Flash Flood: ಜಲಪ್ರಳಯಕ್ಕೆ ನಲುಗಿದ ಸಿಕ್ಕಿಂ: 14 ಮೃತ್ಯು, 23ಯೋಧರ ಸಹಿತ 102ಮಂದಿ ನಾಪತ್ತೆ


Team Udayavani, Oct 5, 2023, 8:19 AM IST

Flash Flood: ಜಲಪ್ರಳಯಕ್ಕೆ ನಲುಗಿದ ಸಿಕ್ಕಿಂ: 14 ಮೃತ್ಯು, 23ಯೋಧರ ಸಹಿತ 102ಮಂದಿ ನಾಪತ್ತೆ

ಗ್ಯಾಂಗ್ಟಕ್‌: ಮೇಘ ಸ್ಫೋಟ ಹಾಗೂ ಅಣೆಕಟ್ಟಿನಿಂದ ಏಕಾಏಕಿ ನೀರು ಬಿಡುಗಡೆ ಮಾಡಿದ ಕಾರಣ ಸಿಕ್ಕಿಂನಲ್ಲಿ ಮಂಗಳವಾರ ತಡರಾತ್ರಿ ದಿಢೀರ್‌ ಪ್ರವಾಹ ಸೃಷ್ಟಿಯಾಗಿದ್ದು, ರಾತ್ರಿ ಬೆಳಗಾಗುವುದರೊಳಗೆ 23 ಯೋಧರು ಸಹಿತ 102 ಮಂದಿ ನಾಪತ್ತೆಯಾಗಿ, 14 ಮಂದಿ ಮೃತಪಟ್ಟಿದ್ದಾರೆ. ಕ್ಷಣ ಮಾತ್ರದಲ್ಲಿ ಸೇತುವೆಗಳು, ವಾಹನಗಳು, ಮನೆ- ಕಟ್ಟಡಗಳು ಕೊಚ್ಚಿ ಹೋಗಿದ್ದು, ಈ ದುರಂತವನ್ನು ಸಿಕ್ಕಿಂ ಸರಕಾರ “ವಿಪತ್ತು’ ಎಂದು ಘೋಷಿಸಿದೆ.

ಲ್ಹೋನಾಕ್‌ ಲೇಕ್‌ ಪರಿಸರದಲ್ಲಿ ಸುರಿದ ಭಾರೀ ಮಳೆಯಿಂದ ಮಂಗಳವಾರ ತಡರಾತ್ರಿ 1.30ಕ್ಕೆ ತೀಸ್ತಾ ನದಿಯಲ್ಲಿ ಪ್ರವಾಹ
ಉಂಟಾಗಿತ್ತು. ಇದೇ ಸಮಯದಲ್ಲಿ ಚುಂಗ್‌ಥಾಂಗ್‌ ಅಣೆಕಟ್ಟಿನಿಂದ ನೀರನ್ನೂ ಬಿಡುಗಡೆ ಮಾಡಿದ್ದು ಪರಿಸ್ಥಿತಿಯನ್ನು ಮತ್ತಷ್ಟು ಬಿಗ ಡಾಯಿಸಿತು. ನೀರಿನ ಮಟ್ಟವು ಕ್ಷಣಮಾತ್ರದಲ್ಲಿ 15-20 ಅಡಿ ಏರಿ, ಸುತ್ತಮುತ್ತಲಿನ ಪ್ರದೇಶಗಳನ್ನು ಕಬಳಿಸುತ್ತಾ ಸಾಗತೊಡಗಿತು. ವೇಳೆ ಸಿಂಗ್ಟಂ ಪ್ರದೇಶದ ಬರ್ದಾಂಗ್‌ನಲ್ಲಿ ನಿಲ್ಲಿಸಲಾಗಿದ್ದ ಸೇನಾ ವಾಹನಗಳು ಕೊಚ್ಚಿ ಹೋದವು. ಹಲವಾರು ವಾಹನಗಳು ಕೆಸರಿನಲ್ಲಿ ಸಿಲುಕಿವೆ ಎಂದು ಸೇನೆ ತಿಳಿಸಿದೆ.

ರಾಜಧಾನಿ ಗ್ಯಾಂಗ್ಟಕ್‌ನಿಂದ 30 ಕಿ.ಮೀ. ದೂರದಲ್ಲಿರುವ ಉಕ್ಕಿನ ಸೇತುವೆ ಇಂದ್ರೇಣಿ ಬ್ರಿಡ್ಜ್ ಅನ್ನು ತೀಸ್ತಾ ನದಿನೀರು ಹೊತ್ತೂಯ್ದಿದೆ. ಲ್ಯಾಂಕೋ ಹೈಡೆಲ್‌ ಪವರ್‌ ಪ್ರಾಜೆಕ್ಟ್ ಸಮೀಪ ವಿರುವ ಸೇತುವೆ ಸಹಿತ ಒಟ್ಟು 8 ಸೇತುವೆಗಳೂ ಕೊಚ್ಚಿ ಹೋಗಿವೆ. ಸಿಂಗ್ಟಂ, ರಾಂಗ್‌ಪೋ ಸಹಿತ ಹಲವಾರು ಪಟ್ಟಣಗಳು ಜಲಾವೃತವಾಗಿವೆ. ಸಿಕ್ಕಿಂ ಜತೆಗೆ ದೇಶದ ಇತರ ಭಾಗಗಳನ್ನು ಸಂಪರ್ಕಿಸುವ ರಾ. ಹೆದ್ದಾರಿ-10ರ ಭಾಗವೂ ನೀರುಪಾಲಾಗಿದೆ.

