗ ರೈಲು ನಿಲುಗಡೆ ಅಸಾಧ್ಯ

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

Karnataka PUC-2 Result; ಇಂದು ದ್ವಿತೀಯ ಪಿಯು ಪರೀಕ್ಷೆ-2 ಫ‌ಲಿತಾಂಶ

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

1-raisi

Iran ತೀವ್ರಗಾಮಿ ಅಧ್ಯಕ್ಷ ಕಟ್ಟರ್‌ ಸಂಪ್ರದಾಯವಾದಿ ರೈಸಿ ಸಾವಿನ ಸುತ್ತ ನಾನಾ ಕತೆ

ಮೇಲ್ಮನೆಯಲ್ಲೂ ಕಾಂಗ್ರೆಸ್‌ಗೆ ಬಹುಮತ?

ಮೇಲ್ಮನೆಯಲ್ಲೂ ಕಾಂಗ್ರೆಸ್‌ಗೆ ಬಹುಮತ?

1-wewew

Dubai; 12 ವರ್ಷದ ಯತ್ನ: 8 ಕೋಟಿ ರೂ. ಗೆದ್ದ ಭಾರತೀಯ ಮಹಿಳೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.