ಮುಂದಿನ 2 ದಿನ ಭಾರೀ ಮಳೆ ಮುಂದುವರಿಯಲಿದ್ದು, ಗ್ಯಾಂಗ್ಟಕ್‌, ಗ್ಯಾಲ್ಶಿಂಗ್, ಪಕ್ಯಾಂಗ್‌ ಮತ್ತು ಸೊರೆಂಗ್‌ ಜಿಲ್ಲೆಗಳಿಗೆ ಆರೆಂಜ್‌ ಹಾಗೂ ಮಂಗಾನ್‌ ಮತ್ತು ನಾಮಚಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಟೀಸ್ಟಾ ನದಿ ಪ್ರವಾಹದ ಕಾರಣ ಪಶ್ಚಿಮ ಬಂಗಾಲ ಮತ್ತು ಬಾಂಗ್ಲಾ ದೇಶಕ್ಕೂ ಎಚ್ಚರಿಕೆ ರವಾನಿಸಲಾಗಿದೆ. ಪ.ಬಂ.ದ ಜಲ್‌ಪಾಯಿಗುರಿ ಆಡ ಳಿತವು ತಗ್ಗುಪ್ರದೇಶಗಳ ಜನರನ್ನು ಸ್ಥಳಾಂತರಿಸಲು ಆರಂಭಿಸಿದೆ. ಬುಧ ವಾರ 10 ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಸಿಕ್ಕಿಂ ಸಿಎಂ ಜತೆ ಮೋದಿ ಮಾತುಕತೆ
ಬುಧವಾರ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್‌ ಸಿಂಗ್‌ ತಮಾಂಗ್‌ ಗೋಲೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದ್ದಾರೆ. ಜತೆಗೆ, ಸಂತ್ರಸ್ತರ ಸುರಕ್ಷೆಗಾಗಿ ಪ್ರಾರ್ಥಿ ಸುವುದಾಗಿಯೂ ಹೇಳಿದ್ದಾರೆ.

ಇದನ್ನೂ ಓದಿ: Cricket World Cup 2023: ಸಚಿನ್‌ ತೆಂಡುಲ್ಕರ್‌ ಜಾಗತಿಕ ರಾಯಭಾರಿ

ಟಾಪ್ ನ್ಯೂಸ್

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

2-bng

Bengaluru ನಗರದಲ್ಲಿ ಮತ್ತೆ ರೇವ್‌ ಪಾರ್ಟಿ ನಶೆ

1-24-tuesday

Daily Horoscope: ಹೊಸ ವ್ಯವಹಾರ ಆರಂಭಿಸಲು ಚಿಂತನೆ, ಆರೋಗ್ಯ ತೃಪ್ತಿಕರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

1-ub

Uber ಬಸ್‌ಗಳು ದಿಲ್ಲಿಯ ರಸ್ತೆಯಲ್ಲಿ ಓಡಲಿದೆ!

IMD

Delhi ತಾಪ 47 ಡಿಗ್ರಿ: ಶಾಲೆಗಳಿಗೆ ಸುದೀರ್ಘ‌ ರಜೆ

covid

Covaxin ಸೈಡ್‌ಎಫೆಕ್ಟ್ ವರದಿಗೆ ಐಸಿಎಂಆರ್‌ ಕಿಡಿ

train-track

Train Drivers Association; ಆನೆ ಹಳಿ ದಾಟುವಾಗ ರೈಲು ನಿಲುಗಡೆ ಅಸಾಧ್ಯ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

6-pan

Liquid Nitrogen ಪಾನ್‌ ಸೇವಿಸಿ ಬಾಲಕಿ ಹೊಟ್ಟೆಯಲ್ಲಿ ರಂಧ್ರ

5-arrest

Arrest: ಬಾರ್‌ನಲ್ಲಿ ಮಾರಕಾಸ್ತ್ರ ತೋರಿಸಿ ಬೆದರಿಕೆ: ಇಬ್ಬ ರ ಸೆರೆ

4-bng

Bengaluru: ಶಾಸಕ ಮಹಾಂತೇಶ್‌ ಕೌಜಲಗಿ ಕಾರಿಗೆ ಡಿಕ್ಕಿ ಹೊಡೆದ ಚಾಲಕ ಸೆರೆ

3-bng

Road Mishap: ನೈಸ್‌ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.